RCB New Owner 2026: Who Owns Royal Challengers Bengaluru Now?ಆರ್‌ಸಿಬಿ

ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ತನ್ನ ಐಪಿಎಲ್ (IPL) ಪಯಣದಲ್ಲಿ ಹೊಸ ಅಧ್ಯಾಯವನ್ನು ಆರಂಭಿಸಿದೆ. ಐಪಿಎಲ್‌ (IPL 2026) ತಂಡಗಳ ಪೈಕಿ ಅತ್ಯಂತ ಜನಪ್ರಿಯ ಮತ್ತು ಅಗಾಧವಾದ ಅಭಿಮಾನಿ ಬಳಗವನ್ನು ಹೊಂದಿರುವ ಆರ್‌ಸಿಬಿ (Royal Challengers Bangalore) ಭಾರೀ ಮೊತ್ತಕ್ಕೆ ಮಾರಾಟವಾಗಿದೆ. 16,706 ಕೋಟಿ ರೂಪಾಯಿಗೆ ಆರ್‌ಸಿಬಿ ಮಾರಾಟವಾಗಿದೆ.  

ಆದಿತ್ಯ ಬಿರ್ಲಾ ಗ್ರೂಪ್‌, ಟೈಮ್ಸ್‌ ಆಫ್‌ ಇಂಡಿಯಾ ಗ್ರೂಪ್‌, ಬೋಲ್ಟ್‌ ವೆಂಚರ್ಸ್‌ ಮತ್ತು ಬ್ಲ್ಯಾಕ್‌ಸ್ಟೋನ್‌ ಕಂಪನಿಗಳ ಒಕ್ಕೂಟವು ಆರ್‌ಸಿಬಿ ಬೆಂಗಳೂರು ತಂಡದ ಮಾಲೀಕರಾಗಿದ್ದಾತರೆ. ಪ್ರಾರಂಭದಲ್ಲಿ ಈ ಗುಂಪು ರಾಜಸ್ಥಾನ ರಾಯಲ್ಸ್‌ ತಂಡವನ್ನು ಖರೀದಿಸಲು ಮುಂದಾಗಿದ್ದವು. ಆದರೆ, ನಂತರ ಆರ್‌ಸಿಬಿ ತಂಡವನ್ನು ಖರೀದಿಸಿವೆ.

ಇದಕ್ಕೂ ಮೊದಲು ಅವ್ರಾಮ್ ಗ್ಲೇಜರ್ ಕೂಡ RCB ಖರೀದಿಸಲು ಆಸಕ್ತಿ ತೋರಿಸಿದ್ದರು. ಇನ್ನೂ ಹಲವಾರು ಗುಂಪುಗಳು ಖರೀದಿಸಲು ಮುಂದೆ ಬಂದಿದ್ದವು. ಅಂತಿಮವಾಗಿ ಆದಿತ್ಯ ಬಿರ್ಲಾ–ಡೆವಿಡ್ ಬ್ಲಿಟ್ಜರ್ ಗುಂಪು ಖರೀದಿಸಿವೆ.

ಈ ಮಾರಾಟ ಪ್ರಕ್ರಿಯೆಗೆ ಇನ್ನೂ, ಬಿಸಿಸಿಐ ಅನುಮತಿ ಸಿಕ್ಕಿಲ್ಲ. ಸೆಪ್ಟಂಬರ್‌-ಅಕ್ಟೋಬರ್‌ನಲ್ಲಿ ನಡೆಯಲಿರುವ ಬಿಸಿಸಿಐನ ವಾರ್ಷಿಕ ಸಭೆಯಲ್ಲಿ ಅನುಮೋದನೆ ಸಿಗುವ ಸಾಧ್ಯತೆಯಿದೆ. ಅಲ್ಲಿಯವರೆಗೆ ಹಾಲಿ ಮಾಲೀಕರ ಕೈಯಲ್ಲೇ ಫ್ರಾಂಚೈಸ್‌ ಇರಲಿದೆ. ಹಾಗಾಗಿ 2026ರ ಸೀಸನ್‌ನಲ್ಲಿ ಹಿಂದಿನ ಮಾಲೀಕರೇ ಇರಲಿದ್ದಾರೆ.

ಹೊಸ ನಾಯಕತ್ವದಲ್ಲಿ RCB

ಹೊಸ ಮಾಲೀಕತ್ವದಲ್ಲಿ, ಮಾಜಿ ಆರ್ಯಮಾನ್ ಬಿರ್ಲಾ ತಂಡದ ನಾಯಕತ್ವ ವಹಿಸುವ ಸಾಧ್ಯತೆ ಇದೆ. ಅವರು ಕುಮಾರ್ ಮಂಗಲಂ ಬಿರ್ಲಾ ಅವರ ಪುತ್ರರಾಗಿದ್ದಾರೆ. ಆರ್ಯಮನ್ ಈ ಹಿಂದೆ ರಾಜಸ್ಥಾನ ರಾಯಲ್ಸ್‌ ತಂಡದಲ್ಲಿ ಆಡಿದ್ದರು. ನಂತರ ದಿನಗಳಲ್ಲಿ ಕುಟುಂಬ ವ್ಯವಹಾರಕ್ಕೆ ಗಮನಹರಿಸಲು ಕ್ರಿಕೆಟ್‌ನಿಂದ ನಿವೃತ್ತಿ ಹೊಂದಿದ್ದರು.

ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *