Navaratri 2026: Worship of Shailaputri on the first day of Dasaraಶೈಲಪುತ್ರಿ

ಚಂಡಿ, ಚಾಮುಂಡಿ, ಕಾಳಿ, ಕಾತ್ಯಾಯನಿ, ಅಂಬಾ, ದುರ್ಗಾ, ಈಶ್ವರಿ ಮುಂತಾದ ಹಲವು ಹೆಸರುಗಳಿಂದ ಕರೆಯಲ್ಪಡುವ ದೇವಿಯನ್ನು ನವರಾತ್ರಿಯಲ್ಲಿ ಆರಾಧಿಸಲಗುತ್ತಾದೆ. ಈ ಹಬ್ಬವನ್ನು ಹಿಂದುಗಳು ಅತೀ  ವಿಜೃಂಭಣೆಯಿಂದ ಆಚರಿಸುತ್ತಾರೆ. ಇದನ್ನು ಕರ್ನಾಟಕದಲ್ಲಿ ದಸರಾ ಎಂದು ಕರೆಯಲಾಗುತ್ತದೆ. ಪಶ್ಚಿಮ ಬಂಗಾಳದಲ್ಲಿ ಈ ಹಬ್ಬವನ್ನು ದುರ್ಗಾ ಪೂಜಾ ಎಂದು ಆಚರಿಸಲಾಗುತ್ತದೆ. ಈ ಹಬ್ಬವು ಹಿಂದು ಪಂಚಾಂಗದ ಆಶ್ವಯುಜ ಶುದ್ಧ ಪ್ರತಿಪದೆಯ ದಿನ ಪ್ರಾರಂಭವಾಗುತ್ತದೆ.

ದೇವಿಗೆ ಸಂಬಂಧಿಸಿದ ಸಂಗತಿಗಳನ್ನು ಮಾರ್ಕಂಡೇಯ ಪುರಾಣ, ಶ್ರೀದೇವಿ ಭಾಗವತ, ಸ್ಕಾಂದ ಪುರಾಣ, ಕಾಲಿಕಾ ಪುರಾಣ, ವರಾಹ ಪುರಾಣ ಮುಂತಾದ ಕೃತಿಗಳಲ್ಲಿ ಕೊಂಚ ವ್ಯತ್ಯಾಸಗಳೊಂದಿಗೆ ನಿರೂಪಿಸಲಾಗಿದೆ. ಚಂಡಿ, ಚಾಮುಂಡಿ, ಕಾಳಿ, ಕಾತ್ಯಾಯನಿ, ಅಂಬಾ, ದುರ್ಗಾ, ಈಶ್ವರಿ ಮುಂತಾದ ಹಲವು ಹೆಸರುಗಳಿಂದ ಆಕೆಯನ್ನು ಕರೆಯಲಾಗಿದೆ.

ಈ ಎಲ್ಲಾ ಕೃತಿಗಳ ಪ್ರಕಾರ, ದೇವತೆಗಳ ರಕ್ಷಣೆಗಾಗಿ ಆವಿರ್ಭವಿಸುವ ದೇವಿ, ಶಿಷ್ಟರಿಗೆಲ್ಲ ಕಂಟಕನಾಗಿದ್ದ ಮಹಿಷಾಸುರನನ್ನು ಸಂಹರಿಸುತ್ತಾಳೆ. ಇದಕ್ಕಾಗಿ ಎಲ್ಲಾ ದೇವಾಧಿದೇವತೆಗಳ ತೇಜಸ್ಸು ಏಕತ್ರಗೊಂಡು, ಸರ್ವಶಕ್ತಳಾದ ದೇವಿಯ ಸ್ವರೂಪ ಪಡೆಯುತ್ತದೆ. ಮಹಿಷನನ್ನು ಮಾತ್ರವಲ್ಲದೆ, ಚಂಡ-ಮುಂಡರು, ರಕ್ತಬೀಜ, ಶುಂಭ-ನಿಶುಂಭರನ್ನೂ ವಧಿಸುತ್ತಾಳೆ ಈ ದೇವಿ. ನವರಾತ್ರಿ ಆಚರಣೆಯ ಪ್ರಮುಖ ಹಿನ್ನೆಲೆಯೇ ಈ ಸರ್ವಶಕ್ತಿಯ ಆರಾಧನೆ.

ನವರಾತ್ರಿಯೆಂದರೆ ಒಂಬತ್ತು (ನವ) ರಾತ್ರಿಗಳು, ದೇವಿಯ ಒಂಬತ್ತು ವಿಧದ ರೂಪಗಳನ್ನು ಆರಾಧಿಸಲಾಗುತ್ತದೆ. ಹತ್ತನೇಯ ದಿನ ‘ವಿಜಯ ದಶಮಿ’, ಈ ದಿನ ಶಮಿವೃಕ್ಷಕ್ಕೆ ಪೂಜೆಯನ್ನು ಸಲ್ಲಿಸಿ ಶಮಿ (ಬನ್ನಿ)ಯನ್ನು ವಿನಿಯೋಗ ಮಾಡುವುದು ಕರ್ನಾಟಕದ ಆಚರಣೆಯ ಪದ್ಧತಿ. ಇದೇ ದಿನ ಚಿನ್ನದ ಅಂಬಾರಿಯಲ್ಲಿ ಚಾಮುಂಡೇಶ್ವರಿಯ ಮೂರ್ತಿಯ ಮೆರವಣಿಗೆಯು ಮೈಸೂರಿನಲ್ಲಿ ನಡೆಯುತ್ತದೆ.

ಪುರಾಣಗಳಲ್ಲಿ ನವರಾತ್ರಿಯ ಕುರಿತು ಪುರಾಣಗಳಲ್ಲಿ ಹಲವು ಉಲ್ಲೇಖಗಳಿವೆ. ಹಲವು ಕಥೆಗಳಿವೆ. ನವರಾತ್ರಿಯಲ್ಲಿ ಚಾಮುಂಡೇಶ್ವರಿ ದೇವಿಯು ಮಹಿಷಾಸುರ ಮರ್ಧಿನಿಯಾಗಿ ಮಹಿಷಾಸುರ ಎಂಬ ರಾಕ್ಷಸನನ್ನು ಸಂಹಾರ ಮಾಡಿದಳು. ನವರಾತ್ರಿಯೆಂದರೆ ಒಂಭತ್ತು ದಿನಗಳಿಗೆ ಸೀಮಿತವಾಗಿದ್ದರೂ ಹತ್ತನೇ ದಿನ ವಿಜಯದಶಮಿ. ಮಹಾದುರ್ಗೆ ರಾಕ್ಷಸರನ್ನು ಸಂಹರಿಸಿ ವಿಜಯವನ್ನು ಸಾಧಿಸಿದ ದಿನ.

ತ್ರೇತಾಯುಗದಲ್ಲಿ ಶ್ರೀರಾಮನು ರಾವಣನನ್ನು ಸಂಹಾರ ಮಾಡಿದನು. ಅದು ವಿಜಯದಶಮಿಯ ದಿನ ಎಂಬ ನಂಬಿಕೆ ಇದೆ. ದ್ವಾಪರಾಯುಗದಲ್ಲಿ ಪಾಂಡವರು ಒಂದು ವರ್ಷ ಅಜ್ಞಾತವಾಸ ಮಾಡುವಾಗ ತಮ್ಮ ಆಯುಧಗಳನ್ನು ಬನ್ನಿ ಮರದಲ್ಲಿ ಮುಚ್ಚಿಟ್ಟಿದ್ದರು. ದಶಮಿಯ ದಿನಕ್ಕೆ ಅಜ್ಞಾತವಾಸ ಮುಗಿದು, ಅವರು ಬನ್ನಿ ಮರದಿಂದ ತಮ್ಮ ಆಯುಧಗಳನ್ನು ವಾಪಸ್ಸು ಪಡೆದು ಕುರುಕ್ಷೇತ್ರ ಯುದ್ಧದಲ್ಲಿ ಕೌರವರನ್ನು ಸೋಲಿಸಿ ವಿಜಯಸಾಧಿಸಿದರು ಎಂದು ಹೇಳುತ್ತಾರೆ. ಹೀಗಾಗಿ ಈ ದಶಮಿಯನ್ನು ವಿಜಯದಶಮಿ ಎಂದು ಕರೆಯುತ್ತಾರೆ .

ಆದ್ದರಿಂದ ಇವರೆಲ್ಲರ ವಿಜಯದ ಸಂಕೇತವಾಗಿ ಈ ದಿನವನ್ನು ವಿಜಯದಶಮಿ ಎಂದು ಆಚರಿಸುವುದು ಸಂಪ್ರದಾಯ. ವಿಜಯನಗರದ ಅರಸರು ಹಾಗೂ ಮೈಸೂರು ಅರಸರು ಜೈತ್ರಯಾತ್ರೆಯಲ್ಲಿ ಗೆಲುವು ಪಡೆದು ಸಂಭ್ರಮದಿAದ ನಡೆಸುವ ವಿಶಿಷ್ಟ ಹಬ್ಬ ಎಂಬುದು ಇತಿಹಾಸದ ಉಲ್ಲೇಖ. ಪುರಾಣದ ಪ್ರಕಾರ ಜಗನ್ಮಾತೆ ರಾಕ್ಷಸರನ್ನು ಸಂಹಾರ ಮಾಡಲು ಒಂದೊAದು ಅವತಾರವೆತ್ತಿ ರಾಕ್ಷಸರನ್ನು ಸಂಹರಿಸಿ ಲೋಕವನ್ನು ಕಾಪಾಡುತ್ತಾಳೆ. ನವರಾತ್ರಿಯ ಒಂದೊAದು ದಿನವೂ ಬಹಳ ವಿಶೇಷವಾಗಿ ನಿಲ್ಲುತ್ತದೆ. ೯ ದಿನಗಳ ಕಾಲ ಆದಿ ಶಕ್ತಿಯನ್ನು ನವ ವಿಧದಲ್ಲಿ ಪೂಜಿಸಲಾಗುತ್ತದೆ. ರಾಮನಿಂದ ರಾವಣನ ವಧೆಯಾಗಬೇಕೆಂದು ನಾರದರು ರಾಮನಿಗೆ ಶರವನ್ನರಾತ್ರಿ ವ್ರತವನ್ನು ಮಾಡಲು ಹೇಳಿದ್ದರು.

ಈ ವ್ರತವನ್ನು ಪೂರ್ಣಗೊಳಿಸಿದ ನಂತರ ರಾಮನು ಲಂಕೆಯ ಮೇಲೆ ಆಕ್ರಮಣ ಮಾಡಿ ಯುದ್ಧದಲ್ಲಿ ರಾವಣನನ್ನು ವಧಿಸಿದನು. ದೇವಿಯು, ಮಹಿಷಾಸುರನೆಂಬ ರಾಕ್ಷಸನೊಂದಿಗೆ ಪಾಡ್ಯದಿಂದ ನವಮಿಯವರೆಗೆ ಒಂಬತ್ತು ದಿನಗಳ ಕಾಲ ಯುದ್ಧವನ್ನು ಮಾಡಿ ನವಮಿಯ ರಾತ್ರಿ ಅವನನ್ನು ಕೊಂದಳು. ಅಂದಿನಿAದ ಅವಳಿಗೆ ಮಹಿಷಾಸುರಮರ್ದಿನಿ ಎನ್ನತೊಡಗಿದರು.

ಮಹಿಷಾಸುರನ ನಾಶಕ್ಕಾಗಿ ಅವತಾರ ತಾಳಿದ ಶ್ರೀ ದೇವಿಯ ಉತ್ಸವ ಎಂದರೆ ನವರಾತ್ರಿ. ನವರಾತ್ರಿಯಲ್ಲಿ ಶ್ರೀ ದೇವಿಯ ಉಪಾಸನೆಯನ್ನು ಭಕ್ತಿ ಶ್ರದ್ಧೆಯಿಟ್ಟು ಮಾಡುವುದರಿಂದ ದೇವಿತತ್ತ್ವದ ಲಾಭವಾಗುತ್ತದೆ. ‘ಹಿಂದೂ ಧರ್ಮದಲ್ಲಿ ಭಗವತೀ ದೇವಿಯ ವಿಶೇಷ ಆರಾಧನೆಯನ್ನು ವರ್ಷದಲ್ಲಿ ವಾಸಂತಿಕ ನವರಾತ್ರಿ ಮತ್ತು ಶಾರದೀಯ ನವರಾತ್ರಿ ಈ ಎರಡು ಸಮಯದಲ್ಲಿ ಮಾಡುತ್ತಾರೆ. ಶರದ ಋತುವಿನಲ್ಲಿನ ಪೂಜೆಗೆ ಅಕಾಲ ಪೂಜೆ ಮತ್ತು ವಾಸಂತಿಕ ಪೂಜೆಗೆ ಸಕಾಲ ಪೂಜೆಯೆಂದು ಹೇಳುತ್ತಾರೆ. ಶರದ ಋತುವಿನಲ್ಲಿ ‘ದೇವರಾತ್ರಿ’ಗಳಿರುತ್ತವೆ; ಆದುದರಿಂದ ಈ ಕಾಲದಲ್ಲಿನ ಪೂಜೆಗೆ ಅಕಾಲ ಪೂಜೆಯೆಂದು ಹೇಳುತ್ತಾರೆ. ತಾಂತ್ರಿಕ ಸಾಧಕರ ದೃಷ್ಟಿಯಲ್ಲಿ ಈ ‘ರಾತ್ರಿ’ಗಳು ಮಹತ್ವಪೂರ್ಣವಾಗಿರುತ್ತವೆ. ಹೀಗೆ , ಬಹಳಷ್ಟು ರೀತಿಯ ರಾತ್ರಿಗಳಿರುತ್ತವೆ, ಉದಾ: ಕಾಲರಾತ್ರಿ, ಶಿವರಾತ್ರಿ, ಮೋಹರಾತ್ರಿ, ವೀರರಾತ್ರಿ, ದಿವ್ಯರಾತ್ರಿ, ದೇವರಾತ್ರಿ ಇತ್ಯಾದಿ.

ಮಹಿಷಾಸುರನ ಉದಯ

ಬ್ರಹ್ಮನಿಂದ ಅಜೇಯತೆಯ ವರವನ್ನು ಪಡೆದ ಮಹಿಷಾಸುರ ಎಂಬ ಶಕ್ತಿಶಾಲಿ ರಾಕ್ಷಸನು ದೇವರುಗಳಿಗೆ ಬೆದರಿಕೆಯಾದನು. ಅವನು ದೇವರುಗಳನ್ನು ಸೋಲಿಸಿ ಸ್ವರ್ಗವನ್ನು ನಿಯಂತ್ರಿಸಿದನು, ವಿಶ್ವದಲ್ಲಿ ದುಃಖ ಮತ್ತು ವಿನಾಶವನ್ನು ಉಂಟುಮಾಡಿದನು.

ದುರ್ಗಾ ಸೃಷ್ಟಿ

ಇಂದ್ರನ ನೇತೃತ್ವದ ದೇವರುಗಳು ಸಹಾಯಕ್ಕಾಗಿ ತ್ರಿಮೂರ್ತಿಗಳ (ಬ್ರಹ್ಮ, ವಿಷ್ಣು ಮತ್ತು ಶಿವ) ಬಳಿಗೆ ಹೋದರು. ತ್ರಿಮೂರ್ತಿಗಳು ತಮ್ಮ ದೈವಿಕ ಶಕ್ತಿಗಳನ್ನು ಒಟ್ಟುಗೂಡಿಸಿ ದುರ್ಗಾ ಎಂಬ ಶಕ್ತಿಶಾಲಿ ದೇವತೆಯನ್ನು ಪ್ರದರ್ಶಿಸಿದರು. ಪ್ರತಿಯೊಬ್ಬ ದೇವರು ಅವಳಿಗೆ ಶಿವನ ತ್ರಿಶೂಲ ಮತ್ತು ವಿಷ್ಣುವಿನ ಚಕ್ರದಂತಹ ಅವರ ಆಶೀರ್ವಾದ ಮತ್ತು ಆಯುಧಗಳನ್ನು ಉಡುಗೊರೆಯಾಗಿ ನೀಡಿದರು. ಅವಳಿಗೆ ಶಕ್ತಿ ಮತ್ತು ಧೈರ್ಯದ ಸಂಕೇತವಾದ ಸಿಂಹವನ್ನು ಅವಳ ವಾಹನವಾಗಿ ನೀಡಲಾಯಿತು. ಮಹಿಷಾಸುರನೊಂದಿಗಿನ ಯುದ್ಧ ಎಲ್ಲಾ ದೇವರುಗಳ ಸಂಯೋಜಿತ ಶಕ್ತಿಯಿಂದ ಶಸ್ತ್ರಸಜ್ಜಿತವಾದ ದುರ್ಗೆ, ಮಹಿಷಾಸುರನನ್ನು ಎದುರಿಸಲು ತನ್ನ ಸಿಂಹದ ಮೇಲೆ ಸವಾರಿ ಮಾಡಿದಳು. ಯುದ್ಧವು ಭೀಕರವಾಗಿತ್ತು ಮತ್ತು ಒಂಬತ್ತು ಹಗಲು ರಾತ್ರಿಗಳ ಕಾಲ ನಡೆಯಿತು. ಮಹಿಷಾಸುರನನ್ನು ತನ್ನ ಎಮ್ಮೆ ರೂಪದಲ್ಲಿ ಹತ್ತನೇ ದಿನ ದುರ್ಗೆ ತನ್ನ ತ್ರಿಶೂಲದಿಂದ ಕೊಂದಳು.

ವಿಜಯದ ಮಹತ್ವ

ಮಹಿಷಾಸುರನ ಮೇಲೆ ದುರ್ಗೆಯ ವಿಜಯವು ಒಳ್ಳೆಯದು ಮತ್ತು ಕೆಟ್ಟದ್ದರ ನಡುವಿನ ಒಂದು ಶ್ರೇಷ್ಠ ಕಥೆಯಾಗಿದೆ. ಅವಳು ಅವನನ್ನು ಸೋಲಿಸಿದ ದಿನವಾದ ವಿಜಯದಶಮಿಯನ್ನು ಕೆಟ್ಟದ್ದರ ಮೇಲೆ ಒಳ್ಳೆಯದರ ವಿಜಯವೆಂದು ಆಚರಿಸಲಾಗುತ್ತದೆ ಮತ್ತು ಇದು ಭಾರತೀಯ ಪುರಾಣಗಳಲ್ಲಿ ಮಹತ್ವದ ಘಟನೆಯಾಗಿದೆ. ದುರ್ಗಾಳ ವಿಜಯೋತ್ಸವದ ಆಚರಣೆಯು ಇಂದಿಗೂ ದುರ್ಗಾ ಪೂಜೆಯಂತಹ ಹಬ್ಬಗಳಲ್ಲಿ ಮುಂದುವರೆದಿದೆ, ದೇವಿಯನ್ನು ದುಷ್ಟಶಕ್ತಿಯ ರಕ್ಷಕ ಮತ್ತು ನಾಶಕ ಎಂದು ಗೌರವಿಸುತ್ತದೆ.

ನವರಾತ್ರಿ ದೇವಿಯ ಒಂಭತ್ತು ಸ್ವರೂಪದ ಮಹತ್ವ

ನವರಾತ್ರಿಯಲ್ಲಿ ದೇವಿಯು ಅವತಾರವೆತ್ತಿದ ಒಂಭತ್ತು ಸ್ವರೂಪಗಳನ್ನು ಆರಾಧಿಸಲಾಗುತ್ತದೆ. ದುಷ್ಟರನ್ನು ಸಂಹರಿಸಲು ಅವತಾರ ತಾಳಿದ ಜಗನ್ಮಾತೆಯ ಒಂಭತ್ತು ಸ್ವರೂಪಗಳಿಗೆ ಅದರದ್ದೇ ಆದ ಮಹತ್ವವಿದೆ. ಮಾತೆಯ ಸ್ವರೂಪಗಳನ್ನು ಆರಾಧಿಸುವುದರಿಂದ ಸಕಲ ಸಂಕಷ್ಟಗಳು ದೂರವಾಗಿ ಸುಖ-ಶಾಂತಿ, ನೆಮ್ಮದಿಯನ್ನು ಕಾಣಬಹುದಾಗಿದೆ. ನವರಾತ್ರಿಯ ಒಂಭತ್ತು ದಿನಗಳು ದೇವಿಯನ್ನು ಭಕ್ತಿಯಿಂದ ಆರಾಧಿಸಿದಲ್ಲಿ, ಅಂಥವರ ಮನಸ್ಸು ಶರೀರದ ಬೇರೆ ಬೇರೆ ಚಕ್ರಗಳಲ್ಲಿ ಸ್ಥಿತವಾಗುತ್ತದೆ.

ದೇವಿಯ ಮೊದಲ ಸ್ವರೂಪ ಶೈಲಪುತ್ರಿ ಬಗ್ಗೆ ತಿಳಿಯೋಣ

ನವರಾತ್ರಿಯ ಮೊದಲ ದಿನ ಶೈಲಪುತ್ರಿ ದೇವಿಯನ್ನು ಆರಾಧಿಸಲಾಗುತ್ತದೆ. ‘ಶೈಲ’ ಎಂದರೆ ಪರ್ವತ ಮತ್ತು ‘ಪುತ್ರಿ’ ಎಂದರೆ ಮಗಳು. ಪರ್ವತರಾಜ ಹಿಮವಂತನ ಪುತ್ರಿಯಾಗಿರುವುದರಿಂದ ಪಾರ್ವತಿ ದೇವಿಯ ಈ ರೂಪಕ್ಕೆ ಶೈಲಪುತ್ರಿ ಎಂಬ ಹೆಸರು ಬಂದಿದೆ. ಹಿಂದಿನ ಜನ್ಮದಲ್ಲಿ ದಕ್ಷ ಪ್ರಜಾಪತಿಯ ಪುತ್ರಿ ಸತಿಯಾಗಿದ್ದಳು. ಶಿವನಿಗೆ ದಕ್ಷನು ಅವಮಾನ ಮಾಡಿದ ಸಂದರ್ಭದಲ್ಲಿ ಸತಿ ಯಜ್ಞಕುಂಡದಲ್ಲಿ ದೇಹತ್ಯಾಗ ಮಾಡಿದಳು. ನಂತರ ಹಿಮವಂತ ಮತ್ತು ಮೇನಾ ದೇವಿಯ ಪುತ್ರಿಯಾಗಿ ಪಾರ್ವತಿಯಾಗಿ ಪುನರ್ಜನ್ಮ ಪಡೆದಳು.

ಶೈಲಪುತ್ರಿ ದೇವಿಯು ನಂದಿ ಎಂಬ ವೃಷಭದ ಮೇಲೆ ಕುಳಿತು, ಒಂದು ಕೈಯಲ್ಲಿ ತ್ರಿಶೂಲ ಮತ್ತು ಇನ್ನೊಂದು ಕೈಯಲ್ಲಿ ಕಮಲವನ್ನು ಹಿಡಿದಿರುವಂತೆ ಚಿತ್ರಿಸಲಾಗುತ್ತದೆ. ಮೊದಲ ದಿನ ಘಟಸ್ಥಾಪನೆ ಅಥವಾ ಕಲಶ ಸ್ಥಾಪನೆ ಮಾಡಿ ನವರಾತ್ರಿಯ ಪೂಜೆಗೆ ಚಾಲನೆ ನೀಡಲಾಗುತ್ತದೆ. ದೇವಿಗೆ ತುಪ್ಪ, ಹಣ್ಣು, ಹಾಲು ಮತ್ತು ಸಾತ್ವಿಕ ಆಹಾರವನ್ನು ನೈವೇದ್ಯವಾಗಿ ಅರ್ಪಿಸುವ ಸಂಪ್ರದಾಯವಿದೆ.

 ಶೈಲಪುತ್ರಿಯ ಆರಾಧನೆಯು ಸ್ಥಿರತೆ, ಆತ್ಮವಿಶ್ವಾಸ, ಧೈರ್ಯ ಮತ್ತು ಜೀವನದಲ್ಲಿ ಉತ್ತಮ ಆರಂಭದ ಸಂಕೇತವಾಗಿದೆ. ಮನುಷ್ಯನು ಯಾವುದೇ ಸಾಧನೆಯ ಆರಂಭದಲ್ಲಿ ದೃಢವಾದ ಅಡಿಪಾಯವನ್ನು ಹೊಂದಿರಬೇಕು ಎಂಬ ಸಂದೇಶವನ್ನು ಈ ರೂಪ ನೀಡುತ್ತದೆ.

ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *