ಬೆಂಗಳೂರು, ಮಾರ್ಚ್ 17: ಕಳೆದ ವರ್ಷ ಆರ್ ಸಿಬಿ (RCB) ಕಪ್ ಗೆದ್ದ ಸಂಭ್ರಮಾಚರಣೆ ವೇಳೆ ಸಂಭವಿಸಿದ್ದ ಕಾಲ್ತುಳಿತದಲ್ಲಿ 11 ಜನ ಮೃತಪಟ್ಟಿದ್ದರು. ಈ ದುರ್ಘಟನೆ ನಂತರ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ (M Chinnaswamy Stadium) ಯಾವುದೇ ಪಂದ್ಯಗಳು ನಡೆದಿರಲಿಲ್ಲ. ಈ ಬಾರಿಯ ಐಪಿಎಲ್ ಪಂದ್ಯಗಳು ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಾ ಅಥವಾ ಇಲ್ಲ ಎಂಬ ಆತಂಕ ಅಭಿಮಾನಿಗಳಲ್ಲಿ ಇತ್ತು. ಇದೀಗ, ಈ ಆತಂಕ ದೂರವಾಗಿದ್ದು, ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಪಂದ್ಯಗಳು ನಡೆಸಲು ರಾಜ್ಯ ಸರ್ಕಾರ ಅನಿಮತಿ ನೀಡಿದೆ. ಸೋಮವಾರ ನಡೆದ ಮಹತ್ವದ ಸಭೆಯಲ್ಲಿ ಕರ್ನಾಟಕ ಸರ್ಕಾರವು 2026ರ ಐಪಿಎಲ್ ಪಂದ್ಯಗಳನ್ನು ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಯೋಜಿಸಲು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಗೆ (KSCA) ಅಧಿಕೃತ ಅನುಮತಿ ನೀಡಿದೆ. ಇದನ್ನೂ ಓದಿ: IPL 2026ರ ಪಂದ್ಯಗಳ ವೇಳಾಪಟ್ಟಿ ಪ್ರಕಟ, ಮೊದಲ ಪಂದ್ಯ RCB vs SRH ಗೃಹ ಸಚಿವ ಡಾ. ಜಿ. ಪರಮೇಶ್ವರ್ ನೇತೃತ್ವದಲ್ಲಿ ನಡೆದ ಈ ಸಭೆಯಲ್ಲಿ, ತಜ್ಞರ ಸಮಿತಿಯು ನೀಡಿದ ಸುರಕ್ಷತಾ ವರದಿಯನ್ನು ಪರಿಶೀಲಿಸಿದ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಯಾವ್ಯಾವ ಪಂದ್ಯಗಳು ನಡೆಯಲಿವೆ ಉದ್ಘಾಟನಾ ಪಂದ್ಯ: ಮಾರ್ಚ್ 28ರಂದು ಹಾಲಿ ಚಾಂಪಿಯನ್ ಆರ್‌ಸಿಬಿ (RCB) ಮತ್ತು ಸನ್‌ರೈಸರ್ಸ್ ಹೈದರಾಬಾದ್ ನಡುವೆ ಮೊದಲ ಪಂದ್ಯ ಬೆಂಗಳೂರಿನಲ್ಲಿ ನಡೆಯಲಿದೆ. ಪಂದ್ಯಗಳ ವಿವರ ಆರ್‌ಸಿಬಿಯ ಒಟ್ಟು ಏಳು ಪಂದ್ಯಗಳಲ್ಲಿ ಐದು ಪಂದ್ಯಗಳು ಬೆಂಗಳೂರಿನಲ್ಲಿ ಹಾಗೂ ಉಳಿದ ಎರಡು ಪಂದ್ಯಗಳು ರಾಯ್‌ಪುರದಲ್ಲಿ ನಡೆಯಲಿವೆ. ಪ್ಲೇ-ಆಫ್ ಮತ್ತು ಫೈನಲ್ ಕೇವಲ ಲೀಗ್ ಪಂದ್ಯಗಳಷ್ಟೇ ಅಲ್ಲದೆ, ಐಪಿಎಲ್ 2026ರ ಫೈನಲ್ ಪಂದ್ಯ ಕೂಡ ಚಿನ್ನಸ್ವಾಮಿ ಕ್ರೀಡಾಂಗಣದಲ್ಲೇ ನಡೆಯುವ ಸಾಧ್ಯತೆ ಹೆಚ್ಚಿದೆ. ಹೊಸ ಸುರಕ್ಷತಾ ನಿಯಮಗಳು ಕಳೆದ ವರ್ಷದ ಕಾಲ್ತುಳಿತದಂತಹ ಘಟನೆ ಮರುಕಳಿಸದಂತೆ ಕೆಎಸ್‌ಸಿಎ ಕಠಿಣ ಕ್ರಮಗಳನ್ನು ಕೈಗೊಂಡಿದೆ. ಗೇಟ್ ಓಪನಿಂಗ್: ಜನದಟ್ಟಣೆ ತಡೆಯಲು ಪಂದ್ಯ ಆರಂಭಕ್ಕೂ 3 ರಿಂದ 4 ಗಂಟೆ ಮುಂಚಿತವಾಗಿಯೇ ಗೇಟ್‌ಗಳನ್ನು ತೆರೆಯಲಾಗುವುದು. ಪ್ರತ್ಯೇಕ ಸಾಲು: ಮಹಿಳೆಯರು ಮತ್ತು ಮಕ್ಕಳಿಗೆ ಪ್ರತ್ಯೇಕ ಪ್ರವೇಶ ಸಾಲುಗಳ ವ್ಯವಸ್ಥೆ ಇರಲಿದೆ. ವೀಕ್ಷಕರ ಮಿತಿ: ಸುರಕ್ಷತೆಯ ದೃಷ್ಟಿಯಿಂದ ಕ್ರೀಡಾಂಗಣದ ಒಟ್ಟು ಸಾಮರ್ಥ್ಯವನ್ನು ಸುಮಾರು 33,000 ರಿಂದ 35,000ಕ್ಕೆ ಸೀಮಿತಗೊಳಿಸಲಾಗಿದೆ. ಬೆಂಗಳೂರಿನಲ್ಲಿ ನಡೆಯಲಿರುವ ಪಂದ್ಯಗಳು: ಮಾರ್ಚ್ 28: ಆರ್‌ಸಿಬಿ vs ಸನ್‌ರೈಸರ್ಸ್ ಹೈದರಾಬಾದ್ (ರಾತ್ರಿ 7:30) ಏಪ್ರಿಲ್ 5: ಆರ್‌ಸಿಬಿ vs ಚೆನ್ನೈ ಸೂಪರ್ ಕಿಂಗ್ಸ್ (ರಾತ್ರಿ 7:30) ಈ ನಿರ್ಧಾರದಿಂದಾಗಿ ಆರ್‌ಸಿಬಿ ಅಭಿಮಾನಿಗಳು ತಮ್ಮ ನೆಚ್ಚಿನ ತಂಡದ ಆಟವನ್ನು ತವರು ಮೈದಾನದಲ್ಲೇ ಕಣ್ತುಂಬಿಕೊಳ್ಳಲು ಸಜ್ಜಾಗಿದ್ದಾರೆ. ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ Post navigation ರಾಷ್ಟ್ರಧ್ವಜಕ್ಕೆ ಅಪಮಾನ: ಹಾರ್ದಿಕ್ ಪಾಂಡ್ಯ ವಿರುದ್ಧ ದೂರು ದಾಖಲು RCB ಗೆ ಹೊಸ ಮಾಲೀಕರು: IPL 2026ಕ್ಕೂ ಮುನ್ನ ದೊಡ್ಡ ಬದಲಾವಣೆ