ಗುಜರಾತ್ ನ ನರೇಂದ್ರ ಮೋದಿ (Narendra Modi) ಕ್ರೀಡಾಂಗಣದಲ್ಲಿ ರವಿವಾರ (ಮಾ. 08) ನ್ಯೂಜಿಲೆಂಡ್ (New Zealand) ಮತ್ತು ಟಿಂ ಇಂಡಿಯಾ (Team India) ನಡುವೆ ಟಿ20 ವಿಶ್ವಕಪ್ ಫೈನಲ್ (T20 world cup final) ಪಂದ್ಯ ನಡೆಯಿತು. ಈ ಪಂದ್ಯದಲ್ಲಿ ಭಾರತ ಗೆದ್ದು ಬೀಗಿದೆ.ಭಾರತ ನೀಡಿದ್ದ 256 ರನ್ ಟಾರ್ಗೆಟ್ ಚೇಸ್ ಮಾಡಲು ಆಗದೆ, ನ್ಯೂಜಿಲೆಂಡ್ ಸೋಲೊಪ್ಪಿಕೊಂಡಿದೆ. ಈ ಮೂಲಕ ಭಾರತ ಎರಡನೇ ಬಾರಿಗೆ ಟಿ20 ವಿಶ್ವಕಪ್ ನಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದೆ. 2024 ರಲ್ಲಿ ನಡೆದಿದ್ದ ಟಿ20 ವಿಶ್ವಕಪ್ ನಲ್ಲೂ ಭಾರತ ಗೆದ್ದ ಚಾಂಪಿಯನ್ ಆಗಿತ್ತು. ಮೊದಲು ಬ್ಯಾಟಿಂಗ್ ಮಾಡಿದ ಭಾರತ 20 ಓವರ್‌ಗಳಲ್ಲಿ 255 ರನ್‌ಗಳ ಭಾರೀ ಮೊತ್ತ ಕಲೆಹಾಕಿತು. ಇದನ್ನೂ ಓದಿ: RCB ಅಭಿಮಾನಿಗಳಿಗೆ ಸಿಹಿ ಸುದ್ದಿ: ತವರಿನಲ್ಲಿ ಆಡಲಿದ್ದಾರೆ ನಮ್ಮ ಹರಿಣಗಳು ಸಂಜು ಸ್ಯಾಮ್ಸನ್ 46 ಚೆಂಡುಗಳಲ್ಲಿ 89 ರನ್‌ಗಳ ಸ್ಫೋಟಕ ಇನ್ನಿಂಗ್ಸ್ ಆಡಿದರು. ಅಭಿಷೇಕ್ ಶರ್ಮಾ 52 ಹಾಗೂ ಇಶಾನ್ ಕಿಶನ್ 54 ರನ್‌ಗಳ ಕೊಡುಗೆ ನೀಡಿದರು. 256 ರನ್‌ಗಳ ಗುರಿ ಬೆನ್ನಟ್ಟಿದ ನ್ಯೂಜಿಲೆಂಡ್ ತಂಡ 159 ರನ್‌ಗಳಿಗೆ ಆಲ್ ಔಟ್ ಆಯಿತು. ಜಸ್ಪ್ರೀತ್ ಬುಮ್ರಾ 4 ವಿಕೆಟ್ ಪಡೆದು ಭಾರತದ ಗೆಲುವಿಗೆ ಪ್ರಮುಖ ಕಾರಣರಾದರು. ಈ ಜಯದೊಂದಿಗೆ ಭಾರತ ಟಿ20 ವಿಶ್ವಕಪ್ ಪ್ರಶಸ್ತಿಯನ್ನು ಮತ್ತೊಮ್ಮೆ ತನ್ನದಾಗಿಸಿಕೊಂಡಿತು. ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ Post navigation T20 World Cup: ಇಂಗ್ಲೆಂಡ್ ಔಟ್, ಫೈನಲ್ ಪ್ರವೇಶಿಸಿದ ಭಾರತ First Time Ever: ಭಾರತದ ಮುಡಿಗೆ T20 ವಿಶ್ವಕಪ್, ಹಲವು ದಾಖಲೆ ಸೃಷ್ಟಿ