ಬೆಳಗಾವಿ, ಮಾ.1: ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಗೆ (NWKRTC) ಕಿತ್ತೂರು ರಾಣಿ ಚೆನ್ನಮ್ಮ ಸಾರಿಗೆ ಸಂಸ್ಥೆ (Kittur Rani Chennamma) ಅಂತ ಮರುನಾಮಕರಣ ಮಾಡಲು ಶೀಘ್ರವೇ ಕ್ರಮ ವಹಿಸಲಾಗುವುದು ಎಂದು ಸಾರಿಗೆ ಸಚಿವರಾದ ರಾಮಲಿಂಗಾ ರೆಡ್ಡಿ (Ramalinga Reddy) ಹೇಳಿದ್ದಾರೆ. ಬೆಳಗಾವಿ ಕೇಂದ್ರ ಬಸ್ ನಿಲ್ದಾಣದಲ್ಲಿ ನಡೆದ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ 28ನೇ ಸಂಸ್ಥಾಪನಾ ದಿನಾಚರಣೆಯಲ್ಲಿ 250 ಹೊಸ ಬಸ್‌ಗಳನ್ನು ಅವರು ಲೋಕಾರ್ಪಣೆಗೊಳಿಸಿ ಮಾತನಾಡಿದರು. ಈ ಕುರಿತು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಈಗಾಗಲೇ ಮನವಿ ಸಲ್ಲಿಸಿದ್ದರು. ಕಳೆದ ಬಜೆಟ್‌ನಲ್ಲಿ ಘೋಷಿಸಿದಂತೆ 2,000 ಹೊಸ ಬಸ್‌ಗಳ ಖರೀದಿ ಪ್ರಕ್ರಿಯೆ ಪ್ರಗತಿಯಲ್ಲಿ ಇದೆ ಎಂದು ತಿಳಿಸಿದರು. ಪಿಎಮ್‌ಇ ಬಸ್ ಸೇವಾ ಯೋಜನೆಯಡಿ ಬೆಳಗಾವಿ ನಗರಕ್ಕೆ 100 ವಾಹನಗಳನ್ನು ಮಂಜೂರು ಮಾಡಲಾಗಿದೆ. 5 ಕೋಟಿ ರೂ. ವೆಚ್ಚದಲ್ಲಿ 11 ಹೊಸ ನಗರ ಸಾರಿಗೆ ಬಸ್‌ಗಳನ್ನು ಖರೀದಿಸಲಾಗುತ್ತಿದೆ ಎಂದರು. ಸುಮಾರು 8 ಕೋಟಿ ರೂ. ವೆಚ್ಚದಲ್ಲಿ 14 ಏರ್ ಕಂಡೀಷನ್ ಸ್ಲೀಪರ್ ಕೋಚ್‌ಗಳು ಮತ್ತು 4 ಕೋಟಿ ರೂ. ವೆಚ್ಚದಲ್ಲಿ 10 ನಾನ್ ಏರ್ ಕಂಡೀಷನ್ ಸ್ಲೀಪರ್ ಕೋಚ್ ಬಸ್‌ಗಳ ಖರೀದಿ ಪ್ರಕ್ರಿಯೆಯೂ ನಡೆಯುತ್ತಿದೆ. ಶೀಘ್ರದಲ್ಲೇ ನಗರ ಸಾರಿಗೆಗೆ 80 ಹೊಸ ಬಸ್‌ಗಳನ್ನು ನೀಡಲಾಗುವುದು. ಸೇವೆಯಲ್ಲಿರುವಾಗ ನಿಧನರಾದ ಸಾರಿಗೆ ನೌಕರರ ಕುಟುಂಬಕ್ಕೆ 1 ಕೋಟಿ ರೂ. ಪರಿಹಾರ ನೀಡುತ್ತಿರುವುದು NWKRTCಗೆ ಹೆಮ್ಮೆ ತಂದ ವಿಷಯ ಎಂದು ಹೇಳಿದರು. ಇದನ್ನೂ ಓದಿ: ದಾವಣಗೆರೆ-ಚಿತ್ರದುರ್ಗ, ಗದಗ–ವಾಡಿ ರೈಲು ಮಾರ್ಗ 2027ಕ್ಕೆ ಪೂರ್ಣ: ಸೋಮಣ್ಣ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೋಳಿ ಮಾತನಾಡಿ, ಬೆಳಗಾವಿ ಜಿಲ್ಲೆಗೆ ಇನ್ನಷ್ಟು ಹೊಸ ಬಸ್‌ಗಳನ್ನು ನೀಡುವಂತೆ ಮನವಿ ಮಾಡಿದರು. NWKRTC ಅಧ್ಯಕ್ಷ ಭರಮಗೌಡ (ರಾಜು) ಕಾಗೆ ಮಾತನಾಡಿ, ಸಂಸ್ಥೆಯ ಬಸ್‌ಗಳಲ್ಲಿ ದಿನಕ್ಕೆ ಸರಾಸರಿ 25 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರು ಸಂಚರಿಸುತ್ತಾರೆ. ಸರ್ಕಾರದಿಂದ ಇನ್ನೂ ಬಾಕಿ ಇರುವ 1,100 ಕೋಟಿ ರೂ. ಅನುದಾನವನ್ನು ಶೀಘ್ರ ಬಿಡುಗಡೆ ಮಾಡುವಂತೆ ಅವರು ಮನವಿ ಮಾಡಿದರು. ವಾಕರಸಾಸಂಸ್ಥೆಯ 28ನೇ ಸಂಸ್ಥಾಪನಾ ದಿನಾಚರಣೆ 🚌 ನೂತನ ಬಸ್ಸುಗಳ ಲೋಕಾರ್ಪಣೆ🏗️ ಬೆಳಗಾವಿ-1ನೇ ಘಟಕ ನವೀಕರಣ ಶಂಕುಸ್ಥಾಪನೆ📜 ಹೊಸ ಸಿಬ್ಬಂದಿಗಳಿಗೆ ನೇಮಕಾತಿ ಆದೇಶ🥈 ಅಪಘಾತ/ಅಪರಾಧ ರಹಿತ ಚಾಲಕರಿಗೆ ಬೆಳ್ಳಿ ಪದಕ💻 ನೂತನ ತಂತ್ರಾಂಶ ಬಿಡುಗಡೆಮಾನ್ಯ ಸಚಿವರ ಹಾಗೂ ಗಣ್ಯರ ಉಪಸ್ಥಿತಿಯಲ್ಲಿ ಸಮಾರಂಭ ಯಶಸ್ವಿಯಾಗಿ ನೆರವೇರಿತು. pic.twitter.com/hl5sDTDUF2— North Western Karnataka Road Transport Corporation (@nw_krtc) February 28, 2026 ಇದೇ ವೇಳೆ ಸಚಿವರು ಅಪಘಾತರಹಿತ ಸೇವೆ ಸಲ್ಲಿಸಿದ 68 ಚಾಲಕರಿಗೆ ಬೆಳ್ಳಿ ಪದಕ ನೀಡಿ ಗೌರವಿಸಲಾಯಿತು. 188 ಅಭ್ಯರ್ಥಿಗಳಿಗೆ ನೇಮಕಾತಿ ಪತ್ರಗಳನ್ನು ವಿತರಿಸಲಾಯಿತು. ವೈಯಕ್ತಿಕ ಅಪಘಾತ ಹಾಗೂ ಗುಂಪು ಜೀವ ವಿಮಾ ಪಾಲಿಸಿಗಳನ್ನೂ ನೀಡಲಾಯಿತು. ಕುಟುಂಬ ಕಲ್ಯಾಣ ನಿಧಿ ಯೋಜನೆಯಡಿ ಪರಿಹಾರ ಚೆಕ್ಕುಗಳನ್ನು ವಿತರಿಸಿದರು. ಎನ್‌ಡಬ್ಲ್ಯೂಕೆಆರ್‌ಟಿಸಿ ಮೊದಲ ಘಟಕದ ಕಟ್ಟಡದ ನವೀಕರಣ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿದರು. ಅಪಘಾತ ಮತ್ತು ಅಪರಾಧರಹಿತ ಸೇವೆ ಸಲ್ಲಿಸಿದ ಚಾಲಕರಿಗೆ ಪದಕಗಳನ್ನು ವಿತರಿಸಿ, ಹೊಸ ಸಾಫ್ಟ್‌ವೇರ್‌ನ್ನೂ ಬಿಡುಗಡೆ ಮಾಡಿದರು. ಮತ್ತುಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ Post navigation ಐತಿಹಾಸಿಕ ನವಲಗುಂದ ರಾಮಲಿಂಗ ಕಾಮದೇವನ ದರ್ಶನ ಇಂದಿನಿಂದ ಆರಂಭ ಸದ್ಭಾವನಾ ರಾಷ್ಟ್ರೀಯ ಪ್ರಶಸ್ತಿಗೆ ಆರಾಧನಾ ಜಂಬಣ್ಣವರ ಆಯ್ಕೆ