Pandit Puttaraj Gawai 112th Birth Anniversary: Aradhana Jabannavar Selected for Sadbhavana National Award 2026ಡಾ. ಆರಾಧನಾ ಎಸ್‌. ಜಂಬಣ್ಣವರ

ಗದಗ, ಮಾ.02: ಪ್ರಾದ್ಯಾಪಕಿ, ಡಾ. ಆರಾಧನಾ ಎಸ್‌. ಜಂಬಣ್ಣವರ ಅವರಿಗೆ ಡಾ.ವಿ.ಬಿ ಹಿರೇಮಠ ಮೆಮೋರಿಯಲ್‌ ಪ್ರತಿಷ್ಠಾನ (ರಿ) ಹಾಗೂ ಡಾ.ವಿ.ಬಿ ಹಿರೇಮಠ ಮಹಾವೇದಿಕೆ ಹಾಗೂ ಅಶ್ವಿನಿ ಪ್ರಕಾಶನ ನೀಡಲಾಗುವ ಗುರು ಪುಟ್ಟರಾಜ (Puttaraj Gawai) ಕವಿ ಗವಾಯಿಗಳವರ ಸದ್ಭಾವನಾ ರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಕನ್ನಡ ನಾಡು ನುಡಿ, ನೆಲ-ಜಲ, ಕಲೆ, ಸಂಗೀತ, ಸಾಹಿತ್ಯ, ಸಂಸ್ಕೃತಿ, ರಂಗಭೂಮಿ, ಜಾನಪದ, ಕೃಷಿ, ವೈದ್ಯಕೀಯ, ಸಾಮಾಜಿಕ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಯನ್ನು ಗುರುತಿಸಿ ಸಾಧಕರಿಗೆ ಪ್ರಶಸ್ತಿ ನೀಡಲಾಗುತ್ತಿದ್ದು, ಡಾ. ಆರಾಧನಾ ಎಸ್‌. ಜಂಬಣ್ಣ ಅವರಿಗೆ ಶಿಕ್ಷಣ ಕ್ಷೇತ್ರದಲ್ಲಿಮ ಸೇವೆಯನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗುತ್ತಿದೆ.

ಇದನ್ನೂ ಓದಿ: ಹುಬ್ಬಳ್ಳಿಯ KSCA ಮೈದಾನದ ಪೆವಿಲಿಯನ್‌ಗೆ ಕನ್ನಡಿಗ ಸುನೀಲ್‌ ಜೋಶಿ ಹೆಸರು ನಾಮಕರಣಕ್ಕೆ ನಿರ್ಧಾರ

ಮಂಗಳವಾರ (ಮಾ.03) ಗದಗದಲ್ಲಿ ಡಾ. ವಿ.ಬಿ ಹಿರೇಮಠ ಮೆಮೋರಿಯಲ್‌ ಪ್ರತಿಷ್ಠಾನ ರಿ, ಗದಗ ಹಾಗೂ ಅಶ್ವಿನಿ ಪ್ರಕಾಶನ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿರುವ ಡಾ. ಪಂಡಿತ್‌ ಪುಟ್ಟರಾಜ ಕವಿ ಗವಾಯಿಗಳವರ 112ನೇ ಜಯಂತೋತ್ಸವ ಸಮಾರಂಭದ ಸಾಂಸ್ಕೃತಿಕ ಕಾರ್ಯಕ್ರಮದ ಪ್ರಶಸ್ತಿ ಪುರಸಾರ ಸಮಾರಂಭದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಗುತ್ತದೆ.

ಮತ್ತುಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *