Ayurveda health tips to prevent sun stroke in kannadaಸಾಂದರ್ಭಿಕ ಚಿತ್ರ

ಬೇಸಿಗೆ ಕಾಲದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ಹೀಟ್ ಸ್ಟ್ರೋಕ್ (Heat stroke) ಅಥವಾ ಸನ್ ಸ್ಟ್ರೋಕ್ (Sun Stroke) ಜೀವಕ್ಕೆ ಅಪಾಯಕಾರಿಯಾಗಿದೆ. ಬೇಸಿಗೆ ಬಿಸಿಲಿನ ತಾಪಮಾನ ಹೆಚ್ಚಾಗಿ ದೇಹದ ಉಷ್ಣಾಂಶ 40°C (104°F) ಮಟ್ಟಕ್ಕಿಂತ ಏರಿದಾಗ ಈ ಸ್ಥಿತಿ ಉಂಟಾಗುತ್ತದೆ. ಸಾಮಾನ್ಯವಾಗಿ ದೇಹದ ತಾಪಮಾನ 37°C ಇರುತ್ತದೆ. ಇದು ಹೆಚ್ಚಾದಾಗ ದೇಹ ಅದನ್ನು ನಿಯಂತ್ರಿಸಲು ಸಾಧ್ಯವಾಗದಿದ್ದರೆ ಹೀಟ್ ಸ್ಟ್ರೋಕ್ ಸಂಭವಿಸುತ್ತದೆ.

ಸನ್ ಸ್ಟ್ರೋಕ್‌ನ ಲಕ್ಷಣಗಳು  

  1. ದೇಹದ ಉಷ್ಣಾಂಶ ಹೆಚ್ಚಾಗುವುದು
  2. ಹೃದಯ ಬಡಿತ ಜೋರಾಗಿ ಮತ್ತು ವೇಗವಾಗಿ ಬಡಿಯುವುದು
  3. ಅಸ್ಪಷ್ಟವಾಗಿ ಮಾತನಾಡುವುದು
  4. ಕಣ್ಣಿಗೆ ಮಬ್ಬು ಅಥವಾ ಕತ್ತಲು ಗೋಚರಿಸುವುದು
  5. ಚರ್ಮ ಒಣಗುವುದು ಅಥವಾ ಕೆಂಪಾಗುವುದು
  6. ವಾಂತಿ, ವಾಕರಿಕೆ, ತಲೆಸುತ್ತು

ಸನ್ ಸ್ಟ್ರೋಕ್‌ನ ಹಂತಗಳು  

ಸನ್ ಸ್ಟ್ರೋಕ್‌ ಸಂಬಂಧಿತ ಕಾಯಿಲೆಗಳು ಮುಖ್ಯವಾಗಿ ಮೂರು ಹಂತಗಳಲ್ಲಿ ಕಂಡುಬರುತ್ತವೆ:

1. ಹೀಟ್ ಫ್ಯಾಟಿಂಗ್

ಬಲಹೀನತೆ, ಬಾಯಾರಿಕೆ

2. ಹೀಟ್ ಎಕ್ಸಾಷನ್  

ಅತಿಯಾಗಿ ಬೆವರುವುದು, ನಾಡಿ/ಹೃದಯ ಬಡಿತ ಹೆಚ್ಚಾಗುವುದು, ವಾಂತಿ ಬರುವಂತೆ ಅನಿಸುವುದು, ತಲೆ ತಿರುಗುವುದು

3. ಹೀಟ್ ಸ್ಟ್ರೋಕ್

ದೇಹದ ಉಷ್ಣಾಂಶ ನಿಯಂತ್ರಣ ತಪ್ಪುವುದು, ವ್ಯಕ್ತಿ ಎಚ್ಚರ ತಪ್ಪಿ ಬೀಳುವುದು

ತುರ್ತು ಚಿಕಿತ್ಸೆ

ಈ ಲಕ್ಷಣಗಳು ಕಂಡುಬಂದರೆ ತಕ್ಷಣ ಈ ಕ್ರಮಗಳನ್ನು ಅನುಸರಿಸಬೇಕು: ವ್ಯಕ್ತಿಯನ್ನು ತಕ್ಷಣ ನೆರಳಿನ ಸ್ಥಳಕ್ಕೆ ಕರೆದೊಯ್ಯಬೇಕು. ಕೈ, ಕಾಲು, ಮುಖ ಮತ್ತು ತಲೆಯ ಮೇಲೆ ತಣ್ಣೀರಿನಲ್ಲಿ ತೋಯಿಸಿದ ಬಟ್ಟೆ ಅಥವಾ ಐಸ್ ಪ್ಯಾಕ್ ಇಡಬೇಕು ಎಚ್ಚರ ತಪ್ಪಿದ್ದರೆ ತಣ್ಣೀರು ಎರಚುವುದು ಅಥವಾ ಗಾಳಿಹಾಕಬೇಕು.

ಇದನ್ನೂ ಓದಿ: ಬೇಸಿಗೆಯಲ್ಲಿ ಮಜ್ಜಿಗೆ ಕುಡಿಯುತ್ತೀರಾ? ಹಾಗಾದ್ರೆ ಆರೋಗ್ಯಕ್ಕೆ ಸಿಗುವ 5 ದೊಡ್ಡ ಲಾಭಗಳು ಇಲ್ಲಿವೆ!

ಎಚ್ಚರವಾದ ನಂತರ: ತೆಂಗಿನ ನೀರು (ಎಳೆನೀರು), ಓಆರ್‌ಎಸ್ (ORS), ನೀರಿನಾಂಶ ಇರುವ ಹಣ್ಣುಗಳು ನೀಡಬೇಕು.

ಈ ಕೆಲಸ ಮಾಡಲೇಬಾರದು: ಟೀ, ಕಾಫಿ ಕಾರ್ಬೊನೇಟೆಡ್ ಡ್ರಿಂಕ್ಸ್ (ಕೋಕಾ ಕೋಲಾ, ಪೆಪ್ಸಿ) ಐಸ್ ಕ್ರೀಮ್ ತಿನ್ನಲೇಬಾರದು.

ಸನ್ ಸ್ಟ್ರೋಕ್‌ನಿಂದ ಪಾರಾಗಲು ಈ ಕ್ರಮಗಳನ್ನು ಪಾಲಿಸಿ

  1. ಅತಿಯಾದ ಬಿಸಿಲಿನ ಸಮಯದಲ್ಲಿ ಹೊರಗೆ ಹೋಗುವುದನ್ನು ತಪ್ಪಿಸಬೇಕು
  2. ಮಕ್ಕಳು ಮತ್ತು ವೃದ್ಧರು ಹೆಚ್ಚು ಜಾಗ್ರತೆ ವಹಿಸಬೇಕು
  3. ತೆಳುವಾದ, ತಿಳಿಬಣ್ಣದ, ಸಡಿಲ ಬಟ್ಟೆಗಳನ್ನು ಧರಿಸಬೇಕು
  4. ಬಾಯಾರಿಕೆ ಇಲ್ಲದಿದ್ದರೂ ನೀರು ಕುಡಿಯಬೇಕು
  5. ತೆಂಗಿನ ನೀರು, ಕಲ್ಲಂಗಡಿ, ಮಜ್ಜಿಗೆ ಮುಂತಾದವುಗಳನ್ನು ಸೇವಿಸಬೇಕು
  6. ಯಾವಾಗಲೂ ನೀರಿನ ಬಾಟಲ್ ಮತ್ತು ಸ್ವಲ್ಪ ಕಲ್ಲು ಸಕ್ಕರೆ ಜೊತೆಯಲ್ಲಿ ಇಟ್ಟುಕೊಳ್ಳಬೇಕು

ಲೇಖಕರು: ಡಾ. ಸೌಜನ್ಯ. ಪ್ರತಿನಿಧಿ

ಮತ್ತುಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *