father of philosophy Kapila maharshi story in kannadaಸಾಂದರ್ಭಿಕ ಚಿತ್ರ

ಪ್ರಾಚೀನ ಭಾರತದ ಮಹರ್ಷಿಗಳಲ್ಲಿ ಕಪಿಲ ಮಹರ್ಷಿಗಳೂ ಒಬ್ಬರು. ಕಪಿಲರು ತಮ್ಮ ತಪಸ್ಸಿನಿಂದ ಸಿದ್ಧಿಯನ್ನು ಪಡೆದ ಮಹರ್ಷಿಗಳಲ್ಲಿ ಅಗ್ರಗಣ್ಯರು. ಇವರನ್ನು ಸನಾತನ ಭಾರತದ ತತ್ತ್ವಶಾಸ್ತ್ರದ ಪಿತಾಮಹರೆಂದು ಕರೆಯಬಹುದು. ತರು. ಇವರ ತಾಯಿ ದೇವಹೂತಿ, ದೇವಹೂತಿಯು ಇವರು ಕರ್ದಮ ಪ್ರಜಾಪತಿಗಳ ಪುತ್ರರು. ಇವರ ಬ್ರಹ್ಮಪುತ್ರನಾದ ಸ್ವಾಯಂಭುವ ಮನು ಮತ್ತು ಶತರೂಪಾದೇವಿಯ ಪುತ್ರಿ.

ದೇವಪೂತಿ-ಕರ್ದಮರಿಗೆ ಆರುಂಧತಿ, ಶ್ರದ್ಧಾ, ಹವಿರ್ಭುಕ್, ಗತಿ, ಕ್ರಿಯಾ, ಶಾಂತಿ, ಅನಸೂಯಾ, ಕಲಾ ಮತ್ತು ಖ್ಯಾತಿ ಎಂಬ ಒಂಬತ್ತು ಜನ ಪುತ್ರಿಯರು. ಇವರೆಲ್ಲರಿಗೆ ಕಡೆಯವನಾಗಿ ಹುಟ್ಟಿದವನು ಕಪಿಲನು. ಕರ್ದಮ ಪ್ರಜಾಪತಿಯ ತಪಸ್ಸಿಗೆ ಮೆಚ್ಚಿ ಪ್ರಾಕೃತಗುಣಸಂಬಂಧವಿಲ್ಲದ ಪರಮಪುರುಷನೇ ಅವನ ಪುತ್ರನಾಗಿ ಜನಿಸುವುದಾಗಿ ವರವನ್ನಿತ್ತಿದ್ದನು.

ಭಗವಂತನ ಅವತಾರಗಳು ಅನೇಕ. ದಶಾವತಾರಗಳು ಪೂರ್ಣಾವತಾರಗಳಾದರೆ, ಋಷಿ-ಮಹರ್ಷಿಗಳ ರೂಪದಲ್ಲಿ ಜಗತ್ತಿನ ಕಲ್ಯಾಣವನ್ನು ಸಾಧಿಸಿದವರು ಅವನ ಅಂಶಾವತಾರಗಳು, ಭಾಗವತವು ಇಂತಹ ಇಪ್ಪತ್ತೊಂದು ಅವತಾರಗಳನ್ನು ವರ್ಣಿಸುತ್ತ ಕಪಿಲರನ್ನು ಐದನೆಯ ಅವತಾರವೆಂದು ಗುರುತಿಸುತ್ತದೆ. ಶಿಶುವಿನ ಜನನಕಾಲದಲ್ಲಿಯೇ ಬ್ರಹ್ಮಾದಿಗಳು ಕರ್ದಮರ ಆಶ್ರಮಕ್ಕೆ ಬಂದು ಭಗವತ್ಸಂಕಲ್ಪವನ್ನು ಕೊಂಡಾಡಿದುದಾಗಿ ತಿಳಿದುಬರುತ್ತದೆ.

ಪುತ್ರನ ಜನನಾನಂತರ ಕರ್ದಮನು ಸಂನ್ಯಾಸವನ್ನು ಸ್ವೀಕರಿಸಿ ಮೋಕ್ಷಾರ್ಥಿಯಾಗಿ ಹೊರಟುಹೋದನು. ಕಪಿಲರು ಬಾಲ್ಯದಿಂದಲೇ ಚಂಚಲರಹಿತವಾದ ತಪಸ್ಸೆಂಬ ಸಾಧನೆಯಲ್ಲಿ ತೊಡಗಿದ್ದರು. ಭಗವಂತನ ಅಂಶವಾದ ಅವರಿಗೆ ವೇದೋಪನಿಷತ್ತುಗಳೆಲ್ಲವೂ ಕರತಲಾಮಲಕವಾಗಿದ್ದವು.

ಇದನ್ನೂ ಓದಿ: ಭೃಗುಮಹರ್ಷಿಗಳ ಪುತ್ರ ಚ್ಯವನ ಮಹರ್ಷಿಗಳು ಶರ್ಯಾತಿ ಮಹಾರಾಜನ ಪುತ್ರಿಯನ್ನು ವರಸಿದ ಪ್ರಸಂಗ

ಅವರು ತಮ್ಮ ತಪಃಪ್ರಭಾವದಿಂದ ಸಿದ್ದರೆನಿಸಿ ಕೊಂಡವರು. ದೇವತೆಗಳ ಅಂಶದಿಂದ ಜನಿಸಿ, ತಮ್ಮ ಸಾಮರ್ಥ್ಯದಿಂದ ಸಿದ್ಧಿಯನ್ನು ಪಡೆದವರನ್ನು ಸಿದ್ದರೆಂದು ಕರೆಯುತ್ತಾರೆ. ಅತಿಮಾನುಷಶಕ್ತಿಯುಳ್ಳ ಇವರು ಭೂತ-ಭವಿಷ್ಯ-ವರ್ತಮಾನಗಳ ಎಲ್ಲ ವಿಷಯವನ್ನೂ ಅಂಗೈಯಲ್ಲಿನ ನೆಲ್ಲಿಕಾಯಿಯಂತೆ ನೋಡಬಲ್ಲವರಾಗಿದ್ದರು.

ಮಂತ್ರಸಿದ್ದಿಯ ಜೊತೆಗೆ, ಅಣಿಮಾದಿ ಅಷ್ಟಸಿದ್ದಿಗಳನ್ನೂ ಕೈವಶಮಾಡಿಕೊಂಡಿದ್ದರು. ಅಣಿಮಾ (ಸೂಕ್ಷ್ಮರೂಪವನ್ನು ಧರಿಸುವ ಶಕ್ತಿ), ಮಹಿಮಾ (ದೊಡ್ಡ ರೂಪವನ್ನು ಧರಿಸುವ ಶಕ್ತಿ), ಗರಿಮಾ (ಭಾರವಾಗುವಿಕೆ), ಲಘಿಮಾ (ಹಗುರವಾಗುವಿಕೆ), ಪ್ರಾಪ್ತಿ (ಪಡೆಯಲು ಸಾಧ್ಯವಲ್ಲದ್ದನ್ನು ಪಡೆಯುವಿಕೆ), ಪ್ರಾಕಾಮ್ಯ (ಸ್ವಲ್ಪವನ್ನು ವಿಪುಲವಾಗುವಿಕೆ), ಈಶಿತ್ವ (ಎಲ್ಲೆಲ್ಲಿಯೂ ಪ್ರಭಾವವನ್ನು ಬೀರುವಿಕೆ), ಏಕತ್ವ (ಇಂದ್ರಿಯನಿಗ್ರಹ) ಹೀಗೆ ಕಪಿಲರು ಮಂತ್ರದಿಂದಲೂ ಯೋಗದಿಂದಲೂ ತಪಸ್ಸಿನಿಂದಲೂ ಸಿದ್ದಿಯನ್ನು ಪಡೆದಿದ್ದವರು.

ಆದ್ದರಿಂದಲೇ ಪರಮಾತ್ಮನು ಭಗವದ್ಗೀತೆಯಲ್ಲಿ ತನ್ನ ವಿಭೂತಿಗಳನ್ನು ವಿವರಿಸುವಾಗ ಸಿದ್ಧರಲ್ಲಿ ತಾನು ಕಪಿಲಮಹಾಮುನಿಯೆಂದು ಹೇಳಿಕೊಂಡಿರುತ್ತಾನೆ.

ಆಕರ ಗ್ರಂಥ: ಪ್ರಾಚೀನ ಭಾರತದ ಮಹರ್ಷಿಗಳು ಪುಸ್ತಕ ಭಾಗ -1

ಮತ್ತುಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *