Historic Navalgund Ramalinga Kamadeva Darshan Begins from Today february 28ರಾಮಲಿಂಗ ಕಾಮದೇವ


ನವಲಗುಂದ, ಫೆಬ್ರವರಿ 28: ವೈಭವದ ಹೋಳಿ ಹುಣ್ಣಿಮೆ ಆಚರಣೆಗೆ ನವಲಗುಂದ (Navalagund) ಮತ್ತೊಮ್ಮೆ ಸಿದ್ಧಗೊಂಡಿದೆ. ಹೋಳಿ ಹುಣ್ಣಿಮೆ (Holi Hunnime) ಅಂದರೆ ರಂಗು ರಂಗಿನ ಬಣ್ಣ ಎರಚಿ ಮೋಜಿಗಾಗಿ ಅಲ್ಲದೇ ಶ್ರದ್ಧಾ ಭಕ್ತಿಯಿಂದಲೂ ಆಚರಣೆ ಗೊಳ್ಳಲಿದೆ ಎಂಬುವುದಕ್ಕೆ ಇಲ್ಲಿನ ರಾಮಲಿಂಗ ಕಾಮದೇವ (Ramalinga Kamadeva) ಸಾಕ್ಷಿಯಾಗಿದ್ದಾನೆ. ಇಷ್ಟಾರ್ಥಗಳನ್ನು ಪೂರೈಸುವ ರಾಮಲಿಂಗ ಕಾಮದೇವನ ದರ್ಶನ ಇಂದಿನಿಂದ (ಫೆ.28) ಆರಂಭವಾಗಲಿದೆ.

ಪ್ರತಿವರ್ಷದಂತೆ ಈ ವರ್ಷವೂ ದ್ವಾದಶಿ ಶನಿವಾರ (ಫೆ.28) ದಂದು ರಾಮಲಿಂಗ ಕಾಮದೇವನನ್ನು ಪ್ರತಿಷ್ಠಾಪಿಸಲಾಗುತ್ತದೆ. ರಾಮಲಿಂಗ ಕಾಮದೇವನ ದರ್ಶನ ಪಡೆಯಲು ಲಕ್ಷಾಂತರ ಭಕ್ತರು ರಾಜ್ಯ-ಹೊರ ರಾಜ್ಯಗಳಿಂದ ಆಗಮಿಸುತ್ತಾರೆ. ಮಂಗಳವಾರ (ಮಾ.03) ಹುಣ್ಣಿಮೆ ದಿನದಂದು ವಿಶೇಷ ಪೂಜೆ ನೆರವೇರುತ್ತದೆ. ಬುಧವಾರ (ಮಾ.4) ರಂದು ಓಕುಳಿ ಬಣ್ಣದಾಟವಾಡುತ್ತ ರಾತ್ರಿ ನಗರದ ಪ್ರಮುಖ ಬೀದಿಗಳಲ್ಲಿ ರಾಮಲಿಂಗ ಕಾಮದೇವನ ಮೆರವಣಿಗೆ ನಡೆದು, ಬಳಿಕ ದಹನವಾಗಲಿದೆ.

ಪಟ್ಟಣದ ಒಟ್ಟು 14 ಓಣಿಯಲ್ಲಿ ವಿವಿಧ ಕಾಮಣ್ಣನ ಮೂರ್ತಿ ಪ್ರತಿಷ್ಠಾಪಿಸಲಾಗುತ್ತದೆ. ರಾಮಲಿಂಗ ಕಾಮದೇವ ಸಂತಾನವಿಲ್ಲದ ದಂಪತಿಗಳಿಗೆ ಸಂತಾನ ಭಾಗ್ಯ, ಕಂಕಣ ಭಾಗ್ಯ, ಅನಾರೋಗ್ಯ ನಿವಾರಣೆ ಮಾಡುತ್ತಾನೆ ಎಂಬುವುದು ಭಕ್ತರ ನಂಬಿಕೆಯಾಗಿದೆ.

ಪ್ರತಿಯೊಂದು ದೇವಸ್ಥಾನದಲ್ಲಿ ಒಬ್ಬ ಪೂಜಾರಿ ಅಥವಾ ಪುರೋಹಿತನಿರುತ್ತಾರೆ. ಆದರೆ, ರಾಮಲಿಂಗ ದೇವಸ್ಥಾನದಲ್ಲಿರುವ ಕಾಮಣ್ಣನಿಗೆ ಯಾವುದೇ ಪೂಜಾರಿ ಇಲ್ಲ ಎಂಬುದು ವಿಶೇಷ. ಹೋಳಿ ಹುಣ್ಣಿಮೆ ಪೂಜಾ ವಿಧಿ-ವಿಧಾನದಲ್ಲಿಯೂ ಮಂತ್ರ ಘೋಷಣೆ, ಅರ್ಚಣೆಯೋ ಇಲ್ಲ. ಭಕ್ತರೆ ಪೂಜೆ ಸಲ್ಲಿಸಿ ಹರಕೆ ಹೊರುವ ಸಂಪ್ರದಾಯ ಇಲ್ಲಿದೆ.

ಐತಿಹಾಸಿಕ ಹಿನ್ನಲೆ

ಭಕ್ತಿಯಿಂದ ಭಜಿಸುವವರಿಗೆ ಈತ ಅಕ್ಷರಶ: ಕಾಮಧೇನು ಕಲ್ಪವೃಕ್ಷ ಈ ಕಾಮಣ್ಣನಿಗೆ ಇಂಥ ಸಿದ್ಧಿ ಲಭಿಸಿದುದು ಒಬ್ಬ ತಪೋನರತ ಸಿದ್ಧ ಪುರುಷನ ಸಿದ್ದ ಹಸ್ತದಿಂದ, ಎಲ್ಲೆಡೆ ಮೂರ್ತಿಯನ್ನು ಪ್ರತಿಷ್ಠಾಪಿಸಿ ಹಬ್ಬ ಆಚರಿಸುತ್ತಿರುವುದನ್ನು ಗಮನಿಸಿ ಈ ಮಹಿಮಾ ಪುರುಷ ಕಾಮಣ್ಣ ಕೇವಲ ಸಾಂಕೇತಿಕ ಮೂರ್ತಿಯಾಗದೇ ಆರಾಧಿಸುವವರಿಗೆ ಆರಾಧ್ಯ ದೈವವಾಗಬೆಕು ಎಂಬ ಅಪೇಕ್ಷೆಯಿಂದ ವಿಶಿಷ್ಟ ಮೂರ್ತಿ ರಚನೆಯ ಸಂಕಲ್ಪಕ್ಕೆ ಮುಂದಾದ.

101 ಗಿಡಮೂಲಿಕೆಗಳಿಂದ ನಿರ್ಮಾಣ ಮಾಡಬೇಕು ಎಂಬ ಸಂಕಲ್ಪ, ಆದರೆ ದೊರೆತಿದ್ದು. 100 ಮಾತ್ರ. ಅದರಲ್ಲಿಯೇ ಮೂರ್ತಿಯನ್ನು ಮಾಡಿ ಒಂದು ರಂಧ್ರವನ್ನು ಬಿಟ್ಟ ಎಂಬ ನಂಬಿಕೆ ಇದೆ. ಈ ಮೂರ್ತಿಯ ಮೂಲ ಸವಣೂರು ಎಂದು ಹೇಳುತ್ತಾರೆ. ಆದರೆ ನೆಲೆ ನಿಂತು ಜನಪ್ರಿಯಗೊಂಡಿದ್ದು, ನವಿಲುಗುಂದ ನಗರದ ಭಾಗ್ಯ ಎನ್ನಬಹುದು

ಮತ್ತುಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *