ಜಗದ್ಗುರು ಶಂಕರಾಚಾರ್ಯರು “ಶಂ ಕರೋತಿ ಇತಿ ಶಂಕರಹಃ” ಶಂ ಎಂದರೆ ಕಲ್ಯಾಣ್ – ಯಾರು ಕಲ್ಯಾಣಕಾರಕನೋ ಅವನೇ ಶಂಕರ. ಈ ಒಂದು ವಾಕ್ಯವು ಆದಿಗುರು ಶಂಕರಾಚಾರ್ಯರಿಗೆ ಪರೋಕ್ಷವಾಗಿ ಸುಚಿಸುತ್ತದೆ. ಶ್ರೀ ಗುರು ಶಂಕರಾಚಾರ್ಯರು 8ನೇ ಶತಮಾನದಲ್ಲಿ ಕೇರಳದ ಏರ್ನಕುಲಂ ಜಿಲ್ಲೆಯ ಪೂರ್ಣನದಿ ತೀರದಲ್ಲಿ ಜನಸಿದರು. ತಂದೆ ಶಿವಗುರು ಮತ್ತು ತಾಯಿ ಆರ್ಯಂಬಾ. ಶಿವಗುರು ಮತ್ತು ಆರ್ಯಂಬಾ ದಂಪತಿಗೆ ಶಂಕರಾಚಾರ್ಯರು ಏಕೈಕ ಪುತ್ರ. ಶಂಕರಾಚಾರ್ಯರಯ ಬಾಲ್ಯದಲ್ಲೇ ತಂದೆಯನ್ನು ಕಳೆದುಕೊಂಡು ಅತ್ಯಂತ ಚಿಕ್ಕ ವಯಸಿನಲ್ಲೇ ಸನ್ಯಾಸ ಸ್ವೀಕರಿಸಿ ಗೋವಿಂದ ಭಗವತ್ಪಾದರ ಶಿಷ್ಯರಾದರು. ದೀಕ್ಷೆಯ ಮುನ್ನ ತಾಯಿ ಆರ್ಯಂಬಾ ಸನ್ಯಾಸಿಯಗಲು ಒಪ್ಪಿರಲಿಲ್ಲ. ಏಕೆಂದರೆ ಶ್ರೀ ಶಂಕರಾಚಾರ್ಯರು ಒಬ್ಬರೇ ಅವರಿಗೆ ಪುತ್ರರಾಗಿದ್ದರು. ಅದಲ್ಲದೆ ಮುಪ್ಪಿನ ಸಮಯದಲ್ಲಿ ನೋಡಲು ಮತ್ತು ನಿಧನದ ನಂತರ ಕಾರ್ಯವನ್ನು ಮಾಡಲು ಯಾರು ಇರಲ್, ಎಂಬುದು ಅವರ ಚಿಂತೆಯಾಗಿತ್ತು. ಆದರೆ ಒಂದು ದಿವಸ ಶಂಕರರು ಪೂರ್ಣ ನದಿಯಲ್ಲಿ ಸ್ನಾನ ಮಾಡುತ್ತಿದ್ದಾಗ ಒಂದು ಮೊಸಳೆ ಅವರ ಕಾಲನ್ನು ಹಿಡಿಯಿತು. ಶಂಕರರು ತೀರದಲ್ಲಿದ್ದ ತಾಯಿಯನ್ನು ಜೋರಾಗಿ ಕೂಗಿ “ತಾಯೆ, ನೀನು ನನಗೆ ಸನ್ಯಾಸ ತೆಗೆದುಕೊಳ್ಳಲು ಅನುಮತಿ ನೀಡಿದರೆ ಮಾತ್ರ ಈ ಮೊಸಳೆ ನನ್ನನು ಬಿಡುತ್ತದೆ ” ಎಂದು ಹೇಳಿದರು. ತಕ್ಷಣವೇ ಅನಿವಾರ್ಯವಾಗಿ ತಾಯಿ ಸನ್ಯಾಸಕ್ಕೆ ಒಪ್ಪಿಗೆ ನೀಡಿದರು. ತಕ್ಷಣವೆ ಮೊಸಳೆಯು ಶಂಕರಾಚಾರ್ಯರ ಕಾಲನ್ನು ಬಿಟ್ಟು ನದಿಯಲ್ಲಿ ಅದೃಶ್ಯಾವಾಯಿತು. ಹೀಗೆ 16 ನೇ ವಯಸಿನಲ್ಲಿ ಎಲ್ಲ ಪ್ರಮುಖ ಗ್ರಂಥಗಳನ್ನು ಪೂರ್ಣಗೊಳಿಸಿ ಅಲ್ಪಯುಷ್ಯದಲ್ಲಿ ದೇಶಾದ್ಯಂತ ಅದ್ವೈತ ತತ್ವವನ್ನು ಪ್ರತಿಪಾದಿಸಿದರು. ದೇವಿ ಮಹಾಲಕ್ಷ್ಮಿ ಮತ್ತು ಶ್ರೀ ಶಂಕರಾಚಾರ್ಯರ ಕಥೆ ದೇವಿ ಮಹಾಲಕ್ಷ್ಮಿಯು ಕೊಲ್ಹಾಸುರ ಎಂಬ ರಾಕ್ಷಸನ ವಧೆಯ ಮಾಡಿದ ನಂತರ ಕರವೀರದಲ್ಲಿ (ಅಂದರೆ ಈಗಿನ ಕೋಲ್ಹಾ ಪುರದಲ್ಲಿ ) ನೆಲೆಸಿದಳು. ತದನಂತರ 8 ನೇ ಶತಮಾನದಲ್ಲಿ ಗುರು ಶಂಕರಾಚಾರ್ಯರು ಮಹಾಲಕ್ಷ್ಮಿ ಕೋಪದಲ್ಲಿರುವುದನ್ನು ಕಂಡು ಅವರ ವಿದ್ಯೆಯ ಮೂಲಕ ಅವಳನ್ನು ವಲಿಸಿ, ಕೋಲ್ಹಾಪುರವನ್ನು ಬಿಟ್ಟು ಅವರೊಂದಿಗೆ ಕೇರಳಕ್ಕೆ ಕರೆದುಕೊಂಡು ಹೋಗಿ ಶಕ್ತಿಪೀಠ ಸ್ಥಾಪಿಸಲು ಕೇಳಿದರು. ಇದನ್ನು ಒಪ್ಪಿದ ದೇವಿಯು ಒಂದು ಷರತನ್ನು ವಿಧಿಸಿದಳು. ಏನೆಂದರೆ ಪ್ರಯಾಣ ಮಾಡುವಾಗ ಹಿಂದೆ ತಿರುಗಿ ನೋಡಬಾರದು ಎಂದು ಹೇಳಿದಳು. ಹೀಗೆ ಕೊಡಚಾದ್ರಿ ಬೆಟ್ಟದಿಂದ ಕೆಳಗಿಳಿಯುವಾಗ ಶಂಕರಾಚಾರ್ಯರು ಮುಂದೆ ಸಾಗುತಿದ್ದರು ಮತ್ತು ದೇವಿಯು ಅವರನ್ನು ಅನುಸರಿಸುತಿದ್ದಳು. ಅವಳ ನಡಿಗೆಯ ಸಪ್ಪಳ ಹೇಗಿತ್ತೆಂದರೆ ತುಂಬು ಕಾಲ್ಗೆಜ್ಜೆಯ ಜೋರಾದ ಸಪ್ಪಳ ಮತ್ತು ಭಯಂಕರವಾದ ಅವಳ ಧಢ ಧಡನೇ ನಡೆಯುವ ಹೆಜ್ಜೆಗಳು. ಇದ್ದಕಿದಂತೆ ಕಾಲ್ಗೆಜ್ಜೆಯ ಸದ್ದು ಕೇಳಿಸುವುದು ನಿಂತು ಹೋಯಿತು. ಕುತೂಹಲ ತಾಳಲಾರದೆ ಗುರುಗಳು ಹಿಂದೆ ತಿರುಗಿ ನೋಡಿದರು. ಷರತ್ತು ಉಲ್ಲಂಘನೆಯಾದ ಕಾರಣ ದೇವಿ ಇದ್ದ ಸ್ಥಳದಲ್ಲೇ ನೆಲೆಸಿದಳು. ಅದೇ ಈಗಿನ ಪ್ರಸಿದ್ಧ ಕೊಲ್ಲೂರು ಮುಕಾಂಬಿಕಾ ದೇವಸ್ಥಾನ. ಈಗೂ ಕೂಡ ಜನರ ನಂಬಿಕೆ ಏನಂದರೆ ಇಡೀ ವರ್ಷವೂ ಮಹಾಲಕ್ಷ್ಮಿ ದೇವಿಯು ಕೋಲ್ಹಾಪುರದಲ್ಲಿ ನೆಲೆಸಿರುತ್ತಾಳೆ ಆದರೆ ವರ್ಷದ 9 ದಿನ ಅಂದರೆ ನವರಾತ್ರಿಯಲ್ಲಿ ತಾಯಿ ಮುಕಾಂಬಿಕಾ ಮತ್ತು ಶಾರದಾ ಪೀಠದಲ್ಲಿ ನೆಲೆಸುತ್ತಾಳೆ ಎಂದು ನಂಬಿಕೆ. ಮತ್ತು ನವರಾತ್ರಿಯ 9 ದಿನಗಳ ಕಾಲ ಜೋರಾಗಿ ಹಬ್ಬವನ್ನು ಆಚರಿಸುತ್ತಾರೆ ಮತ್ತು ಪ್ರಾರ್ಥನೆಯನ್ನು ಮಾಡುತ್ತಾರೆ. ಅಂತಿಮವಾಗಿ ಶಂಕರಾಚಾರ್ಯರ ಪ್ರಾರ್ಥನೆಗೆ ಒಲಿದ ದೇವಿಯು, ಪ್ರತಿದಿನ ಬೆಳಿಗ್ಗೆ ಕೇರಳದ ಚಾಟ್ಟೋನಿಖರ ಕ್ಷೇತ್ರದಲ್ಲಿ ನೆಲೆಸಿ ಭಕ್ತರನ್ನು ಹರಿಸುವುದಾಗಿ ಒಪ್ಪಿಕೊಂಡಳು ಎನ್ನಲಾಗುತ್ತದೆ. ಶಂಕರಾಚಾರ್ಯರು ಮತ್ತು ಬಡ ವೃದ್ಧ ಮಹಿಳೆಯ ಕಥೆ ಬಾಲಕ ಶಂಕರರು ಭಿಕ್ಷೆ ಬೇಡುತ್ತಿದ್ದಾಗ, ಅತ್ಯಂತ ಬಡವಳಾದ ವೃದ್ದೆಯ ಮನೆಗೆ ಹೋಗುತ್ತಾರೆ. ಅವಳ ಹತ್ತಿರ ಭಿಕ್ಷೆಗೆ ಹಾಕಲು ಏನೂ ಇರುವುದಿಲ್ಲ. ಆದರೆ ಅವಳ ಬಳಿ ಇರುವ ಒಂದು ನೆಲ್ಲಿಕಾಯಿಯನ್ನು ಭಿಕ್ಷೆಗೆ ಹಾಕಿದ ಕೂಡಲೇ ಅವಳ ಭಕ್ತಿಗೆ ಮೆಚ್ಚಿ ಶಂಕರರು ಶ್ರೀ ಮಹಾಲಕ್ಷ್ಮಿಯನ್ನು ನೆನೆದು ಕನಕಧಾರ ಸ್ತೋತ್ರ ಹೇಳಲು ಪ್ರಾರಂಭಿಸುತ್ತಾರೆ. ಶಂಕರರಿಗೆ ಒಲಿದ ತಾಯಿಯು ವೃದ್ಧಳ ಮನೆಯಲ್ಲಿ ಬಂಗಾರದ ನೆಲ್ಲಿಕಾಯಿಯನ್ನು ಸುರಿಸುತ್ತಾಳೆ. ಹೀಗೆ ಅನೇಕ ಸತ್ಯಗಳು, ಪವಾಡಗಳು ಕೇಳಲು ಸಿಗುತ್ತವೆ ಮತ್ತು ನಮ್ಮ ಮನದ ಮೇಲೆ ಪ್ರಭಾವ ಬೀರಿವೆ. ಶ್ರೀ ಶಂಕರಾಚಾರ್ಯರು ಮತ್ತು 4 ಶಕ್ತಿಪೀಠಗಳು ಆದಿ ಶಂಕರಾಚಾರ್ಯರು ಭಾರತದಾದ್ಯಂತ ಸನಾತನ ಧರ್ಮ, ವೇದಾಂತ ಮತ್ತು ಅದ್ವೈತ ತತ್ವಶಾತ್ರವನ್ನು ಪ್ರಚಾರ ಮಾಡಲು, ಸಂರಕ್ಷಿಸಲು ದೇಶದ ನಾಲ್ಕು ಮೂಲೆಗಳಲ್ಲಿ ನಾಲ್ಕು ಪ್ರಮುಖ ಮಠಗಳನ್ನು ಸ್ಥಾಪಿಸಿದರು. 1. ದಕ್ಷಿಣ ಶೃಂಗೇರಿ ಶಾರದಾ ಪೀಠ ಇದು ಮೊದಲನೇ ಪೀಠವಾಗಿದ್ದು ಚಿಕ್ಕಮಗಳೂರು ಜಿಲ್ಲೆಯ ತುಂಗಭದ್ರಾ ನದಿಯ ತೀರದಲ್ಲಿದೆ. ಅಲ್ಲಿ ಯಜುರ್ವೇದವನ್ನು ಹೇಳಲಾಗುತ್ತದೆ ಮತ್ತು ಅಲ್ಲಿಯ ಮಹಾವಾಕ್ಯವು “ಅಹಂ ಬ್ರಹ್ಮಾ ಸ್ಮಿ. ಶರದಾದೇವಿಯು ಮುಖ್ಯದೇವಿ ಆಗಿದ್ದಾಳೆ. 2.ಪಶ್ಚಿಮ ದ್ವಾರಕಾ ಪೀಠ – ಇದು ಗುಜರಾತಿನ ದ್ವಾರಕದಲ್ಲಿರುವ ಕಾಳಿಕಾ ಮಠವಾಗಿದ್ದು, ಸಾಮವೇದವನ್ನು ಹೇಳಲಾಗುತ್ತದೆ ಮತ್ತು ಅಲ್ಲಿಯ ಮಹಾವಾಕ್ಯವು “ತತ್ವಮಸಿ” ಎಂದು. 3.ಜ್ಯೋತಿರ್ ಪೀಠ – ಉತ್ತರಾ ಖಂಡದ ಬದ್ರಿಕಾಶ್ರಮ ಇದಾಗಿದೆ. ಅಲ್ಲಿ ಅಥರ್ವವೇದ ಅಭ್ಯಾಸ ಮಾಡಲಾಗುತ್ತದೆ “ಆಯಮಾತ್ಮ ಬ್ರಹ್ಮಣ” ಅಲ್ಲಿಯ ಮುಖ್ಯ ವಾಕ್ಯವಾಗಿದ್ದು ಹಿಮಾಲಯದ ಪ್ರಮುಖ ಜ್ಞಾನ ಕೇಂದ್ರ ವಾಗಿದೆ. 4.ಪೂರ್ವದಲ್ಲಿ – ಗೋವರ್ಧನ ಪೀಠ ಇದು ಓಡಿಶಾದ ಪುರಿಯಲ್ಲಿ ಸ್ಥಾಪಿಸಿದ್ದು ಅಲ್ಲಿ ಋಗ್ವೇದ ಅಭ್ಯಾಸವನ್ನು ಮಾಡಲಾಗುತ್ತದೆ ಮತ್ತು ಅಲ್ಲಿಯ ಮಹಾವಾಕ್ಯವು “ಪ್ರಜ್ಞಾನಂ ಬ್ರಹ್ಮಣ “ಪೀಠವು ಧಾರ್ಮಿಕ ಕೇಂದ್ರವಾಗಿದೆ. ಈಗಲೂ ಕೂಡ ಪೀಠದ ಮುಖ್ಯಸ್ಥರನ್ನು “ಶಂಕರಾಚಾರ್ಯರು “ಎಂದು ಕರೆಯಲಾಗುತ್ತದೆ. ಶ್ರೀ ಶಂಕರಾಚಾರ್ಯರು ಅದ್ವೈತ ದರ್ಶನದ ಮೂಲಕ ಜೀವ ಮತ್ತು ಪರಮಾತ್ಮ ಒಂದೇ ಬ್ರ ಹ್ಮನ ಅಂಶಗಳು ಆದ್ದರಿಂದ ಜಾತಿ ಮತಗಳ ಭೇದವಿಲ್ಲದೆ ಎಲ್ಲರಲ್ಲೂ ಪರಮಾತ್ಮನನ್ನು ಕಾಣಬೇಕು. ನಾಲ್ಕು ದಿಕ್ಕುಗಳಲ್ಲಿ ಶಕ್ತಿ ಪೀಠಗಳನ್ನು ಸ್ಥಾಪಿಸಿ ಭೌಗೋಳಿಕ ಮತ್ತು ಸಾಂಸ್ಕೃತಿಕವಾಗಿ ಭಾರತವನ್ನು ಒಂದುಗೂಡಿಸಿದ ಮಹಾತ್ಮರು. ಆದಿ ಶಂಕರಾಚಾರ್ಯರು (ಕ್ರಿ. ಶ. 788-820) ಕೇವಲ 32 ವರ್ಷಗಳ ಅಲ್ಪಾವಧಿಯಲ್ಲಿ ಉತ್ತರಖಂಡ ಕೇದಾರನಾಥ್ದಲ್ಲಿ ತಪಸ್ಸನ್ನು ಮಾಡ್ತಾ ಆದೃಶ್ಯರಾದರು ಎಂದು ಹೇಳಲಾಗುತ್ತದೆ. ಈಗಿನ ದಿನದಲ್ಲಿ ಶಂಕರಾಚಾರ್ಯರ ನಾಲ್ಕು ಪೀಠಗಳ ಜೊತೆಗೆ ಶ್ರೀ ಶಂಕರಾಚಾರ್ಯರ 108 ಅಡಿ ಏತ್ತರದ ಏಕತ್ವದ ಪ್ರತಿಮೆಯನ್ನು ,(statue of oneness) ಮಧ್ಯಪ್ರದೇಶದಲ್ಲಿ ಸ್ಥಾಪಿಸಲಾಗಿದೆ. ಲೇಖಕರು: ಶ್ರೀಮತಿ. ಅಪರ್ಣಾ ಪಟವರ್ಧನ, ಶಿಕ್ಷಕಿ ಮತ್ತುಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ Post navigation ತತ್ತ್ವಶಾಸ್ತ್ರದ ಪಿತಾಮಹ ಕಪಿಲ ಮಹರ್ಷಿ ಕಥೆ