ಬೆಂಗಳೂರು, ಮಾರ್ಚ್ 14: ತುಮಕೂರು (Tumakur) ಬಳಿ ಮಲ್ಲಸಂದ್ರ ಮತ್ತು ಗುಬ್ಬಿ ನಿಲ್ದಾಣಗಳ ನಡುವೆ ಲೆವೆಲ್ ಕ್ರಾಸಿಂಗ್ (LC No. 50) ಕಾಮಗಾರಿಯನ್ನು ನೈರುತ್ತ ರೈಲ್ವೆ ಇಲಾಖೆ (South Western Railway) ಕೈಗೊಂಡಿದೆ. ಈ ಹಿನ್ನೆಲೆಯಲ್ಲಿ ಸಾಕಷ್ಟು ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ. ಕೆಲವು ರೈಲುಗಳ ಸಂಚಾರವನ್ನು ರದ್ದು ಮಾಡಲಾಗಿದೆ. ಕೆಲವು ರೈಲುಗಳ ಮಾರ್ಗ ಬದಲಾವಣೆ ಮಾಡಲಾಗಿದೆ ಎಂದು ನೈರುತ್ಯ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಿದೆ. ರೈಲುಗಳ ಸಂಚಾರ ರದ್ದು ರೈಲು ಸಂಖ್ಯೆ 16239/16240: ಚಿಕ್ಕಮಗಳೂರು-ಯಶವಂತಪುರ-ಚಿಕ್ಕಮಗಳೂರು ದೈನಂದಿನ ಎಕ್ಸ್‌ಪ್ರೆಸ್ ಮತ್ತು ರೈಲು ಸಂಖ್ಯೆ 12514 ಕೆಎಸ್‌ಆರ್ ಬೆಂಗಳೂರು-ಮೈಸೂರು ಒಡೆಯರ್ ದೈನಂದಿನ ಎಕ್ಸ್‌ಪ್ರೆಸ್ ರೈಲುಗಳನ್ನು ಏಪ್ರಿಲ್ 08 ಮತ್ತು 15, 2026 ರಂದು ರದ್ದುಗೊಳಿಸಲಾಗಿದೆ. ರೈಲು ಸಂಖ್ಯೆ 66567: ಕೆಎಸ್‌ಆರ್ ಬೆಂಗಳೂರು-ತುಮಕೂರು ಮೆಮು ಮತ್ತು ರೈಲು ಸಂಖ್ಯೆ 66572 ತುಮಕೂರು-ಕೆಎಸ್‌ಆರ್ ಬೆಂಗಳೂರು ಮೆಮು ರೈಲುಗಳನ್ನು ಏಪ್ರಿಲ್ 08, 2026 ರಂದು ರದ್ದುಗೊಳಿಸಲಾಗಿದೆ. ರೈಲುಗಳ ಸಂಚಾರ ಭಾಗಶಃ ರದ್ದು ಏಪ್ರಿಲ್ 08, 11, 12 ಮತ್ತು 15 ರಂದು ರೈಲು ಸಂಖ್ಯೆ 20652 ತಾಳಗುಪ್ಪ-ಕೆಎಸ್‌ಆರ್ ಬೆಂಗಳೂರು ಎಕ್ಸ್‌ಪ್ರೆಸ್ ರೈಲು ಅರಸೀಕೆರೆ ಮತ್ತು ಬೆಂಗಳೂರು ನಡುವೆ ರದ್ದಾಗಲಿದೆ. ಈ ರೈಲು ಅರಸೀಕೆರೆಯಲ್ಲಿ ತನ್ನ ಪ್ರಯಾಣ ಮುಕ್ತಾಯಗೊಳಿಸಲಿದೆ. ಏಪ್ರಿಲ್ 08, 11, 12 ಮತ್ತು 15 ರಂದು ರೈಲು ಸಂಖ್ಯೆ 12725 ಕೆಎಸ್‌ಆರ್ ಬೆಂಗಳೂರು-ಧಾರವಾಡ ಸಿದ್ದಗಂಗಾ ಎಕ್ಸ್‌ಪ್ರೆಸ್ ಬೆಂಗಳೂರು ಮತ್ತು ಅರಸೀಕೆರೆ ನಡುವೆ ರದ್ದಾಗಲಿದೆ. ಇದು ಬೆಂಗಳೂರಿನ ಬದಲಿಗೆ ಅರಸೀಕೆರೆಯಿಂದ ತನ್ನ ನಿಗದಿತ ಸಮಯಕ್ಕೆ ಹೊರಡಲಿದೆ. ಏಪ್ರಿಲ್ 08 ಮತ್ತು 15 ರಂದು ರೈಲು ಸಂಖ್ಯೆ 12726 ಧಾರವಾಡ-ಕೆಎಸ್‌ಆರ್ ಬೆಂಗಳೂರು ಸಿದ್ದಗಂಗಾ ಎಕ್ಸ್‌ಪ್ರೆಸ್ ಅರಸೀಕೆರೆ ಮತ್ತು ಬೆಂಗಳೂರು ನಡುವೆ ರದ್ದಾಗಲಿದ್ದು ಅರಸೀಕೆರೆಯಲ್ಲಿ ಪ್ರಯಾಣ ಮುಕ್ತಾಯಗೊಳಿಸಲಿದೆ. ಇದನ್ನೂ ಓದಿ: ಯುಗಾದಿ: NWKRTCಯಿಂದ ಶ್ರೀಶೈಲಂಗೆ ವಿಶೇಷ ಬಸ್, ಟಿಕೆಟ್ ದರ ವಿವರ ಇಲ್ಲಿದೆ ರೈಲುಗಳ ಮಾರ್ಗ ಬದಲಾವಣೆ ಏಪ್ರಿಲ್ 07 ಮತ್ತು 14 ರಂದು ವಾಸ್ಕೋಡಗಾಮ ನಿಲ್ದಾಣದಿಂದ ಹೊರಡುವ ರೈಲು ಸಂಖ್ಯೆ 17310 ವಾಸ್ಕೋಡಗಾಮ-ಯಶವಂತಪುರ ಎಕ್ಸ್‌ಪ್ರೆಸ್ ರೈಲು ಅರಸೀಕೆರೆ, ಹಾಸನ, ನೆಲಮಂಗಲ, ಯಶವಂತಪುರ ಮಾರ್ಗವಾಗಿ ಸಂಚರಿಸಲಿದೆ. ಹೀಗಾಗಿ ಈ ರೈಲು ತಿಪಟೂರು ಮತ್ತು ತುಮಕೂರು ನಿಲ್ದಾಣಗಳಲ್ಲಿ ನಿಲುಗಡೆ ತಪ್ಪಿರುತ್ತದೆ. ಏಪ್ರಿಲ್ 07 ಮತ್ತು 14 ರಂದು ವೇಲಂಕಣೆಯಿಂದ ಹೊರಡುವ ರೈಲು ಸಂಖ್ಯೆ 17316 ವೇಲಂಕಣ್ಣಿ-ವಾಸ್ಕೋಡಗಾಮ ವೀಕ್ಷಿ ಎಕ್ಸ್‌ಪ್ರೆಸ್ ಚಿಕ್ಕಬಾಣಾವರ, ನೆಲಮಂಗಲ, ಹಾಸನ, ಅರಸೀಕೆರೆ ಮಾರ್ಗವಾಗಿ ಸಂಚರಿಸಲಿದೆ, ಹೀಗಾಗಿ ಈ ರೈಲು ತುಮಕೂರು ಮತ್ತು ತಿಪಟೂರು ನಿಲ್ದಾಣಗಳಲ್ಲಿ ನಿಲುಗಡೆ ತಪ್ಪಿರುತ್ತದೆ. ಏಪ್ರಿಲ್ 08 ಮತ್ತು ಏಪ್ರಿಲ್ 15, 2026 ರಂದು ಹೊರಡುವ ರೈಲು ಸಂಖ್ಯೆ 20689 ಯಶವಂತಪುರ -ಶಿವಮೊಗ, ಟೌನ್ ಡೈಲಿ ಎಕ್ಸ್‌ಪ್ರೆಸ್ ಚಿಕ್ಕಬಾಣಾವರ, ನೆಲಮಂಗಲ, ಹಾಸನ, ಅರಸೀಕೆರೆ ಮಾರ್ಗದ ಮೂಲಕ ಸಂಚರಿಸಲಿದೆ. ಹೀಗಾಗಿ ತುಮಕೂರು ಮತ್ತು ತಿಪಟೂರಿನಲ್ಲಿ ನಿಲುಗಡೆ ಇರುವುದಿಲ್ಲ. ಏಪ್ರಿಲ್ 08 ಮತ್ತು ಏಪ್ರಿಲ್ 15, 2026 ರಂದು ಪ್ರಾರಂಭವಾಗುವ ರೈಲು ಸಂಖ್ಯೆ 20676 ಮೈಸೂರು-ಬೆಳಗಾವಿ ವಿಶ್ವಮಾನವ್ ಡೈಲಿ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್ ಮೈಸೂರು, ಹೊಳೆನರಸೀಪುರ, ಹಾಸನ, ಅರಸೀಕೆರೆ ಮೂಲಕ ಚಲಿಸಲಿದೆ, ಪಾಂಡವಪುರದಿಂದ ತಿಪಟೂರಿನವರೆಗೆ ನಿಲುಗಡೆ ಇರುವುದಿಲ್ಲ. ಯಾವೆಲ್ಲ ರೈಲುಗಳು ತಡವಾಗಿ ನಿಲ್ದಾಣ ಸೇರಲಿವೆ ಏಪ್ರಿಲ್ 10 ಮತ್ತು 11 ರಂದು ವಾಸ್ಕೋಡಗಾಮದಿಂದ ಹೊರಡುವ ರೈಲು ಸಂಖ್ಯೆ 17310 ವಾಸ್ಕೋಡಗಾಮ-ಯಶವಂತಪುರ ಎಕ್ಸ್‌ಪ್ರೆಸ್ ರೈಲು ಮಾರ್ಗಮಧ್ಯೆ 20 ವಿಮಿಷಗಳ ಕಾಲ ನಿಯಂತ್ರಣವಾಗಲಿದೆ. ಏಪ್ರಿಲ್ 11 ಮತ್ತು 12 ರಂದು ತೆರಳುವ ರೈಲು ಸಂಖ್ಯೆ 20689 ಯಶವಂತಪುರ-ಶಿವಮೊಗ್ಗ, ಟೌನ್ ಎಕ್ಸ್‌ಪ್ರೆಸ್ ಮಾರ್ಗಮಧ್ಯೆ 1 ಗಂಟೆ ಕಾಲ ನಿಯಂತ್ರಣವಾಗಲಿದೆ. ರೈಲುಗಳ ಮರುವೇಳಾಪಟ್ಟಿ ಹೊಂದಾಣಿಕೆ ಏಪ್ರಿಲ್ 06 ಮತ್ತು 13 ರಂದು ರೈಲು ಸಂಖ್ಯೆ 19657 ಉದಯಪುರ ಸಿಟಿ-ಮೈಸೂರು ಹಮ್ಸಫರ್ ಎಕ್ಸ್‌ಪ್ರೆಸ್ ರೈಲು ಉದಯಪುರದಿಂದ 3 ಗಂಟೆ ತಡವಾಗಿ ಹೊರಡಲಿದೆ. ಏಪ್ರಿಲ್ 06 ಮತ್ತು 13 ರಂದು ರೈಲು ಸಂಖ್ಯೆ 22497 ಶ್ರೀಗಂಗಾನಗರ-ತಿರುಚಿರಾಪಳ್ಳಿ ಹಮ್‌ಸಫರ್ ಎಕ್ಸಪ್ರೆಸ್ ಶ್ರೀಗಂಗಾನಗರದಿಂದ 2.5 ಗಂಟೆ ತಡವಾಗಿ ಹೊರಡಲಿದೆ. ಏಪ್ರಿಲ್ 03 ಮತ್ತು 15 ರಂದು ರೈಲು ಸಂಖ್ಯೆ 12649 ಯಶವಂತಪುರ-ಹಜರತ್ ನಿಜಾಮುದ್ದೀನ್ ಕರ್ನಾಟಕ ಸಂಪರ್ಕ ಕ್ರಾಂತಿ ಎಕ್ಸಪ್ರೆಸ್ ಯಶವಂತಪುರದಿಂದ 30 ನಿಮಿಷ ತಡವಾಗಿ ಹೊರಡಲಿದೆ. ಏಪ್ರಿಲ್ 08 ಮತ್ತು 15 ರಂದು ರೈಲು ಸಂಖ್ಯೆ 12777 ಹುಬ್ಬಳ್ಳಿ – ತಿರುವಂತಪುರಂ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ಹುಬ್ಬಳ್ಳಿಯಿಂದ 60 ನಿಮಿಷ ತಡವಾಗಿ ಹೊರಡಲಿದೆ ಮತ್ತು ಮಾರ್ಗಮಧ್ಯೆ 40 ನಿಮಿಷ ತಡವಾಗಿ ಹೊರಡಲಿದೆ. ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ Post navigation ರಾಜ್ಯದ 50% ಕ್ಕೂ ಹೆಚ್ಚು ಮಣ್ಣುಗಳಲ್ಲಿ ಸಾವಯವ ಇಂಗಾಲ ಕೊರತೆ: ವೈಜ್ಞಾನಿಕ ಮಣ್ಣು ಪರೀಕ್ಷೆ ರೈತರ ಮನೆಬಾಗಿಲಿಗೆ ಪ್ರಯಾಣಿಕರ ಗಮನಕ್ಕೆ: ಬೆಂಗಳೂರು-ತುಮಕೂರು ಮೆಮು ರೈಲು ಸಂಚಾರ 2 ದಿನ ರದ್ದು