ಹುಬ್ಬಳ್ಳಿ, ಮಾರ್ಚ್ 12: ಚಂದ್ರಮಾನ ಯುಗಾದಿ (Ugadi) ಹಬ್ಬ ಆಚರಣೆಗೆ ಜನರು ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಯುಗಾದಿ ಹಬ್ಬದ ನಿಮಿತ್ತ ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಯ ಜನರು ಶ್ರೀಶೈಲಂದ (Srisailam) ಶ್ರೀ ಮಲ್ಲಿಕಾರ್ಜುನ ದರ್ಶನಕ್ಕೆ ತೆರಳುತ್ತಾರೆ. ಶ್ರೀಶೈಲಂಗೆ ಹೋಗುವ ಭಕ್ತರ ಅನುಕೂಲಕ್ಕಾಗಿ ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆ (NWKRTC) ಶ್ರೀಶೈಲಂಕ್ಕೆ ಉತ್ತರ ಕರ್ನಾಟಕದ ವಿವಿಧ ತಾಲೂಕು ಕೇಂದ್ರಗಳಿಂದ ಬಸ್‌ಗಳನ್ನು ಬಿಟ್ಟಿದೆ. ಹಬ್ಬದ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡುವ ಹಿನ್ನೆಲೆಯಲ್ಲಿ ವಿಶೇಷ ಬಸ್‌ಗಳನ್ನು ಬಿಟ್ಟಿದ್ದು, ಜೊತೆಗೆ ಟಿಕೆಟ್ ದರ, ಬಸ್ ಮಾರ್ಗ ಹಾಗೂ ವೇಳಾಪಟ್ಟಿ ವಿವರಗಳನ್ನು ನಿಗಮ ಪ್ರಕಟಿಸಿದೆ. ಹಾಗಿದ್ದರೆ, ಯಾವ್ಯಾವ ತಾಲೂಕುಗಳಿಂದ ಶ್ರೀಶೈಲಂಗೆ ವಿಶೇಷ ಬಸ್‌ಗಳನ್ನು ಬಿಡಲಾಗಿದೆ? ಬುಕ್ಕಿಂಗ್ ಸಮಯ ಏನು? ಬಸ್ ಸಂಚಾರ ಮಾರ್ಗ ಸಂಪೂರ್ಣ ವಿವರ ಇಲ್ಲಿದೆ. ಅಥಣಿ- ವೆಂಕಟಾಪುರ-ಶ್ರೀಶೈಲಂ ಅಥಣಿ- ವೆಂಕಟಾಪುರ-ಶ್ರೀಶೈಲಂಗೆ ಮಾರ್ಚ್ 18ರವರೆಗೆ ಮೂರು ವಿಶೇಷ ವೇಗದೂತ ಬಸ್‌ಗಳು ಸಂಚರಿಸಲಿವೆ. ಅಥಣಿಯಿಂದ ಶ್ರೀಶೈಲಂಗೆ ಬೆಳಗ್ಗೆ10:30, ಮಧ್ಯಾಹ್ನ 2:30 ಮತ್ತು ಸಂಜೆ 5:30ಕ್ಕೆ ಬಸ್‌ಗಳು ತೆರಳುತ್ತವೆ. ಈ ಬಸ್ಸುಗಳು ವ್ಹಾಯಾ ವಿಜಯಪುರ ಮತ್ತು ಆತ್ಮಕುರಂ ಮಾರ್ಗವಾಗಿ ಶ್ರೀಶೈಲಂ ತಲಪುತ್ತವೆ. ಇನ್ನು ಹಿಂತಿರುಗುವ ದಿಕ್ಕಿನಲ್ಲಿ, ಶ್ರೀಶೈಲಂನಿಂದ ಅಥಣಿಗೆ ವಿಶೇಷ ಬಸ್ ಬಿಡಲಾಗಿದೆ. ಈ ಬಸ್ ವ್ಹಾಯಾ ಮೆಹಬೂಬ್ ನಗರ ಮಾರ್ಗವಾಗಿ ಅಥಣಿ ತಲಪುತ್ತದೆ. ಅಥಣಿಯಿಂದ ಶ್ರೀಶೈಲಂಗೆ ಬಸ್ ಟಿಕೆಟ್ ದರ 1110 ರೂ., ವೆಂಕಟಾಪುರಗೆ 875 ರೂ. ನಿಗದಿಪಡಿಸಲಾಗಿದೆ. ಇನ್ನು, ಶ್ರೀಶೈಲಂನಿಂದ ಅಥಣಿಗೆ 1010 ರೂ. ಪ್ರಯಾಣ ದರ ನಿಗದಿಪಡಿಸಲಾಗಿದೆ. ಆನ್‌ಲೈನ್‌ನಲ್ಲಿ WWW.ksrtc.in ಟಿಕೆಟ್ ಬುಕ್ಕಿಂಗ್ ಮಾಡುವ ಅವಕಾಶವಿದೆ. ಬಾಗಲಕೋಟೆ-ಶ್ರೀಶೈಲಂ ಬಾಗಲಕೋಟೆ ವಿಭಾಗದ ಎಲ್ಲ ತಾಲೂಕು ಬಸ್ ನಿಲ್ದಾಣಗಳಿಂದ ಶ್ರೀಶೈಲಂಗೆ ವಿಶೇಷ ಬಸ್‌ಗಳನ್ನು ಬಿಡಲಾಗಿದೆ. ಬಾಗಲಕೋಟೆ, ಜಮಖಂಡಿ, ಮುಧೋಳ, ಬದಾಮಿ, ಇಳಕಲ್, ಹುನಗುಂದ, ಗುಳೇದಗುಡ್ಡ, ಬೀಳಗಿ, ರಬಕವಿ, ಬನಹಟ್ಟಿ ಮತ್ತು ತೇರದಾಳ ಬಸ್ ನಿಲ್ದಾಣಗಳಿಂದ ವಿಶೇಷ ಬಸ್‌ಗಳನ್ನು ಬಿಡಲಾಗಿದೆ. ಆಯಾ ತಾಲೂಕಿನಿಂದ ಹೊರಡುವ ಬಸ್‌ಗಳ ಟಿಕೆಟ್ ದರದಲ್ಲಿ ವ್ಯತ್ಯಾಸವಿದೆ. ಏಕೆಂದರೆ, ಕಿಲೋಮಿಟರ್‌ಗಳ ವ್ಯತ್ಯಾಸದಿಂದ ಟಿಕೆಟ್ ದರ ಬೇರೆಯಾಗಿದೆ. ಟಿಕೆಟ್ ದರ ಬಾಗಲಕೋಟೆ ವಿಭಾಗದಿಂದ ಯಾತ್ರಾರ್ಥಿಗಳಿಗೆ ವಿಶೇಷ ಸೌಲಭ್ಯ • ಸಮೀಪದ ಘಟಕದಿಂದ ಬಸ್ಸುಗಳನ್ನು ಒದಗಿಸಲಾಗಿದೆ.• ಎಲ್ಲಾ ಘಟಕಗಳಲ್ಲಿ ಮುಂಗಡ ಬುಕ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ.• ಒಂದೇ ಗುಂಪಿನಲ್ಲಿ ಪ್ರಯಾಣಿಸುವ ಕನಿಷ್ಠ 50 ಜನ ಪ್ರಯಾಣಿಕರಿದ್ದಲ್ಲಿ ಹೋಗುವ ಹಾಗೂ ಮರಳಿ ಬರುವಾಗ ನೇರವಾಗಿ ತಮ್ಮ ಊರುಗಳಿಗೆ ಬಸ್ಸುಗಳನ್ನು ಬಿಡಲಾಗುತ್ತದೆ.• ಯಾತ್ರಾರ್ಥಿಗಳು ಇಚ್ಛಿಸಿದಲ್ಲಿ ಮಹಾನಂದಿ, ಮಂತ್ರಾಲಯ ಹಾಗೂ ಇತರೆ ಯಾತ್ರಾ ಸ್ಥಳಗಳಿಗೆ ದರ್ಶನ ಸೌಲಭ್ಯ ಕಲ್ಪಿಸಲಾಗುತ್ತದೆ.• ಮಾರ್ಗದ ಮಧ್ಯದಲ್ಲಿರುವ ಉಚಿತ ಅನ್ನ ಸಂತರ್ಪಣೆ ಸ್ಥಳಗಳಲ್ಲಿ ಊಟಕ್ಕಾಗಿ ಕಾಲಾವಕಾಶ ನೀಡಲಾಗುತ್ತದೆ. ಇದನ್ನೂ ಓದಿ: ಹುಬ್ಬಳ್ಳಿ, ಬೆಂಗಳೂರು, ಕಲಬುರಗಿಯಿಂದ ಹೊರಡುವ ವಂದೇ ಭಾರತ್ ರೈಲುಗಳ ವೇಳಾಪಟ್ಟಿ ಪರಿಷ್ಕರಣೆ ಗೋಕಾಕ- ವೆಂಕಟಾಪುರ-ಶ್ರೀಶೈಲಂ ಗೋಕಾಕ- ವೆಂಕಟಾಪುರ-ಶ್ರೀಶೈಲಂಗೆ ಮಾರ್ಚ್ 15ರವರೆಗೆ ಎರಡು ವಿಶೇಷ ವೇಗದೂತ ಬಸ್‌ಗಳು ಸಂಚರಿಸಲಿವೆ. ಗೋಕಾಕನಿಂದ ಶ್ರೀಶೈಲಕ್ಕೆ ಬೆಳಗ್ಗೆ11:00, ಸಂಜೆ 4:00 ಗಂಟೆಗೆ ಬಸ್ಸುಗಳು ತೆರಳುತ್ತವೆ. ಈ ಬಸ್ಸುಗಳು ವ್ಹಾಯಾ ರಾಯಚೂರು ಮತ್ತು ಆತ್ಮಕುರಂ ಮಾರ್ಗವಾಗಿ ಶ್ರೀಶೈಲಂ ತಲಪುತ್ತವೆ . ಗೋಕಾಕನಿಂದ ಶ್ರೀಶೈಲಂಗೆ ಬಸ್ ಟಿಕೆಟ್ ದರ 1160 ರೂ., ವೆಂಕಟಾಪುರಗೆ 929 ರೂ. ನಿಗದಿಪಡಿಸಲಾಗಿದೆ. ಆನ್‌ಲೈನ್‌ನಲ್ಲಿ WWW.ksrtc.in ಟಿಕೆಟ್ ಬುಕ್ಕಿಂಗ್ ಮಾಡುವ ಅವಕಾಶವಿದೆ. ಹೆಚ್ಚಿನ ಮಾಹಿತಿಗಾಗಿ NWKRTC ಎಕ್ಸ್ (ಟ್ವಿಟರ್) ಖಾತೆ, ವೆಬ್‌ಸೈಟ್‌ಗೆ ಭೇಟಿ ನೀಡಿ ಅಥವಾ 7760991555ಗೆ ಕರೆ ಮಾಡಿ. ಮತ್ತುಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ Post navigation ಕಲರ್ಸ್ ಕನ್ನಡದಲ್ಲಿ ಮತ್ತೆ ‘ಅಗ್ನಿಸಾಕ್ಷಿ’ ಧಾರಾವಾಹಿ: ನಾಯಕ ಯಾರು? ಯಾವಾಗ ಪ್ರಸಾರ? ರಾಜ್ಯದ 50% ಕ್ಕೂ ಹೆಚ್ಚು ಮಣ್ಣುಗಳಲ್ಲಿ ಸಾವಯವ ಇಂಗಾಲ ಕೊರತೆ: ವೈಜ್ಞಾನಿಕ ಮಣ್ಣು ಪರೀಕ್ಷೆ ರೈತರ ಮನೆಬಾಗಿಲಿಗೆ