Karnataka soil organic carbon deficiency scientific soil testing farmers by SBOF AgrosmartSBOF Agrosmart ನಿಂದ “SBOF AGROLAB” ಸೇವೆ

“ಮಣ್ಣು ಪರೀಕ್ಷೆ ಮೂಲಕ ಲಾಭದಾಯಕ ಕೃಷಿ: SBOF Agrosmart ನಿಂದ “SBOF AGROLAB” ಸೇವೆ ಆರಂಭ

ಕೃಷಿಯಲ್ಲಿ ಉತ್ಪಾದನೆ ಹೆಚ್ಚಿಸಲು ಮಣ್ಣಿನ ಆರೋಗ್ಯ ಅತ್ಯಂತ ಮಹತ್ವದ್ದಾಗಿದೆ. ಆದರೆ ಮಣ್ಣಿನ ಆರೋಗ್ಯದ ಸ್ಥಿತಿಯನ್ನು ತಿಳಿಯದೆ ಗೊಬ್ಬರವನ್ನು ಅಂದಾಜಿನ ಮೇಲೆ ಬಳಸುವುದರಿಂದ ರೈತರಿಗೆ ಹೆಚ್ಚಿನ ವೆಚ್ಚವಾಗುತ್ತಿದ್ದು, ಮಣ್ಣಿನ ಫಲವತ್ತತೆ ಕೂಡ ನಿಧಾನವಾಗಿ ಕುಸಿಯುತ್ತಿದೆ. ಈ ಸಮಸ್ಯೆಗೆ ಪರಿಹಾರವಾಗಿ SBOF Agrosmart ಸಂಸ್ಥೆ ರೈತರಿಗಾಗಿ “SBOF AGROLAB” ಮಣ್ಣು ಪರೀಕ್ಷೆ ಸೇವೆಯನ್ನು ಆರಂಭಿಸಿದೆ.

ಇತ್ತೀಚೆಗೆ ಕರ್ನಾಟಕ ಕೃಷಿ ಇಲಾಖೆ ನಡೆಸಿದ ಸಮೀಕ್ಷೆಯ ಪ್ರಕಾರ ರಾಜ್ಯದ ಶೇ 50 ಕ್ಕಿಂತ ಹೆಚ್ಚಿನ ಮಣ್ಣಿನಲ್ಲಿ ಸಾವಯವ ಇಂಗಾಲ ಮತ್ತು ಹಲವು ಅಗತ್ಯ ಸೂಕ್ಷ್ಮ ಪೋಷಕಾಂಶಗಳ ಕೊರತೆ ಕಂಡುಬಂದಿದೆ. ಇದರ ಪರಿಣಾಮವಾಗಿ ಗೊಬ್ಬರದ ಪೋಷಕಾಂಶಗಳ ಪರಿಣಾಮಕಾರಿತ್ವ ಕಡಿಮೆಯಾಗುತ್ತಿದ್ದು, ರೈತರು ಹೆಚ್ಚಿನ ಪ್ರಮಾಣದಲ್ಲಿ ಗೊಬ್ಬರ ಬಳಸಬೇಕಾಗುತ್ತಿದೆ. ಇದರಿಂದ ಕೃಷಿ ವೆಚ್ಚವೂ ಹೆಚ್ಚುತ್ತಿದೆ.

ತಜ್ಞರ ಪ್ರಕಾರ ಮಣ್ಣಿನ ಪೋಷಕಾಂಶಗಳ ಸ್ಥಿತಿಯನ್ನು ತಿಳಿದುಕೊಂಡು ಗೊಬ್ಬರ ಬಳಕೆ ಮಾಡಿದರೆ ಗೊಬ್ಬರದ ಪೋಷಕಾಂಶಗಳ ಪರಿಣಾಮಕಾರಿತ್ವ ಹೆಚ್ಚುತ್ತದೆ ಮತ್ತು ಗೊಬ್ಬರ ವೆಚ್ಚವನ್ನು ಗಮನಾರ್ಹವಾಗಿ ಕಡಿಮೆ ಮಾಡಬಹುದು.

ಮಣ್ಣು ಪರೀಕ್ಷೆಯ ಉಪಯೋಗಗಳು

1.   ಮಣ್ಣು ಪರೀಕ್ಷೆಯಿಂದ ಮಣ್ಣಿನ ಭೌತಿಕ, ರಾಸಾಯನಿಕ ಗುಣಧರ್ಮಗಳನ್ನು ಹಾಗೂ ಫಲವತ್ತತೆಯನ್ನು ತಿಳಿಯಬಹುದು.

2.   ಮಣ್ಣಿನ ಫಲವತ್ತತೆ ಹಾಗೂ ಗುಣಧರ್ಮಕ್ಕನುಸಾರವಾಗಿ ಲಾಭದಾಯಕ ಬೆಳೆಯನ್ನು ಆಯ್ಕೆ ಮಾಡಿ ಬೆಳೆದು ಕೃಷಿಯಿಂದ ಲಾಭ ಗಳಿಸಬಹುದು.

3.   ಅನವಶ್ಯಕ ಅಥವಾ ಹೆಚ್ಚಿನ ಪ್ರಮಾಣದ ಗೊಬ್ಬರ ಬಳಕೆ ತಪ್ಪಿಸಿ ಖರ್ಚು ಕಡಿಮೆ ಮಾಡಬಹುದು.

4.   ಮಣ್ಣು ಪರೀಕ್ಷೆ ಆಧಾರಿತ ಪೋಷಕಾಂಶಗಳ ಬಳಕೆಯಿಂದ ಅಧಿಕ ಇಳುವರಿ ಪಡೆಯಬಹುದು.

5.   ಭೂಮಿಯ ಫಲವತ್ತತೆಯನ್ನು ಬಹು ವರ್ಷಗಳವರೆಗೆ ಕಾಪಾಡಿಕೊಳ್ಳಬಹುದು.

6.   ಫಲವತ್ತತೆಯ ಅಸಮತೋಲನವನ್ನು ನಿವಾರಿಸಬಹುದು.

ದೊರೆಯುವ ಪೋಷಕಾಂಶಗಳುಕಡಿಮೆ ಫಲವತ್ತತೆಮಧ್ಯಮ ಫಲವತ್ತತೆಅಧಿಕ ಫಲವತ್ತತೆ
ಸಾವಯವ ಇಂಗಾಲ (ಶೇ.)<0.50.5-0.75>0.75
ಸಾರಜನಕ (ಕಿ. ಗ್ರಾಂ)<280280-560>560
ರಂಜಕ (ಕಿ. ಗ್ರಾಂ)<22.522.5-55.0>55.0
ಪೊಟ್ಯಾಷ್ (ಕಿ. ಗ್ರಾಂ)<110110-280.0>280

ಮುಖ್ಯ ಪೋಷಕಾಂಶಗಳು ಯಾವ ಫಲವತ್ತತೆಯ ಗುಂಪಿಗೆ ಸೇರಿವೆ ಎಂದು ನಿರ್ಧರಿಸಿದ ನಂತರ ಶಿಫಾರಸು ಮಾಡಿದ ಗೊಬ್ಬರಗಳ ಪ್ರಮಾಣದಲ್ಲಿ ಬದಲಾವಣೆ ಮಾಡಬೇಕಾಗುತ್ತದೆ.

ಈ ಹಿನ್ನೆಲೆಯಲ್ಲಿ SBOF AGROLAB ಮೂಲಕ ರೈತರಿಗೆ ವೈಜ್ಞಾನಿಕ ಮಣ್ಣು ಪರೀಕ್ಷೆ ಸೌಲಭ್ಯ ಒದಗಿಸಲಾಗುತ್ತಿದೆ. ಈ ವ್ಯವಸ್ಥೆಯ ಮೂಲಕ ಕೇವಲ 2 ದಿನಗಳ ಒಳಗೆ ಮಣ್ಣು ಪರೀಕ್ಷೆ ವರದಿ ಪಡೆಯಬಹುದಾಗಿದೆ. ಮಣ್ಣಿನ 16 ಪ್ರಮುಖ ಅಂಶಗಳ ಪರೀಕ್ಷೆ ನಡೆಸಲಾಗುತ್ತದೆ ಮತ್ತು ರೈತರಿಗೆ Soil Health Card ನೀಡಲಾಗುತ್ತದೆ. ಜೊತೆಗೆ ಬೆಳೆ ಆಧಾರಿತವಾಗಿ ಯಾವ ಗೊಬ್ಬರವನ್ನು ಎಷ್ಟು ಪ್ರಮಾಣದಲ್ಲಿ ಬಳಸಬೇಕು ಎಂಬುದರ ಕುರಿತು ಸ್ಪಷ್ಟ ಮಾರ್ಗದರ್ಶನ ನೀಡಲಾಗುತ್ತದೆ.

SBOF AGROSMART ಸಂಸ್ಥೆ ಕೃಷಿ ಕ್ಷೇತ್ರದಲ್ಲಿ ಡಿಜಿಟಲ್ ತಂತ್ರಜ್ಞಾನವನ್ನು ಬಳಸಿಕೊಂಡು ರೈತರಿಗೆ ವಿವಿಧ ಸೇವೆಗಳನ್ನು ಒದಗಿಸುತ್ತಿದ್ದು, ಅದರ SBOF AGROSMART ಮೊಬೈಲ್ ಆಪ್ ಮೂಲಕ ರೈತರು ಮಣ್ಣು ಪರೀಕ್ಷೆ ಸೇರಿದಂತೆ ಹಲವು ಕೃಷಿ ಸೇವೆಗಳನ್ನು ಪಡೆಯಬಹುದಾಗಿದೆ.

ರೈತರು ತಮ್ಮ ಸಮೀಪದ SBOF ಪ್ರತಿನಿಧಿನ್ನು ಸಂಪರ್ಕಿಸಿ ಮಣ್ಣು ಪರೀಕ್ಷೆ ಮಾಡಿಸಿಕೊಳ್ಳಬಹುದು. ಮಣ್ಣಿನ ಆರೋಗ್ಯವನ್ನು ಕಾಪಾಡಲು ಮತ್ತು ಉತ್ತಮ ಉತ್ಪಾದನೆ ಪಡೆಯಲು ರೈತರು ನಿಯಮಿತವಾಗಿ ಮಣ್ಣು ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಸಂಸ್ಥೆ ತಿಳಿಸಿದೆ. ಮಣ್ಣಿನ ಪರೀಕ್ಷಾ ಸೇವೆಯ ಕುರಿತು ಹೆಚ್ಚಿನ ವಿವರಗಳಿಗಾಗಿ 9606920748 ಸಂಖ್ಯೆಗೆ ಕರೆ ಮಾಡಿ ಮಾಹಿತಿ ಪಡೆಯಬಹುದು.

ಮತ್ತುಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *