Mann Ki Baat PM Modi praises Belagavi farmer Shivalingappa Huddar for fish farmingಶಿವಲಿಂಗಪ್ಪ ಹುದ್ದಾರ

ಬೆಳಗಾವಿ, ಮಾರ್ಚ್‌ 29: ಪ್ರಧಾನಿ ನರೇಂದ್ರ ಮೋದಿಯವರ (Narendra Modi) 132ನೇ ಮನ್‌ ಕಿ ಬಾತ್‌ ಸಂಚಿಕೆ ಇಂದು (ಮಾ. 29) ಪ್ರಸಾರವಾಯ್ತು. ಮನ್‌ ಕಿ ಬಾತ್‌ನಲ್ಲಿ (Mann ki Baat) ಪ್ರಧಾನಿಯವರು ಬೆಳಗಾವಿಯ ರೈತ ಶಿವಲಿಂಗಪ್ಪ ಸಾತಪ್ಪ ಹುದ್ದಾರ (Belagavi Shivalingappa Huddar) ಮೀನು ಸಾಕಾಣಿಕೆಯನ್ನು ಶ್ಲಾಘಿಸಿದ್ದಾರೆ.

ಬೆಳಗಾವಿ ತಾಲೂಕಿನ ಬೋಡಕ್ಕಾನಟ್ಟಿ ಗ್ರಾಮದ ರೈತ ಶಿವಲಿಂಗಪ್ಪ ಸಾತಪ್ಪ ಹುದ್ದಾರ ಅವರು ತಮ್ಮ ಪುತ್ರ ರಾಜು ಅವರ ನೆರವಿನಿಂದ ಒಂದು ಎಕರೆಯಲ್ಲಿ ಕೃಷಿ ಹೊಂಡದಲ್ಲಿ ಬಯೋಪ್ಲಾಕ್‌ ತಂತ್ರಜ್ಞಾನ ಬಳಸಿ ಕುಚ್ಚು (ಮರಲ್‌) ಮೀನು ಸಾಕಾಣಿಕೆ ಮಾಡಿ, ಲಕ್ಷ ಲಕ್ಷ ಆದಾಯ ಗಳಿಸುತ್ತಿದ್ದಾರೆ.

ಈ ಬಗ್ಗೆ ಪ್ರಧಾನಿ ಮೋದಿಯವರು ಮನ್‌ ಕಿ ಬಾತ್‌ನಲ್ಲಿ ಪ್ರಸ್ತಾಪಿಸಿ, ಶಿವಲಿಂಗಪ್ಪ ಹುದ್ದಾರ ಅವರ ಯಶಸ್ವಿ ಮೀನುಗಾರಿಕೆಯನ್ನು ದೇಶಕ್ಕೆ ಪರಿಚಯಿಸಿದರು. ದೇಶದ ಆರ್ಥಿಕತೆಯನ್ನು ಬಲಪಡಿಸಲು ಅವರ ಪ್ರಯತ್ನ ಅತ್ಯಂತ ಶ್ಲಾಘನೀಯವಾಗಿದೆ. ಈ ರೀತಿ ಎಲ್ಲ ರೈತರು ವಿಭಿನ್ನವಾಗಿ ಪ್ರಯತ್ನಿಸಿದರೆ ಆರ್ಥಿಕವಾಗಿ ಸದೃಢರಾಗಬಹುದು ಎಂದರು.

ಬೆಳಗಾವಿ ನಿವಾಸಿ ಶಿವಲಿಂಗ ಸಾತಪ್ಪ ಹುದ್ದಾರ್ ಅವರು ಸಾಂಪ್ರದಾಯಿಕ ಕೃಷಿಯಿಂದ ಭಿನ್ನವಾದ ಒಂದು ವಿಧಾನ ಆರಿಸಿಕೊಂಡರು. ಇದಕ್ಕಾಗಿ ಅವರು ಒಂದು Pond Farm ನಿರ್ಮಿಸಿದರು. ಈ ಕೆಲಸಕ್ಕಾಗಿ ಅವರು ತರಬೇತಿಯೂ ಪಡೆದರು. ಈಗ ಅವರು ತಮ್ಮ ಕೊಳದಿಂದ ಮೀನುಗಳನ್ನು ಮಾರಾಟ ಮಾಡಿ ಉತ್ತಮ ವರಮಾನ ಗಳಿಸುತ್ತಿದ್ದಾರೆ ಎಂದು ಹೇಳಿದರು.

ನಮ್ಮ ಆರ್ಥಿಕತೆಯನ್ನು ಬಲಿಷ್ಠಗೊಳಿಸಲು ಇವರೆಲ್ಲರ ಪ್ರಯತ್ನ ಪ್ರಶಂಸನೀಯ. ಸಮಾಜದಲ್ಲಿನ ಸಣ್ಣ ಸಣ್ಣ ಪ್ರಯತ್ನವೂ ಕೂಡ ದೊಡ್ಡ ಬದಲಾವಣೆ ತರುತ್ತದೆ ಎಂದು ಪ್ರಶಂಸಿಸಿದ್ದಾರೆ.

ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *