SVAMITVA Scheme Property Card Scheme Resolves Rural Land Disputes What is This Scheme? Full Detailsಸ್ವಾಮಿತ್ವ ಯೋಜನೆ

ನವದೆಹಲಿ, ಮಾರ್ಚ್‌ 26: ಗ್ರಾಮೀಣ ಜನರಿಗೆ ಆಸ್ತಿಯ ಹಕ್ಕು ಕಲ್ಪಿಸುವ ಕೇಂದ್ರ ಸರ್ಕಾರದ  ʻಸ್ವಾಮಿತ್ವ ಯೋಜನೆʼ (SVAMITVA Scheme) ಅಡಿಯಲ್ಲಿ 2.65 ಕೋಟಿ ಆಸ್ತಿ ಕಾರ್ಡ್‌ಗಳನ್ನು (Property Card) ವಿತರಿಸಲಾಗಿದೆ. ಉದ್ದೇಶಿತ 3.44 ಲಕ್ಷ ಹಳ್ಳಿಗಳ ಪೈಕಿ 3.29 ಲಕ್ಷ ಹಳ್ಳಿಗಳಲ್ಲಿ ಡ್ರೋನ್ ಸಮೀಕ್ಷೆ ಪೂರ್ಣಗೊಂಡಿದೆ. 1.87 ಲಕ್ಷ ಗ್ರಾಮಗಳಿಗೆ 3.10 ಕೋಟಿ ಆಸ್ತಿ ಕಾರ್ಡ್‌ಗಳನ್ನು ಸಿದ್ಧಪಡಿಸಲಾಗಿದೆ.   

ಏನಿದು ಸ್ವಾಮಿತ್ವ ಯೋಜನೆ?

ಗ್ರಾಮೀಣ ಜನವಸತಿ ಪ್ರದೇಶಗಳಲ್ಲಿನ ಆಸ್ತಿ ಮಾಲೀಕರಿಗೆ ಹಕ್ಕುಗಳ ದಾಖಲೆಯನ್ನು ಒದಗಿಸುವುದು ʻಸ್ವಾಮಿತ್ವ ಯೋಜನೆʼಯ ಮುಖ್ಯ ಉದ್ದೇಶವಾಗಿದೆ. ಈ ಯೋಜನೆಯಡಿಯಲ್ಲಿ ದೇಶದ ಎಲ್ಲಾ ಹಳ್ಳಿಗಳ ಗ್ರಾಮೀಣ ಜನವಸತಿ ಪ್ರದೇಶದ ಭೂ ಭಾಗಗಳನ್ನು ಸಮೀಕ್ಷೆ ಮಾಡಲಾಗುತ್ತದೆ.  

ಇದನ್ನು ಪಂಚಾಯತ್ ರಾಜ್ ಸಚಿವಾಲಯ, ಸರ್ವೇ ಆಫ್‌ ಇಂಡಿಯಾ (SOI), ರಾಜ್ಯ ಕಂದಾಯ ಇಲಾಖೆ, ರಾಜ್ಯ ಪಂಚಾಯತ್‌ ರಾಜ್‌ ಇಲಾಖೆ ಮತ್ತು ರಾಷ್ಟ್ರೀಯ ಮಾಹಿತಿ ಕೇಂದ್ರದ ಸಹಯೋಗದ ಪ್ರಯತ್ನಗಳೊಂದಿಗೆ ಕಾರ್ಯಗತಗೊಳಿಸಲಾಗುತ್ತಿದೆ.  

ಯೋಜನೆಯ ಅಗತ್ಯ ಏನು?

ಭಾರತದ ಜನಸಂಖ್ಯೆಯ ಶೇ. 50 ಕ್ಕಿಂತ ಹೆಚ್ಚು ಜನರು ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ. ಈ ಜನರಿಗೆ ಮನೆಗಳ ಮಾಲೀಕತ್ವದ ದಾಖಲೆಗಳಿಲ್ಲ. ಬ್ರಿಟಿಷ್‌ ಕಾಲದಿಂದಲೂ, ಹಳ್ಳಿಗಳಲ್ಲಿ ಕೃಷಿ ಭೂಮಿಯ ದಾಖಲೆಗಳನ್ನು ನಿರ್ವಹಿಸಲಾಗುತ್ತಿದೆ. ಆದರೆ, ಮನೆಗಳ ದಾಖಲೆಗಳಿಲ್ಲ. ಇದರ ಪರಿಣಾಮವಾಗಿ, ಅನೇಕ ಮನೆಗಳು ಆಸ್ತಿ ದಾಖಲೆಗಳನ್ನು ಹೊಂದಿಲ್ಲ. ಈ ಸಮಸ್ಯೆಯನ್ನು ಪರಿಹರಿಸಲು ಸ್ವಾಮಿತ್ವ ಯೋಜನೆಯನ್ನು ಸ್ಥಾಪಿಸಲಾಗಿದೆ.

ಸ್ವಾಮಿತ್ವ ಯೋಜನೆಯ ಪ್ರಯೋಜನ?

  • ಫಲಾನುಭವ ಪರೀಶಲನೆ

    ಈ ಯೋಜನೆ ಗ್ರಾಮದಲ್ಲಿ ವಾಸಿಸುವ ನಿವಾಸಿಗಳಿಗೆ ಅನ್ವಯಿಸುತ್ತದೆ. 31 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಈ ಯೋಜನೆಯಲ್ಲಿ ಸೇರಿಸಿವೆ. ನಿಮ್ಮ ಗ್ರಾಮವು ಚಾಲ್ತಿಯಲ್ಲಿರುವ ಹಂತದಲ್ಲಿ ಸೇರಿದಯೇ ಎಂದು ಖಚಿತಪಡಿಸಿಕೊಳ್ಳಿ.  

    • ಗ್ರಾಮ ಸರ್ವೇ ಸೂಚನೆ

    ನಿಮ್ಮ ಗ್ರಾಮವನ್ನು ಯೋಜನೆಗೆ ಆಯ್ಕೆ ಮಾಡಿದಾಗ ಪ್ರಕ್ರಿಯೆ ಪ್ರಾರಂಭವಾಗುತ್ತದೆ. ರಾಜ್ಯ ಸರ್ಕಾರವು ಸರ್ವೇ ಆಫ್‌ ಇಂಡಿಯಾದೊಂದಿಗೆ ಗ್ರಾಮದ ಆಸ್ತಿಗಳನ್ನು ಮ್ಯಾಪ್‌ ಮಾಡಲು ಡ್ರೋನ್‌ ಸರ್ವೇ ಆಯೋಜಿಸುತ್ತದೆ.

    ಸ್ಥಳೀಯ ಅಧಿಕಾರಗಳು ಸಾಮಾನ್ಯವಾಗಿ ಘೋಷಣೆಗಳು ಅಥವಾ ಸಭೆಗಳ ಮೂಲಕ ನಿವಾಸಿಗಳಿಗೆ ಸರ್ವೇ ಬಗ್ಗೆ ತಿಳಿಸುತ್ತದೆ.

    • ಸರ್ವೇ ಪ್ರಕ್ರಿಯೆಯಲ್ಲಿ ಭಾಗವಹಿಸಿ

    ಡ್ರೋನ್‌ ಸರ್ವೇ ನಡೆಯುವಾಗ, ನಿಮ್ಮ ಆಸ್ತಿ ಗಡಿಗಳನ್ನು ಗುರುತಿಸಲು ಮತ್ತು ಗುರುತು ಹಾಕಲು ನಿವಾಸಿಗಳು ಹಾಜರಿರಬೇಕೆಂದು ಸೂಚಿಸಲಾಗಿದೆ. ಇದನ್ನು ಸಾಮಾನ್ಯವಾಗಿ ಗ್ರಾಮ ಅಧಿಕಾರಿಗಳು ಮತ್ತು ಸರ್ವೇ ತಂಡದ ಮೇಲ್ವಿಚಾರಣೆಯಲ್ಲಿ ಚಾಕ್‌ ಅಥವಾ ತಾತ್ಕಾಲಿಕ ಗುರುತುಗಳೊಂದಿಗೆ ಮಾಡಲಾಗುತ್ತದೆ. (ಊದಾ. ಹಳೆಯ ಭೂಮಿ ದಾಖಲೆಗಳು, ಸ್ವಾಧೀನದ ಪುರಾವೆಗಳು ಅಥವಾ ಉಪಯುಕ್ತತೆ ಬಿಲ್‌ಗಳು) ಒದಗಿಸಿ, ಆದರೆ ಔಪಚಾರಿಕ ದಾಖಲೆಗಳು ಯಾವಾಗಲೂ ಕಡ್ಡಾಯವಲ್ಲ.

    • ಆಸ್ತಿ ವಿವರಗಳ ಪರಿಶೀಲನೆ

    ಡ್ರೋನ್‌ ಸರ್ವೇ ನಂತರ, ಗ್ರಾಮದ ಆಸ್ತಿಗಳ ಗಡಿಗಳೊಂದಿಗೆ ಒಂದು ಕರಡು ನಕ್ಷೆ ತಯಾರಿಸಲಾಗುತ್ತದೆ. ಈ ನಕ್ಷೆಗಳನ್ನು ಸಾರ್ವಜನಿಕವಾಗಿ ಪ್ರದರ್ಶಿಸಲಾಗುತ್ತದೆ. ಇದರಲ್ಲಿ ನಿಮ್ಮ ಆಸ್ತಿ ಸರಿಯಾಗಿ ಗುರುತಿಸಲಾಗಿದೆಯೇ ಎಂದು ಪರಿಶೀಲಿಸಿ. ಯಾವುದೇ ತಪ್ಪುಗಳಿದ್ದರೆ, ನಿಗದಿತ ಅವಧಿಯಲ್ಲಿ ಸ್ಥಳೀಯ ಆದಾಯ ಅಧಿಕಾರಿಗಳು ಅಥವಾ ಗ್ರಾಮ ಪಂಚಾಯತ್‌ ಸಹಾಯದೊಂದಿಗೆ ಆಕ್ಷೇಪಣೆ ಸಲ್ಲಿಸಬಹುದು

    ಪಂಚಾಯತ್ ರಾಜ್ ಸಚಿವಾಲಯವು ಫಲಾನುಭವಿಗಳ ಸಂಖ್ಯೆಯ ಲಿಂಗವಾರು ದಾಖಲೆಯನ್ನು ನಿರ್ವಹಿಸುವುದಿಲ್ಲ. ಆದರೆ ರಾಜ್ಯಗಳು ಮಹಿಳೆಯರಿಗೆ ಸಹ-ಮಾಲೀಕತ್ವದ ಹಕ್ಕುಗಳನ್ನು ಒದಗಿಸುವ ಆಸ್ತಿ ಕಾರ್ಡ್‌ಗಳನ್ನು ನೀಡುವ ಅಧಿಕಾರ ಹೊಂದಿವೆ. ಅದರಂತೆ, ಮಧ್ಯಪ್ರದೇಶ, ಹರಿಯಾಣ, ಕರ್ನಾಟಕ, ಮಿಜೋರಾಂ, ಛತ್ತೀಸ್‌ಗಢದಂತಹ ಕೆಲವು ರಾಜ್ಯಗಳು ಹಾಗೂ ಜಮ್ಮು ಮತ್ತು ಕಾಶ್ಮೀರ, ಪುದುಚೇರಿ, ದಿಯು ಮತ್ತು ದಮನ್ ಹಾಗೂ ದಾದ್ರಾ ಮತ್ತು ನಗರ್ ಹವೇಲಿಯಂತಹ ಕೇಂದ್ರಾಡಳಿತ ಪ್ರದೇಶಗಳಲ್ಲಿ ಆಸ್ತಿ ಕಾರ್ಡ್‌ಗಳಲ್ಲಿ ಮಹಿಳೆಯರ ಸಹ-ಮಾಲೀಕತ್ವಕ್ಕೆ ಅವಕಾಶ ಕಲ್ಪಿಸಲಾಗಿದೆ.

    • ವಿವಾದಗಳ ಪರಿಹಾರ

    ಮಾಲೀಕತ್ವದ ವಿವಾದಗಳಿದ್ದರೆ, ಅವುಗಳನ್ನು ಸ್ಥಳೀಯ ಅಧಿಕಾರಿಗಳು ಇರುವ ದಾಖಲೆಗಳು, ಸಮುದಾಯದ ಒಮ್ಮತ ಅಥವಾ ಕಾನೂನು ಪ್ರಕ್ರಿಯೆಗಳ ಆಧಾರದ ಮೇಲೆ ಪರಿಹರಿಸುತ್ತಾರೆ. ಅಗತ್ಯವಿದ್ದರೆ ಸ್ವಾಧೀನದ ಪುರಾವೆ ಒದಗಿಸಿ.

    • ಆಸ್ತಿ ಕಾರ್ಡ್‌ ಜಾರಿ

    ನಕ್ಷೆಗಳು ಅಂತಿಮಗೊಂಡು ವಿವಾದಗಳು (ಯಾವುದಾದರೂ ಇದ್ದರೆ) ಪರಿಹಾರವಾದ ನಂತರ, ರಾಜ್ಯ ಸರ್ಕಾರವು ಫಲಾನುಭವಿ ನಿವಾಸಿಗಳಿಗೆ ಆಸ್ತಿ ಕಾರ್ಡ್‌ಗಳು ಅಥವಾ ಮಾಲೀಕತ್ವ ಪತ್ರಗಳನ್ನು ಜಾರಿ ಮಾಡುತ್ತದೆ. ಈ ಕಾರ್ಡಗಳನ್ನು ಗ್ರಾಮ ಮಟ್ಟದ ಕಾರ್ಯಕ್ರಮದಲ್ಲಿ ಅಥವಾ ಗ್ರಾಮ ಪಂಚಾಯತ್‌ ಮೂಲಕ ಭೌತಿಕವಾಗಿ ಅಥವಾ ಡಿಜಿಟಲ್‌ ರೂಪದಲ್ಲಿ (SMS/ ಇಮೇಲ್‌ ಲಿಂಕ್‌ ಮೂಲಕ) ವಿತರಿಸಲಾಗುತ್ತದೆ.

    ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

    Leave a Reply

    Your email address will not be published. Required fields are marked *