ಕೂದಲು ಉದುರುವುದು (Hair loss) ಮತ್ತು ಮುಖದ ಕಾಂತಿ (face Glow) ಹೆಚ್ಚಿಸಿಕೊಳ್ಳುವುದರ ಬಗ್ಗೆ ಯುವಕ ಯುವತಿಯರು ಹೆಚ್ಚು ಚಿಂತಿಸುತ್ತಾರೆ. ಕೂದಲು ಉದುರುವುದು ನಿಲ್ಲಲು ಮತ್ತು ಮುಖದ ಕಾಂತಿ ಹೆಚ್ಚುವ ಸಲುವಾಗಿ ಅನೇಕ ಕಾಸ್ಮೆಟಿಕ್ಸ್‌ಗಳು ಮಾರುಕಟ್ಟೆಯಲ್ಲಿ ಸಿಗುತ್ತವೆ. ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್‌ಗಳಲ್ಲಿ ಈ ಕುರಿತು ಸಾಕಷ್ಟು ರೀಲ್ಸ್, ವಿಡಿಯೋಗಳು ಬರುತ್ತವೆ. ಕೂದಲು ಉದುರುವುದು ನಿಲ್ಲಲು ಮತ್ತು ಮುಖದ ಕಾಂತಿಯನ್ನು ಹೆಚ್ಚಿಸುವ ಕಾಸ್ಮೆಟಿಕ್ಸ್‌ಗಳು ಮಾರುಕಟ್ಟೆಯಲ್ಲಿ ಎಷ್ಟೇ ದುಬಾರಿ ಇದ್ದರೂ ಕೊಂಡುಕೊಳ್ಳುತ್ತಾರೆ. ಆದ್ರೆ, ಅನೇಕರಿಗೆ ತಿಳಿಯದ ವಿಷಯವೇನೆಂದರೆ ಕೂದಲು ಉದುರುವುದು ನಿಲ್ಲಲು ಮತ್ತು ಮುಖದ ಕಾಂತಿ ಹೆಚ್ಚಲು ನಿತ್ಯ ಜೀವನ ಕ್ರಮ ಬದಲಾಗಬೇಕು. ಅನೇಕರಿಗೆ ತಿಳಿಯದ ವಿಷಯ ಏನಂದರೆ ಕೂದಲು ಮತ್ತು ಮುಖದ ಕಾಂತಿ ತಮ್ಮ ಆಂತರಿಕ ಆರೋಗ್ಯದ ಅದರಲ್ಲೂ ಮುಖ್ಯವಾಗಿ ಕರುಳಿನ ಆರೋಗ್ಯವನ್ನು ಬಿಂಬಿಸುತ್ತದೆ ಎಂಬುವುದು ಗೊತ್ತಿಲ್ಲ. ಇದನ್ನು ಗಟ್ ಹೆಲ್ಥ್ ಅಂತ ಕರೆಯುತ್ತಾರೆ. ಬಾಹ್ಯವಾಗಿ ಬಳಸಿದ ಎಲ್ಲ ಕಾಸ್ಮೆಟಿಕ್ಸ್‌ಗಳು ಪರಿಣಾಮಕಾರಿ ಆಗದೆ ಕೊರಗುವ ಬದಲು ಒಮ್ಮೆ ನಿಮ್ಮ ಆಹಾರ ಮತ್ತು ಜೀರ್ಣ ಕ್ರಿಯೆ ಬಗ್ಗೆ ಗಮನ ಹರಿಸಿ. ಕೂದಲು ಉದುರಲು ಐರನ್ ವಿಟಾಮಿನ್ ಬೀ ಮತ್ತು ಕಾಲ್ಶಿಯಂ ಹೀಗೆ ಅನೇಕ ಅಂಶಗಳ ಕಾರಣವಿದೆ. ಹೆಣ್ಣುಮಕ್ಕಳಲಿ pcod ಅಥವಾ ಹಾರ್ಮೋನ್‌ಗಳ ಏರುಪೇರು, ಅತಿಯಾದ ಜಂಕ್ ಫುಡ್ ಸೇವನೆಯಿಂದ ಉಂಟಾದ ಸ್ಥೂಲಕಾಯ ಎಲ್ಲವೂ ಕಾರಣವಾಗುತ್ತವೆ. ಉಪಾಯವೇನು? ಇದಕ್ಕೆ ಉಪಾಯ ಏನಂದರೆ ಊಟದ ಸಮಯದಲ್ಲಿ ನೆಲದ ಮೇಲೆ ಕೂತು ತಿನ್ನುವುದು. ಹೌದು, ನಾವು ಕೂಡುವ ಸ್ಥಳ ರೀತಿ ಮತ್ತು ಊಟದ ಸಮಯದಲ್ಲಿ ನಾವು ಯೋಚಿಸುವ ವಿಷಯ ಪ್ರತಿಯೊಂದು ಅದರ ಜೀರ್ಣಕ್ರಿಯೆಗೆ ಪ್ರಭಾವ ಬೀರುವುದು. ಅಲ್ಪ ಸೇವನೆ ಅತಿಯಾದ ಸೇವನೆ ತುಂಬ ನಿಧಾನವಾಗಿ ಅಥವಾ ತುಂಬ ಬೇಗನೆ ತಿನ್ನುವುದು ಇವು ಮಾತ್ರವಲ್ಲದೆ ಆಹಾರದ ಗುಣಮಟ್ಟದ ಕಡೆಯೂ ಗಮನವಿರಲಿ. ಸರಿಯಾಗಿ ಜೀರ್ಣವಾದ ಆಹಾರ ಕೂದಲು ಮುಖ ಮತ್ತು ದೇಹದ ಇನ್ನಿತರ ಭಾಗಕ್ಕೆ ಬೇಕಾದ ಖನಿಜಗಳನ್ನು ಪೂರೈಸಲು ಸಹಾಯಕಾರಿಯಾಗಿದೆ. ಇದಲ್ಲದೆ ಊಟವಾದ ನಂತರ ಒಂದು ಸಣ್ಣ ವಾಕ್ ತುಂಬ ಸಹಾಯಕರ. ಊಟದ ಜೊತೆಗೆ ಸ್ನಾಕ್ಸ್‌ಗಳನ್ನು ತಿನ್ನಬೇಡಿ. ಊಟವಾದ ನಂತರ ಸಿಹಿ ತಿಂಡಿ, ಟೀ, ಕಾಫಿ ತಿನ್ನಬೇಡಿ. ಇವುಗಳಿಂದ ಆಮ ಅಂದರೆ ಸರಿಯಾಗಿ ಜೀರ್ಣವಾಗದೆ ಉಳಿದ ಆಹಾರದ ಅಂಶ ಶೇಖರವಾಗಿ ನಿಧಾನವಾಗಿ ದೇಹದ ಧೃಡತೆ, ಬಲ, ಕಾಂತಿ ಕಡಿಮೆಯಾಗುತ್ತದೆ. ಇದಲ್ಲದೆ ಇನ್ನೂ ಮುಖ್ಯವಾದ ಉಪಾಯ ಎಂದರೆ ರಾತ್ರಿ ಮಲಗುವ ಮುನ್ನ ಪಾದಗಳಿಗೆ ಉಗುರು ಬೆಚ್ಚಗಿನ ಎಣ್ಣೆಯಿಂದ ಮಸಾಜ್ ಮಾಡಿಕೊಳ್ಳುಬೇಕು. ಇದರಿಂದ ವಾತ, ಪಿತ್ತ, ಕಫ ಸಮತೋಲನಗೊಂಡು ಕೂದಲಿಗೆ ಬೇಕಾದ ಪೋಷಣೆ ರಕ್ಷಣೆ ದೊರೆಯುತ್ತೆ. ಪಾದಗಳ ಅಡಿಯಲ್ಲಿ ಇರುವ ನಾಡಿಗಳ ಸ್ಟ್ರೆಸ್ ರಿಲೀಫ್ ಆಗಿ ನರಗಳ ಮೂಲಕ ಪಾದದಿಂದ ಶಿರಕ್ಕೆ ಸಾಗಿ ಸ್ಕಾಲ್ಪ್‌ಗೆ ಪೋಷಣೆ ನೀಡುತ್ತದೆ. ಇದರಿಂದ ಕೂದಲು ಉದರುವಿಕೆ ಅಷ್ಟೇ ಅಲ್ಲದೇ ನಿದ್ದೆ ಬಾರದ ಸಮಸ್ಯೆ, ಚಿಂತೆ ಮತ್ತು ಮನಸಿನ ಒತ್ತಡ ನಿವಾರಣೆ ಆಗುತ್ತದೆ. ಸುಖವಾದ ನಿದ್ದೆ ಮನಸಿಗೆ ದೇಹಕ್ಕೆ ಶಾಂತಿ ನೀಡುತ್ತದೆ ಸ್ಟ್ರೆಸ್ ಕಡಿಮೆಯಾಗಿ ಕಾರ್ಟಿಸೋಲ್ ಎಂಬ ಹಾರ್ಮೋನ್ ಸಮತೋಲನವಾಗಿ ದೇಹದ ಕ್ರಿಯಾಶೀಲತೆ ಹೆಚ್ಚಾಗುತ್ತದೆ. ಇದಲ್ಲದೆ ವಾರಕ್ಕೆ ಒಮ್ಮೆಯಾದರೂ ಮುಖದ ಅಭ್ಯಂಗ ಅಂದರೆ ಉಗುರು ಬೆಚ್ಚಗಿನ ಎಣ್ಣೆಯನ್ನು ಮುಖಕ್ಕೆ ಹಚ್ಚಿಕೊಳ್ಳಿ. ನಂತರ ಬಿಸಿ ನೀರಿನಿಂದ ಮುಖ ತೊಳೆಯಿರಿ. ಅಥವಾ ಸ್ಟೀಮ್ ತಗೆದುಕೊಂಡು ನಂತರ ಮುಖವನ್ನು ಶುಚಿಯಾದ ಬಟ್ಟೆಯಿಂದ ಒರೆಸಿಕೊಳ್ಳಿ. ಈ ರೀತಿ ಮಾಡಿದಾಗ ಮುಖದ ಮೇಲಿನ ರಂದ್ರಗಳು ತೆರೆದು ಲಿಂಪಾಟಿಕ್ ಸಿಸ್ಟಮ್‌ನಿಂದ ಚರ್ಮದ ಡೆಡ್ ಸೆಲ್ಸ್ ಪಿಂಪಲ್ ಅಥವಾ ಆಕ್ನೇಗೆ ಸಂಬಂಧ ಪಟ್ಟ ಅಂಶಗಳು ಹೊರಗೆ ಬಿದ್ದು ಒಳ್ಳೆಯ ಮುಖಕಕ್ಕೆ ಕಾಂತಿ ಬರುತ್ತದೆ. ಇದನ್ನು ಪ್ರತಿದಿನ ಅಥವಾ ವಾರಕ್ಕೆ ಒಂದೆರಡು ಬಾರಿ ಮಾಡಿ. ಮುಖದಿಂದ ತಲೆಯವರೆಗೆ ಸಾಗುವ ರಕ್ತನಾಳಗಳ ಮೂಲಕ ಸ್ಕಾಲ್ಪ್‌ಗೆ ಪೋಷಣೆ ಸಿಗುತ್ತದೆ. ಆಗ, ಮುಖದ ಕಾಂತಿ ಹೆಚ್ಚುತ್ತದೆ. ಲೇಖಕರು: ವೈದ್ಯೆ|| ಸೌಜನ್ಯ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ Post navigation ರಕ್ತಭೇದಿ, ರಕ್ತಸ್ರಾವವಿರುವ ಮೂಲವ್ಯಾಧಿ ತಡೆಯುತ್ತೆ ಮಾವಿನಹಣ್ಣಿನ ಓಟೆಯಲ್ಲಿನ ಬೀಜ Ayurveda Health Tips: ಉತ್ತಮ ಆರೋಗ್ಯಕ್ಕಾಗಿ ನಿತ್ಯ ಜೀವನದಲ್ಲಿ ಪಾಲಿಸಬೇಕಾದ 14 ಸೂತ್ರಗಳು