Ayurveda Health Tips: Benefits of Mango pulpಮಾವು

ಹಣ್ಣುಗಳ ರಾಜ ಮಾವಿನಹಣ್ಣು (Mango). ಸಾಮಾನ್ಯವಾಗಿ ಇದರ ಸವಿಯಾದ ಹಣ್ಣು ತಿಂದು ಓಟೆ ಬಿಸಾಡುವುದು ಸಹಜ. ಈ ಓಟೆಗಳಿಂದ ವೈದ್ಯಕೀಯ ಉಪಯೋಗಗಳು ಸಾಕಷ್ಟಿದೆ. ಈ ಓಟೆಗಳು ಯಾವುದಕ್ಕೆಲ್ಲ ಉಪಯೋಗವಾಗುತ್ತದೆ ಎಂಬುವುದನ್ನು ಇಲ್ಲಿ ತಿಳಿಸಲಾಗಿದೆ.  

ಮಾವಿನಹಣ್ಣಿನ ಓಟೆಯಲ್ಲಿನ ಸಿಪ್ಪೆ ತೆಗೆದ ಬೀಜಗಳಲ್ಲಿ ಹೆಚ್ಚಿನಂಶದಲ್ಲಿ ಗಾಲಿಕ್ ಆಮ್ಲ, ಕೊಬ್ಬು ಮತ್ತು ಸುಣ್ಣದ ಅಂಶಗಳಿವೆ. ಇದರಲ್ಲಿ ತೀವ್ರವಾದ ಕಷಾಯ ರಸ ಇರುವುದರಿಂದ ರಕ್ತಭೇದಿ, ರಕ್ತಸ್ರಾವವಿರುವ ಮೂಲವ್ಯಾಧಿ, ಸ್ತ್ರೀಯರನ್ನು ಕಾಡುವ ಬಿಳಿಸೆರಗು, ಹೊಟ್ಟೆಯಲ್ಲಿನ ಜಂತು, ಕಿಲುಬುಹುಳುಗಳ ಉಪಟಳದಲ್ಲೂ ಬಳಸಬಹುದು. ಈ ಬೀಜಗಳನ್ನು ಒಣಗಿಸಿ ಚೂರ್ಣ ಮಾಡಿಟ್ಟುಕೊಂಡು ಮಕ್ಕಳಿಗೆ ಕಾಲು ಚಮಚ ದೊಡ್ಡವರಿಗೆ ಅರ್ಧ ಚಮಚ ನೀರಿನೊಡನೆ ನೀಡಬಹುದು.

ಮಾವಿನ ಬೀಜಗಳಲ್ಲಿನ ತಿರುಳಿಗೆ ಮೂತ್ರದ ತೊಂದರೆ ನಿವಾರಿಸುವ ಗುಣವಿದ್ದು ಮೂತ್ರ ವಿಕಾರಗಳಾದ ಅತಿಮೂತ್ರ ಉರಿಮೂತ್ರ ಹಾಗೂ ಲೈಂಗಿಕ ವ್ಯಾಧಿಯಾದ ಗೊಸ್ಟೋರಿಯದಲ್ಲಿ ಕಂಡುಬರುವ ಕೀವುಸಹಿತ ಮೂತ್ರದಲ್ಲಿ ಉಪಯುಕ್ತವಾಗಿದೆ.

ಮೂಗಿನಿಂದ ರಕ್ತಸ್ರಾವವಾಗುತ್ತಿದ್ದರೆ ಇದರ ತಿರುಳನ್ನು ಕುಟ್ಟಿ ಹಿಂಡುವುದರಿಂದ ಬರುವ ರಸವನ್ನು ಮೂಗಿಗೆ ಹಾಕಬಹುದು.

ಈ ಬೀಜದ ತಿರುಳಿನಲ್ಲಿ ಹೇರಳವಾಗಿ ಕ್ಯಾಲ್ಸಿಯಂ ಹಾಗೂ ಕಬ್ಬಿಣಾಂಶ ಇರುವುದರಿಂದ ಇದನ್ನು ಉತ್ತಮವಾದ ಆಹಾರಪದಾರ್ಥವಾಗಿಯೂ ಬಳಸಬಹುದಾಗಿದೆ (ಗೋಧಿಗೆ ಹೋಲಿಸಿದರೆ ಇದರಲ್ಲಿ ಸಸಾರಜನಕಾಂಶ ಕಡಮೆಯಿದೆ.

ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *