ಬೇಸಿಗೆ ಆರಂಭವಾಗುತ್ತಿದ್ದಂತೆ ದಿನನಿತ್ಯದ ಆಹಾರ ಪದ್ಧತಿಯಲ್ಲಿ ಬದಲಾವಣೆ ಅಗತ್ಯವಾಗುತ್ತದೆ. ತೀವ್ರ ಸೂರ್ಯತಾಪದಿಂದ ಪಾರಾಗಲು ಜನರು ಹಲವು ಮಾರ್ಗಗಳನ್ನು ಅನುಸರಿಸುತ್ತಾರೆ. ಈ ಪೈಕಿ ದೇಸಿ ಪಾನೀಯವಾದ ಮಜ್ಜಿಗೆ ಬಹಳ ಜನಪ್ರಿಯವಾಗಿದೆ. ಊಟದ ಜೊತೆ ಮಜ್ಜಿಗೆ ಸೇವಿಸುವ ಅಭ್ಯಾಸ ಅನೇಕ ಮಂದಿಗೆ ಇದೆ. ಇದು ಕೇವಲ ತಂಪನ್ನು ನೀಡುವುದಷ್ಟೇ ಅಲ್ಲ, ಆರೋಗ್ಯಕ್ಕೂ ಬಹಳ ಉಪಕಾರಿ. ಹಾಗಾದರೆ, ಮಧ್ಯಾಹ್ನದ ಊಟದ ಜೊತೆ ಮಜ್ಜಿಗೆ ಕುಡಿಯುವುದರಿಂದ ಯಾವ ಲಾಭಗಳು ಸಿಗುತ್ತವೆ ಎಂಬುದನ್ನು ನೋಡೋಣ: ಪೌಷ್ಟಿಕಾಂಶಗಳ ಭಂಡಾರ:ಮಜ್ಜಿಗೆ ಪ್ರೋಟೀನ್, ಜೀವಸತ್ವಗಳು ಮತ್ತು ಖನಿಜಗಳಲ್ಲಿ ಸಮೃದ್ಧವಾಗಿದೆ. ಇದನ್ನು ಕುಡಿಯುವುದರಿಂದ ದೇಹಕ್ಕೆ ಅಗತ್ಯವಾದ ಶಕ್ತಿ ದೊರೆಯುತ್ತದೆ ಮತ್ತು ಚೈತನ್ಯ ಹೆಚ್ಚುತ್ತದೆ. ಜೀರ್ಣಕ್ರಿಯೆ ಸುಧಾರಣೆ:ಮಧ್ಯಾಹ್ನದ ಊಟದ ಜೊತೆ ಮಜ್ಜಿಗೆ ಕುಡಿಯುವುದರಿಂದ ಪ್ರೋಬಯಾಟಿಕ್ಸ್ ದೊರೆಯುತ್ತವೆ. ಇದು ಜೀರ್ಣಕ್ರಿಯೆಯನ್ನು ಉತ್ತಮಗೊಳಿಸಿ, ಅಜೀರ್ಣ, ಗ್ಯಾಸ್ ಮತ್ತು ಅಸಿಡಿಟಿ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ. ದೇಹ ಹೈಡ್ರೇಷನ್ ಕಾಪಾಡುತ್ತದೆ:ಮಜ್ಜಿಗೆಯಲ್ಲಿ ನೀರಿನ ಅಂಶ ಹೆಚ್ಚು ಇರುವುದರಿಂದ ಬೇಸಿಗೆಯಲ್ಲಿ ದೇಹವನ್ನು ಹೈಡ್ರೇಟ್ ಆಗಿ ಇಡಲು ಸಹಾಯ ಮಾಡುತ್ತದೆ. ತಂಪು ಮತ್ತು ಮನಶಾಂತಿ:ಮಜ್ಜಿಗೆಯ ತಂಪು ಗುಣ ದೇಹವನ್ನು ಶಾಂತಗೊಳಿಸಿ, ಮನಸ್ಸಿಗೂ ವಿಶ್ರಾಂತಿ ನೀಡುತ್ತದೆ. ಎಲುಬುಗಳಿಗೆ ಮತ್ತು ದೇಹಕ್ಕೆ ಬಲ:ಪೊಟ್ಯಾಸಿಯಮ್, ಕ್ಯಾಲ್ಸಿಯಂ ಸೇರಿದಂತೆ ಅಗತ್ಯ ಪೋಷಕಾಂಶಗಳನ್ನು ಹೊಂದಿರುವ ಮಜ್ಜಿಗೆ ದೇಹವನ್ನು ಆರೋಗ್ಯಕರವಾಗಿ ಮತ್ತು ಬಲವಾಗಿಡಲು ಸಹಾಯ ಮಾಡುತ್ತದೆ. Post navigation ಆರೋಗ್ಯಕ್ಕೆ ಆಯುರ್ವೇದ: ಊಟ ಮಾಡಿದ ತಕ್ಷಣ ಈ ಕೆಲಸಗಳನ್ನು ಮಾಡಲೇಬೇಡಿ ಆರೋಗ್ಯಕ್ಕೆ ಆಯುರ್ವೇದ: ಸನ್ ಸ್ಟ್ರೋಕ್ನಿಂದ ಪಾರಾಗಲು ಇಲ್ಲಿದೆ ಟಿಪ್ಸ್