Indian Navy opens Agniveer recruitment 2026 MR and SSRಭಾರತೀಯ ನೌಕಾಪಡೆ

ಯುವಕರಿಗೆ ಭಾರತೀಯ ನೌಕಾಪಡೆ (Indian Navy) ಸಿಹಿ ಸುದ್ದಿ ನೀಡಿದೆ. ವಿಗ್ನಿಪಥ (Agnipath) ಯೋಜನೆಯಡಿ ಪ್ರಸಕ್ತ ವರ್ಷದಲ್ಲಿ ಆಗ್ತಿವೀರರ (Agniveer) ನೇಮಕಕ್ಕೆ ಭಾರತೀಯ ನೌಕಾಪಡೆ ಅಧಿಸೂಚನೆ ಪ್ರಕಟಿಸಿದೆ. ಮಾ.14 ರಿಂದ ಏಪ್ರಿಲ್‌ 6 ರವರೆಗೆ ಅರ್ಜಿಸಲ್ಲಿಸಲು ಅವಕಾಶ ನೀಡಲಾಗಿದೆ. ಪ್ರತಿ ಬಾರಿ ಒಂದು ಸಾವಿರಕ್ಕೂ ಹೆಚ್ಚು ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದ್ದು, ಈ ವರ್ಷ ಇನ್ನೂ ಖಾಲಿ ಹುದ್ದೆಗಳ ಸಂಖ್ಯೆಯನ್ನು ಸ್ಪಷ್ಟಪಡಿಸಿಲ್ಲ.

ಹುದ್ದೆಗಳು

ಸೀನಿಯರ್‌ ಸೆಕೆಂಡರಿ ರಿಕ್ರೂಟ್‌ (SSR-ರೆಗ್ಯುಲರ್ ಮತ್ತು ಮೆಡಿಕಲ್ ಅಸಿಸ್ಟೆಂಟ್ ) ಮೆಟ್ರಿಕ್ ರಿಕ್ರೂಟ್ (MR) ವಿಭಾಗದಲ್ಲಿಅಗ್ನಿವೀರರನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ.  

ಅರ್ಹತೆಗಳೇನು?

SSR ವಿಭಾಗದಲ್ಲಿ ಅಗ್ನಿವೀರರಾಗಲು ಬಯಸುವವರು ವಿಜ್ಞಾನದಲ್ಲಿ ಪಿಯುಸಿ ವ್ಯಾಸಂಗ ಪೂರ್ಣಗೊಳಿಸಿರಬೇಕು. ವಿಜ್ಞಾನ ವಿಭಾಗದಲ್ಲಿ ಗಣಿತ ಮತ್ತು ಭೌತಶಾಸ್ತ್ರ ವಿಷಯಗಳನ್ನು ಓದಿರುವುದು ಕಡ್ಡಾಯವಾಗಿದೆ.

ಇದರ ಹೊರತಾಗಿ ಕೆಮಿಸ್ಟ್ರಿ, ಬಯಾಲಜಿ ಮತ್ತು ಕಂಪ್ಯೂಟರ್ ಸೈನ್ಸ್ ಇವುಗಳಲ್ಲಿ ಯಾವುದಾದರೂ ಒಂದು ವಿಷಯವನ್ನು ಅಧ್ಯಯನ ಮಾಡಿರಬೇಕು. ಇದರ ಹೊರಾಗಿ ಮೂರು ವರ್ಷದ ಡಿಪ್ಲೊಮಾ ಎಂಜಿನಿಯರಿಂಗ್ ಅಧ್ಯಯನ ಮಾಡಿದ್ದರೂ ಅರ್ಜಿ ಸಲ್ಲಿಸುವ ಅವಕಾಶವಿದೆ.

ಅಥವಾ ಎರಡು ವರ್ಷಗಳ ನಾನ್ ವೊಕೇಷನಲ್ ಕೋರ್ಸ್ ಪಡೆದಿದ್ದರೂ ಅರ್ಜಿ ಸಲ್ಲಿಸಬಹುದು. ನಿಗದಿತ ವಿದ್ಯಾರ್ಹತೆಯಲ್ಲಿ ಕನಿಷ್ಠ ಶೇ.50ರಷ್ಟು ಅಂಕಗಳೊಂದಿಗೆ ತೇರ್ಗಡೆಯಾಗಿರುವುದು ಕಡ್ಡಾಯವಾಗಿದೆ.

MR ವಿಭಾಗದ ಹುದ್ದೆಗಳಿಗೆ ಎಸ್ಸೆಸ್ಸೆಲ್ಸಿ ವಿದ್ಯಾರ್ಹತೆ ನಿಗದಿಪಡಿಸಲಾಗಿದೆ. ಈ ಎರಡೂ ವಿಭಾಗಕ್ಕೂ 2004ರ ಡಿಸೆಂಬರ್ 1 ಮತ್ತು 2009ರ ಮೇ 31ರ ನಡವೆ ಜನಿಸಿದ ಅವಿವಾಹಿತ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಮಾತ್ರ ಅವಕಾಶ.

ಅವಿವಾಹಿತರಿಗೆ ಮಾತ್ರ ಅವಕಾಶ

ಆಯ್ಕೆಯಾದ ಅಭ್ಯರ್ಥಿಗಳು ತರಬೇತಿ ಮುಗಿಯುವ ತನಕ ವಿವಾಹವಾಗುವಂತಿಲ್ಲ, ಯಾವುದೇ ಅಭ್ಯರ್ಥಿಗಳು ತಮ್ಮ ವಿವಾಹದ ಬಗ್ಗೆ ತಪ್ಪು ಮಾಹಿತಿಗಳನ್ನು ನೀಡಿದರೆ ಅಂಥವರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ನೌಕಾಪಡೆಯು ಅಧಿಸೂಚನೆಯಲ್ಲಿ ತಿಳಿಸಿದೆ.

ಅಭ್ಯರ್ಥಿಗಳ ಎತ್ತರ 157 ಸೆಂ.ಮೀ. ಇರಬೇಕು ಮತ್ತು ಮಹಿಳಾ ಅಭ್ಯರ್ಥಿಗಳಾಗಿದ್ದಲ್ಲಿ 152 ಸೆಂ. ಮೀ. ಎತ್ತರ ಹೊಂದಿರಬೇಕು. ಈ ಹುದ್ದೆಗೆ ಅರ್ಜಿ ಸಲ್ಲಿಸಲು ಶುಲ್ಕ 550 ರೂ. ಮತ್ತು ಜಿಎಸ್‌ಟಿ ಪಾವತಿಸಬೇಕು.

ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳ ಪೈಕಿ ಅವರ ನಿಗದಿತ ವಿದ್ಯಾರ್ಹತೆಯಲ್ಲಿ ಪಡೆದ ಅಂಕಗಳ ಮೇಲೆ ಅರ್ಹರ ಪಟ್ಟಿ ಸಿದ್ದಪಡಿಸಲಾಗುತ್ತದೆ. ಆಯಾ ರಾಜ್ಯಗಳಿಗೆ ಇಂತಿಷ್ಟು ಹುದ್ದೆಗಳನ್ನು ಮೀಸಲಿಡಲಾಗುತ್ತದೆ. ಅವುಗಳ ಆಧಾರದಲ್ಲಿ ಅಭ್ಯರ್ಥಿಗಳ ಆಯ್ಕೆ ನಡೆಯುತ್ತದೆ.

ನಂತರ ಈ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ ಮತ್ತು ದೈಹಿಕ ಪರೀಕ್ಷೆ ಹಾಗೂ ವೈದ್ಯಕೀಯ ಪರೀಕ್ಷೆ ನಡೆಸಿ ನೇಮಕ ಮಾಡಿಕೊಳ್ಳಲಾಗುತ್ತದೆ. ಪರೀಕ್ಷಾ ಕೇಂದ್ರಗಳ ಮಾಹಿತಿಯನ್ನು ಕೂಡ ಪ್ರವೇಶಪತ್ರದಲ್ಲೇ ನೀಡಲಾಗುತ್ತದೆ. ವೈದ್ಯಕೀಯ ಪರೀಕ್ಷೆಯನ್ನು ಚಿಲ್ಕಾದ ಇಂಡಿಯನ್ ನೇವಲ್ ಅಕಾಡೆಮಿಯಲ್ಲೇ ನಡೆಸಲಾಗುತ್ತದೆ.

ಅರ್ಜಿ ಸಲ್ಲಿಕೆ: ಮಾ.14 ರಿಂದ ಏ.6, 2026

ಅರ್ಜಿ ತಿದ್ದುಪಡಿ: ಏ.10 ರಿಂದ 11, 2026

ಮೊದಲ ಹಂತದ ಪರೀಕ್ಷೆ: ಮೇ-ಜೂನ್‌

ತರಬೇತಿ ಸ್ಥಳ: ಇಂಡಿಯನ್‌ ನೇವಲ್‌ ಅಕಾಡೆಮಿ, ಚಿಲ್ಕಾ

ಇದನ್ನೂ ಓದಿ: AIIMS 2551 ನರ್ಸಿಂಗ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ನೌಕಾಪಡೆಯ ವೆಬ್‌ಸೈಟ್‌ನಲ್ಲಿ www.oinindianavy.gov.in ಹೆಚ್ಚಿನ ವಿವರಗಳು ಲಭ್ಯ. ಅಭ್ಯರ್ಥಿಗಳ ವಿವರಗಳಿಗೆ ಮೂಲ ದಾಖಲೆಗಳನ್ನೇ ಪರಿಶೀಲಿಸಲಾಗುತ್ತದೆ. ಭೂಸೇನೆ, ವಾಯುಪಡೆಯಲ್ಲಿ ಅಗ್ನೀವೀರರ ನೇಮಕಕ್ಕೆ ಅನ್ವಯವಾಗುವ ಎಲ್ಲ ಸೌಲಭ್ಯಗಳು ಇಲ್ಲಿಯೂ ಅನ್ವಯಿಸುತ್ತದೆ. ಒಮ್ಮೆ ಪಾವತಿಸಿದ ಶುಲ್ಕವನ್ನು ಮತ್ತೆ ವಾಪಸ್‌ ಪಡೆಯಲಾಗುವುದಿಲ್ಲ.  

ಮತ್ತುಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

One thought on “ಭಾರತೀಯ ನೌಕಾಪಡೆಯಿಂದ ಅಗ್ನಿವೀರರ ನೇಮಕಾತಿ ಪ್ರಾರಂಭ”

Leave a Reply

Your email address will not be published. Required fields are marked *