ನವದೆಹಲಿ, ಮಾರ್ಚ್ 11: ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (AIIMS) ನರ್ಸಿಂಗ್ ಅಧಿಕಾರಿ ನೇಮಕಾತಿ (Nursing Officer Recruitment) ಸಾಮಾನ್ಯ ಅರ್ಹತಾ ಪರೀಕ್ಷೆ (NORCET) ಅಡಿಯಲ್ಲಿ ಒಟ್ಟು 2551 ನರ್ಸಿಂಗ್ ಅಧಿಕಾರಿ ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆ ಹೊರಡಿಸಿದೆ. ಆರೋಗ್ಯ ಕ್ಷೇತ್ರದಲ್ಲಿ ಸರ್ಕಾರಿ ಉದ್ಯೋಗ ಪಡೆಯಲು ಬಯಸುವವರಿಗೆ ಇದು ಉತ್ತಮ ಅವಕಾಶವಾಗಿದೆ. ಹುದ್ದೆಗಳ ಸಂಖ್ಯೆ: 2551 ಅರ್ಜಿ ಸಲ್ಲಿಸುವ ವಿಧಾನ: ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಬೇಕು. ಅಧಿಕೃತ ವೆಬ್‌ಸೈಟ್: aiimsexams.ac.in ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ: ಮಾರ್ಚ್ 16, 2026 ಶೈಕ್ಷಣಿಕ ಅರ್ಹತೆ: ಬಿಎಸ್ಸಿ ನರ್ಸಿಂಗ್, ಪೋಸ್ಟ್ ಬೇಸಿಕ್ ಬಿಎಸ್ಸಿ ನರ್ಸಿಂಗ್ ಅಥವಾ ಜನರಲ್ ನರ್ಸಿಂಗ್ ಮತ್ತು ಮಿಡ್‌ವೈಫರಿ (GNM) ಡಿಪ್ಲೊಮಾ ವಯೋಮಿತಿ: ಕನಿಷ್ಠ 18 ವರ್ಷ ಗರಿಷ್ಠ ವಯಸ್ಸು: 30 ವರ್ಷ ಆಯ್ಕೆ ಪ್ರಕ್ರಿಯೆ ನೇಮಕಾತಿ ಪರೀಕ್ಷೆ ಎರಡು ಹಂತಗಳಲ್ಲಿ ನಡೆಯಲಿದೆ. ಪ್ರಾಥಮಿಕ ಪರೀಕ್ಷೆ (Prelims) – ಏಪ್ರಿಲ್ 11 ಮತ್ತು ಮುಖ್ಯ ಪರೀಕ್ಷೆ (Mains) ಏಪ್ರಿಲ್ 30 ರಂದು ನಡೆಯಲಿದೆ. ಪರೀಕ್ಷಾ ಮಾದರಿ ಒಟ್ಟು ಪ್ರಶ್ನೆಗಳು: 100 ಬಹು ಆಯ್ಕೆ ಪ್ರಶ್ನೆಗಳುಒಟ್ಟು ಅಂಕಗಳು: 100ಪರೀಕ್ಷಾ ಅವಧಿ: 90 ನಿಮಿಷಗಳುನೆಗಟಿವ್ ಮಾರ್ಕಿಂಗ್: ಪ್ರತಿ ತಪ್ಪು ಉತ್ತರಕ್ಕೆ 1/3 ಅಂಕ ಕಡಿತ ಉದ್ಯೋಗ ಸ್ಥಳ ದೇಶಾದ್ಯಂತ ಇರುವ ವಿವಿಧ AIIMS ಆಸ್ಪತ್ರೆಗಳು, ಜೊತೆಗೆ ದೆಹಲಿ ಸಫ್ದರ್‌ಜಂಗ್ ಆಸ್ಪತ್ರೆ ಮತ್ತು ESIC ಆಸ್ಪತ್ರೆಗಳಲ್ಲಿ ನೇಮಕಾತಿ ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ ಹಾಗೂ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು aiimsexams.ac.in ವೆಬ್‌ಸೈಟ್‌ಗೆ ಭೇಟಿ ನೀಡಬಹುದು. ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ Post navigation ಅಭಿಮತ: RSSನ ಪರ ಮತ್ತು ವಿರೋಧಿಗಳು ನೋಡಲೇಬೇಕಾದ ಚಿತ್ರ ಶತಕ್ ಶೃಂಗೇರಿ ಶ್ರೀ ಶಾರದಾ ಪೀಠದಿಂದ ಮಕ್ಕಳಿಗೆ ಬೇಸಿಗೆ ಶಿಬಿರ: ಉಚಿತ ಪ್ರವೇಶ!