ಐಡಿಬಿಐ ಬ್ಯಾಂಕ್ (IDBI Bank) ನಲ್ಲಿ ಜೂನಿಯರ್ ಅಸಿಸ್ಟೆಂಟ್ ಮ್ಯಾನೇಜರ್ (Junior Assistant Manager) ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಅಭ್ಯರ್ಥಿಗಳು ಬ್ಯಾಂಕ್‌ನ ಅಧಿಕೃತ ವೆಬ್‌ಸೈಟ್ idbi.bank.in ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿ ಪ್ರಕ್ರಿಯೆ ಮೂಲಕ ಒಟ್ಟು 1100 ಹುದ್ದೆಗಳು ಭರ್ತಿ ಮಾಡಲಾಗುತ್ತದೆ. ಆನ್‌ಲೈನ್ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಮಾರ್ಚ್ 8, 2026ರಿಂದ ಪ್ರಾರಂಭಗೊಂಡಿದ್ದು, ಮಾರ್ಚ್ 19, 2026ರವರೆಗೆ ಮುಂದುವರಿಯಲಿದೆ. ಅರ್ಜಿದಾರರಿಗಾಗಿ ಆನ್‌ಲೈನ್ ಪರೀಕ್ಷೆಯನ್ನು ತಾತ್ಕಾಲಿಕವಾಗಿ 2026ರ ಏಪ್ರಿಲ್ 12, ನಡೆಸುವ ಸಾಧ್ಯತೆ ಇದೆ. ಪ್ರಮುಖ ದಿನಾಂಕಗಳು: ಅರ್ಜಿ ಸಲ್ಲಿಕೆ ಪ್ರಾರಂಭ: ಮಾರ್ಚ್ 8, 2026 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಮಾರ್ಚ್ 19, 2026 ಆನ್‌ಲೈನ್ ಪರೀಕ್ಷೆಯ ತಾತ್ಕಾಲಿಕ ದಿನಾಂಕ: ಏಪ್ರಿಲ್ 12, 2026 ಅರ್ಹತಾ ಮಾನದಂಡಗಳು ಶೈಕ್ಷಣಿಕ ಅರ್ಹತೆ: ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ಪದವಿಯಲ್ಲಿ ಕನಿಷ್ಠ 60% ಅಂಕಗಳನ್ನು ಪಡೆದಿರಬೇಕು (SC/ST/PwBD ಅಭ್ಯರ್ಥಿಗಳಿಗೆ ಕನಿಷ್ಠ 55% ಅಂಕಗಳು). ವಯೋಮಿತಿ: ಅಭ್ಯರ್ಥಿಗಳ ವಯಸ್ಸು 20 ರಿಂದ 25 ವರ್ಷಗಳ ಒಳಗಿರಬೇಕು. (ಅಭ್ಯರ್ಥಿಗಳು ಮಾರ್ಚ್ 2, 2001 ಕ್ಕಿಂತ ಮೊದಲು ಮತ್ತು ಮಾರ್ಚ್ 1, 2006 ಕ್ಕಿಂತ ನಂತರ ಜನಿಸಿರಬಾರದು). ಆಯ್ಕೆ ಪ್ರಕ್ರಿಯೆ ಅಭ್ಯರ್ಥಿಗಳನ್ನು ಈ ಕೆಳಗಿನ ಹಂತಗಳ ಮೂಲಕ ಆಯ್ಕೆ ಮಾಡಲಾಗುತ್ತದೆ: ಆನ್‌ಲೈನ್ ಪರೀಕ್ಷೆ (OT) ದಾಖಲೆಗಳ ಪರಿಶೀಲನೆ (DV) ವೈಯಕ್ತಿಕ ಸಂದರ್ಶನ (PI) ವೈದ್ಯಕೀಯ ತಪಾಸಣೆ (PRMT) ಇದನ್ನೂ ಓದಿ: ಭಾರತೀಯ ನೌಕಾಪಡೆಯಿಂದ ಅಗ್ನಿವೀರರ ನೇಮಕಾತಿ ಪ್ರಾರಂಭ ಅರ್ಜಿ ಶುಲ್ಕ SC/ST/PwBD ಅಭ್ಯರ್ಥಿಗಳಿಗೆ: 250 ರೂ. ಇತರೆ ಎಲ್ಲಾ ಅಭ್ಯರ್ಥಿಗಳಿಗೆ: 1,050 ರೂ. ಪಾವತಿ ವಿಧಾನ: ಡೆಬಿಟ್/ಕ್ರೆಡಿಟ್ ಕಾರ್ಡ್, ಇಂಟರ್ನೆಟ್ ಬ್ಯಾಂಕಿಂಗ್, ವಾಲೆಟ್ ಅಥವಾ UPI ಮೂಲಕ ಶುಲ್ಕ ಪಾವತಿಸಬಹುದು. ಹೆಚ್ಚಿನ ಮಾಹಿತಿಗಾಗಿ ಐಡಿಬಿಐ ಬ್ಯಾಂಕ್‌ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ. ನೋಟಿಫಿಕೇಷನ್ ಲಿಂಕ್ ಇಲ್ಲಿದೆ ಅರ್ಜಿ ಸಲ್ಲಿಸಲು ನೇರ ಲಿಂಕ್ ಇಲ್ಲಿದೆ ಮತ್ತುಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ Post navigation ಭಾರತೀಯ ನೌಕಾಪಡೆಯಿಂದ ಅಗ್ನಿವೀರರ ನೇಮಕಾತಿ ಪ್ರಾರಂಭ English Grammar ಪಾಠ 1: Language-ಭಾಷೆ