SSLC Exam 2026 12 tips to score good marksಸಾಂದರ್ಭಿಕ ಚಿತ್ರ

ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಗೆ (SSLC Board Exam) ಕೆಲವೇ ದಿನಗಳು ಬಾಕಿ ಇವೆ. ಮಾರ್ಚ್‌ 18 ರಿಂದ ಪರೀಕ್ಷೆಗಳು ಆರಂಭವಾಗುತ್ತವೆ. ಈಗಾಗಲೇ ವಿದ್ಯಾರ್ಥಿಗಳು ಪರೀಕ್ಷಾ ತಯಾರಿಯನ್ನು ನಡೆಸುತ್ತಿದ್ದಾರೆ. ಪರೀಕ್ಷೆ ಮುಗಿದು ಫಲಿತಾಂಶ ಪ್ರಕಟಗೊಂಡ ಮೇಲೆ ಫಲಿತಾಂಶ ಕಂಡು ಸಾಕಷ್ಟು ವಿದ್ಯಾರ್ಥಿಗಳು ಬೇಸರಗೊಳ್ಳುವುದುಂಟು.

ನಾನು ಪರೀಕ್ಷೆಯನ್ನು ಚೆನ್ನಾಗಿಯೇ ಬರೆದಿದ್ದೇನೆ, ಆದ್ರು ಅಂಕ ಕಡಿಮೆ ಕೊಟ್ಟಿದ್ದಾರೆ ಎಂದು ನೊಂದುಕೊಳ್ಳುತ್ತಾರೆ. ಮರುಮೌಲ್ಯಮಾಪನಕ್ಕೆ ಹಾಕಲು ಮುಂದಾಗುತ್ತಾರೆ. ಆದ್ರೆ, ಈ 12 ಸೂತ್ರಗಳನ್ನು ಪಾಲಿಸಿದರೆ, ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆಯುತ್ತೀರಿ. ಯಾವವು 12 ಸೂತ್ರಗಳು? ಇಲ್ಲಿವೆ

ಉತ್ತಮ ಅಂಕ್ಕೆ 12 ಟಿಪ್ಸ್‌

  1. ಪ್ರಶ್ನೆ ಪತ್ರಿಕೆ ಪ್ಯಾಟರ್ನ್ ಪ್ರಕಾರವಾಗಿ ಉತ್ತರವನ್ನು ಬಿಡಿಸಬೇಕು
  2. 2, 3 ಮತ್ತು 4  ಅಂಕಗಳ ಪ್ರಶ್ನೆಗಳನ್ನು ಮಾತ್ರ ಕೊನೆಗೆ ಬಿಡಿಸಬೇಕು. ಕೀ ಪಾಯಿಂಟ್ಸ್‌ಗಳಿಗೆ ಮಾರ್ಕ್ ಮಾಡುವುದನ್ನು ಮರೆಯಬಾರದು. ಇದರಿಂದ ಪತ್ರಿಕೆ ತಿದ್ದುವವರಿಗೆ ಉತ್ತರಗಳು ಕಾಂಫಿಡೆಂಟ್ ಆಗಿ ಇರುವವು ಎಂದು ಪರಿಗಣಿಸುತ್ತಾರೆ. ಮತ್ತು ಅವರಲ್ಲಿಯೂ ಸಹಿತ ನಿಮ್ಮ ಉತ್ತರ ಪತ್ರಿಕೆಯ ಮೇಲೆ ಕಾನ್ಫಿಡೆನ್ಸ್ ಮೂಡುತ್ತದೆ. ಅಂಕಗಳ ಪ್ರಶ್ನೆಗಳಿಗೆ ಉತ್ತರವನ್ನು ಬರೆಯುವ ಮೊದಲು 2 ಅಂಕಗಳ ಪ್ರಶ್ನೆಗಳು ಅಂತ ಬರೆದು, ಉತ್ತರಗಳನ್ನು ಬರೆಯಲು ಪ್ರಾರಂಭಿಸಿ. ಅದೇ ರೀತಿಯಾಗಿ 3 ಮತ್ತು 4 ಅಂಕಗಳಿಗೆ ಉತ್ತರವನ್ನು ಬರೆಯುವಾಗಲು ಸಹಿತ 3 ಅಂಕದ ಉತ್ತರಗಳು 4 ಅಂಕಗಳ ಪ್ರಶ್ನೆಗಳು ಅಂತ ಬರೆದು ಉತ್ತರಗಳನ್ನು ಬರೆಯಲು ಪ್ರಾರಂಭಿಸಬೇಕು. ಪೇಪರ್ ತಿದ್ದುವರಿಗೆ ಬಹಳಷ್ಟು ಸಹಕಾರ ಆಗುತ್ತದೆ.
  3. ಬರೆದ ಉತ್ತರ ಸರಿ ಇಲ್ಲವೆಂದು ಅದನ್ನು ರದ್ದುಪಡಿಸಿ ಬೇರೆ ಉತ್ತರ ಬರೆದರೆ ಅದು ಸರಿ ಇದ್ದರೂ ಅಂಕಗಳನ್ನು ಕೊಡುವುದಿಲ್ಲ.
  4. ಗೊತ್ತಿರದೆ ಉತ್ತರವನ್ನು ನೆನಪಿಸಿಕೊಳ್ಳುವವರಿಗೆ ಗ್ಯಾಪನ್ನು ಬಿಟ್ಟು ವೇಳೆಯನ್ನು ಹಾಳು  ಮಾಡ್ದೆ ಮುಂದಿನ ಉತ್ತರವನ್ನು ಬರೆಯಲು ಪ್ರಯತ್ನಿಸಿ.
  5. ಮೊದಲನೇ ಸುತ್ತಿನಲ್ಲಿ ಸರಿಯಾದ ಉತ್ತರ ಗೊತ್ತು ಇರುವ ಪ್ರಶ್ನೆಗಳನ್ನು ಮೊದಲು ಬರೆಯಿರಿ. ನಂತರ ಉಳಿದ ಪ್ರಶ್ನೆಗಳನ್ನು ಬಿಡಿಸುತ್ತಾ ಹೋಗಿ. ಏಕೆಂದರೆ ಪೇಪರನ್ನು ತಿದ್ದುವವರಿಗೆ ಪಾಸಿಟಿವ್ ಮೂಡ್‌ನಲ್ಲಿ ಅವರ ಮೈಂಡ್ ಸೆಟ್ ಮಾಡಬೇಕು. ಪ್ರಾರಂಭದಲ್ಲಿ ಉತ್ತರಗಳು ಗೊತ್ತಿದ್ದರೂ ವಿಫಲ ಪ್ರಯತ್ನವಾದರೆ ನಿಮ್ಮ ಮೇಲೆ ನೆಗೆಟಿವ್ ಮೈಂಡ್ ಸೆಟ್ ಆಗುವುದು ತಿಳಿಯಿರಿ.
  6. ಗ್ರಾಮರ್ ಪ್ರಶ್ನೆಗಳನ್ನು ಬರೆಯುವಾಗ ಬದಲಾದ ಶಬ್ದಗಳಿಗೆ ಮಾರ್ಕ್ ಮಾಡಬೇಕು.
  7. ಪ್ಯಾಸೆಜ್‌ /ಪೊಯಟ್ರಿ ಪ್ರಶ್ನೆಗಳಿಗೆ ಉತ್ತರ ಬರೆಯುವಾಗ ಅಲ್ಲಿ ಪ್ರಶ್ನೆಗಳು a, b, c, d ಇದ್ದರೇ ಅದನ್ನೇ ಬರೆದು ಉತ್ತರಿಸಬೇಕು. ಅದು ಬಿಟ್ಟು ನಿಮ್ಮದೇ ಆದ ನಂಬರನ್ನು ಅಂದರೆ 1, 2, 3, 4 ಅಂತ ಬರಿಯಬಾರದು.
  8. ಪ್ರತಿ MCQ ಪ್ರಶ್ನೆಗಳಿಗೆ ಉತ್ತರವನ್ನು ಬರೆಯುವಾಗ  2 line gap ಬಿಟ್ಟು ಬರೆಯಬೇಕು
  9. ಸ್ಪೆಲ್ಲಿಂಗ್ ಮಿಸ್ಟೇಕ್ ಮಾಡದೆ ಬರಿಯಬೇಕು. Scratches ಒಂದೂ ಕಂಡುಬರಬಾರದು.
  10. ಇತರೆ ಉತ್ತರಗಳನ್ನು ಬರದರೆ ಎಕ್ಸ್ಟ್ರಾ ಅಂತ ಶಬ್ದವನ್ನು ಬರೆದು ಉತ್ತರ ಬರೆಯಬೇಕು.
  11. OR ಪ್ರಶ್ನೆಗಳನ್ನು ಉತ್ತರಿಸುವಾಗ ಒಂದರ ಕೆಳಗೊಂದು ಉತ್ತರಿಸಿ. ಬಿಟ್ಟ ಸ್ಥಳಗಳನ್ನು ತುಂಬುವಾಗ ಮತ್ತು ಡೈಲಾಗ್ ರೈಟಿಂಗ್ ಬರೆಯುವಾಗ underline ಮಾಡೋದನ್ನ ಮರೆಯಬಾರದು.
  12. ಅಕ್ಷರಗಳು ಸಿಂಪಲ್ ಮತ್ತು ಕ್ಲಿಯರ್ ಆಗಿರಬೇಕು. ಇದು ಪೇಪರ್ ತಿದ್ದುವವರಿಗೆ ಬಹಳಷ್ಟು ಇಷ್ಟ.

ಇದನ್ನೂ ಓದಿ: AIIMS 2551 ನರ್ಸಿಂಗ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ಪರೀಕ್ಷೆಯಲ್ಲಿ ಪಾಸ್ ಆಗುವವರು ಸೆಕೆಂಡ್ ಕ್ಲಾಸ್ ಆಗಬೇಕು. ಸೆಕೆಂಡ್ ಕ್ಲಾಸ್ ಆಗುವವರು ಫಸ್ಟ್ ಕ್ಲಾಸ್ ಆಗಬೇಕು. ಪರೀಕ್ಷೆಯಲ್ಲಿ ಫಸ್ಟ್ ಕ್ಲಾಸ್ ಈಗಾಗಲೇ ಇದ್ದವರು ರ್ಯಾಂಕಿಂಗ್ ಮಾರ್ಕ್ಸ್ 625 ಕ್ಕೆ 625 ಆಗಬೇಕು ಎಂಬುದೇ ನನ್ನ ಆಸೆ. ಆ ಆಸೆಯನ್ನು ಪೂರೈಸುವ ಪ್ರಯತ್ನ ನೀವು ಮಾಡುವಿರೆಂದು ಆಶಿಸುವೆ. ಎಲ್ಲರೂ ಪರೀಕ್ಷೆಯಲ್ಲಿ ಒಳ್ಳೆಯ ಅಂಕಗಳನ್ನು ಪಡೆದು ಎಲ್ಲರೂ ಉತ್ತೀರ್ಣರಾಗಿರಿ ಎಂದು ಹಾರೈಸುವೆನು. ಪರೀಕ್ಷೆಯಲ್ಲಿ ಫೇಲ್ ಆಗುವ ವಿದ್ಯಾರ್ಥಿಗಳು ಪಾಸಾದರೆ ಅದಕ್ಕಿಂತ ದೊಡ್ಡ ಸಂತೋಷ ಬೇರೊಂದು ಇಲ್ಲ ನಮಗೆ.

ಲೇಖಕರು: ಕೇಶವ ಬಿ ಕೆ

ಇಂಗ್ಲಿಷ್‌ ಉಪನ್ಯಾಸಕರು, ಯುಆರ್‌ಕೆ ಪದವಿ ಪೂರ್ವ ಕಾಲೇಜು

Leave a Reply

Your email address will not be published. Required fields are marked *