ICC Men’s T20 World Cup: India vs England Semifinal – Date, Time and Pitch Reportಭಾರತ vs ಇಂಗ್ಲೆಂಡ್‌ ಸೆಮಿಫೈನಲ್‌

ಟಿ20 ವಿಶ್ವಕಪ್‌ನ (T20 World Cup) 2ನೇ ಸೆಮಿಫೈನಲ್‌ (Semifinal) ಪಂದ್ಯ ಭಾರತ ಮತ್ತು ಇಂಗ್ಲೆಂಡ್‌ (India vs England) ಮಧ್ಯೆ ಮುಂಬೈನ ವಾಂಖಡೆ ಕ್ರೀಡಾಂಗಣದಲ್ಲಿ ಮಾರ್ಚ್ 5ರಂದು ನಡೆಯಲಿದೆ. ಈ ಸೆಮಿಫೈನಲ್ ಪಂದ್ಯ ಹೈ ವೋಲ್ಟೇಜ್‌ನಿಂದ ಕೂಡಿದೆ. ಸೂರ್ಯಕುಮಾರ್ ಯಾದವ್ ನಾಯಕತ್ವದ ಭಾರತ ತಂಡ ಉತ್ತಮ ಫಾರ್ಮ್‌ನಲ್ಲಿ ಇದ್ದು, ವೆಸ್ಟ್ ಇಂಡೀಸ್ ವಿರುದ್ಧದ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿದೆ.

ಸಂಜು ಸ್ಯಾಮ್ಸನ್ ಮತ್ತು ತಿಲಕ್ ವರ್ಮಾ ಸೇರಿದಂತೆ ಬ್ಯಾಟಿಂಗ್ ವಿಭಾಗ ಉತ್ತಮ ಪ್ರದರ್ಶನ ತೋರಿದ್ದು, ಇಂಗ್ಲೆಂಡ್‌ನ ಬೌಲರ್‌ಗಳನ್ನು ದೂಳಿಪಟ ಮಾಡಲಿದ್ದಾರೆ. ಇನ್ನು, ಇಂಗ್ಲೆಂಡ್‌ನ ಬೌಲರ್‌ಗಳೇನು ಕಡಿಮೆ ಇಲ್ಲ, ಬಲಗೈ ವೇಗಿ ಜೋಫ್ರಾ ಆರ್ಚರ್ ಹಾಗೂ ಸ್ಪಿನ್ನರ್‌ಗಳಾದ ಅದಿಲ್ ರಶೀದ್ ಮತ್ತು ಲಿಯಂ ಡಾಸನ್ ಭಾರತೀಯ ಬ್ಯಾಟರ್‌ಗಳನ್ನು ಕಾಡಲು ಸಿದ್ಧರಾಗಿದ್ದಾರೆ.

ಇಂಗ್ಲೆಂಡ್ ಕೂಡ ಸೂಪರ್ 8 ಹಂತದ ಎಲ್ಲಾ ಮೂರು ಪಂದ್ಯಗಳನ್ನು ಗೆದ್ದು ಭರ್ಜರಿ ಫಾರ್ಮ್‌ನಲ್ಲಿ ಇದೆ. ಹ್ಯಾರಿ ಬ್ರೂಕ್ ನೇತೃತ್ವದ ಬ್ಯಾಟಿಂಗ್ ಲೈನ್‌ಅಪ್ ಸ್ಟ್ರಾಂಗ್‌ ಆಗಿದೆ. ಬ್ರೂಕ್ ಮತ್ತು ವಿಲ್ ಜ್ಯಾಕ್ಸ್ ಪಂದ್ಯದ ಗತಿಯನ್ನು ಬದಲಾಯಿಸುವ ಸಾಮರ್ಥ್ಯ ಹೊಂದಿದ್ದು, ರನ್‌ಗಳನ್ನು ಮಳೆ ಸುರಿಸಿ ತಂಡಕ್ಕೆ ಬಲ ತುಂಬಲಿದ್ದಾರೆ.
ಭಾರತದ ಪ್ರಮುಖ ಬಲವೆಂದರೆ ತವರು ಮೈದಾನ. ಪ್ರೇಕ್ಷಕರ ಚಿಯರಪ್‌ ಮತ್ತು ಹವಾಮಾನ ಪರಿಚಯ ತಂಡಕ್ಕೆ ಆತ್ಮವಿಶ್ವಾಸ ನೀಡುತ್ತದೆ. ಬ್ಯಾಟಿಂಗ್‌ನಲ್ಲಿ ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್ ಮತ್ತು ಹಾರ್ದಿಕ್ ಪಾಂಡ್ಯ ಪಂದ್ಯದ ಗತಿಯನ್ನು ಬದಲಿಸುವ ಸಾಮರ್ಥ್ಯ ಹೊಂದಿದ್ದಾರೆ.

ಬೌಲಿಂಗ್‌ ವಿಭಾಗದಲ್ಲಿ ಜಸ್ಪ್ರೀತ್ ಬುಮ್ರಾ ಮತ್ತು ಅರ್ಷದೀಪ್ ಸಿಂಗ್ ಅವರ ಬೌಲಿಂಗ್ ದಾಳಿ, ಜೊತೆಗೆ ವರುಣ್ ಚಕ್ರವರ್ತಿ ಸ್ಪಿನ್ ಬೌಲರ್‌ಗಳನ್ನು ಕಾಡಲಿದೆ. ಆದರೆ, ಅಭಿಷೇಕ್ ಶರ್ಮಾ ಸ್ಪಿನ್‌ಗಳ ವಿರುದ್ಧ ತಿಣಕಾಡುತ್ತಿರುವುದು, ಎದುರಾಳಿಗಳಿಗೆ ಪ್ಲಸ್‌ ಆಗುವ ಸಾಧ್ಯತೆ ಇದೆ.

ಅಭಿಷೇಕ್ ಶರ್ಮಾ ಈ ವಿಶ್ವಕಪ್‌ನಲ್ಲಿ ಒಂದು ಅರ್ಧಶತಕ ಬಾರಿಸಿದ್ದು ಬಿಟ್ಟರೆ ಹೇಳಿಕೊಳ್ಳುವಷ್ಟು ಒಳ್ಳೆ ಆಟ ಆಡಿಲ್ಲ. ಜೊತೆಗೆ ವರುಣ್ ಹಾಗೂ ಹಾರ್ದಿಕ್ ಪಾಂಡ್ಯರ ಅಸ್ಥಿರ ಬೌಲಿಂಗ್ ಕೂಡ ಒತ್ತಡದ ಪಂದ್ಯದಲ್ಲಿ ಸವಾಲಾಗಬಹುದು.

ಇಂಗ್ಲೆಂಡ್ ತಂಡ ಐಸಿಸಿ ನಾಕೌಟ್ ಪಂದ್ಯಗಳಲ್ಲಿ ಅಪಾಯಕಾರಿಯಾಗಿ ಆಟವಾಡಿದೆ. ಹ್ಯಾರಿ ಬ್ರೂಕ್ ಮತ್ತು ಸ್ಯಾಮ್ ಕರನ್ ಮೊದಲಾದ ಆಟಗಾರರು ಕಠಿಣ ಸಂದರ್ಭಗಳಲ್ಲಿ ಉತ್ತಮ ಆಟವಾಡಿ ತಂಡಕ್ಕೆ ಗೆಲುವು ದಕ್ಕಿಸಿಕೊಟ್ಟಿದ್ದಾರೆ.

ಇದನ್ನೂ ಓದಿ: RCB ಅಭಿಮಾನಿಗಳಿಗೆ ಸಿಹಿ ಸುದ್ದಿ: ತವರಿನಲ್ಲಿ ಆಡಲಿದ್ದಾರೆ ನಮ್ಮ ಹರಿಣಗಳು

ಅದಿಲ್ ರಶೀದ್ ಮತ್ತು ಲಿಯಂ ಡಾಸನ್ ಸ್ಪಿನ್ ವಿಭಾಗದಲ್ಲಿ ಪರಿಣಾಮಕಾರಿ ಪ್ರದರ್ಶನ ನೀಡಿದ್ದಾರೆ. ಆದಾಗ್ಯು, ಜೋಸ್ ಬಟ್ಲರ್ ಅವರ ಫಾರ್ಮ್ ಚಿಂತೆಗೀಡಾಗಿದೆ. ಅವರು ಬೇಗ ಔಟ್ ಆದರೆ ಮಧ್ಯಮ ಕ್ರಮಾಂಕದ ಮೇಲೆ ಒತ್ತಡ ಹೆಚ್ಚಬಹುದು. ಜೊತೆಗೆ ಪವರ್‌ಪ್ಲೇ ಮತ್ತು ಡೆತ್ ಓವರ್‌ಗಳಲ್ಲಿ ಇಂಗ್ಲೆಂಡ್ ಬೌಲಿಂಗ್‌ಗೆ ಸ್ಥಿರತೆ ಕೊರತೆ ಇದೆ ಎಂಬ ಮಾತು ಕೇಳಿಬರುತ್ತಿದೆ.

ಭಾರತ ಮತ್ತು ಇಂಗ್ಲೆಂಡ್ ತಂಡಗಳು ಸತತ ಮೂರನೇ ಭಾರಿ ಸೆಮೀಫೈನಲ್ ಹಂತದಲ್ಲಿ ಮುಖಾಮುಖಿಯಾಗುತ್ತಿರುವುದು. ವಿಶೇಷವಾಗಿ ಇವರ ನಡುವೆ ನಡೆದ ನಾಕೌಟ್ ಪಂದ್ಯಗಳು ಕ್ರಿಕೆಟ್ ಪ್ರೇಮಿಗಳಿಗೆ ಮರೆಯಲಾಗದ ಕ್ಷಣಗಳೆಂದರೆ ತಪ್ಪಾಗಲಾರದು.

ಪಿಚ್ ವರದಿ

ವಾಂಖೆಡೆ ಮೈದಾನ ಪಿಚ್ ಸಾಮಾನ್ಯವಾಗಿ ಬ್ಯಾಟಿಂಗ್‌ಗೆ ಸಹಾಯಕವಾಗಿದ್ದರೂ, ಆರಂಭಿಕ ಓವರ್‌ಗಳಲ್ಲಿ ವೇಗದ ಬೌಲರ್‌ಗಳಿಗೆ ಸಹಾಯಕವಾಗಲಿದೆ. ಪಿಚ್ ಮೇಲೆ ಸ್ವಲ್ಪ ಹಸಿರು ಹುಲ್ಲು ಕಾಣಿಸಿಕೊಳ್ಳುವುದರಿಂದ ಮೊದಲ ಕೆಲವು ಓವರ್‌ಗಳಲ್ಲಿ ಸೀಮ್ ಮೂವ್ಮೆಂಟ್ ಮತ್ತು ಉತ್ತಮ ಬೌನ್ಸ್ ಸಿಗುವ ಸಾಧ್ಯತೆ ಇದೆ. ಆದರಿಂದ ಪವರ್‌ಪ್ಲೇ ಹಂತದಲ್ಲಿ ವಿಕೆಟ್‌ಗಳು ಬೀಳುವ ಸಾಧ್ಯತೆ ಹೆಚ್ಚು.

ಪಂದ್ಯ ಮುಂದುವರಿದಂತೆ ಪಿಚ್ ಸಮತೋಲನವಾಗುತ್ತದೆ. ಆಗ, ಬ್ಯಾಟರ್‌ಗಳಿಗೆ ಅನುಕೂಲವಾಗಲಿದೆ. ವಾಂಖೆಡೆ ಮೈದಾನದಲ್ಲಿ ಸ್ಕ್ವೇರ್ ಬೌಂಡರಿಗಳು ಸ್ವಲ್ಪ ಚಿಕ್ಕದಾಗಿರುವುದರಿಂದ ಸಿಕ್ಸರ್‌ಗಳು ಮತ್ತು ಬೌಂಡರಿಗಳ ಮಳೆ ಸುರಿಯುವ ಸಾಧ್ಯತೆ ಇದೆ. ಇದರಿಂದ 170–190 ರನ್‌ ಟಾರ್ಗೆಟ್‌ ನೀಡುವ ಸಾಧ್ಯತೆ ಇದೆ.

ಭಾರತ ಪ್ಲೇಯಿಂಗ್ (XI ಸಂಭಾವ್ಯ ಪಟ್ಟಿ): ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್, ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್ (ನಾಯಕ), ತಿಲಕ್ ವರ್ಮಾ, ಶಿವಮ್ ದುಬೆ, ಹಾರ್ದಿಕ್ ಪಾಂಡ್ಯ, ರಿಂಕು ಸಿಂಗ್, ಅಕ್ಷರ್ ಪಟೇಲ್, ಅರ್ಷದೀಪ್ ಸಿಂಗ್ ಮತ್ತು ಜಸ್ಪ್ರೀತ್ ಬುಮ್ರಾ ಆಡಬಹುದೆಂಬ ನಿರೀಕ್ಷೆ ಇದೆ.

ಇಂಗ್ಲೆಂಡ್ ಪ್ಲೇಯಿಂಗ್ (XI ಸಂಭಾವ್ಯ ಪಟ್ಟಿ): ಫಿಲ್ ಸಾಲ್ಟ್, ಜೋಸ್ ಬಟ್ಲರ್ (ವಿಕೆಟ್ ಕೀಪರ್), ಜೇಕಬ್ ಬೆಥೆಲ್, ಟಾಮ್ ಬ್ಯಾನ್ಟನ್, ಹ್ಯಾರಿ ಬ್ರೂಕ್ (ನಾಯಕ), ಸ್ಯಾಮ್ ಕರನ್, ವಿಲ್ ಜ್ಯಾಕ್ಸ್, ಲಿಯಂ ಡಾಸನ್, ಜೇಮಿ ಓವರ್ಟನ್, ಜೋಫ್ರಾ ಆರ್ಚರ್ ಮತ್ತು ಅದಿಲ್ ರಶೀದ್ ಆಡಬಹುದು.

ಒಟ್ಟಾರೆಯಾಗಿ, ಪಂದ್ಯವು ಪವರ್‌ಪ್ಲೇ ಪ್ರಭಾವದ ಸುತ್ತ ಸುತ್ತಬಹುದು, ಮಿಡ್ಲ್ ಓವರ್‌ಗಳಲ್ಲಿ ಇಂಗ್ಲೆಂಡ್ ಭಾರತದ ಸ್ಪಿನ್‌ ಅನ್ನು ಹೇಗೆ ನಿಭಾಯಿಸುತ್ತದೆ ಮತ್ತು ಕೊನೆಯ ಐದು ಓವರ್‌ಗಳಲ್ಲಿ ಯಾವ ತಂಡ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ಸೆಮಿಫೈನಲ್‌ನಲ್ಲಿ, ಸಣ್ಣ ಕ್ಷಣಗಳು ದೊಡ್ಡ ಫಲಿತಾಂಶಗಳನ್ನು ನಿರ್ಧರಿಸುತ್ತವೆ.

ಮತ್ತುಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *