Royal Challengers Bengaluru to play home games at M. Chinnaswamy Stadiumಆರ್‌ಸಿಬಿ

ಐಪಿಎಲ್ 2026ರ ಆವೃತ್ತಿ ಇನ್ನೇನು ಆರಂಭವಾಗಲಿದ್ದು ಆರ್‌ಸಿಬಿ ಬೆಂಗಳೂರಿನಲ್ಲಿ ಆಟವಾಡುತ್ತಾ ಅಥವಾ ಇಲ್ಲವಾ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿತ್ತು. ಈ ಪ್ರಶ್ನೆಗೆ ಉತ್ತರ ಸಿಕ್ಕಿದ್ದು, 2026 ಐಪಿಎಲ್‌ನಲ್ಲೂ (IPL 2026) ಆರ್‌ಸಿಬಿ (Royal Challengers Bengaluru) ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ (M. Chinnaswamy Stadium) ಆಡಲಿದೆ ಎಂಬ ಮಾಹಿತಿ ಆರ್‌ಸಿಬಿ ಮಾನೆಜ್ಮೆಂಟ್‌ನಿಂದ ದೊರೆತಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕೇವಲ ಐದು ಪಂದ್ಯಗಳನ್ನು ಮಾತ್ರ ಆಡಲಿದ್ದು, ಇನ್ನುಳಿದ ಎರಡು ಪಂದ್ಯಗಳನ್ನು ಛತ್ತೀಸ್‌ಗಢದ ರಾಯಪುರದಲ್ಲಿ ಆಡಲಿದೆ. ನಡೆಯಲಿವೆ. ಆದರೆ, ಆ ಎರಡು ಪಂದ್ಯಗಳ ವೇಳಾಪಟ್ಟಿ ಇನ್ನೂ ಅಂತಿಮಗೊಂಡಿಲ್ಲ. ಅಸ್ಸಾಂ, ಪಶ್ಚಿಮ ಬಂಗಾಳ ಮತ್ತು ತಮಿಳುನಾಡು ವಿಧಾನಸಭಾ ಚುನಾವಣೆಯ ಕಾರಣದಿಂದ ಐಪಿಎಲ್ ವೇಳಾಪಟ್ಟಿ ಪ್ರಕಟಣೆ ವಿಳಂಬವಾಗಿದೆ. ಆದರೂ, ಐಪಿಎಲ್ 2026 ಮಾರ್ಚ್ 29 ಅಥವಾ ಮಾರ್ಚ್ 28ರಂದು ಆರಂಭವಾಗುವ ಸಾಧ್ಯತೆ ಇದೆ.

ಫೈನಲ್‌ ಪಂದ್ಯ ಚಿನ್ನಸ್ವಾಮಿಯಲ್ಲಿ?

ಬಲ್ಲ ಮೂಲಗಳ ಪ್ರಕಾರ, ಪ್ಲೇಆಫ್ ಅಥವಾ ಫೈನಲ್ ಪಂದ್ಯಗಳು ಸೇರಿ ಆರ್‌ಸಿಬಿಯ ಐದು ಪಂದ್ಯಗಳು ಸೇರಿದಂತೆ ಒಟ್ಟು 6-7 ಪಂದ್ಯಗಳು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿವೆ. ಇದರಲ್ಲಿ ಸೀಸನ್ ಓಪನಿಂಗ್‌ ಪಂದ್ಯ ಹಾಲಿ ಚಾಂಪಿಯನ್ ಆರ್‌ಸಿಬಿ ಮತ್ತು ಕಳೆದ ಸೀಸನ್ ರನ್ನರ್‌ಅಪ್ ಪಂಜಾಬ್‌ ಕಿಂಗ್ಸ್‌ ಮಧ್ಯೆ ನಡೆಯುವ ಸಾಧ್ಯತೆ ಇದೆ.

IPL ಪಂದ್ಯಗಳಿಗೆ ಚಿನ್ನಸ್ವಾಮಿ ಸ್ಟೇಡಿಯಂ ಗ್ರೀನ್ ಸಿಗ್ನಲ್

ಐಪಿಎಲ್ 2025 ಟ್ರೋಫಿ ಗೆದ್ದ ಸಂಭ್ರಮಾಚರಣೆ ಸಂದರ್ಭದಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಕಾಲ್ತುಳಿತ (stampede) ಸಂಭವಿಸಿ 11 ಜನರು ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯಗಳು ನಡೆಯದಂತೆ ನಿರ್ಬಂಧ ಹೇರಲಾಗಿತ್ತು. 18 ವರ್ಷಗಳ ವನವಾಸದ ನಂತರ ಟ್ರೋಫಿ ಗೆದ್ದ ಖುಷಿಯಲ್ಲಿದ್ದ ಆರ್‌ಸಿಬಿಗೆ ಕಾಲ್ತುಳಿತ ಕಪ್ಪುಚುಕ್ಕೆಯಾಯಿತು. ಈ ಘಟನೆಯ ನಂತರ ಚಿನ್ನಸ್ವಾಮಿಯಲ್ಲಿ ಯಾವುದೇ ಪಂದ್ಯ ನಡೆದಿರಲಿಲ್ಲ.

ಈಗ ಐಪಿಎಲ್ 2026ರ ಉದ್ಘಾಟನಾ ಪಂದ್ಯದ ಜೊತೆಗೆ ಉದ್ಘಾಟನಾ ಸಮಾರಂಭವೂ ಇದೇ ಮೈದಾನದಲ್ಲಿ ನಡೆಯಲಿದೆ. ಕಳೆದ ಸೀಸನ್ ನಂತರ ಯಾವುದೇ ಪಂದ್ಯ ನಡೆದಿಲ್ಲ. ಇನ್ನು, ಆರ್‌ಸಿಬಿಯು ತವರಿಗೆ ಮರಳುತ್ತಿರುವುದು ಅಭಿಮಾನಿಗಳಲ್ಲಿ ಭಾರೀ ಉತ್ಸಾಹ ಮೂಡಿಸಿದೆ.

ಚಿನ್ನಸ್ವಾಮಿ ಸ್ಟೇಡಿಯಂ ಕ್ಲಿಯರೆನ್ಸ್ ಕಥೆ

ಚಿನ್ನಾಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯ ನಡೆಯುವ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಅನುಮತಿ ದೊರೆತಿದೆ. ರಣಜಿ ಟ್ರೋಫಿ ಫೈನಲ್ ಪಂದ್ಯವನ್ನು ಇದೇ ಮೈದಾನದಲ್ಲಿ ನಡೆಸಲು ಉದ್ದೇಶಿಸಲಾಗಿತ್ತು. ಆದರೆ ಸುರಕ್ಷತಾ ಕಾರಣಗಳಿಂದಾಗಿ ಆ ಪಂದ್ಯವನ್ನು ಹುಬ್ಬಳ್ಳಿಗೆ ಸ್ಥಳಾಂತರಿಸಲಾಯಿತು.

ಮತ್ತುಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *