T20 World Cup 2026 New Zealand Defeat South Africa Entered Into Finalಫೈನಲ್‌ಗೆ ನ್ಯೂಜಿಲೆಂಡ್

T20 World Cup ನ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ (New Zealand) ತಂಡವು ಭರ್ಜರಿ ಪ್ರದರ್ಶನ ನೀಡಿ ದಕ್ಷಿಣ ಆಫ್ರಿಕಾ (South Africa) ತಂಡವನ್ನು ಸೋಲಿಸಿ ಫೈನಲ್‌ಗೆ ಪ್ರವೇಶಿಸಿದೆ. ಈ ಪಂದ್ಯವು ಕೋಲ್ಕತ್ತಾದ ಐತಿಹಾಸಿಕ ಈಡನ್‌ ಗಾರ್ಡನ್‌ ಮೈದಾನದಲ್ಲಿ ಬುಧವಾರ ನಡೆಯಿತು.

ಈ T20 World Cup ಟೂರ್ನಿಯಲ್ಲಿ ಸೋಲಿಲ್ಲದ ಸರದಾರನಂತೆ ಸೆಮಿಫೈನಲ್‌ಗೆ ಬಂದಿದ್ದ ದಕ್ಷಿಣ ಆಫ್ರಿಕಾ ನಿರ್ಣಾಯಕ ಪಂದ್ಯದಲ್ಲಿ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲವಾಯಿತು. ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ 20 ಓವರ್‌ಗಳಲ್ಲಿ 169/8 ರನ್‌ಗಳನ್ನು ಗಳಿಸಿತು. ಆರಂಭದಲ್ಲಿ ಸಮರ್ಪಕ ಆರಂಭ ಸಿಕ್ಕಿದ್ದರೂ, 7ನೇ ಓವರ್‌ನಿಂದ 15ನೇ ಓವರ್‌ವರೆಗೆ ರನ್ ರೇಟ್ ಕುಸಿತ ಕಂಡಿತು. ಬೌಂಡರಿಗಳು ಬರಲಿಲ್ಲ, ಸ್ಟ್ರೈಕ್ ರೋಟೇಶನ್ ನಿಧಾನವಾಯಿತು.

ಪರಿಣಾಮವಾಗಿ ನಿರೀಕ್ಷಿಸಿದ್ದ 185ಕ್ಕಿಂತ ಹೆಚ್ಚಿನ ಸ್ಕೋರ್ ಸಾಧ್ಯವಾಗಲಿಲ್ಲ. ಮಿಡ್ಲ್ ಓವರ್‌ಗಳು ಹಾಗೂ ಡೆತ್ ಓವರ್‌ಗಳಲ್ಲಿ ಹೆಚ್ಚಿನ ರನ್‌ ತೆಗೆಯುವಲ್ಲಿ ಸೌತ್‌ ಆಫ್ರಿಕಾ ವಿಫಲವಾಯಿತು. ಸೆಟ್ ಆಗಿದ್ದ ಬ್ಯಾಟ್ಸ್‌ಮನ್‌ಗಳು ದೊಡ್ಡ ಇನಿಂಗ್ಸ್ ಕಟ್ಟಲು ವಿಫಲರಾದರು. ಒಟ್ಟಾರೆ, 169 ರನ್‌ಗಳಿಗೆ ದಕ್ಷಿಣ ಆಫ್ರಿಕಾವನ್ನು ಕಟ್ಟಿಹಾಕಲು ನ್ಯೂಜಿಲೆಂಡ್ ಬೌಲರ್‌ಗಳು ಕಟ್ಟಿಹಾಕಿದರು.

ಇತ್ತ ಚೇಸ್ ಮಾಡುತ್ತಿದ್ದ ನ್ಯೂಜಿಲೆಂಡ್ ಆರಂಭದಿಂದಲೇ ಆಕ್ರಮಣಕಾರಿ ಆಟ ತೋರಿತು. ಪವರ್‌ಪ್ಲೇಯಲ್ಲೇ ಬಲವಾದ ಅಡಿಪಾಯ ಹಾಕಿತು. ಫಿನ್ ಅಲೆನ್ 33 ಎಸೆತಗಳಲ್ಲಿ ಸಿಡಿಲಿನ ಶತಕದೊಂದಿಗೆ ಪಂದ್ಯವನ್ನು ಸಂಪೂರ್ಣವಾಗಿ ನ್ಯೂಜಿಲೆಂಡ್ ಕಡೆ ವಾಲುವಂತೆ ಮಾಡಿದರು. ಪವರ್‌ಪ್ಲೇಯಲ್ಲೇ ಭರ್ಜರಿ ಬ್ಯಾಟಿಂಗ್‌ ಮಾಡಿದ ಕಿವೀಸ್ ತಂಡ ದಕ್ಷಿಣ ಆಫ್ರಿಕಾ ಬೌಲರ್‌ಗಳಿಗೆ ಅವಕಾಶವೇ ನೀಡಲಿಲ್ಲ.

ಇದನ್ನೂ ಓದಿ: T20 World Cup ಭಾರತ vs ಇಂಗ್ಲೆಂಡ್‌ ಸೆಮಿಸ್‌: ಸಮಯ, ದಿನಾಂಕ, ಪಿಚ್‌ ವರದಿ ಇಲ್ಲಿದೆ

ಕೇವಲ ಒಂದು ವಿಕೆಟ್ ಕಳೆದುಕೊಂಡ ಕಿವೀಸ್ ತಂಡ, ಇನ್ನೂ ಏಳಕ್ಕಿಂತ ಹೆಚ್ಚು ಓವರ್‌ಗಳು ಬಾಕಿ ಇರುವಾಗಲೇ ಪಂದ್ಯವನ್ನು ತಮ್ಮದಾಗಿಸಿಕೊಂಡಿತು. ಸಮಾಧಾನಕರ ಹಾಗೂ ವಿಶ್ವಾಸಭರಿತ ಆಟದ ಮೂಲಕ ಗುರಿಯನ್ನು ಸುಲಭವಾಗಿ ತಲುಪಿ, ಫೈನಲ್ ಪ್ರವೇಶಿಸಿದೆ.

ಇನ್ನು ಎರಡನೇ ಸೆಮಿಫೈನಲ್‌ನಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯಲಿದೆ. ಈ ಪಂದ್ಯದಲ್ಲಿ ಜಯಿಸುವ ತಂಡವನ್ನು ನ್ಯೂಜಿಲೆಂಡ್ ಎದುರಿಸಲಿದೆ. ನ್ಯೂಜಿಲೆಂಡ್ ಮಾರ್ಚ್ 8 ರಂದು ಅಹಮದಾಬಾದ್‌ನ ನರೇದ್ರ ಮೋದಿ ಕ್ರಿಕೆಟ್ ಮೈದಾನದಲ್ಲಿ ಫೈನಲ್ ಪಂದ್ಯ ನಡೆಯಲಿದೆ.

ಮತ್ತುಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *