ICC T20 World Cup 2026ರ ಮೊದಲ ಸೆಮಿಫೈನಲ್ ಪಂದ್ಯದಲ್ಲಿ (2026 T20 World Cup Semi-Final) ಸೌತ್ ಆಫ್ರಿಕಾ ಮತ್ತು ನ್ಯೂಜಿಲೆಂಡ್ ಮುಖಾಮುಖಿಯಾಗಲಿವೆ. ಈ ಮಹತ್ವದ ಪಂದ್ಯವು ಬುಧವಾರ (ಮಾ.3) ಸಂಜೆ 7 ಗಂಟೆಗೆ ಕೊಲ್ಕತ್ತಾದ ಇಡನ್ ಗಾರ್ಡನ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಇದುವರೆಗೆ ಆಡಿದ ಎಲ್ಲಾ ಪಂದ್ಯಗಳಲ್ಲೂ ದಕ್ಷಿಣ ಆಫ್ರಿಕಾ ತಂಡ ಜಯಗಳಿಸಿದ್ದು, ಗುಂಪು ಹಂತದಲ್ಲೇ ನ್ಯೂಜಿಲ್ಯಾಂಡ್ ವಿರುದ್ಧವೂ ಗೆಲುವು ಸಾಧಿಸಿದೆ. ನ್ಯೂಜಿಲೆಂಡ್ ತಂಡದ ಆಟಗಾರರು ಬ್ಯಾಟಿಂಗ್, ಬೌಲಿಂಗ್ ಹಾಗೂ ಫೀಲ್ಡಿಂಗ್ ಎಲ್ಲಾ ವಿಭಾಗಗಳಲ್ಲೂ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಹೀಗಾಗಿ, ನ್ಯೂಜಿಲ್ಯಾಂಡ್ ತಂಡಕ್ಕೆ ಈ ಪಂದ್ಯ ಸವಾಲಿನದ್ದಾಗಲಿದೆ. ಆದರೆ, ಕಿವೀಸ್ ತಂಡವೂ ಕೂಡ ಉತ್ತಮ ಫಾರ್ಮ್‌ನಲ್ಲಿದ್ದು, ದಕ್ಷಿಣ ಆಫ್ರಿಕಾಕ್ಕೆ ಪ್ರಭಲ ಪೈಪೋಟಿ ನೀಡುತ್ತದೆ. ದಕ್ಷಿಣ ಆಫ್ರಿಕಾ ಹೆಚ್ಚಿನ ಪಂದ್ಯಗಳನ್ನು ಕೊಲ್ಕತ್ತಾದಲ್ಲೇ ಆಡಿರುವುದರಿಂದ ಇಡನ್ ಗಾರ್ಡನ್ ಮೈದಾನದ ಅನುಭವ ಹೆಚ್ಚು ಇದೆ. ಈವರೆಗಿನ ಎಲ್ಲ ಪಂದ್ಯಗಳಲ್ಲಿ ಎರಡೂ ತಂಡಗಳು ಅತ್ಯಂತ ಶಿಸ್ತಿನಿಂದ ಹಾಗೂ ಆತ್ಮವಿಶ್ವಾಸದಿಂದ ಆಡುತ್ತಿರುವುದರಿಂದ ರೋಚಕ ಹೋರಾಟ ನಿರೀಕ್ಷಿಸಲಾಗಿದೆ. ಈ ಎರಡೂ ತಂಡಗಳು ಇನ್ನೂವರೆಗೂ ಟಿ20 ವಿಶ್ವಕಪ್ ಗೆದ್ದಿಲ್ಲ. ಇದನ್ನೂ ಓದಿ: RCB ಅಭಿಮಾನಿಗಳಿಗೆ ಸಿಹಿ ಸುದ್ದಿ: ತವರಿನಲ್ಲಿ ಆಡಲಿದ್ದಾರೆ ನಮ್ಮ ಹರಿಣಗಳು ದಕ್ಷಿಣ ಆಫ್ರಿಕಾ ತಂಡ 2024ರಲ್ಲಿ ನಡೆದ ಟಿ20 ವಿಶ್ವಕಪ್‌ನಲ್ಲಿ ಫೈನಲ್‌ಗೆ ಬಂದಿತ್ತು. ಆದರೆ, ಫೈನಲ್‌ನಲ್ಲಿ ಭಾರತ ತಂಡದ ವಿರುದ್ಧ ಸೋತು ರನ್ನರ್ ಅಪ್ ಆಗಿದರು. ಹೀಗಾಗಿ, ದಕ್ಷಿಣ ಆಫ್ರಿಕಾ ಫೈನಲ್ ಪ್ರವೇಶಿಸಿ, ಶತಾಯಗತಾಯ ಕಪ್ ತೆಗೆದುಕೊಂಡು ಹೋಗಲೇಬೇಕು ಎಂಬ ಪಣ ತೊಟ್ಟಿದೆ. ದಕ್ಷಿಣ ಆಫ್ರಿಕಾ ತಂಡದ ಆಟಗಾರರು ಕಳೆದ ವರ್ಷದ ಸೋಲಿನ ನೋವನ್ನು ಮರೆತು ತಮ್ಮ ಮೊದಲ ಟಿ20 ವಿಶ್ವಕಪ್ ಟ್ರೋಫಿಯನ್ನು ಗೆಲ್ಲುವ ಸಂಕಲ್ಪದೊಂದಿಗೆ ಕಣಕ್ಕಿಳಿಯಲಿದ್ದಾರೆ. ಇನ್ನೊಂದೆಡೆ, ನ್ಯೂಜಿಲೆಂಡ್ ತಂಡವೂ ಐಸಿಸಿ ಟೂರ್ನಿಗಳಲ್ಲಿ ನಿರಂತರವಾಗಿ ಉತ್ತಮ ಪ್ರದರ್ಶನ ನೀಡಿ, ಒತ್ತಡದ ಪಂದ್ಯಗಳಲ್ಲಿ ತಾಳ್ಮೆಯಿಂದ ಆಡುತ್ತಾ ಬಂದಿದೆ. ನ್ಯೂಜಿಲೆಂಡ್‌ಗೆ ಇದು ಮೊದಲ ಟಿ20 ವಿಶ್ವಕಪ್ ಕಿರೀಟ ಗೆಲ್ಲುವ ಸುವರ್ಣಾವಕಾಶವಾಗಿದೆ. ಆದ್ದರಿಂದ, ಈ ಸೆಮಿಫೈನಲ್ ಗೆದ್ದ ತಂಡಕ್ಕೆ ಕೇವಲ ಫೈನಲ್ ಪ್ರವೇಶವಷ್ಟೇ ಅಲ್ಲ, ತಮ್ಮ ಮೊದಲ ಟಿ20 ವಿಶ್ವಕಪ್ ಟ್ರೋಫಿ ಗೆಲ್ಲುವ ಕನಸು ಇದೆ. ಪಿಚ್ ವರದಿ : ಇಡನ್ ಗಾರ್ಡನ್ ಪಿಚ್ ಸಾಮಾನ್ಯವಾಗಿ ಬ್ಯಾಟ್ಸ್‌ಮನ್‌ಗಳಿಗೆ ಅನುಕೂಲಕರವಾಗಿದೆ. ಇಲ್ಲಿ ಸಿಕ್ಸರ್‌ಗಳ ಮಳೆ ಸುರಿಯುವುದು ಸಾಮಾನ್ಯ. ಇತ್ತೀಚೆಗೆ ಭಾರತ ತಂಡವು ವೆಸ್ಟ್ ಇಂಡೀಸ್ ವಿರುದ್ಧ196 ರನ್‌ಗಳ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟಿತ್ತು. ಎರಡನೇ ಇನ್ನಿಂಗ್ಸ್‌ನಲ್ಲಿ ಮಂಜು (ಡ್ಯೂ) ಪರಿಣಾಮದಿಂದ ಬೌಲರ್‌ಗಳಿಗೆ ಕಷ್ಟವಾಗುವ ಸಾಧ್ಯತೆ ಇದೆ. ಆದ್ದರಿಂದ ಟಾಸ್ ಬಹಳ ಮಹತ್ವದ್ದು, ಮೊದಲು ಬೌಲಿಂಗ್ ಮಾಡಿ ಗುರಿ ಬೆನ್ನಟ್ಟುವ ತಂಡಕ್ಕೆ ಹೆಚ್ಚು ಲಾಭವಾಗಬಹುದು. ನ್ಯೂಜಿಲೆಂಡ್ ತಂಡದ ಮ್ಯಾಟ್ ಹೆನ್ರಿ ಅವರು ಆಡುವುದು ಅನುಮಾನಾಸ್ಪದವಾಗಿದೆ. ಅವರು ವೈಯಕ್ತಿಕ ಕಾರಣದಿಂದ ಸ್ವಲ್ಪ ಕಾಲ ತಂಡದಿಂದ ದೂರವಿದ್ದಾರೆ. ತಂಡಕ್ಕೆ ಜೇಕಬ್ ಡಫಿ ಸೇರುವ ಸಾಧ್ಯತೆ ಇದೆ. ದಕ್ಷಿಣ ಆಫ್ರಿಕಾ ತಂಡದ ರಿಯನ್ ರಿಕಲ್ಟನ್ ಅವರಿಗೆ ತಲೆ ಭಾಗದಲ್ಲಿ ಸ್ವಲ್ಪ ಗಾಯವಾಗಿದ್ದರೂ, ಫಿಟ್ನೆಸ್ ಟೆಸ್ಟ್‌ನಲ್ಲಿ ಪಾಸ್ ಆಗಿ, ಈ ಪಂದ್ಯದಲ್ಲಿ ಆಡುವ ಸಾಧ್ಯತೆ ಇದೆ. ದಕ್ಷಿಣ ಆಫ್ರಿಕಾ (ಸಂಭಾವ್ಯ ಪಟ್ಟಿ) ಏಡನ್ ಮಾರ್ಕ್ರಂ (ನಾಯಕ), ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ರಿಯನ್ ರಿಕಲ್ಟನ್, ಡೆವಾಲ್ಡ್ ಬ್ರೆವಿಸ್, ಡೇವಿಡ್ ಮಿಲ್ಲರ್, ಟ್ರಿಸ್ಟನ್ ಸ್ಟಬ್ಸ್, ಮಾರ್ಕೋ ಜಾನ್ಸನ್, ಕಾರ್ಬಿನ್ ಬೋಶ್, ಕಗಿಸೊ ರಬಾಡಾ, ಲುಂಗಿ ಎನ್‌ಗಿಡಿ, ಕೇಶವ ಮಹಾರಾಜ್ ನ್ಯೂಜಿಲೆಂಡ್ (ಸಂಭಾವ್ಯ ಪಟ್ಟಿ) ಟಿಮ್ ಸೈಫರ್ಟ್ (ವಿಕೆಟ್ ಕೀಪರ್), ಫಿನ್ ಅಲೆನ್, ರಚಿನ್ ರವೀಂದ್ರ, ಗ್ಲೆನ್ ಫಿಲಿಪ್ಸ್, ಮಾರ್ಕ್ ಚಾಪ್ಮನ್, ಡ್ಯಾರಿಲ್ ಮಿಚೆಲ್, ಮಿಚೆಲ್ ಸ್ಯಾಂಟ್ನರ್ (ನಾಯಕ), ಕೋಲ್ ಮೆಕ್‌ಕೋಂಚಿ, ಮ್ಯಾಟ್ ಹೆನ್ರಿ / ಜೇಕಬ್ ಡಫಿ, ಇಶ್ ಸೋಧಿ, ಲಾಕಿ ಫರ್ಗ್ಯೂಸನ್ ಮತ್ತುಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ Post navigation RCB ಅಭಿಮಾನಿಗಳಿಗೆ ಸಿಹಿ ಸುದ್ದಿ: ತವರಿನಲ್ಲಿ ಆಡಲಿದ್ದಾರೆ ನಮ್ಮ ಹರಿಣಗಳು T20 World Cup ಭಾರತ vs ಇಂಗ್ಲೆಂಡ್ ಸೆಮಿಸ್: ಸಮಯ, ದಿನಾಂಕ, ಪಿಚ್ ವರದಿ ಇಲ್ಲಿದೆ