english-grammar-class-7-types-of-pronouns-interrogative-indefinite-and-emphatic-explainedAI ಚಿತ್ರ

Types of Pronouns ನ ಮುಂದುವರೆದ ಭಾಗ

5. Interrogative Pronoun (ಪ್ರಶ್ನಾರ್ಥಕ ಸರ್ವನಾಮ)

    An interrogative pronoun is a pronoun used to ask questions. It replaces the noun we are asking about.

ಪ್ರಶ್ನಾರ್ಥಕ ಸರ್ವನಾಮ ಎಂದರೆ ಪ್ರಶ್ನೆ ಕೇಳಲು ಬಳಸುವ ಸರ್ವನಾಮ. ಇದು ನಾವು ಯಾರ ಬಗ್ಗೆ ಅಥವಾ ಯಾವ ವಿಷಯದ ಬಗ್ಗೆ ಕೇಳುತ್ತಿದ್ದೇವೆ ಎಂಬುದನ್ನು ಸೂಚಿಸುತ್ತದೆ.

Common interrogative pronouns:

Who,

Whom,

Whose,

Which,

What

ಸಾಮಾನ್ಯ ಪ್ರಶ್ನಾರ್ಥಕ ಸರ್ವನಾಮಗಳು ಯಾವುವು ಎಂದರೆ.

ಯಾರು,

ಯಾರನ್ನು,

ಯಾರದು,

ಯಾವುದು,

ಏನು

ಉದಾಹರಣೆ:

1.Who is your teacher?

ನಿಮ್ಮ ಶಿಕ್ಷಕರು ಯಾರು?

2. Whom did you meet?

ನೀವು ಯಾರನ್ನು ಭೇಟಿ ಮಾಡಿದ್ದೀರಿ?

3. Whose book is this?

ಇದು ಯಾರ ಪುಸ್ತಕ?

4. Which is your bag?

ನಿಮ್ಮ ಚೀಲ ಯಾವುದು?

5. What are you doing?

ನೀನು ಏನು ಮಾಡುತ್ತಿದ್ದೀಯ?

6.Indefinite Pronoun (ಅನಿರ್ದಿಷ್ಟ ಸರ್ವನಾಮ):

An indefinite pronoun is a pronoun that refers to a person, thing, or amount in a general or non-specific way. It does not point to any particular person or thing.

ಅನಿರ್ದಿಷ್ಟ ಸರ್ವನಾಮ ಎಂದರೆ ನಿರ್ದಿಷ್ಟ ವ್ಯಕ್ತಿ ಅಥವಾ ವಸ್ತುವನ್ನು ಸೂಚಿಸದೇ, ಸಾಮಾನ್ಯವಾಗಿ ಅಥವಾ ಅಸ್ಪಷ್ಟವಾಗಿ ಸೂಚಿಸುವ ಸರ್ವನಾಮ.

Common indefinite pronouns:

Someone,

Somebody,

Something,

Anyone,

Anything,

Everyone,

Everything,

None,

Some,

Many,

Few,

Several

ಯಾರೋ,

ಏನೋ,

ಯಾರಾದರೂ,

ಏನಾದರೂ,

ಎಲ್ಲರೂ,

ಯಾವುದೂ ಇಲ್ಲ,

ಕೆಲವು,

ಅನೇಕ

ಉದಾಹರಣೆ:

1.Someone is at the door.

ಯಾರೋ ಬಾಗಿಲಿನ ಬಳಿ ಇದ್ದಾರೆ.

2.Everyone likes music.

ಎಲ್ಲರೂ ಸಂಗೀತವನ್ನು ಇಷ್ಟಪಡುತ್ತಾರೆ.

3. I have something to tell you.

ನನಗೆ ನಿನಗೆ ಹೇಳಲು ಏನೋ ಇದೆ.

4. Nobody came to the party.

ಯಾರೂ ಪಾರ್ಟಿಗೆ ಬರಲಿಲ್ಲ.

5.Many are waiting outside.

ಅನೇಕರು ಹೊರಗೆ ಕಾಯುತ್ತಿದ್ದಾರೆ.

6.Is anyone there?

ಯಾರಾದರೂ ಇದ್ದಾರಾ?

7.Distributive Pronoun (ವಿತರಣಾತ್ಮಕ ಸರ್ವನಾಮ):

A distributive pronoun refers to persons or things one at a time or separately, not as a group.

ವಿತರಣಾತ್ಮಕ ಸರ್ವನಾಮ ಎಂದರೆ ವ್ಯಕ್ತಿಗಳು ಅಥವಾ ವಸ್ತುಗಳನ್ನು ಒಂದುೊಂದಾಗಿ ಅಥವಾ ಪ್ರತ್ಯೇಕವಾಗಿ ಸೂಚಿಸುವ ಸರ್ವನಾಮ.

Common distributive pronouns:

ಪ್ರತಿ (Each),

ಯಾವುದಾದರೂ ಒಂದು (Either),

ಎರಡರಲ್ಲಿ ಯಾವುದೂ ಅಲ್ಲ (Neither)

ಉದಾಹರಣೆ:

1.Each of the students has a book.

ಪ್ರತಿ ವಿದ್ಯಾರ್ಥಿಗೂ ಒಂದು ಪುಸ್ತಕ ಇದೆ.

2. Each of them is happy.

ಅವರಲ್ಲಿ ಪ್ರತಿಯೊಬ್ಬರೂ ಸಂತೋಷವಾಗಿದ್ದಾರೆ.

3.Either of the two roads is safe.

ಆ ಎರಡು ದಾರಿಗಳಲ್ಲಿ ಯಾವುದಾದರೂ ಒಂದು ಸುರಕ್ಷಿತವಾಗಿದೆ.

4.You can take either pen.

ನೀವು ಯಾವುದಾದರೂ ಒಂದು ಪೆನ್ ತೆಗೆದುಕೊಳ್ಳಬಹುದು.

5.Neither of the answers is correct.

ಆ ಉತ್ತರಗಳಲ್ಲಿ ಯಾವುದೂ ಸರಿಯಲ್ಲ.

6.Neither of them came.

ಅವರಲ್ಲಿ ಯಾರೂ ಬಂದಿಲ್ಲ.

8.Emphatic Pronoun (ಒತ್ತು ಸೂಚಕ ಸರ್ವನಾಮ)

English Explanation:

An emphatic pronoun is used to emphasize (stress) a noun or pronoun in a sentence.

It is usually formed by adding -self / -selves (myself, yourself, himself, etc.) and comes just after the noun or pronoun it emphasizes.

ಒತ್ತು ಸೂಚಕ ಸರ್ವನಾಮ ಎಂದರೆ ವಾಕ್ಯದಲ್ಲಿ ನಾಮಪದ ಅಥವಾ ಸರ್ವನಾಮಕ್ಕೆ ಒತ್ತು ಸೂಚಕ ಬಳಸುವ ಸರ್ವನಾಮ.

Myself,

Yourself,

Himself,

Herself,

Itself,

Ourselves,

Yourselves,

Themselves.

ಉದಾಹರಣೆ:

1. I myself completed the work.

ನಾನು ಸ್ವತಃ ಕೆಲಸವನ್ನು ಪೂರ್ಣಗೊಳಿಸಿದೆ.

2. She herself cooked the food.

ಅವಳು ಸ್ವತಃ ಊಟವನ್ನು ಮಾಡಿದರು.

3.The principal himself came to the class.

ಪ್ರಾಂಶುಪಾಲರು ಸ್ವತಃ ತರಗತಿಗೆ ಬಂದರು.

4. We ourselves solved the problem.

ನಾವು ಸ್ವತಃ ಸಮಸ್ಯೆಯನ್ನು ಪರಿಹರಿಸಿದ್ದೇವೆ.

5. They themselves admitted the mistake.

ಅವರು ಸ್ವತಃ ತಪ್ಪನ್ನು ಒಪ್ಪಿಕೊಂಡರು.

Important Note:

1.Emphatic pronouns are used only for emphasis, not as the main subject or object.

2.They look like reflexive pronouns, but their purpose is different.

===೦

ಹಿಂದಿನ ಪಾಠ: English Grammar ಪಾಠ 6: Types of Pronouns – Personal, Reflexive, Demonstrative and Relative  

To be continued………

ಮುಂದುವರೆಯುತ್ತದೆ…………

ಶಿಕ್ಷಕರು: ಶ್ರೀ. ಕೇಶವ ಬಿ. ಕೆ

ಮತ್ತುಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *