2nd PUC Result 2026 to be declared in April first week, how to check the result in onlineಸಾಂದರ್ಭಿಕ ಚಿತ್ರ

ಬೆಂಗಳೂರು, ಮಾರ್ಚ್‌ 28: ಕರ್ನಾಟಕ ಶಾಲಾ ಪರೀಕ್ಷೆಗಳು ಮತ್ತು ಮೌಲ್ಯಮಾಪನ ಮಂಡಳಿ (KSEAB) 2026ನೇ ಸಾಲಿನ 2ನೇ ಪಿಯುಸಿ ಫಲಿತಾಂಶವನ್ನು (2nd PUC Result) ಏಪ್ರಿಲ್ ಮೊದಲ ವಾರದಲ್ಲಿ ಪ್ರಕಟಿಸುವ ಸಾಧ್ಯತೆ ಇದೆ. ವಿದ್ಯಾರ್ಥಿಗಳು ತಮ್ಮ ಫಲಿತಾಂಶವನ್ನು ಅಧಿಕೃತ ವೆಬ್‌ಸೈಟ್ karresults.nic.in ನಲ್ಲಿ ಆನ್‌ಲೈನ್ ಮೂಲಕ ಪರಿಶೀಲಿಸಬಹುದು.

ಮಂಡಳಿ ಶೀಘ್ರದಲ್ಲೇ 2ನೇ ಪಿಯುಸಿ ಫಲಿತಾಂಶದ ನಿಖರ ದಿನಾಂಕವನ್ನು ಘೋಷಿಸುವ ನಿರೀಕ್ಷೆಯಿದೆ. ವಿದ್ಯಾರ್ಥಿಗಳು SMS ಹಾಗೂ DigiLocker ಮೂಲಕವೂ ತಮ್ಮ ಫಲಿತಾಂಶವನ್ನು ಪಡೆಯಬಹುದು. ಫಲಿತಾಂಶ ಪರಿಶೀಲಿಸಲು ವಿದ್ಯಾರ್ಥಿಗಳು ತಮ್ಮ ಪ್ರವೇಶಪತ್ರ (Admit Card)ವನ್ನು ಸಿದ್ಧವಾಗಿರಿಸಿಕೊಳ್ಳುವುದು ಸೂಕ್ತ.

ಈ ವರ್ಷ 6 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು 2ನೇ ಪಿಯುಸಿ ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ. 2026ರ 2ನೇ ಪಿಯುಸಿ ಪರೀಕ್ಷೆ ಫೆಬ್ರವರಿ 28ರಿಂದ ಮಾರ್ಚ್ 17ರವರೆಗೆ ನಡೆಯಿತು. ಕಳೆದ ವರ್ಷ (2025) ಫಲಿತಾಂಶ ಏಪ್ರಿಲ್ 8ರಂದು ಮಧ್ಯಾಹ್ನ 12:30ಕ್ಕೆ ಪ್ರಕಟಿಸಲಾಗಿತ್ತು.

ಫಲಿತಾಂಶ ಯಾವಾಗ ಮತ್ತು ಎಲ್ಲಿ ನೋಡಬೇಕು?

ದಿನಾಂಕ: ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ತಿಳಿಸಿರುವ ಹಾಗೆ 2026ರ ಏಪ್ರಿಲ್‌ 7 ರಂದು ಫಲಿತಾಂಶ ಪ್ರಕಟವಾಗುವ ಸಾಧ್ಯತೆ ಇದೆ.

ವೆಬ್‌ಸೈಟ್: karresults.nic.in

ಫಲಿತಾಂಶವನ್ನು ಹೇಗೆ ಡೌನ್‌ಲೋಡ್ ಮಾಡುವುದು?

1. ಅಧಿಕೃತ ವೆಬ್‌ಸೈಟ್ karresults.nic.in ತೆರೆಯಿರಿ

2. ದ್ವಿತೀಯ ಪಿಯುಸಿ ಫಲಿತಾಂಶ 2026 ಲಿಂಕ್ ಮೇಲೆ ಕ್ಲಿಕ್ ಮಾಡಿ

3. ನಿಮ್ಮ ರಿಜಿಸ್ಟ್ರೇಶನ್ ಸಂಖ್ಯೆ ನಮೂದಿಸಿ

4. Submit ಬಟನ್ ಒತ್ತಿರಿ

5. ಫಲಿತಾಂಶವನ್ನು ನೋಡಿ, ಡೌನ್‌ಲೋಡ್ ಅಥವಾ ಪ್ರಿಂಟ್ ಪಡೆಯಿರಿ.

ದ್ವಿತೀಯ ಪಿಯುಸಿ ಪರೀಕ್ಷೆಗಳಿಗೆ ಒಟ್ಟು 5,174 ಪಿಯು ಕಾಲೇಜುಗಳಿಂದ 7,10,363 ವಿದ್ಯಾರ್ಥಿಗಳು ನೋಂದಾಯಿಸಿದ್ದರು. ಈ ಪೈಕಿ 2,92,645 ವಿದ್ಯಾರ್ಥಿಗಳು ವಿಜ್ಞಾನ ವಿಭಾಗದವರು, 2,11,174 ವಿದ್ಯಾರ್ಥಿಗಳು ವಾಣಿಜ್ಯ ವಿಭಾಗದವರು ಹಾಗೂ 1,42,982 ವಿದ್ಯಾರ್ಥಿಗಳು ಕಲಾ ವಿಭಾಗದವರಿದ್ದಾರೆ. ರಾಜ್ಯದಾದ್ಯಂತ 1,217 ಕೇಂದ್ರಗಳಲ್ಲಿ ಪರೀಕ್ಷೆಗಳು ನಡೆದವು.

ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *