ವಿವಿಧ ಉದ್ದೇಶಗಳಿಗೆ ದಿನನಿತ್ಯ ಬಳಕೆಯಾಗುವ ಪದಾರ್ಥಗಳಲ್ಲಿ ಅರಿಸಿನಕ್ಕೆ (Ayurvedic health tips Turmeric) ಅಗ್ರಸ್ಥಾನ. ಬಟ್ಟೆಗಳಿಗೆ ಬಣ್ಣ ನೀಡಲು, ರುಚಿಕಟ್ಟಾದ ಅಡುಗೆ ಅರಿಸಿನ ಕಡ್ಡಾಯವಾಗಿ ಬಳಕೆಯಾಗುವ ಪ್ರಮುಖ ವಸ್ತು. ವೈದ್ಯಕೀಯವಾಗಿ ಅನೇಕ ಸಾಮಾನ್ಯ ಕಾಯಿಲೆಗಳಾದ ಕೆಮ್ಮು, ನೆಗಡಿ. ಜ್ವರ, ಚರ್ಮವ್ಯಾಧಿಗಳಿಂದ ಹಿಡಿದು ಘನಘೋರವಾದ ಕ್ಯಾನ್ಸರ್, ಏಡ್ಸ್, ಟಿ.ಬಿ ಮುಂತಾದ ಕಾಯಿಲೆಗಳಿಗೆ ಬಳಕೆಯಾಗುವವರೆಗೂ ಇದರ ಪ್ರಾಮುಖ್ಯತೆ ಹಬ್ಬಿಕೊಂಡಿದೆ. ಅರಿಸಿನದ ಅತ್ಯಂತ ಪ್ರಯೋಜನಕಾರಿಯಾದ ಭಾಗ ಕಾಂಡ. ಇದು ಶುಂಠಿಯಂತೆ ನೆಲದಲ್ಲೇ ಹರಡಿಕೊಂಡಿರುತ್ತದೆ. ಗಿಡದಿಂದ ಕಿತ್ತ ಅರಿಸಿನವನ್ನು ಸೇವಿಸುವುದಕ್ಕೆ ಮೊದಲು ಅದರ ಕಡು ಉಷ್ಣವನ್ನು ಕಡಮೆ ಮಾಡಿ ಸೇವನೆಗೆ ಅರ್ಹವಾಗಿಸಲು ಅದನ್ನು ನೀರಿನಲ್ಲಿ ಕುದಿಸಿ ಒಣಗಿಸಿ ನಂತರ ಪುಡಿ ಮಾಡಬೇಕಾಗುತ್ತದೆ. ಅರಿಸಿನವನ್ನು ಮನೆಮದ್ದಾಗಿ ಬಳಸುವ ಸಂದರ್ಭಗಳು ಹಾಗೂ ವಿಧಾನಗಳು ನೆಗಡಿ: ನೆಗಡಿಯ ಆರಂಭಾವಸ್ಥೆಯಲ್ಲಿ ಇದರ ಪುಡಿಯನ್ನು ಬೆಂಕಿಯ ಮೇಲೆ ಹಾಕಿ ಅಥವಾ ಚೆನ್ನಾಗಿ ಕಾಯಿಸಿದ ಹೆಂಚಿನ ಮೇಲೆ (ದೋಸೆ ಹೆಂಚಾದರೂ ಪರವಾಗಿಲ್ಲ) ಹಾಕಿ ಅದರಿಂದ ಬರುವ ಹೊಗೆಯನ್ನು ಉಸಿರಾಡಬೇಕು. ಹಾಗೆ ಮಾಡಿದ ಸ್ವಲ್ಪ ಹೊತ್ತು ನೀರು ಕುಡಿಯಬಾರದು. ಈ ರೀತಿ ಮಾಡುವುದರಿಂದ ಮೂಗಿನಿಂದ ಸಿಂಬಳ ಚೆನ್ನಾಗಿ ಸುರಿದು ಶೀಘ್ರ ಉಪಶಮನ ದೊರೆಯುತ್ತದೆ.ಅರ್ಧ ಲೋಟ ಹಾಲಿಗೆ, ಅರ್ಧ ಲೋಟ ನೀರು ಹಾಕಿ, ಅದಕ್ಕೆ ಕಾಲುಚಮಚ ಅರಿಸಿನ ಬೆರೆಸಿ ನೀರಿನ ಭಾಗ ಆವಿಯಾಗಿ ಹೋಗುವವರೆಗೆ ಕುದಿಸಿ ನಂತರ ಬರುವ ಹಾಲಿನ ಭಾಗವನ್ನು ಶೋಧಿಸಿ ಆ ಹಾಲಿಗೆ ಸ್ವಲ್ಪ ಬೆಲ್ಲ ಬೆರೆಸಿ ಕುಡಿಯಬೇಕು. ಈ ರೀತಿ ಮಾಡುವುದರಿಂದ ಹಸಿ ನೆಗಡಿಯು ಬೇಗ ವಾಸಿಯಾಗುತ್ತದೆ. ಕಣ್ಣು ನೋವು: ಎಲ್ಲಾ ರೀತಿಯ ಕಣ್ಣುನೋವುಗಳಲ್ಲಿ ಸುಮಾರು ಒಂದು ಭಾಗ ಅರಿಸಿನ ಪುಡಿಗೆ ಹತ್ತು ಭಾಗ ನೀರು ಹಾಕಿ ಕುದಿಸಿ ಬರುವ ಅದರ ಕಷಾಯವು ತಣ್ಣಗಾದ ನಂತರ ನೋವಾಗಿರುವ ಕಣ್ಣನ್ನು ಆಗಿಂದಾಗ್ಗೆ ತೊಳೆಯುತ್ತಿರಬೇಕು. ಹಾಗೆಯೇ ಅದೇ ನೀರಿನಲ್ಲಿ ಅದ್ದಿರುವ ಶುಭ್ರವಾದ ಬಟ್ಟೆಯನ್ನು ಕಣ್ಣಿನ ಮೇಲೆ ಪಟ್ಟಿಹಾಕಿಕೊಂಡು ಮಲಗಿರಬೇಕು ಹಾಗೂ ಕಣ್ಣಿನ ಕೊಳೆಯನ್ನು ತೊಳೆಯಲು ಇದೇ ಬಟ್ಟೆಯನ್ನು ಬಳಸಬೇಕು. ಚರ್ಮವ್ಯಾದಿಗಳು: ಕಜ್ಜಿ, ನವೆ, ದದ್ದು, ಪಿತ್ತದ ಗಂದೆಗಳು ಇತ್ಯಾದಿಗಳಲ್ಲಿ ಅರಿಸಿನದ ಪುಡಿಯನ್ನು ಗೋಮೂತ್ರದಲ್ಲಿ ಬೆರೆಸಿ ಹೊಟ್ಟೆಗೆ ಸೇವಿಸಬಹುದು. ಹಾಗೆಯೇ ಬೆಣ್ಣೆಯಲ್ಲಿ ಅರಿಸಿನದ ಪುಡಿಯನ್ನು ಬೆರೆಸಿ ತೊಂದರೆ ಇರುವ ಚರ್ಮದ ಮೇಲೆ ಹಚ್ಚಬಹುದು. ಮಧುಮೇಹ: ಸಕ್ಕರೆ ಕಾಯಿಲೆ ಇರುವವರು ಅರಿಸಿನದ ಪುಡಿ ಹಾಗೂ ನೆಲ್ಲಿಕಾಯಿ ಪುಡಿಯನ್ನು ಸಮಭಾಗದಲ್ಲಿ ಬೆರೆಸಿ ಕಷಾಯ ಮಾಡಿಕೊಂಡು ಸೇವಿಸಬಹುದು ಅಥವಾ ಸುಮಾರು ಒಂದು ಚಮಚ ಪುಡಿಯನ್ನು ಬಿಸಿ ನೀರಿನಲ್ಲಿ ಬೆರೆಸಿ ಕುಡಿಯಬಹುದು. ಇದರಿಂದ ರಕ್ತ ಹಾಗೂ ಮೂತ್ರದಲ್ಲಿನ ಸಕ್ಕರೆ ಅಂಶವು ಕಡಿಮೆಯಾಗಿ ರಕ್ತವು ಶುದ್ಧಿಯಾಗುತ್ತದೆ. ಮೂತ್ರದ ಕಲ್ಲು: ಅರಿಸಿನದ ಪುಡಿಯನ್ನು ಹಳೆ ಬೆಲ್ಲದೊಡನೆ ಸೇರಿಸಿ ಅದನ್ನು ಗಂಜಿಯಲ್ಲಿ ಬೆರೆಸಿ ಕುಡಿಯುವುದರಿಂದ ಮೂತ್ರದ ಕಲ್ಲುಗಳು ಹೊರಬರುತ್ತವೆ. ತುಂಬಾ ಹಳೆಯ ಮೂತ್ರದ ಕಲ್ಲುಗಳಿಗೂ ಸಹ ಈ ಚಿಕಿತ್ಸೆ ಫಲಕಾರಿಯಾಗಿದೆ. ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ Post navigation Ayurveda Health Tips: ತಿಂದ ಆಹಾರವು ಸರಿಯಾಗಿ ಜೀರ್ಣವಾಗಲು ಮನೆಮದ್ದು Ayurvedic health tips: ತಲೆಹೊಟ್ಟು ನಿವಾರಣೆ ಮಾಡುತ್ತೆ ನಿಂಬೆಹಣ್ಣು ಸಿಪ್ಪೆ, ದಾಸವಾಳದ ಎಲೆ