Ayurveda Health tips: Home remedies to help digest food properlyಸಾಂದರ್ಭಿಕ ಚಿತ್ರ

ಸಾಕಷ್ಟು ಜನರು ಅಜೀರ್ಣ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ತಿಂದ ಆಹಾರ ಸರಿಯಾಗಿ ಜೀರ್ಣವಾಗದೆ ವಾಂತಿ, ಭೇದಿ ಶುರುವಾಗುತ್ತದೆ. ಈ ವಾಂತಿ, ಭೇದಿಗೆ ಇಂಗ್ಲಿಷ್‌ ಔಷಧಿಯ ಮೊರೆ ಹೋಗುತ್ತಾರೆ ಇದರ ಬದಲಿಗೆ ಮನೆಮದ್ದಿನ ಮೂಲಕವೇ ಪರಿಹರಿಸಿಕೊಳ್ಳಬಹುದಾಗಿದೆ.

  1. ಅರ್ಧ ಚಮಚ ತುಳಸಿ ರಸ ಅಥವಾ ಕಾಲು ಚಮಚ ಶುಂಠಿ ರಸಕ್ಕೆ ಜೇನುತುಪ್ಪ ಸೇರಿಸಿ ದಿವಸಕ್ಕೆ 2-3 ಬಾರಿ ಸೇವಿಸಬೇಕು.
  2. ಒಣಶುಂಠಿ 1 ಭಾಗ, ಕಾಳು ಮೆಣಸಿನಪುಡಿ ಒಂದು ಭಾಗ, ಹಿಪ್ಪಲಿ 1 ಭಾಗ ಬೆರೆಸಿದಾಗ ‘ತ್ರಿಕಟು’ ಎಂಬ ಔಷಧಿ ಸಿದ್ಧವಾಗುತ್ತದೆ. ಇದನ್ನು ಕಾಲು ಚಮಚ ಪ್ರಮಾಣದಲ್ಲಿ ಜೇನುತುಪ್ಪ ಅಥವಾ ನೀರು ಮಜ್ಜಿಗೆ ಅಥವಾ ಬಿಸಿನೀರು ಬೆರೆಸಿ ಸೇವಿಸಬಹುದು.
  3. ತುಪ್ಪದಲ್ಲಿ ಹುರಿದ ಇಂಗು ಮಜ್ಜಿಗೆಗೆ ಬೆರೆಸಿ ಕುಡಿಯಬಹುದು.

ಭೇದಿಗೆ

  1. ದಾಳಿಂಬೆ ಸಿಪ್ಪೆ ಮತ್ತು ಹೂವನ್ನು ಚೆನ್ನಾಗಿ ಅರೆದು ನೀರು ಅಥವಾ ಮಜ್ಜಿಗೆಯೊಂದಿಗೆ ಸೇವಿಸುವುದು.
  2. ಮಕ್ಕಳಿಗೆ ಜಾಯಿಕಾಯಿ ಗಂಧದಂತೆ ಅರೆದು ಬಿಸಿನೀರಿನಲ್ಲಿ ಕಲೆಸಿ ಕುಡಿಸುವುದು.
  3. ಆಲದ ಮರದ ಬಿಳಲನ್ನು ಪುಡಿಮಾಡಿ ಮಜ್ಜಿಗೆಯೊಂದಿಗೆ ಸೇವಿಸುವುದು.
  4. ಬಿಲ್ವಪತ್ರೆಯ ಎಲೆಯನ್ನು ಅಕ್ಕಿಹಿಟ್ಟಿನೊಂದಿಗೆ ಬೆರೆಸಿ ರೊಟ್ಟಿ ಮಾಡಿ ತಿನ್ನುವುದು.

ವಾಂತಿಗೆ

  1. ನಿಂಬೆಹಣ್ಣಿನ ಶರಬತ್ತು ತೆಗೆದುಕೊಳ್ಳುವುದು.
  2. ಏಲಕ್ಕಿ ಚೂರ್ಣ ಅಥವಾ ಏಲಕ್ಕಿ ಸಿಪ್ಪೆಯ ಚೂರ್ಣವನ್ನು ನೀರಿನೊಂದಿಗೆ ಕೊಡಬೇಕು.
  3. ನವಿಲುಗರಿ ಸುಟ್ಟ ಭಸ್ಮವನ್ನು 3 ಚಿಟಿಕೆ ಪ್ರಮಾಣವನ್ನು ಜೇನುತುಪ್ಪದಲ್ಲಿ ಸೇರಿಸಿ ಕೊಡುವುದು.

ಹೊಟ್ಟೆ ಉಬ್ಬರ

  1. ಹೊಟ್ಟೆ ಮೇಲೆ ಶುಂಠಿ ಲೇಪವನ್ನು ಮಾಡುವುದು.
  2. ಬೆಳ್ಳುಳ್ಳಿಯ ಎರಡು ಬಿಡಿಸಿದ ಹಸಿ ಕಾಳುಗಳನ್ನು ಸ್ವಲ್ಪ ಆಗಿದು ಬಿಸಿನೀರಿನೊಡನೆ ನುಂಗುವುದು.
  3. ಒಣಶುಂಠಿ, ಹಿಪ್ಪಲಿ, ಕರಿಮೆಣಸು, ಜೀರಿಗೆ, ಕರಿಜೀರಿಗೆ, ಓಮ, ಹಿಂಗು ಈ ಎಲ್ಲಾ ದಿನಸುಗಳನ್ನು ಸಮ ಪ್ರಮಾಣದಲ್ಲಿ ತೆಗೆದುಕೊಂಡು ಪುಡಿಮಾಡಿಕೊಳ್ಳಬೇಕು. ಇದನ್ನು ಅರ್ಧ ಚಮಚ ಪ್ರಮಾಣದಲ್ಲಿ ಊಟಕ್ಕೆ ಮೊದಲು ಆಹಾರದ ಮೊದಲನೇ ತುತ್ತಿನೊಡನೆ ಚಟ್ಟಿಪುಡಿಯಂತೆ ಬೆರೆಸಿ ಸ್ವಲ್ಪ ತುಪ್ಪದೊಡನೆ ಮೊದಲು ತಿಂದು ನಂತರ ಊಟ ಮಾಡಬೇಕು. ಇದನ್ನು ಅಗ್ನಿಮಾಂದ್ಯ, ಅಜೀರ್ಣಗಳಲ್ಲಿ ಮಜ್ಜಿಗೆಯೊಡನೆ ಬೆರೆಸಿ ಕುಡಿಯಬಹುದು.

ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *