Ayurvedic health tips: Lemon peel and hibiscus leaves can help get rid of dandruffಸಾಂದರ್ಭಿಕ ಚಿತ್ರ

ಆಯುರ್ವೇದ ಗ್ರಂಥದಲ್ಲಿ ‘ಜಗತೈವ ಮಹೌಷಧಂ’ ಎಂಬ ಸುಪ್ರಸಿದ್ಧ ಹೇಳಿಕೆ ಇದೆ. ಎಂದರೆ ‘ಜಗತ್ತಿನಲ್ಲಿರುವುದೆಲ್ಲ ಔಷಧಿಯೇ. ಆದರೆ, ನಮ್ಮ ಸಂಪರ್ಕಕ್ಕೆ ಬರುವ ವಸ್ತುಗಳ ಔಷಧೀಯ ಗುಣದ ಪರಿಚಯವಾದಾಗ ಮಾತ್ರ ನಮಗೆ ಅದರ ಅರಿವಾಗುವುದು.

ನಾವು ತಿಂದು ಅಥವಾ ಬಳಸಿ ಬಿಸಾಡುವ ಅನೇಕ ಹಣ್ಣು, ತರಕಾರಿ, ದವಸ ಧಾನ್ಯಗಳ ತ್ಯಾಜ್ಯಗಳಲ್ಲಿ ಬಹಳಷ್ಟು ಔಷಧೀಯ ಸತ್ತ ಗಳಿರುತ್ತವೆ. ಅದನ್ನು ತಿಳಿದು ಬಳಸಿಕೊಳ್ಳುವುದರಿಂದ ಬಹಳಷ್ಟು ಸಮಯ, ಹಣ, ಪರಿಶ್ರಮಗಳ ಉಳಿತಾಯವಾಗುತ್ತದೆ. ಅಲ್ಲದೆ ಒಂದು ಉಪಯುಕ್ತ ವಸ್ತುವಿನ ಸಮರ್ಪಕ ಬಳಕೆಯಾದಂತಾಗುತ್ತದೆ!

ಮನೆಯಲ್ಲಿ ನಾವು ದಿನನಿತ್ಯ ಬಳಸುವ ವಸ್ತುಗಳಲ್ಲಿನ ಸಿಪ್ಪೆಗಳನ್ನು ಹೇಗೆ ಆರೋಗ್ಯದ ಹಾಗೂ ಸೌಂದರ್ಯದ ವೃದ್ಧಿಗಾಗಿ ಬಳಸಬಹುದು.

  1. ಭೇದಿ ನಿಲ್ಲಿಸಲು: ದಾಳಿಂಬೆ ಹಣ್ಣಿನ ಸಿಪ್ಪೆಯನ್ನು ನೆರಳಿನಲ್ಲಿ ಒಣಗಿಸಿ ಚೂರ್ಣ ಮಾಡಿ ವಸ್ತ್ರದಿಂದ ಗಾಳಿಸಿಕೊಳ್ಳಿ. ಇದನ್ನು ಮಕ್ಕಳಿಗಾದರೆ ಕಾಲು ಚಮಚ, ದೊಡ್ಡವರಿಗೆ ಅರ್ಧ ಚಮಚ ದಿವಸಕ್ಕೆ ಮೂರಾವರ್ತಿಯಂತೆ ನೀರಿನೊಡನೆ ಸೇವಿಸಬೇಕು.
  2. ಸುಟ್ಟಗಾಯ ವಾಸಿಗೆ: ಹಸಿ ಆಲೂಗಡ್ಡೆ ಸಿಪ್ಪೆಯನ್ನು ಸುಟ್ಟಗಾಯದ ಮೇಲಿಟ್ಟು ಕಟ್ಟುವುದರಿಂದ ಅದು ಬಹುಬೇಗ ವಾಸಿಯಾಗುತ್ತದೆ.
  3. ತಲೆಹೊಟ್ಟು ನಿವಾರಣೆಗೆ: ನಿಂಬೆಹಣ್ಣನ್ನು ಕೊಯ್ದು ಅದರ ರಸವನ್ನು ಹಿಂಡಿದ ನಂತರ ಉಳಿಯುವ ಸಿಪ್ಪೆಯನ್ನು ನೆರಳಿನಲ್ಲಿ ಒಣಗಿಸಿ ಪುಡಿಮಾಡಿಟ್ಟುಕೊಳ್ಳಿ. ಇದನ್ನು ಗಸಗಸೆಪುಡಿ ಮತ್ತು ದಾಸವಾಳದ ಎಲೆಯನ್ನು ಅರೆದು ಕಲ್ಕ ಮಾಡಿ ಸ್ನಾನಕ್ಕೆ ಒಂದು ಗಂಟೆ ಮೊದಲು ತಲೆಗೆ ಹಚ್ಚಿಕೊಳ್ಳುವುದರಿಂದ ತಲೆಹೊಟ್ಟು ನಿವಾರಣೆಯಾಗುತ್ತದೆ.
  4. ಮುಖದ ಚರ್ಮದ ಹೊಳಪು: ಮುಖದ ಚರ್ಮಕ್ಕೆ ಹೊಳಪು ಹಾಗೂ ಉತ್ತಮ ವರ್ಣ ನೀಡಲು ರಸ ತೆಗೆದ ನಿಂಬೆಹಣ್ಣಿನ ಹೋಳನ್ನು ಅದರ ಒಳಪದರು ಆಚೆ ಬರುವಂತೆ ಮಾಡಿ ಅದನ್ನು ಮುಖ ಮತ್ತು ಕುತ್ತಿಗೆಗೆ ಮೃದುವಾಗಿ ತಿಕ್ಕಬೇಕು. ನಂತರ ನೀರಿನಿಂದ ತೊಳೆಯುವುದರಿಂದ ಮುಖಕ್ಕೆ ಅಂಟಿದ ಕೊಳೆಯೆಲ್ಲ ಹೋಗಿ ಮುಖದ ಚರ್ಮ ಶುಭ್ರವಾಗುತ್ತದೆ

ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *