ಜನವರಿಯಲ್ಲಿ ಸಂಕ್ರಾಂತಿಯ ನಂತರ ಪ್ರಾರಂಭವಾಗುವ ಈ ಋತು ಮಾರ್ಚ್ ತಿಂಗಳ ಮಧ್ಯದವರೆಗೂ ಇರುತ್ತದೆ. ಈ ಕಾಲದಲ್ಲಿ ಹಸಿವೆ ಹೆಚ್ಚಾಗುತ್ತದೆ. ಹಾಗಾಗಿ ಆಹಾರ ಚೆನ್ನಾಗಿ ಸೇವಿಸಬೇಕೆಂದು ಆಯುರ್ವೇದ ಹೇಳುತ್ತದೆ. ಜಾಸ್ತಿ ಆಹಾರ ಸೇವಿಸದಿದ್ದರೆ ರಸಧಾತು ಕ್ಷೀಣವಾಗಿ ವ್ಯಕ್ತಿ ದುರ್ಬಲನಾಗುತ್ತಾನೆ. ಈ ಕಾಲದಲ್ಲಿ ಬೆಳಗ್ಗೆ ಚಳಿ ಗಾಳಿ ಹೆಚ್ಚಾಗಿ, ಇಡೀ ದಿವಸ ಒಣಹವೆ ಇರುತ್ತದೆ. ಈ ಋತುವಿನಲ್ಲಿ ಅನುಸರಿಸಬೇಕಾದ ಆಹಾರ ಹಾಗೂ ಇತರ ಕ್ರಮಗಳು ಹೀಗಿವೆ.

  1. ಹಾಲು, ತುಪ್ಪ, ಎಣ್ಣೆ, ಅಕ್ಕಿ, ಗೋಧಿ, ರಾಗಿ, ಹೊಸ ಧಾನ್ಯಗಳು ಮುಂತಾದವುಗಳನ್ನು ಆಹಾರದಲ್ಲಿ ಹೆಚ್ಚಾಗಿ ಬಳಸಬೇಕು.
  2. ಮಾಂಸಹಾರಿಗಳಾದರೆ ನೀರು ಮತ್ತು ಚೌಗು ಪ್ರದೇಶದಲ್ಲಿ ವಾಸಿಸುವ ಪ್ರಾಣಿಗಳ ಮಾಂಸ ಸೇವಿಸಬಹುದು.
  3. ಪ್ರತಿ ದಿವಸ ಎಳ್ಳೆಣ್ಣೆ, ಹರಳೆಣ್ಣೆ ಅಥವಾ ಔಷಧಿಯುಕ್ತ ತೈಲಗಳಾದ ಕ್ಷೀರಬಲ ತೈಲ, ಮಹಾಮಾಷ ತೈಲ ಮುಂತಾದವುಗಳನ್ನು ಶರೀರಕ್ಕೆ ಲೇಪಿಸಿಕೊಂಡು ಸ್ನಾನಮಾಡಬಹುದು.
  4. ಸೂರ್ಯನ ಎಳೆ ಕಿರಣಗಳಿಗೆ ಮೈಯೊಡ್ಡಬಹುದು.
  5. ಪೋಷಕಾಂಶಗಳುಳ್ಳ ಭರ್ಜರಿ ಆಹಾರ ಸೇವಿಸಬಹುದು. ಆದರೆ ಖಾರ, ಹುಳಿ, ಒಗರು ಪದಾರ್ಥಗಳನ್ನು ಜಾಸ್ತಿ ಸೇವಿಸುವುದು ಬೇಡ.
  6. ಜೋರಾಗಿ ಬೀಸುವ ಗಾಳಿಗೆ, ಚಳಿಗೆ ಮೈಯೊಡ್ಡುವುದು ಹಿತಕರವಲ್ಲ.

ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *