ಪಾಲಕರು ಮತ್ತು ಫೋಷಕರಲ್ಲಿ ಕಾಡುವ ಪ್ರಶ್ನೆ ಏನೆಂದರೆ ಬೇಸಿಗೆ ರಜೆ (Summer Vacation) ಬಂತು ಮಕ್ಕಳನ್ನು ಯಾವ ಟ್ಯೂಷನ್‌ಗೆ ದಾಖಲಾತಿ ಮಾಡಿಸಬೇಕು ಅಥವಾ ಯಾವುದಾದರೂ ತರಬೇತಿ ಶಾಲೆಗಳಿದ್ದಾವೆಯೇ? ಎಂದು ಯೋಚಿಸುತ್ತಾರೆ. ಅಲ್ಲದೇ, ಬೇಸಿಗೆ ರಜೆಯಲ್ಲಿ ಮಕ್ಕಳ ಆರೋಗ್ಯವನ್ನು ಕಾಪಾಡುವುದು ಹೇಗೆ? ರಜೆ ಸಂದರ್ಭದಲ್ಲಿ ಆಲಸ್ಸಿಗಳಾಗದೆ ಆಕ್ಟಿವ್ ಆಗಿ ಇರುವಂತೆ ಮಾಡುವುದು ಹೇಗೆ? ಎಂದು ಯೋಚಿಸುತ್ತಿರುತ್ತಾರೆ. ಹೀಗಾಗಿ, ಫೋಷಕರಿಗೆ ಕೆಲ ಟಿಪ್ಸ್ ಇಲ್ಲಿವೆ. ಈ ಟಿಪ್ಸ್‌ಗಳು ಮಕ್ಕಳ ಬೇಸಿಗೆ ರಜೆಯನ್ನು ಸುಂದರವಾಗಿರಿಸುತ್ತವೆ. ಮಕ್ಕಳ ಕೈಯಿಂದ ಮೊಬೈಲ್ ಮತ್ತು ಟಿ.ವಿ. ಗಳಿಂದ ಹೇಗೆ ದೂರ ಮಾಡುವುದು ಎಂಬ ಚಿಂತೆಯೇ? ಭಯಬೇಡ ದೈನಂದಿನ ಚಟುವಟಿಕೆಗಳಲ್ಲಿ ಸ್ವಲ್ಪ ಬದಲಾವಣೆಯಾದರೆ ಸಾಕು. 1. ಮಕ್ಕಳನ್ನ ಬೇಸಿಗೆ ರಜೆ ಎಂದು ಬೆಳಗಿನ ಜಾವ ಲೇಟಾಗಿ ಎಬ್ಬಿಸುವ ಬದಲು ಬೇಗ ಎಬ್ಬಿಸಿ. 2. ಬೆಳಿಗ್ಗೆ ಎದ್ದ ತಕ್ಷಣ ಮಕ್ಕಳಿಗೆ ವ್ಯಾಯಾಮದ ಬಗ್ಗೆ ತಿಳಿಹೇಳಿ ವ್ಯಾಯಾಮಗಳನ್ನು ಮಾಡಿಸಿ ನಂತರ ಪ್ರತಿದಿನ ಮಾಡಲು ಹೇಳಿ. 3. ಯೋಗಾಸನ ಜೀವನದ ಪ್ರಮುಖ ಅಂಗ ವ್ಯಾಯಾಮದೊಂದಿಗೆ ಯೋಗದ ಬಗ್ಗೆ ಹೇಳಿ ಯೋಗಾಸನದ ರೂಢಿಯನ್ನು ಮಕ್ಕಳಲ್ಲಿ ಬೆಳೆಸಿ 4. ಯೋಗ ಮತ್ತು ವ್ಯಾಯಾಮದಿಂದ ಮಕ್ಕಳಲ್ಲಿ ಮನಶಾಂತಿ, ಸದೃಢತೆ, ಧೈರ್ಯ, ನೆನಪಿನ ಶಕ್ತಿ, ಹಾಗೂ ಆರೋಗ್ಯ ಸುಧಾರಣೆಯು ಕಂಡುಬರುತ್ತದೆ. 5. ಯೋಗ ಮತ್ತು ವ್ಯಾಯಾಮದ ನಂತರ ಸ್ವಚ್ಛವಾಗಿ ಸ್ನಾನ ಹಾಗೂ ಬೆಳಗಿನ ಉಪಹಾರವನ್ನು ನೀಡಿ. 6. ಉಪಹಾರದ ನಂತರ ಮಕ್ಕಳಿಗೆ ದಿನಪತ್ರಿಕೆಗಳ ಬಗ್ಗೆ ಹಾಗೂ ದಿನಪತ್ರಿಕೆಗಳಲ್ಲಿರುವ ಪ್ರಮುಖ ಅಂಶಗಳ ಬಗ್ಗೆ ಸಣ್ಣದಾಗಿ ನೋಟ್ ಪುಸ್ತಕದಲ್ಲಿ ಬರೆಯಲು ಹೇಳಿ. ಇದರಿಂದ ಸಾಮಾನ್ಯ ಪ್ರವೇಶ ಪರೀಕ್ಷೆಗಳಿಗೆ ಉಪಯುಕ್ತವಾಗುವಂತ ಅಂಶಗಳನ್ನು ಮಕ್ಕಳು ತಿಳಿದುಕೊಳ್ಳುವುದರ ಜೊತೆಗೆ ನಮ್ಮ ಸುತ್ತಮುತ್ತಲಿನಲ್ಲಿ ನಡೆಯುವ ಘಟನಾವಳಿಗಳನ್ನು ತಿಳಿದುಕೊಳ್ಳುತ್ತಾರೆ. 7. ಕೆಲವು ಮಕ್ಕಳಿಗೆ ದಿನಪತ್ರಿಕೆಗಳಲ್ಲಿ ಹಾಗೂ ವಾರಪತ್ರಿಕೆಗಳಲ್ಲಿ ಬರುವಂತಹ ಸೊ~ಡು~ಕು ಮತ್ತು ಪದಬಂಧಗಳನ್ನು ತುಂಬಲು ಹೇಳಿ, ಇದರಿಂದ ಮಕ್ಕಳಲ್ಲಿ ಶಬ್ದಗಳ ಜ್ಞಾನ ಹಾಗೂ ಶಬ್ದ ಭಂಡಾರ ಉತ್ತಮಗೊಳ್ಳುತ್ತದೆ ಮಾತಿನ ಕಲೆ ಬೆಳೆಯುತ್ತದೆ. 8. ಮಕ್ಕಳಿಗಾಗಿ ಬೇಸಿಗೆ ರಜೆ ಸುಂದರವಾಗಲು ಕೆಲವು ಬಣ್ಣದ ಆಟ ಹಾಗೂ ಬಣ್ಣಗಳೊಂದಿಗೆ ಚಿತ್ರಗಳನ್ನು ಬಿಡಿಸುವುದು, ಬಿಡಿಸಿದ ಚಿತ್ರಗಳಿಗೆ ವಿವಿಧ ಬಣ್ಣಗಳನ್ನು ತುಂಬುವುದು ಇದರಿಂದ ಮಕ್ಕಳು ಪ್ರಕೃತಿ ಸೌಂದರ್ಯದ ಬಗ್ಗೆ ಹೆಚ್ಚು ಆಸಕ್ತಿ ಹೊಂದುವುದಲ್ಲದೆ, ಪರಿಸರದ ಬಗ್ಗೆ ಕಾಳಜಿ ಉಂಟಾಗುತ್ತದೆ. 9. ಮಕ್ಕಳಿಗಾಗಿ ಸುಂದರವಾದ ಬಣ್ಣಗಳಿಂದ ಕೂಡಿದ ಚಿತ್ರಗಳೊಂದಿಗೆ ಕಥೆಯನ್ನು ಹೇಳುವಂತಹ ಸಣ್ಣ ಸಣ್ಣ ಕಥೆಗಳ, ಮತ್ತು ಹಾಡುಗಳ, ಪುಸ್ತಕಗಳನ್ನ ತಂದಿಡಿ. ಅವುಗಳನ್ನು ಪ್ರತಿದಿನ ಒಂದು ಗಂಟೆ ಯಾದರೂ ಓದಲು ಹೇಳಿ ಮಕ್ಕಳು ಆ ಪುಸ್ತಕಗಳನ್ನು ಓದಿದ ನಂತರ ಆ ಪುಸ್ತಕದಲ್ಲಿರುವ ಕಥೆಗಳನ್ನು ನೀವು ಕೇಳಿ. ಆ ಕಥೆಗಳಲ್ಲಿ ಬರುವ ನೀತಿಯನ್ನು ದೈನಂದಿನ ಜೀವನಕ್ಕೆ ಅಳವಡಿಸಿಕೊಳ್ಳುವಂತಹ ಮಾರ್ಗದರ್ಶನ ಮಾಡಿ. 10. ಮಧ್ಯಾಹ್ನದ ಊಟದ ನಂತರ ಒಂದು ತಾಸಿನವರೆಗೆ ವಿಶ್ರಾಂತಿ ತೆಗೆದುಕೊಳ್ಳಲು ಹೇಳಿ ತದನಂತರ ಮನೆಯಲ್ಲಿ ಆಡುವ ಚೆಸ್, ಕೇರಮ್, ಬೋರ್ಡ್, ಹಾವು ಏಣಿ ಆಟ, ಹೀಗೆ ವಿವಿಧ ಆಟಗಳನ್ನು ಆಡಲು ಹೇಳಿ. 11. ಮಕ್ಕಳಿಗೆ ಸಾಯಂಕಾಲ ಟೀ, ಕಾಫೀ ಅಥವಾ ಹಾಲು ಇದರ ಜೊತೆಗೆ ಬಾಯಿಗೆ ರುಚಿಗೆ ಸ್ವಲ್ಪ ಸ್ನಾಕ್ಸ್ ಕೊಡಿ. 12. ಸ್ನಾಕ್ಸ್ ಕೊಟ್ಟ ನಂತರ ರಜಾ ದಿನದ ಹೋಂ ವರ್ಕ್ ಮಾಡಲು ಹೇಳಿ ಅದಾದ ನಂತರ ಮಕ್ಕಳ ಜೊತೆ ನೀವು ಸ್ವಲ್ಪ ಸಮಯ ಮಾತಾಡಿ ಅಥವಾ ಜೋಕ್ಸ್‌ಗಳನ್ನು ಹಂಚಿಕೊಂಡು ನಗು ನಗುತ್ತಾ ಮಕ್ಕಳ ಆಸಕ್ತಿಗಳನ್ನು ತಿಳಿದುಕೊಂಡು. ಅವರ ಆಸಕ್ತಿ ಅನುಸಾರ ಅವರ ಜೀವನದ ಗುರಿ ಸಾಧಿಸಲು ಮಾರ್ಗದರ್ಶನ ಮಾಡಿ. 13. ರಾತ್ರಿ ಊಟದ ನಂತರ ಬೇಗ ಮಲಗಲು ಹೇಳಿ ಮಲಗುವ ಮುಂಚೆ ಒಳ್ಳೆಯ ಸಾಧನೆಗೈದ ಹಾಗೂ ನಮ್ಮ ರಾಜ್ಯ ಮತ್ತು ನಮ್ಮ ದೇಶದ ಪ್ರಮುಖ ನಾಯಕರನ್ನು ನೆನೆಸಿಕೊಂಡು ಮಲಗಲು ಹೇಳಿ. ಈ ಎಲ್ಲ ಪ್ರಮುಖ ಅಂಶಗಳ ಜೊತೆಗೆ ಭಾನುವಾರದಂದು ತಾವು ತಮ್ಮ ಮಕ್ಕಳೊಂದಿಗೆ ದೇವಸ್ಥಾನ ಅಥವಾ ಹಚ್ಚಹಸಿರಾಗಿರುವ ಮಕ್ಕಳ ಉದ್ಯಾನವನಕ್ಕೆ ಕರೆದುಕೊಂಡು ಹೋಗಿ ಅವರೊಂದಿಗೆ ದಿನಪೂರ್ತಿ ಕಳೆಯುವುದು ಉತ್ತಮ. ನನಗೆ ತಿಳಿದ ಮಟ್ಟಿಗೆ ಈ ಕೆಳಗಿನ ಅಂಶಗಳು ಮಕ್ಕಳಲ್ಲಿನ ಮೊಬೈಲ್ ಮತ್ತು ಟಿವಿ ವ್ಯಾಮೋಹಕ್ಕೆ ಒಳಗಾಗುವುದಕ್ಕಿಂತ ಪ್ರಕೃತಿಯೊಂದಿಗೆ ದಷ್ಟಪುಷ್ಟವಾಗಿ ಬೆಳೆಯುತ್ತವೆ ಮತ್ತು ಮಕ್ಕಳು ಪಾಲಕರ ನಡುವಿನ ಸಂಬಂಧ ಗಟ್ಟಿಗೊಳ್ಳುತ್ತದೆ. ಮಕ್ಕಳನ್ನು ಮನೆಯಲ್ಲಿ ಒಂಟಿ ರೂಮಿನಲ್ಲಿ ಕೂಡಿ ಹಾಕಿ ಬರಿ ಓದು ಓದು ಹೋಂವರ್ಕ್ ಮಾಡು ಎಂದು ಚಿತ್ರ ಹಿಂಸೆ ಕೊಡುವುದಕ್ಕಿಂತ ಈ ಮೇಲಿನ ಅಂಶಗಳನ್ನು ಮಾಡುವುದರಿಂದ ಮಕ್ಕಳಲ್ಲಿ ಬದಲಾವಣೆಗಳನ್ನು ಹಾಗೂ ಸ್ನೇಹ ಸಂಬಂಧಗಳನ್ನು ಗಟ್ಟಿಗೊಳಿಸುತ್ತವೆ. ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ Post navigation Ayurveda Health Tips: ಶಿಶಿರ ಋತುವಿನಲ್ಲಿ ಸೇವಿಸಬಹುದಾದ ಆಹಾರ Ayurveda Health Tips: ತಿಂದ ಆಹಾರವು ಸರಿಯಾಗಿ ಜೀರ್ಣವಾಗಲು ಮನೆಮದ್ದು