ಆಯುರ್ವೇದ (Ayurveda) ಗ್ರಂಥದಲ್ಲಿ ‘ಜಗತೈವ ಮಹೌಷಧಂ’ ಎಂಬ ಸುಪ್ರಸಿದ್ಧ ಹೇಳಿಕೆ ಇದೆ. ಎಂದರೆ ‘ಜಗತ್ತಿನಲ್ಲಿರುವುದೆಲ್ಲ ಔಷಧಿಯೇ. ಆದರೆ, ನಮ್ಮ ಸಂಪರ್ಕಕ್ಕೆ ಬರುವ ವಸ್ತುಗಳ ಔಷಧೀಯ ಗುಣದ ಪರಿಚಯವಾದಾಗ ಮಾತ್ರ ನಮಗೆ ಅದರ ಅರಿವಾಗುವುದು. ನಾವು ತಿಂದು ಅಥವಾ ಬಳಸಿ ಬಿಸಾಡುವ ಅನೇಕ ಹಣ್ಣು, ತರಕಾರಿ, ದವಸ ಧಾನ್ಯಗಳ ತ್ಯಾಜ್ಯಗಳಲ್ಲಿ ಬಹಳಷ್ಟು ಔಷಧೀಯ ಸತ್ತ ಗಳಿರುತ್ತವೆ. ಅದನ್ನು ತಿಳಿದು ಬಳಸಿಕೊಳ್ಳುವುದರಿಂದ ಬಹಳಷ್ಟು ಸಮಯ, ಹಣ, ಪರಿಶ್ರಮಗಳ ಉಳಿತಾಯವಾಗುತ್ತದೆ. ಅಲ್ಲದೆ ಒಂದು ಉಪಯುಕ್ತ ವಸ್ತುವಿನ ಸಮರ್ಪಕ ಬಳಕೆಯಾದಂತಾಗುತ್ತದೆ! ಮನೆಯಲ್ಲಿ ನಾವು ದಿನನಿತ್ಯ ಬಳಸುವ ವಸ್ತುಗಳಲ್ಲಿನ ಸಿಪ್ಪೆಗಳನ್ನು ಹೇಗೆ ಆರೋಗ್ಯದ ಹಾಗೂ ಸೌಂದರ್ಯದ ವೃದ್ಧಿಗಾಗಿ ಬಳಸಬಹುದು. ಸೌತೆಕಾಯಿ ಸಿಪ್ಪೆಯನ್ನು ಒರಳಲ್ಲಿ ಅಥವಾ ಮಿಕ್ಸರ್ನನಲ್ಲಿ ಹಾಕಿ ತಿರುಗಿಸಿ, ಬರುವ ಕಲ್ಕವನ್ನು ಮುಖ, ಕತ್ತು ಹಾಗೂ ಕಣ್ಣುಗಳ ಸುತ್ತ ಹಚ್ಚಿಕೊಳ್ಳಿ. 15-20 ನಿಮಿಷಗಳ ನಂತರ ತೊಳೆಯಿರಿ. ಇದು ಮುಖದ ಚರ್ಮದ ವರ್ಣವನ್ನು ಹಾಗೂ ಕಾಂತಿಯನ್ನು ವೃದ್ಧಿಸುತ್ತದೆ. ಮೊಡವೆ, ಕಪ್ಪುಚುಕ್ಕೆ ಹಾಗೂ ಮುಖದ ಶುಷ್ಕತೆಯನ್ನು ನಿವಾರಿಸುತ್ತದೆ. ಸಾಮಾನ್ಯವಾಗಿ ಹಣ್ಣು, ತರಕಾರಿ ಸಿಪ್ಪೆಗಳಲ್ಲಿ ಚರ್ಮದ ಆರೋಗ್ಯಕ್ಕೆ ಬೇಕಾದ ಕ್ಯಾಲ್ಸಿಯಂ, ಗಂಧಕ, ಕಬ್ಬಿಣ, ತಾಮ್ರ, ಸತು ಮುಂತಾದ ಖನಿಜಾಂಶಗಳಲ್ಲದೆ ವಿಟಮಿನ್ ಎ. ಬಿ. ಸಿ ಹಾಗೂ ಹೇರಳವಾಗಿರುವುದರಿಂದ ಅವುಗಳ ಬಳಕೆಯು ಮುಖದ ಋಜುತ್ವವನ್ನು ಹಾಗೂ ಚರ್ಮ ಪುನರ್ಜೀವಗೊಳಿಸುವ ರಾಸಾಯನಿಕ ಕ್ರಿಯೆಯನ್ನು ಚುರುಕುಗೊಳಿಸುವ ಚರ್ಮ ಶೋಧಕಗಳಾಗಿ ವರ್ಧಕಗಳಾಗಿ ಕಾರ್ಯ ನಿರ್ವಹಿಸುತ್ತವೆ. ಇದೇ ರೀತಿ ನಾವು ಬಳಸುವ ಅನೇಕ ತರಕಾರಿ ಹಾಗೂ ಹಣ್ಣುಗಳ ಬೀಜಗಳಿಗೆ ರಸಾಯನ, ವಾಜೀಕರಣ ಹಾಗೂ ಬೃಂಹಣ ಗುಣಗಳಿದ್ದು ಅವುಗಳನ್ನು ಕೆಂಡದ ಮಧ್ಯದಲ್ಲಿಟ್ಟು ಬೇಯಿಸಿ ನಂತರ ಅದರ ಹೊಟ್ಟನ್ನು ಸುಲಿದು ತಿನ್ನುವುದರಿಂದ ಶರೀರದ ಬಲ ಹಾಗೂ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಪರಂಗಿ ಹಣ್ಣಿನ ರುಚಿಯಾದ ತಿರುಳನ್ನು ತಿಂದ ನಂತರ ಅದರ ಬೀಜಗಳನ್ನು ಬಿಸಾಡುತ್ತಾರೆ. ಈ ಬೀಜಗಳಿಗೆ ಹೊಟ್ಟೆಯಲ್ಲಿನ ಕ್ರಿಮಿಗಳನ್ನು ನಿವಾರಿಸುವ ಗುಣ ಇರುವುದರಿಂದ ಇವುಗಳನ್ನು ನೆರಳಿನಲ್ಲಿ ಒಣಗಿಸಿ ಪುಡಿ ಮಾಡಿ ಮಕ್ಕಳಿಗೆ ಜೇನುತುಪ್ಪದಲ್ಲಿ ಅಥವಾ ಬಿಸಿನೀರಿನಲ್ಲಿ ದಿವಸಕ್ಕೆ ಎರಡಾವರ್ತಿಯಂತೆ ಕಾಲು ಚಮಚ ಪ್ರಮಾಣದಲ್ಲಿ 3-4 ದಿವಸ ನೀಡಿದರೆ ಹೊಟ್ಟೆಯಲ್ಲಿ ಹುಳುಗಳ ಉಪಟಳ ಕಮ್ಮಿಯಾಗುತ್ತದೆ. ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ Post navigation ಮುಖದ ಮೇಲಿನ ಕಲೆ ನಿವಾರಿಸಿ ಚರ್ಮ ಮೃದುಗೊಳಿಸಿ ಕಾಂತಿಯುಕ್ತವಾಗಿಸಲು ಮನೆ ಮದ್ದು ರಕ್ತಭೇದಿ, ರಕ್ತಸ್ರಾವವಿರುವ ಮೂಲವ್ಯಾಧಿ ತಡೆಯುತ್ತೆ ಮಾವಿನಹಣ್ಣಿನ ಓಟೆಯಲ್ಲಿನ ಬೀಜ