ಸೊಂಟದ (Belly) ಸೌಂದರ್ಯವು ವ್ಯಕ್ತಿಯ ಸುಂದರ ಅಂಗಸೌಷ್ಠವಕ್ಕೆ ಎಷ್ಟು ಮುಖ್ಯವೋ ಅದಕ್ಕಿಂತ ಮಿಗಿಲಾಗಿ ವ್ಯಕ್ತಿಯ ಆರೋಗ್ಯವನ್ನು (Health) ಕಾಪಾಡಿ ಕೊಳ್ಳುವುದರಲ್ಲಿ ಮಹತ್ತ್ವದ್ದಾಗಿ ಅಷ್ಟೇ ಮುಖ್ಯ. ಬೊಜ್ಜನ್ನು ಬೆಳೆಸಿಕೊಳ್ಳುವುದು ಹೃದ್ರೋಗ, ಸಕ್ಕರೆ ಖಾಯಿಲೆ, ಹೆಚ್ಚಿನ ರಕ್ತದೊತ್ತಡ, ಗರ್ಭಾಶಯದ ತೊಂದರೆಗಳು, ಜೀರ್ಣಾಂಗದ ವಿಕಾರಗಳು, ಮೂಲವ್ಯಾಧಿ, ಕಾಲಿನ ನರಗಳ ತೊಂದರೆಗಳು ಮುಂತಾದವಕ್ಕೆ ಆಹ್ವಾನ ನೀಡಿದಂತೆ. ಹಾಗಾಗಿ ಸುಂದರ ಕಾಯಕ್ಕೆ ಮಾತ್ರವಲ್ಲದೆ ಆರೋಗ್ಯಪೂರ್ಣ ಜೀವನಕ್ಕೂ ಸೊಂಟದ ಸೌಂದರ್ಯವನ್ನು ಕಾಪಾಡಿಕೊಳ್ಳುವುದು ಮುಖ್ಯವಾಗಿದೆ. ಸೊಂಟದ ಭಾಗದಲ್ಲಿನ ಬೊಜ್ಜು ಕರಿಗಿಸಿಕೊಳ್ಳಲು ಮಾಡಬೇಕಾದ ವ್ಯಾಯಾಮ ಮತ್ತು ಮನೆಮದ್ದು ಇಲ್ಲಿದೆ. ವ್ಯಾಯಾಮ ಪ್ರತಿನಿತ್ಯ ಕನಿಷ್ಠಪಕ್ಷ ಬೆಳಗ್ಗೆ ಒಂದು ಗಂಟೆ ಮತ್ತು ಸಂಜೆ ಅರ್ಧಗಂಟೆ ಬಿರುಸಿನ ನಡಿಗೆ ಇಟ್ಟುಕೊಳ್ಳಿ. ತರುಣ ತರುಣಿಯರಾದರೆ ಓಡುವುದು, ಹಗ್ಗದಾಟ, ತ್ರೆಡ್‌ಮಿಲ್, ಸೈಕ್ಲಿಂಗ್ ಮುಂತಾದ ತುಸು ಆಯಾಸಕರ ವ್ಯಾಯಾಮವನ್ನು ಮಾಡಿ. ಸಾಮಾನ್ಯವಾಗಿ ಹೊಟ್ಟೆಯನ್ನು ಹಿಸುಕುವ ಅಂದರೆ ಒಳಗೆಳೆದುಕೊಳ್ಳುವ ವ್ಯಾಯಾಮಗಳಾದ ಬಗ್ಗುವುದು, ಮಲಗಿ ಎರಡು ಕಾಲುಗಳನ್ನು ಹೊಟ್ಟೆಯಮೇಲೆ ಹಾಕಿಕೊಂಡು ಮೂಗಿನ ತುದಿ ಎರಡು ಮೊಣಕಾಲುಗಳನ್ನು ಮುಟ್ಟುವಂತೆ ಮಾಡುವುದು ಒಳ್ಳೆ ಫಲಿತಾಂಶವನ್ನು ನೀಡುತ್ತದೆ. ಸೂರ್ಯನಮಸ್ಕಾರದ ಊರ್ಧ್ವಾಸನ, ಉತ್ಥಾನಾಸನ, ಏಕಪಾದಪ್ರಸರಣಾಸನ, ದ್ವಿಪಾದ ಪ್ರಸರಣಾಸನ, ಭುಜಂಗಾಸನ, ಅಧೋಮುಖಶ್ವಾನಾಸನ, ಅಷ್ಟಾಂಗ ನಮಸ್ಕಾರ ಇವು ಉದರದ ಹೆಚ್ಚಿನ ಕೊಬ್ಬನ್ನು ಕರಗಿಸಿ ನೀಟಾದ ಸೊಂಟ ಸೌಂದರ್ಯವನ್ನು ನೀಡುತ್ತವೆ. ಮನೆ ಔಷಧಿ ಬೆಟ್ಟದ ನೆಲ್ಲಿಕಾಯಿ ಚೂರ್ಣ 3ಗ್ರಾಂ, ಬಾಲ್ಲಿ ಚೂರ್ಣ ಗ್ರಾಂ ನೀರಿನಲ್ಲಿ ದಿವಸಕ್ಕೆ 2 ಸಾರಿ ಸೇವಿಸಬಹುದು. ಅಮೃತಬಳ್ಳಿ, ದೇವದಾರು, ಕೊನ್ನಾರಿಗಡ್ಡೆ (ತ್ರಿಫಲ) ಇವಿಷ್ಟನ್ನು ಸಮಪ್ರಮಾಣದಲ್ಲಿ ತೆಗೆದುಕೊಂಡು ಪುಡಿಮಾಡಿ ಅದರ ಚೂರ್ಣವನ್ನು ಅರ್ಧ ಚಮಚ ಪ್ರಮಾಣದಲ್ಲಿ ಮಜ್ಜಿಗೆಯಲ್ಲಾಗಲೀ, ಜೇನುತುಪ್ಪದಲ್ಲಾಗಲೀ ತೆಗೆದುಕೊಳ್ಳಬೇಕು. ಜೇನುತುಪ್ಪ ಹಾಗೂ ಕಾದಾರಿದ ನೀರನ್ನು ಆಹಾರದ ನಂತರ ಸೇವಿಸುವುದು ತೂಕವನ್ನು ಇಳಿಸುತ್ತದೆ. ಬಿಲ್ವಾದಿ ಪಂಚಮೂಲ, ಅಂದರೆ ಬಿಲ್ವ, ಗಂಭಾರಿ, ಅಗ್ನಿಮಂಥ, ಪಾಟಲ ಹಾಗೂ ಶೈನಾಕ- ಸಮಪ್ರಮಾಣದಲ್ಲಿ ಇವುಗಳನ್ನು ತೆಗೆದುಕೊಂಡು ಚೂರ್ಣ ಮಾಡಿ ಅದರ ಒಂದು ಗ್ರಾಂ ಚೂರ್ಣವನ್ನು ಜೇನುತುಪ್ಪದಲ್ಲಿ ದಿವಸಕ್ಕೆ 2 ಸಲ ತೆಗೆದುಕೊಳ್ಳಬೇಕು. ಕೊನ್ನಾರಿಗಡ್ಡೆ, ಅಶ್ವಗಂಧ, ಪಾಠ, ತ್ರಿಫಲ, ದೇವದಾರು, ಗೋಕೂರ, ಖದಿರ, ನಿಂಬ, ಅರಿಸಿನ, ದಾರುಹರಿದ್ರಾ, ವತ್ಸಕ ಇವೆಲ್ಲವುಗಳನ್ನು ಸೇರಿಸಿ ತಯಾರಿಸಿದ ಕಷಾಯವನ್ನು ನಿಯಮಿತವಾಗಿ ಸೇವಿಸುವುದು ಸ್ಥಲ್ಯ ಹಾಗೂ ಬೊಜ್ಜುತನದ ವಿಕಾರಗಳನ್ನು ನಿವಾರಿಸುತ್ತದೆ. ಸೂಚನೆ: ಪ್ರತಿ ವ್ಯಕ್ತಿಯ ದೇಹಪ್ರಕೃತಿ, ಆರೋಗ್ಯ ಸ್ಥಿತಿ ಹಾಗೂ ರೋಗಾವಸ್ಥೆ ವಿಭಿನ್ನವಾಗಿರುವುದರಿಂದ, ಸೂಕ್ತ ಮಾರ್ಗದರ್ಶನಕ್ಕಾಗಿ ನುರಿತ ಆಯುರ್ವೇದ ವೈದ್ಯರನ್ನು ಸಂಪರ್ಕಿಸಿ ನಂತರವೇ ಅನುಸರಿಸಬೇಕು. ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ Post navigation Ayurveda Health Tips: ಬಳಕುವ ಸೊಂಟ ಭಾರವಾಗದಿರಲಿ, ಬೊಜ್ಜು ಕರಗಿಸಲು ಆಹಾರ ಕ್ರಮ ಈ ರೀತಿ ಇರಲಿ Ayurveda Health Tips: ಕುರುಗಳು ಶೀಘ್ರ ನಿವಾರಣೆಗೆ ಮನೆ ಮದ್ದುಗಳು