Ayurveda Health Tips: Diet plan to reduce belly fat in kannadaಸಾಂದರ್ಭಿಕ ಚಿತ್ರ

ಇತ್ತೀಚಿನ ದಿನಗಳಲ್ಲಿ ಬೊಜ್ಜಿನಿಂದ ಬಿಡುಗಡೆ ಹೊಂದಿ ಸೊಂಟದ ಸೌಂದರ್ಯವನ್ನು ಕಾಪಾಡಿಕೊಳ್ಳಬೇಕೆಂಬ ಆಸೆ ಎಲ್ಲರಿಗೂ ಇದೆ. ಮೊದಲು ಮಹಿಳೆಯರಿಗಷ್ಟೆ ಮೀಸಲಾಗಿದ್ದ ಇದು ಈಗ ಪುರುಷರಲ್ಲೂ ಕಂಡುಬರುತ್ತಿದೆ.

ಕ್ರಮಬದ್ಧವಾದ ನಡುವು ಸೊಂಟ ಹಾಗೂ ಉದರ ಸ್ನಾಯುಗಳ ಬಿಗಿ ಮತ್ತು ಕಡಮೆ ಕೊಬ್ಬಿನ ಸಂಚಯದ ಮೇಲೆ ಅವಲಂಬಿತವಾಗಿದೆ. ಈ ರೀತಿ ಆರೋಗ್ಯಪೂರ್ಣ ಸೊಂಟ ಕೇವಲ ಆಕರ್ಷಕವಾಗಿ ಮಾತ್ರ ಇರದೆ ಸೊಂಟ ನೋವು ಬರದಂತೆ ಮಾಡುತ್ತದೆ, ಹಾಗೂ ಇತರ ದೈಹಿಕ ಚಟುವಟಿಕೆಗಳನ್ನು ಅನಾಯಾಸವಾಗಿ ಮಾಡುವಂತೆ ನೆರವಾಗುತ್ತದೆ.

ದೇಹದ ತೂಕ ಹೆಚ್ಚಾಗಿ, ಸೊಂಟದ ಸುತ್ತಲಿನ ಬೊಜ್ಜಿನ ಸಮಸ್ಯೆ ಜಾಸ್ತಿಯಾದರೆ, ಸೌಂದರ್ಯ ಹಾಳಾಗುವುದರ ಜೊತೆಗೆ ದೀರ್ಘಕಾಲದ ಕಾಯಿಲೆಗಳು ಕೂಡ ಆವರಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಹೀಗಾಗಿ ಸರಿಯಾದ ಆಹಾರಪದ್ಧತಿ ಹಾಗೂ ಜೀವನಶೈಲಿ ನಡೆಸಿದರೆ ಈ ಸಮಸ್ಯೆಯಿಂದ ಪಾರಾಬಹುದು.

ಬೊಜ್ಜಿನ ನಿವಾರಣೋಪಾಯಗಳನ್ನು 4 ಹಂತದಲ್ಲಿ ನಿಭಾಯಿಸಬೇಕಾಗುತ್ತದೆ. 1) ಆಹಾರ, 2) ವ್ಯಾಯಾಮ, 3) ಚಿಕಿತ್ಸಾ ವಿಧಾನ, 4) ಔಷಧಿಸೇವನೆ. ಈ ಕ್ರಮಗಳನ್ನು ಅನುಸರಿಸುವುದು ಅತಿ ಸೌಲ್ಯದ ನಿರ್ವಹಣೆಗೂ ಸಹಾಯಕವಾಗಿದೆ.

ಆಹಾರ:

  1. ಊಟಕ್ಕೆ ಮೊದಲು ಒಂದೆರಡು ಲೋಟ ನೀರು ಕುಡಿಯಿರಿ. ಇದರಿಂದ ಆಹಾರದ ಸೇವನೆ ಪ್ರಮಾಣ ಕಡಿಮೆಯಾಗುತ್ತದೆ.
  2. ಹೊಟ್ಟೆಯನ್ನು 4 ಭಾಗ ಮಾಡಿ ಮೊದಲೆರಡು ಭಾಗವನ್ನು ಗಟ್ಟಿ ಆಹಾರ ದಿಂದಲೂ, ಇನ್ನೊಂದು ಭಾಗವನ್ನು ನೀರಿನಿಂದಲೂ ಹಾಗೂ ಕೊನೆಯ ಭಾಗವನ್ನು ವಾಯು ಸಂಚಾರಕ್ಕೂ ಖಾಲಿ ಬಿಡಬೇಕು.
  3. ದಿನಕ್ಕೆ 2 ಬಾರಿ ಆಹಾರ ಸೇವಿಸುವುದನ್ನು ರೂಢಿಸಿಕೊಳ್ಳಿ.
  4. ರಾತ್ರಿಯ ಆಹಾರ ಸ್ವಲ್ಪ ಕಮ್ಮಿ ಇರಲಿ. ರಾತ್ರಿ ವೇಳೆ ಹೊಟ್ಟೆ ಬಿರಿಯುವಂತೆ ತಿನ್ನುವುದು ಬೇಡ. ಸಿಹಿ ಪದಾರ್ಥ, ಎಣ್ಣೆ ಪದಾರ್ಥ ಹಾಗೂ ಮೊಸರು ತಿನ್ನುವುದು ಬೇಡ.
  5. ರಾತ್ರಿ ಮಲಗುವುದಕ್ಕೆ ಮೊದಲು 4 ಲೋಟ ನೀರನ್ನು ಚೆನ್ನಾಗಿ ಕುದಿಸಿ ಒಂದು ಲೋಟಕ್ಕೆ ಇಂಗಿಸಿಕೊಂಡು ಕಾಫಿಯಂತೆ ಚೀಪುತ್ತಾ ಕುಡಿಯುವ ಅಭ್ಯಾಸವನ್ನು ರೂಢಿಸಿಕೊಳ್ಳಿ. ಇದಾದ ನಂತರ ಬೇರೇನನ್ನೂ ಸೇವಿಸಬೇಡಿ.
  6. ನಿಮ್ಮ ದೈನಂದಿನ ಆಹಾರದಲ್ಲಿ ಸಿಹಿಪದಾರ್ಥಗಳನ್ನು, ಎಣ್ಣೆ ಪದಾರ್ಥಗಳನ್ನು, ಹಾಲಿನ ಉತ್ಪನ್ನಗಳನ್ನು ಕಡಿಮೆ ಮಾಡಿ.
  7. ಪದೇಪದೇ ತಿನ್ನುವ ಅಭ್ಯಾಸ ಬಿಡಿ. ಅದರಲ್ಲೂ ಜಂಕ್‌ ಫುಡ್‌ಗಳನ್ನು ಕೂಡಲೇ ನಿಲ್ಲಿಸುವುದು ಅತೀ ಮುಖ್ಯ.
  8. ಆಹಾರದಲ್ಲಿ ಗಟ್ಟಿ ಪದಾರ್ಥಗಳ ಸೇವನೆ ಕಮ್ಮಿ ಇರಲಿ. ನೀರಾಗಿರುವ ಹಾಗೂ ಮೆದುಪದಾರ್ಥಗಳ ಸೇವನೆ ಮಾಡಿ. ಮಧುರ, ಆಮ್ಲ, ಲವಣ ಅಂದರೆ ಸಿಹಿ, ಹುಳಿ, ಉಪ್ಪು ರುಚಿಯಿರುವ ಪದಾರ್ಥಗಳನ್ನು ಕಡಮೆ ಮಾಡಿ ಕಟು, ತಿಕ್ತ, ಕಷಾಯ ಅಂದರೆ ಖಾರ, ಕಹಿ ಹಾಗೂ ಒಗಚು ರುಚಿಯುಳ್ಳ ಆಹಾರ ಪದಾರ್ಥಗಳನ್ನು ಸೇವಿಸಿ.
  9. ಮಾಂಸಾಹಾರ ಕಡಿತಗೊಳಿಸಿ ಅಥವಾ ತ್ಯಜಿಸಿ.
  10. ಬೆಳಗಿನ ಉಪಹಾರ ಬಿಡಬೇಡಿ. ಮಧ್ಯಾಹ್ನ ಹಾಗೂ ರಾತ್ರಿ ಊಟ ಮಿತವಾಗಿರಲಿ.
  11. ಮೊದಲೇ ಸಿದ್ದಪಡಿಸಿದ ಸಂಸ್ಕರಿತ ಆಹಾರಗಳನ್ನು ತ್ಯಜಿಸಿ.

ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *