ಶೃಂಗೇರಿ ಶ್ರೀ ಶಾರದಾ ಪೀಠದ (Sringeri Sharada Peetha) ಬಾಲಭಾರತೀವತಿಯಿಂದ ಮಕ್ಕಳಲ್ಲಿ ಧಾರ್ಮಿಕ ಮೌಲ್ಯಗಳು, ನೈತಿಕತೆ ಹಾಗೂ ಸಂಸ್ಕಾರಗಳನ್ನು ಬೆಳೆಸುವ ಉದ್ದೇಶದಿಂದ “ಸಂಸ್ಕಾರ ಸುಧಾ” 7 / 14 ದಿನಗಳ ಬೇಸಿಗೆ ಶಿಬಿರವನ್ನು (Summer Camp) ಆಯೋಜಿಸಲಾಗಿದೆ. ಈ ಶಿಬಿರವನ್ನು ಶ್ರೀ ಶ್ರೀ ಜಗದ್ಗುರು ಶಂಕರಾಚಾರ್ಯ ಮಹಾಸಂಸ್ಥಾನದ ಆಶ್ರಯದಲ್ಲಿ ನಡೆಸಲಾಗುತ್ತಿದೆ. ಈ ಶಿಬಿರದಲ್ಲಿ ಮಕ್ಕಳಿಗೆ ಆಧುನಿಕ ಜ್ಞಾನ ಜೊತೆಗೆ ಭಾರತೀಯ ಸಂಸ್ಕೃತಿ ಹಾಗೂ ಧಾರ್ಮಿಕ ಮೌಲ್ಯಗಳನ್ನು ಪರಿಚಯಿಸುವ ಹಲವು ಚಟುವಟಿಕೆಗಳನ್ನು ಆಯೋಜಿಸಲಾಗಿದೆ. ಶಿಬಿರದಲ್ಲಿ ಸರಳ ನಿತ್ಯ ಪೂಜಾ ವಿಧಿಯ ತರಬೇತಿ ನೀಡಲಾಗುತ್ತದೆ. ಭಾರತದ ಇತಿಹಾಸದ ಪರಿಚಯ, ಸಂಸ್ಕೃತ ಭಾಷೆಯ ಮೂಲಭೂತ ಪಾಠಗಳು, ಧರ್ಮ ಮತ್ತು ಸಂಸ್ಕೃತಿಯ ಪರಿಚಯ ಮತ್ತು ವಿವಿಧ ಆಟಗಳು ಹಾಗೂ ವ್ಯಕ್ತಿತ್ವ ಅಭಿವೃದ್ಧಿ ಚಟುವಟಿಕೆಗಳು ನಡೆಯಲಿವೆ. ಈ ಶಿಬಿರದ ಮೂಲಕ ಮಕ್ಕಳು ಜ್ಞಾನ ಮತ್ತು ಸಂಸ್ಕಾರದ ಸಮತೋಲನ ಹೊಂದಿದ ಉತ್ತಮ ವ್ಯಕ್ತಿಗಳಾಗಿ ಬೆಳೆಬೇಕು ಎಂಬುದು ಆಯೋಜಕರ ಆಶಯವಾಗಿದೆ. ವಯೋಮಿತಿ: 10 ರಿಂದ 16 ವರ್ಷ ಶುಲ್ಕ: ಪ್ರವೇಶ ಉಚಿತ ಶಿಬಿರದಲ್ಲಿ ಭಾಗವಹಿಸಿದ ಎಲ್ಲಾ ಮಕ್ಕಳಿಗೂ ಪ್ರಮಾಣಪತ್ರ ನೀಡಲಾಗುತ್ತದೆ. ಆಸಕ್ತ ಪೋಷಕರು ತಮ್ಮ ಮಕ್ಕಳ ಹೆಸರನ್ನು ಇಂದೇ ನೋಂದಾಯಿಸಬಹುದು. ನೋಂದಣಿ ಲಿಂಕ್: tinyurl.com/SSCampKA ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ Post navigation AIIMS 2551 ನರ್ಸಿಂಗ್ ಹುದ್ದೆಗಳಿಗೆ ಅರ್ಜಿ ಆಹ್ವಾನ: ಅರ್ಜಿ ಸಲ್ಲಿಸುವುದು ಹೇಗೆ, ಅರ್ಹತೆ ಏನು? ಸಂಪೂರ್ಣ ಮಾಹಿತಿ ಇಲ್ಲಿದೆ SSLC Exam 2026: ಈ 12 ಟಿಪ್ಸ್ ಫಾಲೊ ಮಾಡಿದ್ರೆ ಎಸ್ಎಸ್ಎಲ್ಸಿಯಲ್ಲಿ ಉತ್ತಮ ಅಂಕ ಪಕ್ಕಾ