SSLC Exam 2026 12 tips to score good marksಅಗ್ನಿಸಾಕ್ಷಿ

ಕಲರ್ಸ್ ಕನ್ನಡ (Colours Kannada) ವಾಹಿನಿಯಲ್ಲಿ ಈ ಹಿಂದೆ ಭಾರೀ ಜನಪ್ರಿಯತೆ ಪಡೆದಿದ್ದ ‘ಅಗ್ನಿಸಾಕ್ಷಿ’ ಸೀರಿಯಲ್ (Agnisakshi Serial) ಮತ್ತೆ ಪ್ರೇಕ್ಷಕರ ಮುಂದೆ ಬರಲು ಸಿದ್ಧವಾಗಿದೆ. ಈ ಕುರಿತು ವಾಹಿನಿಯು ಹೊಸ ಪ್ರೋಮೋ ಬಿಡುಗಡೆ ಮಾಡಿದ್ದು, ಹಳೆಯ ಮ್ಯೂಸಿಕ್ ಬಳಸಿರುವುದು ವೀಕ್ಷಕರ ಗಮನ ಸೆಳೆದಿದೆ.

ಹೌದು ‘ಅಗ್ನಿಸಾಕ್ಷಿ’ ಸೀರಿಯಲ್ 2013ರ ಡಿಸೆಂಬರ್ 2ರಂದು ಪ್ರಸಾರ ಆರಂಭವಾಗಿತ್ತು. ನಂತರ ಸುಮಾರು 6 ವರ್ಷಗಳ ಕಾಲ ಯಶಸ್ವಿಯಾಗಿ ಪ್ರಸಾರಗೊಂಡ ಈ ಧಾರಾವಾಹಿ 2020ರ ಜನವರಿ 3ರಂದು ಅಂತ್ಯ ಕಂಡಿತ್ತು. ಒಟ್ಟು 1588 ಎಪಿಸೋಡ್ಗಳನ್ನು ಈ ಸೀರಿಯಲ್ ಪ್ರಸಾರ ಮಾಡಿತ್ತು. ಈ ಧಾರಾವಾಹಿಯಲ್ಲಿ ವೈಷ್ಣವಿ ಗೌಡ ಹಾಗೂ ವಿಜಯ್ ಸೂರ್ಯ ಮುಖ್ಯ ಪಾತ್ರಗಳಲ್ಲಿ ನಟಿಸಿ ಪ್ರೇಕ್ಷಕರ ಮನ ಗೆದ್ದಿದ್ದರು.‌

ನಾಯಕ ಯಾರು?

ಇದೀಗ ಈ ಧಾರಾವಾಹಿ ಮತ್ತೆ ಬರುತ್ತಿದೆ ಎಂಬ ಸುದ್ದಿ ಕೇಳಿ ಅಭಿಮಾನಿಗಳು ಖುಷಿಪಟ್ಟಿದ್ದಾರೆ. ಆದರೆ ಈ ಬಾರಿ ಧಾರಾವಾಹಿಯಲ್ಲಿ ನಾಯಕ ಯಾರು ಎಂಬ ಪ್ರಶ್ನೆ ಮೂಡಿದೆ. ಲಭ್ಯವಾದ ಮಾಹಿತಿಯ ಪ್ರಕಾರ ಈ ಧಾರಾವಾಹಿಗೆ ಶಮಂತ್ ಬ್ರೋ ಗೌಡ ನಾಯಕನಾಗಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಶಮಂತ್ ಬ್ರೋ ಗೌಡ ಈ ಮೊದಲು ‘ಲಕ್ಷ್ಮೀ ಬಾರಮ್ಮ’ ಧಾರಾವಾಹಿಯಲ್ಲಿ ನಟಿಸಿ ಗಮನ ಸೆಳೆದಿದ್ದರು. ಆ ಧಾರಾವಾಹಿ ಇತ್ತೀಚೆಗೆ ಮುಕ್ತಾಯಗೊಂಡಿದ್ದು, ಇದೀಗ ಅವರು ಹೊಸ ಧಾರಾವಾಹಿಯ ಮೂಲಕ ಮತ್ತೆ ಕಿರುತೆರೆಯಲ್ಲಿ ಮಿಂಚಲು ಸಜ್ಜಾಗಿದ್ದಾರೆ.

ಇನ್ನು ಅವರು ಬಿಗ್ ಬಾಸ್ ಕನ್ನಡ ಸೀಸನ್ 8ರಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದರು. ಅದರಲ್ಲೂ ಕೂಡ ಜಾಸ್ತಿ ಜನಪ್ರಿಯತೆ ಪಡೆದಿದ್ದರು. ಈಗ ‘ಅಗ್ನಿಸಾಕ್ಷಿ’ ಧಾರಾವಾಹಿಯ ಮೂಲಕ ಮತ್ತೆ ಪ್ರೇಕ್ಷಕರ ಮುಂದೆ ಬರಲು ಶಮಂತ್ ಬ್ರೋ ಗೌಡ ರೆಡಿಯಾಗಿದ್ದಾರೆ.

ಮತ್ತುಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *