ಹುಬ್ಬಳ್ಳಿ, ಮಾ.10: ನೈರುತ್ಯ ರೈಲ್ವೆಯು (South Western Railway) ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳ (Vande Bharat Express Train) ವೇಳಾಪಟ್ಟಿಯನ್ನು ನಿಗದಿತ ನಿಲ್ದಾಣಗಳಲ್ಲಿ ಪರಿಷ್ಕರಿಸಿದೆ. ಹೊಸ ವೇಳಾಪಟ್ಟಿ ಮಾರ್ಚ್ 15 ರಿಂದ ಜಾರಿಗೆ ಬರಲಿದೆ ಎಂದು ನೈರುತ್ಯ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಿದೆ. ಪರಿಷ್ಕೃತ ವೇಳಾಪಟ್ಟಿ ರೈಲು ಸಂಖ್ಯೆ 20669: ಹುಬ್ಬಳ್ಳಿ-ಪುಣೆ ಎಸ್ಎಸ್ಎಸ್ ಹುಬ್ಬಳ್ಳಿ-ಪುಣೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಬೆಳಗಾವಿಯಲ್ಲಿ ಬೆಳಗ್ಗೆ 07:05 ರಿಂದ 07:10 ಗಂಟೆ ಮತ್ತು ಘಟಪ್ರಭಾದಲ್ಲಿ ಬೆಳಗ್ಗೆ 07:48 ರಿಂದ 07:50 ರವರೆಗೆ ನಿಲುಗಡೆಯಾಗಲಿದೆ. ರೈಲು ಸಂಖ್ಯೆ 20661: ಬೆಂಗಳೂರು-ಧಾರವಾಡ ಕೆಎಸ್‌ಆರ್ ಬೆಂಗಳೂರು-ಧಾರವಾಡ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ದಾವಣಗೆರೆಯಲ್ಲಿ ಬೆಳಗ್ಗೆ 09:30 ರಿಂದ 09:32, ಹಾವೇರಿಯಲ್ಲಿ ಬೆಳಗ್ಗೆ 10:20 ರಿಂದ 10:22 ಮತ್ತು ಎಸ್‌ಎಸ್‌ಎಸ್ ಹುಬ್ಬಳ್ಳಿಯಲ್ಲಿ ಬೆಳಗ್ಗೆ 11:15 ರಿಂದ 11:20 ರವರೆಗೆ ನಿಲುಗಡೆಯಾಗಲಿದೆ. ರೈಲು ಸಂಖ್ಯೆ 20662: ಧಾರವಾಡ-ಬೆಂಗಳೂರು ಧಾರವಾಡ-ಕೆಎಸ್‌ಆರ್ ಬೆಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಹಾವೇರಿಯಲ್ಲಿ ಮಧ್ಯಾಹ್ನ 02:48 ರಿಂದ 02:50 ರವರೆಗೆ, ದಾವಣಗೆರೆಯಲ್ಲಿ ಮಧ್ಯಾಹ್ನ 03:33 ರಿಂದ 03:35 ರವರೆಗೆ ನಿಲುಗಡೆಯಾಗಲಿದೆ. ತುಮಕೂರು ನಿಲ್ದಾಣದ ಸಮಯದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಹಾಗೂ ಯಶವಂತಪುರ ನಿಲ್ದಾಣದಲ್ಲಿ ರಾತ್ರಿ 07:21 ರಿಂದ 07:23 ರವರೆಗೆ ನಿಲುಗಡೆಯಾಗಲಿದೆ. ರೈಲು ಸಂಖ್ಯೆ 26751: ಬೆಳಗಾವಿ-ಬೆಂಗಳೂರು ಬೆಳಗಾವಿ-ಕೆಎಸ್‌ಆರ್ ಬೆಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಹಾವೇರಿಯಲ್ಲಿ ಬೆಳಗ್ಗೆ 08:42 ರಿಂದ 08:44 ರವರೆಗೆ, ದಾವಣಗೆರೆಯಲ್ಲಿ ಬೆಳಗ್ಗೆ 09:28 ರಿಂದ 09:30 ರವರೆಗೆ, ತುಮಕೂರಿನಲ್ಲಿ ಮಧ್ಯಾಹ್ನ 12:15 ರಿಂದ 12:17ರವರೆಗೆ ಮತ್ತು ಯಶವಂತಪುರದಲ್ಲಿ ಮಧ್ಯಾಹ್ನ 01:23 ರಿಂದ 01:25 ರವರೆಗೆ ನಿಲುಗಡೆಯಾಗಲಿದೆ. ರೈಲು ಸಂಖ್ಯೆ 20704: ಬೆಂಗಳೂರು-ಕಾಚಿಗುಡ ಯಶವಂತಪುರ-ಕಾಚಿಗುಡ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಹಿಂದೂಪುರ ನಿಲ್ದಾಣದಲ್ಲಿ ಮಧ್ಯಾಹ್ನ 03:55 ರಿಂದ 03:57 ರವರೆಗೆ ನಿಲುಗಡೆಯಾಗಲಿದೆ. ರೈಲು ಸಂಖ್ಯೆ 20703: ಕಾಚಿಗುಡ-ಯಶವಂತಪುರ ಕಾಚಿಗುಡ-ಯಶವಂತಪುರ ವಂದೇ ಭಾರತ್ ಎಕ್ಸ್‌ಪ್ರೆಸ್ ಹಿಂದೂಪುರದಲ್ಲಿ ಮಧ್ಯಾಹ್ನ 12:17 ರಿಂದ 12:19 ರವರೆಗೆ ನಿಲುಗಡೆಯಾಗಲಿದೆ. ರೈಲು ಸಂಖ್ಯೆ 22231: ಕಲಬುರಗಿ-ಬೆಂಗಳೂರು ಕಲಬುರಗಿ-ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಶ್ರೀ ಸತ್ಯಸಾಯಿ ಪ್ರಶಾಂತಿ ನಿಲಯಂನಲ್ಲಿ ಬೆಳಗ್ಗೆ 11:13 ರಿಂದ 11:15 ರವರೆಗೆ ಮತ್ತು ಯಲಹಂಕದಲ್ಲಿ ಮಧ್ಯಾಹ್ನ 12:58 ರಿಂದ 01:00 ಗಂಟೆವರೆಗೆ ನಿಲುಗಡೆಯಾಗಲಿದೆ. ಹಿಂದಿರುಗುವ ದಿಕ್ಕಿನಲ್ಲಿ ರೈಲು ಸಂಖ್ಯೆ 22232: ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು-ಕಲಬುರಗಿ ವಂದೇ ಭಾರತ್ ರೈಲು ಯಲಹಂಕದಲ್ಲಿ ಮಧ್ಯಾಹ್ನ 03:09 ರಿಂದ 03:11 ರವರೆಗೆ ಮತ್ತು ಶ್ರೀ ಸತ್ಯಸಾಯಿ ಪ್ರಶಾಂತಿ ನಿಲಯಂನಲ್ಲಿ 04:45 ರಿಂದ 04:47ರವರೆಗೆ ನಿಲುಗಡೆಯಾಗಲಿದೆ. ಇದನ್ನೂ ಓದಿ: ಹೋಳಿ: ಹುಬ್ಬಳ್ಳಿ, ಬೆಂಗಳೂರು, ಬಳ್ಳಾರಿಯಿಂದ ವಿಶೇಷ ರೈಲು, ಬಾಗಲಕೋಟೆ-ವಿಜಯಪುರ ನಡುವೆ ಈ 2 ದಿನ ಟ್ರೈನ್ ಇಲ್ಲ ರೈಲು ಸಂಖ್ಯೆ 20642: ಕೊಯಮತ್ತೂರು-ಬೆಂಗಳೂರು ಕೊಯಮತ್ತೂರು-ಬೆಂಗಳೂರು ಕಂಟೋನ್ಮಂಟ್ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಹೊಸೂರು ನಿಲ್ದಾಣದಲ್ಲಿ ಮಧ್ಯಾಹ್ನ 12:13 ರಿಂದ 12:15 ರವರೆಗೆ ನಿಲುಗಡೆಯಾಗಲಿದೆ ಎಂದು ನೈರುತ್ಯ ರೈಲ್ವೆ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಟ್ವೀಟ್ ಮಾಡಿದೆ. ಟ್ವಿಟರ್ ಪೋಸ್ಟ್ Kindly note:SWR has decided to revise the timings of the following #VandeBharatExpress trains at mentioned stations. The revised timings will come into effect from 15 March 2026.ನೈರುತ್ಯ ರೈಲ್ವೆಯು ಕೆಳಕಂಡ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳ ವೇಳಾಪಟ್ಟಿಯನ್ನು ನಿಗದಿತ ನಿಲ್ದಾಣಗಳಲ್ಲಿ… pic.twitter.com/aNtouvxj0G— South Western Railway (@SWRRLY) March 9, 2026 ಪ್ರಯಾಣಿಕರು ಈ ಪರಿಷ್ಕೃತ ಸಮಯವನ್ನು ಗಮನಿಸಿ ತಮ್ಮ ಪ್ರಯಾಣವನ್ನು ಯೋಜಿಸತಕ್ಕದ್ದು ಎಂದು ತಿಳಿಸಿದೆ. ಮತ್ತುಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ Post navigation ಹೋಳಿ: ಹುಬ್ಬಳ್ಳಿ, ಬೆಂಗಳೂರು, ಬಳ್ಳಾರಿಯಿಂದ ವಿಶೇಷ ರೈಲು, ಬಾಗಲಕೋಟೆ-ವಿಜಯಪುರ ನಡುವೆ ಈ 2 ದಿನ ಟ್ರೈನ್ ಇಲ್ಲ ಮೈಸೂರು ಸಿಲ್ಕ್ ಸೀರೆಗಳಿಗೆ ಭಾರೀ ಬೇಡಿಕೆ: ಆನ್ಲೈನ್ ಮಾರಾಟ ತಾತ್ಕಾಲಿಕ ಸ್ಥಗಿತ