T20 ವಿಶ್ವಕಪ್‌ನ (T20 World Cup) ಇಂಗ್ಲೆಂಡ್ ಔಟ್, ಫೈನಲ್ ಪ್ರವೇಶಿಸಿದ ಭಾರತ ಎರಡನೇ ಸೆಮಿಫೈನಲ್ (Semifinal) ಭಾರತ ಮತ್ತು ಇಂಗ್ಲೆಂಡ್ ನಡುವಿನ ಪಂದ್ಯ ರೋಚಕತೆಯಿಂದ ಕೂಡಿತ್ತು. ಈ ಪಂದ್ಯದಲ್ಲಿ ಭಾರತ ಜಯಭೇರಿ ಬಾರಿಸಿದ್ದು, ಫೈನಲ್ ಗೆ ಪ್ರವೇಶಿಸಿದೆ. ಭಾರತ ಅದ್ಭುತ ಆಟವನ್ನು ಆಡಿ ಬಿಗ್ ಸ್ಕೋರ್ ಟಾರ್ಗೆಟ್ ನೀಡಿತ್ತು. ಟಾಸ್ ಗೆದ್ದು ಇಂಗ್ಲೆಂಡ್ ಬೌಲಿಂಗ್ ಆಯ್ದುಕೊಂಡಿತು. ಟಾಸ್ ಸೋತಿ ಬ್ಯಾಟಿಂಗ್ ಗೆ ಇಳಿದ ಭಾರತಕ್ಕೆ ಆರಂಭ ಆಘಾತ ಎದುರಾಯಿತು. ಆರಂಭಿಕ ಬ್ಯಾಟ್ಸಮನ್ ಅಭಿಷೇಕ ಶರ್ಮಾ 7 ಎಸೆತಗಳಲ್ಲಿ 9 ರನ್ ಹೊಡೆದು ವಿಲ್ ಜಾಕ್ಸ್ ಅವರ ಬೌಲಿಂಗ್‌ನಲ್ಲಿ ಫಿಲ್ ಸಾಲ್ಟ್ ಅವರಿಗೆ ಕ್ಯಾಚ್ ನೀಡಿ ಔಟ್ ಆದರು. ಇನ್ನು ಕಳೆದ ನಾಕ್‌ಔಟ್ ಪಂದ್ಯದಲ್ಲಿ ಭರ್ಜರಿ ಬ್ಯಾಟ್ ಬೀಸಿದ್ದ ಸಂಜು ಸ್ಯಾಮ್ಸನ್ ಕೂಡ ಈ ಪಂದ್ಯದಲ್ಲೂ ತಮ್ಮ ಆಕ್ರಮಣಕಾರಿ ಆಟವನ್ನು ಆಡಿದರು. 42 ಬಾಲ್‌ಗಳಲ್ಲಿ 89ರನ್ ಬಾರಿಸಿದರು. ಇನ್ನು, ಇಶಾನ್ ಕಿಶನ್ 39, ಶಿವಮ್ ದುಬೆ 43, ಸೂರ್ಯಕುಮಾರ್ ಯಾದವ್ 11, ಹಾರ್ದಿಕ್ ಪಾಂಡ್ಯ 27, ತಿಲಕ್ ವರ್ಮಾ 21, ಅಕ್ಷರ್ ಪಟೇಲ್ ನಾಟ್‌ಔಟ್ 2 ರನ್‌ಗಳನ್ನು ಕಲೆಹಾಕುವ ಮೂಲಕ ತಂಡದ ಮೊತ್ತವನ್ನು 253ಕ್ಕೆ ತಂದಿಟ್ಟರು. ಇಂಗ್ಲೆಂಡ್‌ಗೆ 254ರನ್‌ಗಳ ಟಾರ್ಗೆಟ್ ನೀಡಿತ್ತು. ಇದನ್ನೂ ಓದಿ: https://nesaranews.in/new-zealand-storm-into-final-t20-world-cup/ ಆದ್ರೆ, ಟಾರ್ಗೆಟ್ ಚೇಸ್ ಮಾಡುವಲ್ಲಿ ಇಂಗ್ಲೆಂಡ್ ತಂಡ ವಿಫಲವಾಯಿತು. 254 ರನ್‌ಗಳ ಭಾರೀ ಗುರಿಯನ್ನು ಬೆನ್ನಟ್ಟಿದ ಇಂಗ್ಲೆಂಡ್ ತಂಡಕ್ಕೆ, ಜೇಕಬ್ ಬೆಥೆಲ್ ಅವರ ಅದ್ಭುತ ಶತಕವೂ ಗೆಲುವು ತಂದುಕೊಡಲು ಸಾಧ್ಯವಾಗಲಿಲ್ಲ. ಅವರು ಕೇವಲ 48 ಚೆಂಡುಗಳಲ್ಲಿ 105 ರನ್‌ಗಳ ಸಿಡಿಲಿನ ಇನ್ನಿಂಗ್ಸ್ ಆಡಿದರೂ, ಇಂಗ್ಲೆಂಡ್ ತಂಡ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 246 ರನ್‌ಗಳಿಗೆ ಮಾತ್ರ ಸೀಮಿತವಾಯಿತು. ಭಾರತದ ಪರವಾಗಿ ಜಸ್ಪ್ರೀತ್ ಬುಮ್ರಾ (1/33) ಅತ್ಯಂತ ಯಶಸ್ವಿ ಬೌಲರ್ ಆಗಿ ಹೊರಹೊಮ್ಮಿದರು. ಹಾರ್ದಿಕ್ ಪಾಂಡ್ಯ (2/38) ಎರಡು ಪ್ರಮುಖ ವಿಕೆಟ್‌ಗಳನ್ನು ಪಡೆದು ತಂಡಕ್ಕೆ ನೆರವಾದರು. ಅರ್ಷದೀಪ್ ಸಿಂಗ್ (1/51), ಅಕ್ಷರ್ ಪಟೇಲ್ (1/35) ಮತ್ತು ವರುಣ್ ಚಕ್ರವರ್ತಿ (1/64) ತಲಾ ಒಂದು ವಿಕೆಟ್ ಪಡೆದು ಉತ್ತಮ ಪ್ರದರ್ಶನ ನೀಡಿದರು. ಇಂಗ್ಲೆಂಡ್ ಪರವಾಗಿ ವಿಲ್ ಜ್ಯಾಕ್ಸ್ (2/40) ಮತ್ತು ಆದಿಲ್ ರಶೀದ್ (2/41) ತಲಾ ಎರಡು ವಿಕೆಟ್ ಪಡೆದು ಭಾರತದ ಬ್ಯಾಟಿಂಗ್ ಮೇಲೆ ಒತ್ತಡ ತಂದರು. ಮತ್ತುಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ Post navigation T20 World Cup: ಫೈನಲ್ಗೆ ಲಗ್ಗೆ ಇಟ್ಟ ನ್ಯೂಜಿಲೆಂಡ್ T20 World Cup: ವಿಶ್ವಕಪ್ ಗೆ ಮುತ್ತಿಟ್ಟ ಭಾರತ, ಸತತ 2ನೇ ಬಾರಿ ಚಾಂಪಿಯನ್