Muslim Protest in India for Iran Leader Ayatollah Khomeini Death: Reminds Khilafat movementಖಮೇನಿ ಹತ್ಯೆಗೆ ಭಾರತದಲ್ಲಿ ಪ್ರತಿಭಟನೆ: ನೆನಪಿಸುತ್ತೆ ಖಿಲಾಫತ್ ಚಳುವಳಿಯ ಆ ಕರಾಳ ದಿನಗಳು

ಇಸ್ರೇಲ್ (Israel) ಮತ್ತು ಅಮೆರಿಕ (America) ನಡೆಸಿದ ಭಾರೀ ದಾಳಿಯಲ್ಲಿ ಇರಾನ್‌ನ (Iran) ಸುಪ್ರೀಂ ಲೀಡರ್ ಆಯತೊಲ್ಲಾ ಅಲಿ ಖಮೇನಿ ಮೃತಪಟ್ಟಿದ್ದಾರೆ. ಆದರೆ ನಿಜವಾದ ದುರಂತವೆಂದರೆ ಭಾರತದಲ್ಲಿ ಧರ್ಮ ಕೇಳಿ ಹಿಂದೂಗಳನ್ನು ಕೊಂದಾಗ, ಪಕ್ಕದ ದೇಶ ಬಾಂಗ್ಲಾದಲ್ಲಿ ಹಿಂದೂಗಳನ್ನು ಕೊಂದು ಸುಟ್ಟಾಗ ಮರುಗಲಿಲ್ಲ. ಕೊನೆಯ ಪಕ್ಷ ಒಂದು ಸಂತಾಪವನ್ನೂ ಸೂಚಿಸಲಿಲ್ಲ. ಹಮಾಸ್ ಉಗ್ರರರ ನರಮೇಧವನ್ನು ನೋಡಿದ ನಮ್ಮ ದೇಶದ ಬುದ್ಧಿಜೀವಿಗಳು ಈಗ ಇರಾನ್‌ ಸುಪ್ರೀಂ ಲೀಡರ್ ಅಲಿ ಖಮೇನಿ ಹತ್ಯೆಯ ಸುದ್ದಿ ಗೊತ್ತಾದ ಕೂಡಲೆ ಬೊಬ್ಬೆ ಹೊಡೆದುಕೊಂಡು ಪ್ರತಿಭಟನೆ ಮಾಡುತ್ತಿದ್ದಾರೆ. ಈ ಬೊಬ್ಬೆ ಹೊಡಿಯುದನ್ನು ನೋಡಿದರೆ ನನಗೆ ಖಿಲಾಫತ್ ಚಳುವಳಿ ನೆನಪಾಯಿತು.

ಖಿಲಾಫತ್ ಚಳುವಳಿಯ ಅತ್ಯಂತ ಘೋರ ದುಷ್ಪರಿಣಾಮಗಳು ಕೇರಳದಲ್ಲಿ ಸ್ಪಷ್ಟವಾಗಿ ತೋರಿಬಂದವು. ಭಾರತದ ಮಣ್ಣಿನಲ್ಲಿ ಗಾಢವಾಗಿ ಬೇರುಬಿಡದಿದ್ದ ಆ ಚಳುವಳಿ 1921ರಲ್ಲಿ ಸಂಪೂರ್ಣವಾಗಿ ಕುಸಿದು, ತನ್ನ ಹುಟ್ಟಿನಲ್ಲೇ ಅಂತ್ಯ ಕಂಡಿತು.  

ಅದು 1914-18ರ ಮೊದಲ ಮಹಾಯುದ್ಧವು ಮುಗಿದಿದ್ದ ಕಾಲ. ಈ ಸಮಯದಲ್ಲಿ ತುರ್ಕಿಯಲ್ಲಿ ಮುಸ್ತಾಫಾ ಕಮಾಲ್ ಪಾಷಾ ಎಂಬ ಒಬ್ಬ ಮಹಾಪ್ರತಿಭಾಶಾಲಿ, ಕ್ರಾಂತಿಕಾರಿ ರಾಷ್ಟ್ರನಾಯಕ ಎದ್ದುನಿಂತ. ಅವನು ಖಲೀಫನ ಭ್ರಷ್ಟ ದುರ್ಬಲ ಅರಸೊತ್ತಿಗೆಯನ್ನು (ರಾಜನ ಆಳ್ವಿಕೆ, ಸಾರ್ವಭೌಮತ್ವ) ಮೂಲೆಗೊತ್ತಿ ತುರ್ಕಿಯನ್ನು ಹೊಸದಾಗಿ ಆಧುನಿಕ ಮಾದರಿಯಲ್ಲಿ ಬಲಾಢ್ಯ ರಾಷ್ಟ್ರವನ್ನಾಗಿ ಕಟ್ಟುವ ಶಪಥ ತೊಟ್ಟನು.

ತುರ್ಕಿಯ ಸುಲ್ತಾನಾದ ಖಲೀಫಾನನ್ನು ಪ್ರತ್ಯಕ್ಷ ಅಲ್ಲಾನ ಐಹಿಕ ಪ್ರತಿನಿಧಿ, ಸಕಲ ಮುಸ್ಲಿಂ ಲೋಕದ ಧರ್ಮಗುರು ಎಂದು ಕಾಣಲಾಗುತ್ತಿತ್ತು. ಆದರೆ, ಮುಸ್ತಾಫಾ ಕಮಾಲ್ ಪಾಷಾ ತನ್ನ ದೇಶವನ್ನು ಮುಲ್ಲಾ ಮೌಲ್ವಿಗಳ ಕಪಿಮುಷ್ಠಿಯಿಂದ ಮುಕ್ತಗೊಳಿಸುವ ದೃಢ ಕ್ರಮಗಳನ್ನು ಕೈಗೊಂಡನು. ಇಸ್ಲಾಮಿಕ ಮತಾಂಧರು ಹಾಗೂ ಮುಲ್ಲಾ ಮೌಲ್ವಿಗಳ  ಪ್ರಬಲ ವಿರೋಧವನ್ನು ಉಕ್ಕಿನ ಹಸ್ತದಿಂದ ಹತ್ತಿಕ್ಕಿದನು.

1914ರ ನವೆಂಬರ್‌ 4ರಂದು ಜರ್ಮನಿಯೊಂದಿಗೆ ಕೈಜೋಡಿಸಿದ ಕ್ಷಣದಿಂದಲೇ ಭಾರತದ ಮುಸ್ಲಿಮರು ಬ್ರಿಟಿಷರ ಆಡಳಿತದಿಂದ ದೂರವಾಗಲು ಆರಂಭಿಸಿದರು. ಬಳಿಕ ಮೊದಲ ವಿಶ್ವಯುದ್ಧದ ಅಂತ್ಯದಲ್ಲಿ ತುರ್ಕಿಯ ಸಾಮ್ರಾಜ್ಯವನ್ನು ತುಂಡರಿಸಲಾಯಿತು. ಖಲೀಫನ ಅರಸೊತ್ತಿಗೆ ಕೂಡ ಕೊನೆಗೊಂಡಿತು. ಈ ಎರಡೂ ಘಟನೆಗಳು ಮುಸ್ಲಿಮರ ಆಕ್ರೋಶಕ್ಕೆ ಕಾರಣವಾದವು. ಖಲೀಫನ ಸಾಮ್ರಾಜ್ಯವನ್ನು ಚಿದ್ರ ಚಿದ್ರವಾಗಿ ಮಾಡಿದ್ದಕ್ಕಾಗಿ ಬ್ರಿಟಿಷರ ಮೇಲೆ ಮುಸ್ಲಿಮರ ಆಕ್ರೋಶಗೊಂಡರು. ಆದರೆ, ಬ್ರಿಟಿಷರ ವಿರುದ್ಧವಾಗಿ ಪ್ರಬಲವಾದ ಆಂದೋಲನ ಹೂಡಲು ಸಾಧ್ಯವಿಲ್ಲ ಎಂಬುದು ತಿಳಿದಿತ್ತು. ಆಗ, ಮುಸ್ಲಿಮರಿಗೆ ನೆನಪಾಗಿದ್ದು ಹಿಂದುಗಳು.  

1919ರ ಡಿಸೆಂಬರ್‌ನಲ್ಲಿ ನಡೆದ ಮುಸ್ಲಿಂ ಲೀಗ್ ಅಧಿವೇಶನದಲ್ಲಿ ‘ಖಿಲಾಫತ್ ಅನ್ಯಾಯದ ‘ ಕುರಿತು ಚರ್ಚೆ ನಡೆದಾಗ ಪಂಡಿತ್ ಮೋತಿಲಾಲ್ ನೆಹರು ಭಾರತದ ಮುಸ್ಲಿಮರನ್ನು ಬ್ರಿಟಿಷರ ವಿರುದ್ಧ ಹೋರಾಡಲು ತಮ್ಮ ಕಡೆಗೆ ಸೆಳೆದುಕೊಳ್ಳಲು ಇದೊಂದು ಸುವರ್ಣ ಅವಕಾಶ ಅಂತ ಅಂದುಕೊಂಡರು. ಅಲ್ಲದೆ, ರಾಷ್ಟ್ರದ ಒಂದು ಭಾಗವು ಒಂದು ಘೋರ ಅನ್ಯಾಯದಿಂದ ನರುಳುತ್ತಿರುವಾಗ ಅದರ ಇನ್ನೊಂದು ಭಾಗ ಸುಮ್ಮನೆ ಕೈಕಟ್ಟಿ ಕೊಡುವುದು ಸಾಧ್ಯವೇ ಇಲ್ಲ ಎಂದು ಘೋಷಿಸಿದರು. ಗಾಂಧೀಜಿಯವರಂತೂ ಜೀವನದಲ್ಲಿ ಒಮ್ಮೆ ಮಾತ್ರ ಸಿಗುವ ಸುವರ್ಣ ಅವಕಾಶ ಎಂದು ಹಿಂದುಗಳು ಭಾವಿಸುವುದಾದರೆ,  ಇಸ್ಲಾಮವನ್ನೂ ರಕ್ಷಿಸುವಲ್ಲಿ ಅವರೊಂದಿಗೆ ತಮ್ಮನ್ನು ತಾವು ನಾಶಗೊಳಿಸಲು ತಯಾರಾಗಬೇಕೆಂದರು. ಗಾಂಧೀಜಿ ತಮ್ಮ ಮಾತಿಗೆ ತಕ್ಕಂತೆ ತಾವೇ ಖಿಲಾಫತ್ ಚಳುವಳಿಗೆ ನಾಯಕರಾಗಿ ನಿಂತರು.

ತುರ್ಕಿ ಮತ್ತು ಅದರ ಸುಲ್ತಾನನ ಹಣೆಬರಹ ಏನಾಗಲಿದೆ ಎನ್ನುವ ಬಗ್ಗೆ ಭಾರತವು ತಲೆ ಕೆಡೆಸಿಕೊಳ್ಳುವ ಅಗತ್ಯವೇನಿಲ್ಲ. ಬೇರೊಂದು ದೇಶದ ಮೇಲೆ ನಿಷ್ಠೆಯನ್ನು ಬೆಳೆಸುವ ಈ ರೀತಿಯ ಚಳುವಳಿಗಳಿಂದ ಭಾರತದ ಮುಸಲ್ಮಾನರನ್ನು ದೂರ ಉಳಿಸುವುದು ಕ್ಷೇಮ ಎನ್ನುವ ಸ್ಪಷ್ಟ ಅಭಿಪ್ರಾಯವನ್ನು ಜಿನ್ನಾ ತಾಳಿದರು. ತಮ್ಮ ಮಾತಿನಂತೆಯೇ ಸ್ವತಃ ಖಿಲಾಫತ್ ಚಳುವಳಿಂದ ದೂರ ಉಳಿದು ರಾಜಕೀಯ ವನವಾಸವನ್ನು ಅವರು ಅನುಭವಿಸಿದರು. ಖಿಲಾಫತ್ ಚಳುವಳಿಯನ್ನು ವಿರೋಧಿಸಿದವರಲ್ಲಿ ಡಾ| ಅನ್ಸಾರಿ ಸಹ ಒಬ್ಬರು.

ನಿಜವಾದ ದುರಂತವೆಂದರೆ ಈ ಚಳುವಳಿಯಿಂದ ಕೆಲಕಾಲ ಅನೇಕ ನಗರಗಳ ಬೀದಿ ಬೀದಿಗಳಲ್ಲಿ “ಹಿಂದೂ-ಮುಸ್ಲಿಂ ಭಾಯಿ ಭಾಯಿ” ಎಂಬ ಬಾವುಕ ಘೋಷಣೆಗಳು ಪ್ರತಿಧ್ವನಿಸಿದವು. ಇದರಿಂದ ಸ್ವಲ್ಪಮಟ್ಟಿಗೆ ಬ್ರಿಟಿಷರು ಹೆದರಿದ್ದು ನಿಜ.

ಮುಸ್ಲಿಮರ ರೋಷಾವೇಷ ಮೊದಲು ತಿರುಗಿದ್ದು ಬ್ರಿಟಿಷರ ವಿರುದ್ಧವಾಗಿಯೇ. ಕೆಲವಡೆ ಬ್ರಿಟಿಷ್ ಸೈನಿಕರೊಂದಿಗೆ ಬಾರಿ ಕಾಳಗವೇ ನಡೆಯಿತು. ಆದರೆ ಬ್ರಿಟಿಷರೊಡನೆ ಸೋಲುಪ್ಪಿ ನಿರಾಶಾರಾದ ಮೋಪ್ಲಾಗಳ ಕ್ರೂರದೃಷ್ಟಿ ಅನಂತರ ಬ್ರಿಟಿಷರಷ್ಟೇ ಕಾಪೀರರೆನಿಸಿದ್ದ ಬಡಪಾಯಿ ಹಿಂದೂಗಳ ಮೇಲೆ ತಿರುಗಿತು.

ಮೊಪ್ಲಾ ಮುಸ್ಲಿಮರಿಂದ ಹಿಂದೂಗಳ ನರಮೇಧ

ಹಿಂದೂ-ಮುಸ್ಲಿಂ ಭಾಯಿ ಭಾಯಿ ‘ಅಲ್ಲಾ ಹೋ ಅಕ್ಬರ್ ‘ ಮುಂತಾದ ಘೋಷಣೆಗಳಲ್ಲಿ ಮೈಮರೆತಿದ್ದ ಹಿಂದುಗಳು  ‘ಅಲ್ಲಾ ಹೋ ಅಕ್ಬರ್ ಎಂದು ಘರ್ಜಿಸುತ್ತ ಮೇಲೆ ಬಿದ್ದ ಮುಸಲ್ಮಾನರಿಗೆ ಸುಲಭವಾಗಿ ತುತ್ತಾದರು .ಭಾರತದಾದ್ಯಂತ   ‘ಅಲ್ಲಾ ಹೋ ಅಕ್ಬರ್ ‘ ಖಿಲಾಫತ್‌ನ ಯುದ್ಧ ಘೋಷವಾಗಿತ್ತು. ಭಾರತ ಮಾತಾ ಕೀ ಜಯ್ ಘೋಷಣೆಗಿಂತಲೂ ಅದೇ ಶ್ರೇಷ್ಠವಾದದ್ದು ಏಕೆಂದರೆ ಅಲ್ಲಾ- ದೇವರು, ಭಾರತಮಾತೆಗಿಂತ ಎಂದರೆ ದೇಶಕ್ಕಿಂತ ದೊಡ್ಡವನು ಎಂದು ಗಾಂಧೀಜಿ ಹೇಳಿದ್ದರು. ಆದರೆ ಸರ್ವಸಾಧಾರಣ ಮುಸ್ಲಮಾನನಂತೂ ‘ಅಲ್ಲಾ ಹೋ ಅಕ್ಬರ್ ‘ ಘೋಷಣೆ ಕಾಫಿರರ ವಿರುದ್ಧದ ಯುದ್ಧ ಘೋಷಣೆಯೆಂದು ಅರ್ಥ ಮಾಡಿಕೊಂಡಿದ್ದನು.

ವಾಸ್ತವ ರೂಪ ಕಾಣಲು ತುಂಬ ಏನೂ ಕಾಯಬೇಕಾಗಲಿಲ್ಲ ಹಿಂದೂ ನಾಯಕರು ಹೀಗೆ ಸುಖಭ್ರಾಂತಿಯ ಭ್ರಮೆಯಲ್ಲಿ ತೇಲಾಡುತ್ತಿದ್ದಾಗಲೇ, ಹಿಂದೂಗಳು ನಿಶ್ಚಿಂತರಾಗಿದ್ದಾಗ ಕೇರಳದ ಮಲಬಾರ್ ಪ್ರಾಂತ್ಯದ ಮೊಪ್ಲಾ ಮುಸ್ಲಿಮರು ತಮ್ಮ ನೆರೆಹೊರೆಯ ಹಿಂದುಗಳ ಮೇಲೆ ಮತ್ತೊಂದು ಜಿಹಾದ್ ಆರಂಭಿಸಿದರು. ಮೊಪ್ಲಾಗಳು ಕೊಲೆ, ಲೂಟಿ, ಅತ್ಯಾಚಾರಗಳನ್ನು ಮಾಡಿದರು. ಮತಾಂತರಕ್ಕೆ ಒಪ್ಪದವರನ್ನು ಕೋಲೆ ಮಾಡಿದರು. ಸುಮಾರು ಒಂದು ಲಕ್ಷ ಮಂದಿ ಹುಟ್ಟ ಬಟ್ಟೆಯಲ್ಲಿ ಮನೆ ಮಠ ಬಿಟ್ಟು ನಿರಾಶ್ರಿತರಾಗಿ ಹೊಡಿ ಹೋಗಬೇಕಾಯಿತು.

ಅಂದಿನ ವೈಸರಾಯ್ ಲಾರ್ಡ್ ರೇಡಿಂಗರ ಪತ್ನಿಗೆ ಮಲಬಾರಿನ ಮಹಿಳೆಯರು ನೀಡಿದ ಹೃದಯ ವಿದ್ರಾವಕ ಮನವಿಯಲ್ಲಿ, “ಕಳೆದ ಒಂದು ನೂರು ವರ್ಷಗಳಲ್ಲಿ ನಮ್ಮ ದುರ್ಭಾಗ್ಯಶಾಲಿ ಜಿಲ್ಲೆಯು ಅನೇಕ ಮೋಪ್ಲಾ ದಂಗೆಗಳನ್ನು ಕಂಡಿದೆಯಾದರೂ ಇತ್ತೀಚಿನದು ಅತ್ಯಂತ ವ್ಯಾಪಕವಾದದ್ದು. ಅಷ್ಟೇ ಅಲ್ಲ ಅತ್ಯಂತ ಭೀಕರವಾದ್ದು. ರಾಕ್ಷಸಿ  ದುರಾತ್ಮರು ಎಸಗಿರುವ ಭೀಷಣ ಅತ್ಯಾಚಾರಗಳೆಲ್ಲದರ ವಿವರಗಳು ನಿಮ್ಮ ಗಮನಕ್ಕೆ ಬಂದಿಲ್ಲದಿರಬಹುದು”.

“ಮತಾಂತರವಾಗಲು ಒಪ್ಪದ ನಮ್ಮ ಬಂಧು ಬಳಗ, ಹತ್ತಿರದ ಸ್ನೇಹಿತರೆಲ್ಲ ಕೊಲೆಯಾದರು. ಇಲ್ಲಿನ ಕೆರೆಗಳು ಬಾವಿಗಳು ಇವರ ಕತ್ತರಿಸಿದ ಅರೆಜೀವದ ಮೃತ ಶರೀರಗಳಿಂದ ತುಂಬಿ ಹೋದವು. ಗರ್ಭಿಣಿ ಸ್ತ್ರೀಯರನ್ನು ತುಂಡರಿಸಿ ಹಾದಿ ಬೀದಿಗೆ ಎಸೆಯಲಾಯಿತು, ಕಾಡಿನಲ್ಲಿ ಚೆಲ್ಲಲಾಯಿತು. ಹೊಟ್ಟೆಯೊಳಗಿನ ಸತ್ತ ಅಸಹಾಯಕ ಶಿಶುವನ್ನು ತಾಯಿ ದೇಹದೊಳಗಿಂದ ನಮ್ಮ ಕಣ್ಣೆದುರಿಗೆ ಕತ್ತರಿಸಿ ಹಾಕಿದ ದುರಂತ ದೃಶ್ಯ ಕಣ್ಣಿಗೆ ಕಟ್ಟಿದಂತಿದೆ”

“ನಿರಪರಾಧಿಗಳಾದ ನಮ್ಮ ಅಣ್ಣ ತಮ್ಮಂದರನ್ನು, ಗಂಡಂದಿರನ್ನು ನಮ್ಮೆದುರೆ ಸೀಳಿ ಸುಟ್ಟು ಬಿಸಾಡಲಾಯಿತು. ನಮ್ಮ ಅನೇಕ ಅಕ್ಕ ತಂಗಿಯರನ್ನು ನಮ್ಮ ನಡುವೆ ಬಲತ್ಕಾರವಾಗಿ ಅಪಹರಿಸಲಾಯಿತು. ಪೂಜಾ ಮಂದಿರಗಳನ್ನು ಭಗ್ನ ಮಾಡಿ ದೇವದೇವಿಯರಿಗೆ ಗೋವಿನ ಕರಳುಗಳನ್ನು ಮಾಲೆಯಂತೆ ಹಾಕಲಾಯಿತು. ಮಾನವತೆಗೆ ಅಪಮಾನಕರವೆನಿಸುವ ದೌರ್ಜನ್ಯ ತಾಂಡವ ನಡೆದುಹೋಯಿತು.”

ಮಲಬಾರಿನ ಹಿಂದೂ ಹೆಣ್ಣುಮಕ್ಕಳು ಮಹಾತ್ಮ ಗಾಂಧಿಯವರನ್ನು ನೆನೆಸಿಕೊಂಡಾದರೂ ಶಾಂತಿ ಅಹಿಂಸೆಗಳನ್ನು ಅನುಸರಿಸಿ ಎಂದು ಮೊಪ್ಲಾಗಳನ್ನು ಬೇಡಿಕೊಂಡಾಗ ಗಾಂಧಿ ಒಬ್ಬ ಕಾಫಿರ ಅವನು ನಮ್ಮ ನಾಯಕ ಹೇಗಾಗಬಲ್ಲ ? ಎಂದು ಖಂಡತುಂಡವಾಗಿ ಅವರು ಉತ್ತರಿಸಿದರು.” ಎಂದು ಪತ್ರ ಬರೆಯಲಾಗಿದೆ.

ಇತಿಹಾಸದ ಪುಟಗಳಲ್ಲಿನ ಈ ಸಾಲುಗಳು ಭಯ ಹುಟ್ಟಿಸುವುದಲ್ಲದೇ, ಖಮೇನಿ ಹತ್ಯೆಗೆ ಭಾರತದಲ್ಲಿ ನಡೆಸಿದ ಪ್ರತಿಭಟನೆ, ಖಿಲಾಫತ್ ಚಳುವಳಿಯ ಆ ಕರಾಳ ದಿನಗಳನ್ನು ನೆನಪಿಸುತ್ತದೆ.

ಲೇಖಕರು: ಅವ್ವಪ್ಪ ಹೆಗಡ್ಯಾಳ

ಮತ್ತುಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *