Holi: The Untold Story of 2000 Naga Sadhus Sacrificed there lives in 1757ಸಾಂದರ್ಭಿಕ ಚಿತ್ರ

ಕಳೆದ ವರ್ಷ ಉತ್ತರ ಪ್ರದೇಶದಲ್ಲಿ ಗಂಗಾ, ಯಮುನಾ ಮತ್ತು ಸರಸ್ವತಿ ನದಿಗಳು ಸಂಗಮವಾಗುವ ಪ್ರಯಾಗರಾಜ್‌ನಲ್ಲಿ ಮಹಾಕುಂಭಮೇಳ ನಡೆಯಿತು. ಈ ಮಹಾ ಕುಂಭಮೇಳದಲ್ಲಿ (Maha Kumbh Mela) ನಾಗಸಾಧುಗಳ (Nagasadhus) ಮಹಾಸಂಗಮವೇ ಆಗಿತ್ತು. ದೇಶದ ವಿವಿಧ ಮೂಲೆಗಳಲ್ಲಿ ವಾಸಿಸುತ್ತಿದ್ದ ನಾಗಸಾಧುಗಳು ಪ್ರಯಾಗರಾಜ್‌ನಲ್ಲಿ ಸೇರಿದ್ದರು.

ಮಹಾ ಕುಂಭಮೇಳದಲ್ಲಿ (Maha Kumbh Mela) ನಾಗಸಾಧುಗಳ ಮಹಾಸಂಗಮವನ್ನು ಕಂಡು ಇಡೀ ಜಗತ್ತೇ ನಿಬ್ಬೆರಗಾಗಿ ಭಾರತದತ್ತ ನೋಡುತ್ತಿತ್ತು. ಇನ್ನು, ಭಾರತದಲ್ಲಿ ಈ ನಾಗಸಾಧುಗಳ ಜೀವನ ಶೈಲಿ, ಆಚಾರ-ವಿಚಾರದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದವು. ಈ ನಾಗಸಾಧುಗಳು ಶತಮಾನಗಳ ಹಿಂದೆ ನಮ್ಮ ಧರ್ಮ ಮತ್ತು ದೇವಸ್ಥಾನವನ್ನು ಮುಸ್ಲಿಮ ದಾಳಿಕೋರರಿಂದ ಉಳಿಸಲು ಪ್ರಾಣಾರ್ಪಣೆ ಮಾಡಿದ್ದಾರೆ. ಅಂದ್ರೆ ನೀವು ನಂಬಲೇಬೇಕು.

ಹೌದು, 1757ರಲ್ಲಿ ಭಾರತದ ಮೇಲೆ ದಂಡೆತ್ತಿ ಬಂದ ಅಹ್ಮದ್ ಶಾ ಅಬ್ದಾಲಿ (ಅಹ್ಮದ್ ಶಾ ದುರಾನಿ) ಭಾರತದಲ್ಲಿ ಹಿಂದೂಗಳನ್ನು ನಿರ್ಧಾಕ್ಷಣ್ಯವಾಗಿ ಕೊಲೆ ಮಾಡಿದನು. 1757ರ ಫೆಬ್ರವರಿ 28ರಂದು ಹೊಳಿ ಹಬ್ಬದ ಸಂದರ್ಭದಲ್ಲಿ ಮಥುರಾ ಮತ್ತು ವೃಂದಾವನದಲ್ಲಿ ಸೇರಿದ್ದ ಸಾವಿರಾರು ಹಿಂದು ಮಹಿಳೆಯರು, ಮಕ್ಕಳು ಮತ್ತು ಪುರುಷರನ್ನು ಬರ್ಬರವಾಗಿ ಕೊಲೆಮಾಡಿದನು.

ಅಹ್ಮದ್ ಶಾ ಅಬ್ದಾಲಿಯ ಸೇನೆಯ ವಿರುದ್ಧ ಮಥುರಾದ ಹೊರವಲಯದಲ್ಲಿ ಜಾಟ್ ರಾಜಕುಮಾರ ಜವಾಹರ್ ಸಿಂಗ್ ತನ್ನ 5000 ಸೈನಿಕರೊಂದಿಗೆ ವೀರಾವೇಶದಿಂದ ಹೋರಾಡಿದರು. ಸುಮಾರು 9 ಗಂಟೆಗಳ ಕಾಲ ನಡೆದ ಯುದ್ಧದಲ್ಲಿ ಕೊನೆಗೆ ಅಹ್ಮದ್ ಶಾ ಅಬ್ದಾಲಿ ಮೈಲುಗೈ ಸಾಧಿಸಿದನು. ಜಾಟ್ ರಾಜಕುಮಾರ ಜವಾಹರ್ ಸಿಂಗ್‌ನ 3000 ಸೈನಿಕರು ವೀರಗತಿ ಹೊಂದಿದರು.

ನಂತರ, ಅಹ್ಮದ್ ಶಾ ಅಬ್ದಾಲಿಯ ಸೇನೆ ಗೋಕುಲದತ್ತ ತನ್ನ ದಂಡಯಾತ್ರೆ ಮುಂದುವರೆಸಿತು. ಆದರೆ, ಇಲ್ಲಿ ಇದ್ದಿದ್ದು, ಅಸ್ತ್ರ-ಶಸ್ತ್ರ ಚಾಲನೆಯಲ್ಲಿ ನಿಪುಣರಾಗಿದ್ದ ನಾಗಾ ಸಾಧುಗಳು. ಈ ನಾಗಸಾಧುಗಳು ದೇವಾಲಯ ಮತ್ತು ಜನರನ್ನು ರಕ್ಷಿಸಲು ಶಸ್ತ್ರ ಸಿದ್ಧರಾಗಿ ನಿಂತಿದ್ದರು.

ಅಹ್ಮದ್ ಶಾ ಅಬ್ದಾಲಿಯ 40 ಸಾವಿರ ಸೈನಿಕರ ವಿರುದ್ಧ ಕೇವಲ 2 ಸಾವಿರ ನಾಗಸಾಧುಗಳು ವೀರಾವೇಶದಿಂದ ಹೋರಾಡಿದರು. ನಾಗಸಾಧುಗಳು ಅಕ್ಷರಷಃ ರಣಚಂಡಿಯ ಅವತಾರವನ್ನು ತಾಳಿದ್ದರು. ಅಹ್ಮದ್ ಶಾ ಅಬ್ದಾಲಿಯ ಸೈನಿಕರನ್ನು ಅಡ್ಡಡ್ದ, ಉದ್ದುದ್ದ ಸೀಳಿ, ರಣಚಂಡಿಗೆ ಔತಣವಿಟ್ಟರು. ನಾಗಸಾಧುಗಳು ಹೋಳಿ ಹುಣ್ಣಿಮೆಗೆ ಅಹ್ಮದ್ ಶಾ ಅಬ್ದಾಲಿಯ ಸೈನಿಕರ ರಕ್ತದಿಂದ ಓಕುಳಿ ಆಡಿದರು.

ಭೀಕರ ಯುದ್ಧದಲ್ಲಿ ನಾಗಸಾಧುಗಳು ಶೌರ್ಯ ಅವರ್ಣಿಯ. ಈ ಸಮರದಲ್ಲಿ 2000 ಕ್ಕೂ ಹೆಚ್ಚು ನಾಗಸಾಧುಗಳು ವೀರಗತಿ ಹೊಂದಿದರು. ಅಹ್ಮದ್ ಶಾ ಅಬ್ದಾಲಿಯ ಸೈನ್ಯ ಗೋಕುಲದಿಂದ ಪಲಾಯನ ಮಾಡಿತು. ಧರ್ಮ ಮತ್ತು ಮಾತೃಭೂಮಿಗಾಗಿ ತಮ್ಮ ಪ್ರಾಣ ತ್ಯಾಗ ಮಾಡಿದ ಎಲ್ಲಾ ವೀರ ನಾಗಸಾಧುಗಳಿಗೆ ಹಾಗೂ ಆ ಎರಡು ದಿನಗಳ ಹತ್ಯಾಕಾಂಡದಲ್ಲಿ ಬಲಿಯಾದ ನಿರಪರಾಧಿ ಹಿಂದೂಗಳಿಗೆ ಈ ಹೊಳಿಯನ್ನು ಸಮರ್ಪಣೆ.

ಮೂಲ: ಪುಸ್ತಕ 2 ಸ್ಯಾಫ್ರನ್ ಸ್ವೋರ್ಡ್ಸ್‌

ಮತ್ತುಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *