Iran supreme leader Khamenei Killed: Shia Muslims Protest in Kashmirಇರಾನ್‌ನ ಸುಪ್ರೀಂ ಲೀಡರ್ ಖಮೇನಿ ಹತ್ಯೆ: ಕಾಶ್ಮೀರದಲ್ಲಿ ಪ್ರತಿಭಟನೆ

ಶ್ರೀನಗರ, ಮಾರ್ಚ 1: ಇಸ್ರೇಲ್ (Israel) ಮತ್ತು ಅಮೆರಿಕ ನಡೆಸಿದ ಭಾರೀ ದಾಳಿಯ ನಂತರ ಇರಾನ್‌ನ (Iran) ಸುಪ್ರೀಂ ಲೀಡರ್ ಆಯತೊಲ್ಲಾ ಅಲಿ ಖಮೇನಿ ಅವರು ಮೃತಪಟ್ಟಿದ್ದಾರೆ ಎಂದು ಇರಾನ್ ಸರ್ಕಾರಿ ಮಾಧ್ಯಮಗಳು ಭಾನುವಾರ (ಮಾರ್ಚ್ 1) ಮುಂಜಾನೆ ದೃಢಪಡಿಸಿವೆ. ಈ ಬೆನ್ನಲ್ಲೇ ಬೆಳ್ಳಂ ಬೆಳಿಗ್ಗೆ ಕಾಶ್ಮೀರದ (Kashmir) ಹಲವಾರು ಪ್ರದೇಶಗಳಲ್ಲಿ ಪ್ರತಿಭಟನೆಗಳು ಆರಂಭವಾಗಿವೆ.

ಇರಾನ್‌ನ ಸುಪ್ರೀಂ ಲೀಡರ್ ಆಯತೊಲ್ಲಾ ಅಲಿ ಖಮೇನಿ ಹತ್ಯೆಯನ್ನು ಖಂಡಿಸಿ ಭಾನುವಾರ ಬೆಳಿಗ್ಗೆ ಕಾಶ್ಮೀರದ ಶಿಯಾ ಮುಸ್ಲಿಮರು ನೂರಾರು ಸಂಖ್ಯೆಯಲ್ಲಿ ಬೀದಿಗಿಳಿದು ಪ್ರತಿಭಟನೆ ನಡೆಸಿದರು. ಶ್ರೀನಗರದ ಲಾಲ್ ಚೌಕ್‌ನಲ್ಲಿರುವ ಐಕಾನಿಕ್ ಘಂಟಾ ಘರ್ ಮುಂದೆ ಹೆಚ್ಚಿನ ಸಂಖ್ಯೆಯ ಶಿಯಾ ಮುಸ್ಲಿಮರು ಪ್ರತಿಭಟನಾಕಾರರು ಜಮಾಯಿಸಿ, ಖಮೇನಿಯ ಚಿತ್ರಗಳು ಮತ್ತು ಪೋಸ್ಟರ್‌ಗಳು, ಇರಾನಿನ ಧ್ವಜಗಳು ಮತ್ತು ಕೆಂಪು, ಕಪ್ಪು ಮತ್ತು ಹಳದಿ ಬ್ಯಾನರ್‌ಗಳನ್ನು ಹಿಡಿದು ಪ್ರತಿಭಟಿಸಿದರು. ಅಮೆರಿಕ ಮತ್ತು ಇಸ್ರೇಲ್ ವಿರುದ್ಧ ಘೋಷಣೆಗಳನ್ನು ಕೂಗಿ, ಆಕ್ರೋಶ ಹೊರ ಹಾಕಿದ್ದಾರೆ.

ಶ್ರೀನಗರ, ಬುಡ್ಗಾಮ್ ಮತ್ತು ಇತರೆ ಕಣಿವೆ ಪ್ರದೇಶದಲ್ಲಿ ಶಿಯಾ ಮುಸ್ಲಿಮರು ಪ್ರತಿಭಟನೆ ಮಾಡಿದರು. ಅಯತೊಲ್ಲಾ ಖಮೇನಿ 1980 ರ ದಶಕದಲ್ಲಿ ಶ್ರೀನಗರಕ್ಕೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಕಾಶ್ಮೀರದ ಶಿಯಾ ಮುಸ್ಲಿಮರು ಅವರನ್ನು ಸ್ವಾಗತಿಸಿದ್ದರು.

ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಹತ್ಯೆ ಸೇರಿದಂತೆ ಇರಾನ್‌ನಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ನನಗೆ ತೀವ್ರ ಕಳವಳವಿದೆ. ಎಲ್ಲಾ ಸಮುದಾಯಗಳು ಶಾಂತವಾಗಿರಲು, ಶಾಂತತೆಯನ್ನು ಕಾಪಾಡಬೇಕು ಎಂದು ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಟ್ವೀಟ್‌ ಮಾಡಿದ್ದಾರೆ. ಪೊಲೀಸರು ಮತ್ತು ಆಡಳಿತವು ಸಂಯಮದಿಂದ ವರ್ತಿಸಬೇಕು.

ಪ್ರಸ್ತುತ ಇರಾನ್‌ನಲ್ಲಿರುವ ವಿದ್ಯಾರ್ಥಿಗಳು ಸೇರಿದಂತೆ ಜಮ್ಮು ಮತ್ತು ಕಾಶ್ಮೀರದ ನಿವಾಸಿಗಳ ಸುರಕ್ಷತೆ ಮತ್ತು ಯೋಗಕ್ಷೇಮವನ್ನು ಖಚಿತಪಡಿಸಿಕೊಳ್ಳಲು ಜಮ್ಮು ಮತ್ತು ಕಾಶ್ಮೀರ ಸರ್ಕಾರವು ಭಾರತ ಸರ್ಕಾರದ ವಿದೇಶಾಂಗ ಸಚಿವಾಲಯದೊಂದಿಗೆ ನಿಕಟ ಸಮನ್ವಯದಲ್ಲಿದೆ ಎಂದು ತಿಳಿಸಿದರು.  

ಮತ್ತುಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *