Should Mobile Phones Be Banned for Children Under 16? A Detailed Analysisಸಾಂದರ್ಭಿಕ ಚಿತ್ರ

ಇತ್ತೀಚಿನ ದಿನಗಳಲ್ಲಿ ಮಕ್ಕಳು (Children) ಸ್ಮಾರ್ಟ್‌ಫೋನ್ (Smart Phone) ಬಳುಸುವುದು ಅತಿಯಾಗಿದೆ. ನಿರಂತರವಾಗಿ ತಮ್ಮನ್ನು ತಾವು ಸಾಮಾಜಿಕ ಜಾಲತಾಣಗಳಲ್ಲಿ (Social Media) ತೊಡಗಿಕೊಂಡಿರುತ್ತಾರೆ. 16 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಮೊಬೈಲ್‌ ಬಳಕೆ ಮತ್ತು ಸಾಮಾಜಿಕ ಜಾಲತಾಣಗಳ ಬಳಕೆ ನಿಷೇಧಿಸಬೇಕೆಂಬ ಚರ್ಚೆ ಇದೀಗ ಗಂಭೀರವಾಗಿದೆ.

ಮಕ್ಕಳ ಮನೋವಿಕಾಸದ ಹಂತದಲ್ಲಿ ಅತಿಯಾಗಿ ಮೊಬೈಲ್ ಮತ್ತು ಸಾಮಾಜಿಕ ಜಾಲತಾಣಗಳ ಬಳಕೆ ಹಲವಾರು ಸಮಸ್ಯೆಗಳಿಗೆ ಕಾರಣವಾಗುತ್ತದೆ. ಸಾಮಾಜಿಕ ಜಾಲತಾಣಗಳಲ್ಲಿ ಅನಗತ್ಯ ಸಂದೇಶಗಳು, ಅಪರಿಚಿತ ವ್ಯಕ್ತಿಗಳ ಸಂಪರ್ಕ, ತಪ್ಪು ಮಾಹಿತಿ (fake news) ಹರಡುವಿಕೆ ಮುಂತಾದವು ಮಕ್ಕಳ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ. ಕೆಲವೊಮ್ಮೆ ಸೈಬರ್ ಬುಲ್ಲಿಯಿಂಗ್‌ನಲ್ಲೂ ಸಿಕ್ಕಿಹಾಕಿಕೊಳ್ಳುವ ಸಾಧ್ಯತೆ ಇರುತ್ತದೆ.

ಶಿಕ್ಷಣದ ದೃಷ್ಟಿಯಿಂದಲೂ ಇದು ಹಾನಿಕಾರಕ. ಮಕ್ಕಳು ಓದಿನ ಮೇಲೆ ಗಮನ ಕಳೆದುಕೊಳ್ಳುತ್ತಿದ್ದಾರೆ. ರಾತ್ರಿ ಹೊತ್ತು ಮೊಬೈಲ್ ಬಳಕೆ ಮಾಡುವುದರಿಂದ ನಿದ್ರಾಹೀನತೆ ಉಂಟಾಗಿ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಕುಟುಂಬದವರೊಂದಿಗೆ ಸಮಯ ಕಳೆಯುವ ಬದಲು, ಮಕ್ಕಳು ಡಿಜಿಟಲ್ ಲೋಕದಲ್ಲಿ ಮಗ್ನರಾಗಿದ್ದಾರೆ. ಪೋಷಕರು ಈ ಬಗ್ಗೆ ಗಂಭೀರವಾಗಿ ಯೋಚಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ, ಮಕ್ಕಳು ಸಂಬಂಧಗಳ ಕೊಂಡಿಯನ್ನು ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ.

ಹೀಗಾಗಿ, 16 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಮೊಬೈಲ್‌ ಬಳಕೆ ಮತ್ತು ಸಾಮಾಜಿಕ ಜಾಲತಾಣ ಬಳಕೆ ನಿಷೇಧ ಮಾಡಲು ಮುಂದಾಗಿದೆ. ಸರ್ಕಾರದ ಈ ಕ್ರಮದ ಕುರಿತು ಪೋಷಕರು ಯೋಚಿಸಬೇಕು. ಶಾಲಾ ಮಟ್ಟದಲ್ಲಿಯೂ ಈ ಬಗ್ಗೆ ಜಾಗೃತಿ ಮೂಡಿಸಬೇಕು. ಪೋಷಕರು ಮಕ್ಕಳ ಮೊಬೈಲ್ ಬಳಕೆಯನ್ನು ನಿಯಂತ್ರಿಸಿ, ಅವಶ್ಯಕವಾದ ಸಂದರ್ಭಗಳಲ್ಲಿ ಮಾತ್ರ ಬಳಸಲು ಅವಕಾಶ ನೀಡಬೇಕು.

ಆದರೆ, ಸಂಪೂರ್ಣ ನಿಷೇಧಕ್ಕಿಂತ ನಿಯಂತ್ರಿತ ಬಳಕೆ ಉತ್ತಮ ಪರಿಹಾರವಾಗಬಹುದು. ಶಿಕ್ಷಣಕ್ಕಾಗಿ, ಶಿಕ್ಷಕರೊಂದಿಗೆ ಸಂಪರ್ಕಕ್ಕಾಗಿ ಮಾತ್ರ ಮೊಬೈಲ್‌ ಬಳಸುವಂತೆ ನಿಯಮ ಮಾಡಬಹುದು. ಪೋಷಕರ ಮೇಲ್ವಿಚಾರಣೆಯೊಂದಿಗೆ ಬಳಕೆ ಮಾಡಿದರೆ ಅಪಾಯಗಳನ್ನು ಕಡಿಮೆ ಮಾಡಬಹುದು.

ಒಟ್ಟಾರೆಯಾಗಿ, ಮಕ್ಕಳ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಮೊಬೈಲ್‌ ಬಳಕೆಗೆ ನಿಯಂತ್ರಣ ಅಥವಾ ವಯೋಮಿತಿ ವಿಧಿಸುವುದು ಅವಶ್ಯಕತೆಯಾಗಿದೆ. ಮಕ್ಕಳ ಸುರಕ್ಷತೆ ಮತ್ತು ಅಭಿವೃದ್ಧಿಗಾಗಿ ಇದು ಮಹತ್ವದ ಹೆಜ್ಜೆಯಾಗಲಿದೆ.

ಶಿಕ್ಷಕರು: ಶ್ರೀ. ಕೇಶವ ಬಿ. ಕೆ

ಮತ್ತುಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *