KEA PGCET Exam Date 2026 Announced: Check Full Schedule, Eligibility and Detailsಕೆಇಎ

ಬೆಂಗಳೂರು, ಮಾರ್ಚ್‌ 20: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) 2026-27ನೇ ಸಾಲಿನ ಸ್ನಾತಕೋತ್ತರ ಪದವಿಗಳಾದ MBA, MCA, M E, M.Tech, ಮತ್ತು M.Arch ಕೋರ್ಸುಗಳ ಮೊದಲ ವರ್ಷದ ಪ್ರವೇಶಕ್ಕಾಗಿ ನಡೆಸಲಾಗುಬ PGCET-2026ರ ಪರೀಕ್ಷೆಯ ಅಧಿಕೃತ ವೇಳಾಪಟ್ಟಿ ಬಿಡುಗಡೆ ಮಾಡಿದೆ.

ಪರೀಕ್ಷಾ ವೇಳಾಪಟ್ಟಿ

  1. ಮೇ 23, 2026 (ಶನಿವಾರ): ಪರೀಕ್ಷೆಗಳು ಮಧ್ಯಾಹ್ನ 2:30 ರಿಂದ 4:30ರವರೆಗೆ M.E/ M.Tech  
  2. ಮೇ 24, 2026 (ಭಾನುವಾರ): ಬೆಳಗ್ಗೆ 10:30 ರಿಂದ 12:30ರವರೆಗೆ MCA ಮತ್ತು ಮಧ್ಯಾಹ್ನ 2:30 ರಿಂದ 4:30ರವರೆಗೆ MBA ಪರೀಕ್ಷೆ ನಡೆಯಲಿದೆ. (ಗಮನಿಸಿ: MR/M.Techa ಪರೀಕ್ಷೆಗೆ ಮಾತ್ರ ನಾನ್‌-ಪ್ರೋಗಾಮೆಬಲ್‌ ಕ್ಯಾಲ್ಕುಲೇಟರ್‌ ಬಳಸಲು ಅವಕಾಶವಿದೆ.

ಪ್ರಮುಖ ದಿನಾಂಕಗಳು

  • ಆನ್‌ಲೈನ್‌ ನೋಂದಣಿ ಆರಂಭ: ಮಾರ್ಚ್‌ 23 (ಬೆಳಗ್ಗೆ 11 ರಿಂದ)
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಏಪ್ರಿಲ್‌ 8 (ರಾತ್ರಿ 11.59)
  • ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನ: ಏಪ್ರಿಲ್‌ 10

ಅರ್ಹತೆ

M.E/M.Tech ಪ್ರವೇಶ: ಸಿವಿಲ್‌, ಕಂಪ್ಯೂಟರ್‌ ಸೈನ್ಸ್‌, ಮೆಕ್ಯಾನಿಕಲ್‌ ಮತ್ತು ಎಲೆಕ್ಟ್ರಿಕಲ್‌ ಸೈನ್ಸ್‌ ವಿಷಯಗಳಿಗೆ ಮಾತ್ರ ಪ್ರವೇಶ ಪರೀಕ್ಷೆ ನಡೆಯಲಿದೆ. ಬಯೋ-ಟೆಕ್ನಾಲಜಿ, ಕೆಮಿಕಲ್‌ ಸೇರಿದಂತೆ ಇತರ ಕೆಲವು ವಿಷಯಗಳಿಗೆ ಪದವಿ ಅಂಕಗಳ ಆಧಾರದ ಮೇಲೆ ಪ್ರವೇಶ ನೀಡಲಾಗುತ್ತದೆ.

ಗೇಟ್‌ (GATE) ಅಭ್ಯರ್ಥಿಗಳಿಗೆ: ಮಾನ್ಯತೆ ಪಡೆದ ಗೇಟ್‌ ಸ್ಕೋರ್‌ ಹೊಂದಿರುವ ಅಭ್ಯರ್ಥಿಗಳು PGCET ಪರೀಕ್ಷೆ ಬರೆಯುವ ಅಗತ್ಯವಿಲ್ಲ. ಆದರೆ, ಅವರು ಕಡ್ಡಾಯವಾಗಿ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕು.

ಅರ್ಜಿ ಸಲ್ಲಿಕೆ

ಆಸಕ್ತ ಅಭ್ಯರ್ಥಿಗಳು ಪ್ರಾಧಿಕಾರದ ಅಧಿಕೃತ ವೆಬ್‌ಸೈಟ್‌ https://cetonline.karnataka.gov.in/kea/ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.

ನೋಟಿಫಿಕೇಷನ್‌ ಲಿಂಕ್‌ ಇಲ್ಲಿದೆ

ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *