ರಾಜ್ಯದಲ್ಲಿ ಕಳೆದೊಂದು ವಾರದಿಂದ ಮುಂಗಾರು ಚುರುಕುಗೊಂಡಿದ್ದು, ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಭಾರೀ ಪ್ರಮಾಣದಲ್ಲಿ ಮಳೆ ಆಗುತ್ತಿದೆ. ಇದರ ಪರಿಣಾಮವಾಗಿ ಅನೇಕ ಜಲಾಶಯಗಳ ನೀರಿನಮಟ್ಟ (Dam Water Level) ಸಹ ಹೆಚ್ಚುತ್ತಿದ್ದು, ರೈತರು ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ. ಇನ್ನು ಮಹಾರಾಷ್ಟ್ರದಲ್ಲಿ ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಆಲಮಟ್ಟಿ ಜಲಾಶಯಕ್ಕೆ ಒಳಹರಿವು ಹೆಚ್ಚಿದೆ. ಹಾಗಿದ್ದಾರೆ ಕೆಆರ್‌ಎಸ್ ಸೇರಿದಂತೆ ರಾಜ್ಯದ ಪ್ರಮುಖ ಜಲಾಶಯಗಳಾದ ಆಲಮಟ್ಟಿ, ಭದ್ರಾ, ತುಂಗಭದ್ರಾ, ಮಲಪ್ರಭಾ, ವಾರಾಹಿ ಮತ್ತು ಸೂಪಾ ಸೇರಿದಂತೆ 12 ಜಲಾಶಯಗಳ ನೀರಿನ ಪ್ರಮಾಣ (Karnataka Dam Water Level) ಜುಲೈ 10 ರಂದು ಎಷ್ಟಿದೆ? ಜಲಾಶಯಕ್ಕೆ ಒಳಹರಿವು ಎಷ್ಟಿದೆ? ಹೊರಹರಿವು ಎಷ್ಟು ಇದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ ಜಲಾಶಯಗಳ ನೀರಿನ ಮಟ್ಟಕರ್ನಾಟಕದ ಪ್ರಮುಖ ಜಲಾಶಯಗಳು (Dam)ಗರಿಷ್ಠ ನೀರಿನ ಮಟ್ಟ (ಮೀ)ಒಟ್ಟು ಸಾಮರ್ಥ್ಯ (ಟಿಎಂಸಿಇಂದಿನ ನೀರಿನ ಮಟ್ಟ (ಟಿಎಂಸಿ)ಕಳೆದ ವರ್ಷದ ನೀರಿನ ಮಟ್ಟ (ಟಿಎಂಸಿ)ಒಳಹರಿವು (ಕ್ಯೂಸೆಕ್ಸ್)ಹೊರಹರಿವು (ಕ್ಯೂಸೆಕ್ಸ್)ಆಲಮಟ್ಟಿ ಜಲಾಶಯ (Almatti Dam) 519.60 123.08 44.70 87.23 1,31,940 100ತುಂಗಭದ್ರಾ ಜಲಾಶಯ (Tungabhadra Dam) 497.71 105.79 13.67 55.78 28,654 177ಮಲಪ್ರಭಾ ಜಲಾಶಯ (Malaprabha Dam) 633.80 37.73 11.00 24.37 7,369 194ಕೆ.ಆರ್.ಎಸ್ (KRS Dam) 38.04 49.45 13.51 45.98 12,694 734ಲಿಂಗನಮಕ್ಕಿ (Linganamakki Dam) 554.44 151.75 28.59 86.14 36,867 2,566ಕಬಿನಿ ಜಲಾಶಯ (Kabini Dam) 696.13 19.52 9.16 17.96 14,574 500ಭದ್ರಾ ಜಲಾಶಯ (Bhadra Dam) 657.73 71.54 30.14 55.78 16,304 216ಘಟಪ್ರಭಾ ಜಲಾಶಯ (Ghataprabha Dam) 662.91 51.00 15.64 43.30 28,654 177 ಹೇಮಾವತಿ ಜಲಾಶಯ (Hemavati Dam) 890.58 37.10 20.10 35.00 15,647 300ವರಾಹಿ ಜಲಾಶಯ (Varahi Dam) 594.36 31.10 7.49 17.19 2,993 0ಹಾರಂಗಿ ಜಲಾಶಯ (Harangi Dam) 871.38 8.50 4.33 6.50 3,665 180ಸುಫಾ ಜಲಾಶಯ (Supa Dam) 564.00 145.33 35.89 70.82 18,982 1,063 ಕಳೆದ ವರ್ಷ ಜುಲೈ ತಿಂಗಳಲ್ಲಿ ರಾಜ್ಯದ ಜಲಾಶಯಗಳು ಅರ್ಧದಷ್ಟು ತುಂಬಿದ್ದವು. ಆದರೆ, ಈ ವರ್ಷ ಮಳೆಯ ಕೊರತಯಿಂದ ಡ್ಯಾಂಗಳು ಅರ್ಧದಷ್ಟು ಕೂಡ ಭರ್ತಿಯಾಗಿಲ್ಲ. ಇದರಿಂದ ಸಹಜವಾಗಿ ಆತಂಕ ಉಂಟಾಗಿದ್ದು, ಮುಂದಿನ ಒಂದು ವರ್ಷ ನೀರಿಗಾಗಿ ಪರದಾಡುವ ಸಾಧ್ಯತೆ ಇದೆ. ಮತ್ತುಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ Post navigation PM ಜನಧನ್ ಯೋಜನೆ: 2 ಲಕ್ಷ ರೂ. ಅಪಘಾತ ವಿಮೆ ಜೊತೆಗೆ 10 ಸಾವಿರ ರೂ.ವರೆಗೆ ಸಾಲ ಸೌಲಭ್ಯ! ಅರ್ಜಿ ಸಲ್ಲಿಸುವ ವಿಧಾನ ಇಲ್ಲಿದೆ