ಇಂಡಿಯನ್ ಪ್ರೀಮಿಯರ್ ಲೀಗ್ (IPL) 2026ರ ಹಬ್ಬಕ್ಕೆ ದಿನಗಣನೆ ಆರಂಭವಾಗಿದೆ. ಬಿಸಿಸಿಐ (BCCI) ಐಪಿಎಲ್‌ನ ವೇಳಾಪಟ್ಟಿಯನ್ನು ಹಂತ ಹಂತವಾಗಿ ಬಿಡುಗಡೆ ಮಾಡಲಿದೆ.

ವಿಳಂಬ ಯಾಕೆ?

ತಮಿಳುನಾಡು, ಪಶ್ಚಿಮ ಬಂಗಾಳ ಮತ್ತು ಅಸ್ಸಾಂ ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆಗಳು ನಡೆಯಲಿವೆ. ಚುನಾವಣಾ ಸಮಯದಲ್ಲಿ ಪೊಲೀಸರು ಮತ್ತು ಭದ್ರತಾ ಸಿಬ್ಬಂದಿ ಮತದಾನದ ಕರ್ತವ್ಯದಲ್ಲಿ ಇರುತ್ತಾರೆ. ಇದರಿಂದಾಗಿ ಪಂದ್ಯಗಳಿಗೆ ಅಗತ್ಯವಿರುವ ಹೆಚ್ಚಿನ ಭದ್ರತೆಯನ್ನು ಒದಗಿಸುವುದು ಕಷ್ಟವಾಗುತ್ತದೆ.

ಹೀಗಾಗಿ ವೇಳಪಟ್ಟಿ ಬಿಡುಗಡೆ ವಿಳಂಬವಾಗುತ್ತಿದೆ. ಮೂಲಗಳ ಮಾಹಿತಿ ಪ್ರಕಾರ ಮಾರ್ಚ 13 ರ ಒಳಗಾಗಿ ಪಟ್ಟಿ ಬಿಡುಗಡೆಯಾಗುವ ಸಾಧ್ಯತೆ ಇದೆ.

20 ದಿನಗಳ ಪಟ್ಟಿ ಬಿಡುಗಡೆ?

ಬಿಸಿಸಿಐ ಈ ಬಾರಿಯೂ ವೇಳಾಪಟ್ಟಿಯನ್ನು ಹಂತ ಹಂತವಾಗಿ ಬಿಡುಗಡೆ ಮಾಡಲು ನಿರ್ಧರಿಸಿದೆ. ಮೊದಲ ಹಂತದಲ್ಲಿ ಆರಂಭಿಕ 15 ದಿನಗಳ ಪಂದ್ಯಗಳ ಪಟ್ಟಿ ಹೊರಬೀಳುವ ಸಾಧ್ಯತೆಯಿದೆ.

ಬಿಸಿಸಿಐ ಈ ಹಿಂದೆಯೂ (ಉದಾಹರಣೆಗೆ 2024 ಮತ್ತು 2019 ರಲ್ಲಿ) ಸಾರ್ವತ್ರಿಕ ಚುನಾವಣೆಗಳ ಕಾರಣದಿಂದ ಇದೇ ರೀತಿಯಲ್ಲಿ ಹಂತ-ಹಂತವಾಗಿ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿತ್ತು.

ಉದ್ಘಾಟನಾ ಪಂದ್ಯ: ಬೆಂಗಳೂರಿನಲ್ಲಿ!

ಐಪಿಎಲ್ ಸಂಪ್ರದಾಯದಂತೆ, ಹಾಲಿ ಚಾಂಪಿಯನ್ ತಂಡವು ಉದ್ಘಾಟನಾ ಪಂದ್ಯ ಆಡಲಿದೆ. 2025ರಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ತವರು ಮೈದಾನ ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಉದ್ಘಾಟನಾ ಪಂದ್ಯವನ್ನು ಆಡುವುದು ಖಚಿತವಾಗಿದೆ.
ಮೂಲಗಳ ಪ್ರಕಾರ, ಆರ್‌ಸಿಬಿ ತಂಡವು ಕಳೆದ ಬಾರಿಯ ರನ್ನರ್ ಅಪ್ ಪಂಜಾಬ್ ಕಿಂಗ್ಸ್ ತಂಡದ ವಿರುದ್ಧ ಆಡಲಿದೆ. ಇಲ್ಲವಾದಲ್ಲಿ ಚೆನೈ ಸೂಪರ್ ಕಿಂಗ್ಸ್ ತಂಡವನ್ನು ತಮ್ಮ ಮೊದಲ ಪಂದ್ಯದಲ್ಲಿ ಎದುರಿಸಲಿದೆ.

84 ಪಂದ್ಯಗಳ ಭರ್ಜರಿ ಮನರಂಜನೆ

ಈ ಬಾರಿಯ ಐಪಿಎಲ್ ಇತಿಹಾಸದಲ್ಲೇ ಅತಿ ದೊಡ್ಡದಾಗಿರಲಿದ್ದು, ಒಟ್ಟು 84 ಪಂದ್ಯಗಳು ನಡೆಯಲಿವೆ. ಕಳೆದ ಸೀಸನ್‌ನಲ್ಲಿ 74 ಪಂದ್ಯಗಳಿದ್ದವು. ಹೊಸ ನಾಯಕತ್ವ ಹಾಗೂ ತಂಡಗಳ ಬದಲಾವಣೆಯೊಂದಿಗೆ ಟೂರ್ನಿಯು ಕುತೂಹಲ ಮೂಡಿಸಿದೆ.

  • ಆರ್‌ಸಿಬಿ: ರಜತ್ ಪಾಟಿದಾರ್ ನಾಯಕತ್ವದಲ್ಲಿ ಮತ್ತೊಮ್ಮೆ ಚಾಂಪಿಯನ್‌ ಆಗಲು ತಯಾರಾಗಿದೆ..
  • ಸಿಎಸ್‌ಕೆ: ಋತುರಾಜ್ ಗಾಯಕ್ವಾಡ್ ನಾಯಕತ್ವದಲ್ಲಿ ಸಂಜು ಸ್ಯಾಮ್ಸನ್ ಅವರ ಸೇರ್ಪಡೆಯಿಂದ ತಂಡ ಬಲಿಷ್ಠವಾಗಿದೆ.
  • ಪಿಬಿಕೆಎಸ್: ಶ್ರೇಯಸ್ ಅಯ್ಯರ್ ಅವರು ಪಂಜಾಬ್ ತಂಡವನ್ನು ಮುನ್ನಡೆಸಲಿದ್ದಾರೆ.

ಭದ್ರತೆ ಮತ್ತು ಅಭಿಮಾನಿಗಳ ಅನುಕೂಲಕ್ಕಾಗಿ ಕೆಲವು ತಂಡಗಳು ಹೆಚ್ಚುವರಿ ಕ್ರೀಡಾಂಗಣಗಳನ್ನು ಆರಿಸಿಕೊಂಡಿವೆ.

  • ಆರ್‌ಸಿಬಿ: 5 ಪಂದ್ಯಗಳನ್ನು ಬೆಂಗಳೂರಿನಲ್ಲಿ ಹಾಗೂ 2 ಪಂದ್ಯಗಳನ್ನು ರಾಯ್‌ಪುರದ ಶಹೀದ್ ವೀರ್ ನಾರಾಯಣ್ ಸಿಂಗ್ ಕ್ರೀಡಾಂಗಣದಲ್ಲಿ ಆಡಲಿದೆ.
  • ಡೆಲ್ಲಿ ಕ್ಯಾಪಿಟಲ್ಸ್: ದೆಹಲಿ ಮತ್ತು ವಿಶಾಖಪಟ್ಟಣದಲ್ಲಿ ಪಂದ್ಯಗಳನ್ನು ಆಡಲಿದೆ.

ನೇರಪ್ರಸಾರ ಎಲ್ಲಿ?

ಸ್ಟಾರ್ ಸ್ಪೋರ್ಟ್ಸ್ (Star Sports)ನಲ್ಲಿ ಟಿವಿಯಲ್ಲಿ ವೀಕ್ಷಿಸಬಹುದು. ಡಿಜಿಟಲ್‌ನಲ್ಲಿ ಹೊಸದಾಗಿ ವಿಲೀನಗೊಂಡಿರುವ ಜಿಯೋ ಹಾಟ್‌ಸ್ಟಾರ್ (JioHotstar) ಪ್ಲಾಟ್‌ಫಾರ್ಮ್‌ನಲ್ಲಿ 4K ಗುಣಮಟ್ಟದಲ್ಲಿ ಪಂದ್ಯಗಳನ್ನು ಎಂಜಾಯ್ ಮಾಡಬಹುದು.

2ನೇ ಹಂತದ ಪಟ್ಟಿ ಯಾವಾಗ

ಚುನಾವಣಾ ಆಯೋಗವು ಮತದಾನದ ದಿನಾಂಕಗಳನ್ನು ಘೋಷಿಸಿದ ನಂತರ, ಉಳಿದ ಪಂದ್ಯಗಳ ಸಂಪೂರ್ಣ ವೇಳಾಪಟ್ಟಿಯನ್ನು ಬಿಸಿಸಿಐ ಬಿಡುಗಡೆ ಮಾಡಲಿದೆ.

ಮತ್ತುಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *