IPL 2026 schedule announcement: Date, time, venue and RCB MatchRCB

ಕೋಟ್ಯಾಂತರ ಅಭಿಮಾನಿಗಳು ನಿರೀಕ್ಷಿಸುತ್ತಿದ್ದ IPL 2026ರ ಪಂದ್ಯಗಳ ವೇಳಾಪಟ್ಟಿಯನ್ನು (IPL 2026 schedule announcement) ಬಿಸಿಸಿಐ (BCCI) ಪ್ರಕಟಿಸಿದೆ. ಮೊದಲ ಹಂತ ಪಟ್ಟಿ ಇದಾಗಿದ್ದು, ಕೆಲವೇ ದಿನಗಳ ನಂತರದಲ್ಲಿ ಬಿಸಿಸಿಐ ಎರಡನೇ ಹಂತದ ಪಟ್ಟಿ ಬಿಡುಗಡೆ ಮಾಡಲಿದೆ. ಐಪಿಎಲ್‌ 2026ರ ಉದ್ಘಾಟನಾ ಕಾರ್ಯಕ್ರಮ ಮತ್ತು ಪಂದ್ಯ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ.

ಉದ್ಘಾಟನಾ ಪಂದ್ಯವು ಆರ್‌ಸ್‌ಬಿ ಮತ್ತು ಎಸ್‌ಆರ್‌ಹೆಚ್‌ ಮಧ್ಯೆ ಮಾರ್ಚ್‌ 28 ರಂದು ನಡೆಯಲಿದೆ. ಈ ಪಂದ್ಯವು ರಾತ್ರಿ 7:30ಕ್ಕೆ ಆರಂಭವಾಗಲಿದೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಪ್ರಕಟಣೆಯಲ್ಲಿ ತಿಳಿಸಿದೆ. ಆರ್‌ಸಿಬಿಯ ಮೊದಲ ನಾಲ್ಕು ಪಂದ್ಯಗಳ ಪಟ್ಟಿ ಕೂಡ ಬಿಡುಗಡೆಯಾಗಿದ್ದು, ಆರ್‌ಸಿಬಿಯು ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣ, ಗುಹಾಟಿ ಮತ್ತು ಮುಂಬೈನಲ್ಲಿ ಆಡಲಿದೆ.

ಇಲ್ಲಿದೆ ಅಧಿಕೃತ ವೇಳಾಪಟ್ಟಿ

ಮಾರ್ಚ್ 28 (ಶನಿವಾರ)
Royal Challengers Bengaluru ಮತ್ತು Sunrisers Hyderabad ತಂಡಗಳು ಬೆಂಗಳೂರಿನ M. Chinnaswamy Stadiumನಲ್ಲಿ ಮಧ್ಯಾಹ್ನ 3:30ಕ್ಕೆ ಮುಖಾಮುಖಿಯಾಗಲಿವೆ.

ಮಾರ್ಚ್ 29 (ರವಿವಾರ)
Mumbai Indians ಮತ್ತು Kolkata Knight Riders ನಡುವೆ ಪಂದ್ಯವು ಮುಂಬೈನ Wankhede Stadiumನಲ್ಲಿ ರಾತ್ರಿ 7:30ಕ್ಕೆ ನಡೆಯಲಿದೆ.

ಮಾರ್ಚ್ 30 (ಸೋಮವಾರ)
Rajasthan Royals ಮತ್ತು Chennai Super Kings ತಂಡಗಳು ಗುವಾಹಟಿಯ Barsapara Cricket Stadiumನಲ್ಲಿ ರಾತ್ರಿ 7:30ಕ್ಕೆ ಸೆಣಸಲಿವೆ.

ಮಾರ್ಚ್ 31 (ಮಂಗಳವಾರ)
Punjab Kings ಮತ್ತು Gujarat Titans ತಂಡಗಳ ನಡುವಿನ ಪಂದ್ಯ ಮುಲ್ಲಾನ್‌ಪುರದಲ್ಲಿ ರಾತ್ರಿ 7:30ಕ್ಕೆ ನಡೆಯಲಿದೆ.

ಏಪ್ರಿಲ್ 1 (ಬುಧವಾರ)
Lucknow Super Giants ಮತ್ತು Delhi Capitals ನಡುವೆ ಪಂದ್ಯವು ಲಖ್ನೋದಲ್ಲಿರುವ BRSABV Ekana Cricket Stadiumನಲ್ಲಿ ರಾತ್ರಿ 7:30ಕ್ಕೆ ನಡೆಯಲಿದೆ.

ಏಪ್ರಿಲ್ 2 (ಗುರುವಾರ)
Kolkata Knight Riders ಮತ್ತು Sunrisers Hyderabad ತಂಡಗಳು ಕೊಲ್ಕತ್ತಾದ Eden Gardensನಲ್ಲಿ ರಾತ್ರಿ 7:30ಕ್ಕೆ ಮುಖಾಮುಖಿಯಾಗಲಿವೆ.

ಏಪ್ರಿಲ್ 3 (ಶುಕ್ರವಾರ)
Chennai Super Kings ಮತ್ತು Punjab Kings ನಡುವೆ ಪಂದ್ಯವು ಚೆನ್ನೈನಲ್ಲಿ ರಾತ್ರಿ 7:30ಕ್ಕೆ ನಡೆಯಲಿದೆ.

ಏಪ್ರಿಲ್ 4 (ಶನಿವಾರ ಮಧ್ಯಾಹ್ನ)
Delhi Capitals ಮತ್ತು Mumbai Indians ತಂಡಗಳು ದೆಹಲಿನಲ್ಲಿ ಮಧ್ಯಾಹ್ನ 3:30ಕ್ಕೆ ಸೆಣಸಲಿವೆ.

ಏಪ್ರಿಲ್ 4 (ಶನಿವಾರ ರಾತ್ರಿ)
Gujarat Titans ಮತ್ತು Rajasthan Royals ತಂಡಗಳು ಅಹಮದಾಬಾದ್‌ನಲ್ಲಿ ರಾತ್ರಿ 7:30ಕ್ಕೆ ಮುಖಾಮುಖಿಯಾಗಲಿವೆ.

ಏಪ್ರಿಲ್ 5 (ರವಿವಾರ ಮಧ್ಯಾಹ್ನ)
Sunrisers Hyderabad ಮತ್ತು Lucknow Super Giants ನಡುವೆ ಪಂದ್ಯವು ಹೈದರಾಬಾದ್‌ನಲ್ಲಿ ಮಧ್ಯಾಹ್ನ 3:30ಕ್ಕೆ ನಡೆಯಲಿದೆ.

ಏಪ್ರಿಲ್ 5 (ರವಿವಾರ ರಾತ್ರಿ)
Royal Challengers Bengaluru ಮತ್ತು Chennai Super Kings ತಂಡಗಳು ಬೆಂಗಳೂರುನಲ್ಲಿ ರಾತ್ರಿ 7:30ಕ್ಕೆ ಸೆಣಸಲಿವೆ.

ಏಪ್ರಿಲ್ 6 (ಸೋಮವಾರ)
Kolkata Knight Riders ಮತ್ತು Punjab Kings ನಡುವೆ ಪಂದ್ಯವು ಕೊಲ್ಕತ್ತಾದಲ್ಲಿ ರಾತ್ರಿ 7:30ಕ್ಕೆ ನಡೆಯಲಿದೆ.

ಏಪ್ರಿಲ್ 7 (ಮಂಗಳವಾರ)
Rajasthan Royals ಮತ್ತು Mumbai Indians ತಂಡಗಳು ಗುವಾಹಟಿಯಲ್ಲಿ ರಾತ್ರಿ 7:30ಕ್ಕೆ ಮುಖಾಮುಖಿಯಾಗಲಿವೆ.

ಏಪ್ರಿಲ್ 8 (ಬುಧವಾರ)
Delhi Capitals ಮತ್ತು Gujarat Titans ನಡುವೆ ಪಂದ್ಯವು ದೆಹಲಿನಲ್ಲಿ ರಾತ್ರಿ 7:30ಕ್ಕೆ ನಡೆಯಲಿದೆ.

ಏಪ್ರಿಲ್ 9 (ಗುರುವಾರ)
Kolkata Knight Riders ಮತ್ತು Lucknow Super Giants ತಂಡಗಳು ಕೊಲ್ಕತ್ತಾದಲ್ಲಿ ರಾತ್ರಿ 7:30ಕ್ಕೆ ಸೆಣಸಲಿವೆ.

ಏಪ್ರಿಲ್ 10 (ಶುಕ್ರವಾರ)
Rajasthan Royals ಮತ್ತು Royal Challengers Bengaluru ನಡುವೆ ಪಂದ್ಯವು ಗುವಾಹಟಿಯಲ್ಲಿ ರಾತ್ರಿ 7:30ಕ್ಕೆ ನಡೆಯಲಿದೆ.

ಏಪ್ರಿಲ್ 11 (ಶನಿವಾರ ಮಧ್ಯಾಹ್ನ)
Punjab Kings ಮತ್ತು Sunrisers Hyderabad ನಡುವೆ ಪಂದ್ಯವು ಮುಲ್ಲಾನ್‌ಪುರದಲ್ಲಿ ಮಧ್ಯಾಹ್ನ 3:30ಕ್ಕೆ ನಡೆಯಲಿದೆ.

ಏಪ್ರಿಲ್ 11 (ಶನಿವಾರ ರಾತ್ರಿ)
Chennai Super Kings ಮತ್ತು Delhi Capitals ತಂಡಗಳು ಚೆನ್ನೈನಲ್ಲಿ ರಾತ್ರಿ 7:30ಕ್ಕೆ ಸೆಣಸಲಿವೆ.

ಏಪ್ರಿಲ್ 12 ( ರವಿವಾರ ಮಧ್ಯಾಹ್ನ)
Lucknow Super Giants ಮತ್ತು Gujarat Titans ನಡುವೆ ಪಂದ್ಯವು ಲಖ್ನೋದಲ್ಲಿ ಮಧ್ಯಾಹ್ನ 3:30ಕ್ಕೆ ನಡೆಯಲಿದೆ.

ಏಪ್ರಿಲ್ 12 (ರವಿವಾರ ರಾತ್ರಿ)
Mumbai Indians ಮತ್ತು Royal Challengers Bengaluru ನಡುವೆ ಪಂದ್ಯವು ಮುಂಬೈನ Wankhede Stadiumನಲ್ಲಿ ರಾತ್ರಿ 7:30ಕ್ಕೆ ನಡೆಯಲಿದೆ.

ಆರ್‌ಸಿಬಿಯ ಮೊದಲ 4 ಪಂದ್ಯಗಳು

ಆರ್‌ಸಿಬಿಯ ಮೊದಲ ನಾಲ್ಕು ಪಂದ್ಯಗಳು ಎಲ್ಲಿ ನಡೆಯುತ್ತವೆ ಎಂಬುವುದನ್ನು ಆರ್‌ಸಿಬಿ ಟ್ವೀಟ್‌ ಮಾಡಿದೆ.

“ಕ್ರಿಕೆಟ್‌ನ ಅತಿದೊಡ್ಡ ಹಬ್ಬ ಮತ್ತೆ ಬಂದಿದೆ ಮತ್ತು ಸೌಂಡ್‌ ಎಲ್ಲಿರುತ್ತೋ ಅಲ್ಲಿಂದಲೇ ಪ್ರಾರಂಭಿಸುತ್ತೇವೆ, ನಮ್ಮ ಚಿನ್ನಸ್ವಾಮಿ! 🏟️😍🏡

ಹಾಲಿ ಚಾಂಪಿಯನ್‌ಗಳು ಯಾರು, ಯಾವಾಗ ಮತ್ತು ಎಲ್ಲಿ ಆಡುತ್ತಾರೆ ಎಂಬುದು ಇಲ್ಲಿದೆ. ❤️‍🔥

ದಿನಾಂಕಗಳನ್ನು ಉಳಿಸಿ, 12th ಮ್ಯಾನ್ ಆರ್ಮಿ. ಇದು ಧೈರ್ಯದಿಂದ ಆಡುವ ಸಮಯ” ಎಂದು ಟ್ವೀಟ್‌ ಮಾಡಿದೆ.

ಮತ್ತುಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *