ಶ್ರೀನಗರ, ಮಾ 15: ಉತ್ತರ ಕಾಶ್ಮೀರದ (Kashmir) ಬಾರಾಮುಲ್ಲಾ ಜಿಲ್ಲೆಯ ಉರಿ (Uri) ವಲಯದಲ್ಲಿ ಗಡಿ ನಿಯಂತ್ರಣ ರೇಖೆಯ (LoC) ದಾಟಿ ಭಾರತದೊಳಗೆ ನುಸುಳಲು ಯತ್ನಿಸುತ್ತಿದ್ದ ಪಾಕಿಸ್ತಾನ ಬೆಂಬಲಿತ ಭಯೋತ್ಪಾದಕನನ್ನು (Terrorist) ಭದ್ರತಾ ಪಡೆಗಳು ಹೊಡೆದುರುಳಿಸಿವೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ. ಭಾರತೀಯ ಸೇನೆಯ ಮಾಹಿತಿಯ ಪ್ರಕಾರ, ಗುಪ್ತಚರ ಮಾಹಿತಿಯ ಆಧಾರದಲ್ಲಿ ಮಾರ್ಚ್ 14 ಮತ್ತು 15ರ ಮಧ್ಯರಾತ್ರಿ ಉರಿ ಸೆಕ್ಟರ್‌ನ ಬುಚ್ಛರ್ ಪ್ರದೇಶದಲ್ಲಿ ಭಾರತೀಯ ಸೇನೆ ಮತ್ತು ಜಮ್ಮು–ಕಾಶ್ಮೀರ ಪೊಲೀಸ್ ಜಂಟಿಯಾಗಿ ಶೋಧ ಕಾರ್ಯಾಚರಣೆ ನಡೆಸಿತು. ಕಾರ್ಯಾಚರಣೆ ವೇಳೆ ದಟ್ಟ ಗಿಡಗಂಟಿಗಳ ನಡುವೆ ಉಗ್ರ ಅಡಗಿ ಕುಳುತಿದ್ದನು. ಈತನ ಸಂಶಯಾಸ್ಪದ ಚಲನವಲನವನ್ನು ಸೇನಾ ಸಿಬ್ಬಂದಿ ಗಮನಿಸಿದರು. ಕೂಡಲೇ ಭಾರತೀಯ ಸೇನೆ ಮತ್ತು ಜಮ್ಮು–ಕಾಶ್ಮೀರ ಪೊಲೀಸ್ ಜಂಟಿಯಾಗಿ ಉಗ್ರನನ್ನು ಸುತ್ತುವರಿದು ಶರಣಾಗುವಂತೆ ಹೇಳಿದರು. https://twitter.com/ChinarcorpsIA/status/2033017052374642882 ಆಗ, ಉಗ್ರ ಪೊಲೀಸರು ಮತ್ತು ಯೋಧರ ಮೇಲೆ ಮನಬಂದಂತೆ ಗುಂಡಿನ ದಾಳಿ ಮಾಡಿದನು. ಇದಕ್ಕೆ ಪ್ರತಿಯಾಗಿ ಸೈನಿಕರು ನಡೆಸಿದ ಗುಂಡಿನ ದಾಳಿಯಲ್ಲಿ ಉಗ್ರ ಹತನಾಗಿದ್ದಾನೆ ಎಂದು ಭಾರತೀಯ ಸೇನೆಯ ಚಿನಾರ್ ಕಾರ್ಪ್ಸ್ ಪ್ರಕಟಣೆಯಲ್ಲಿ ತಿಳಿಸಿದೆ. ಇದನ್ನೂ ಓದಿ: ಪಾಕ್ ಉಗ್ರರು ಒಳನುಸುಳುವ ಯತ್ನ: ಓರ್ವ ಹತ ಘಟನಾ ಸ್ಥಳದಿಂದ ಎಕೆ ರೈಫಲ್, ಪಿಸ್ತೂಲುಗಳು ಹಾಗೂ ಹೆಚ್ಚಿನ ಪ್ರಮಾಣದ ಗಾಳಿಯಾಮೊ ಸೇರಿದಂತೆ ಯುದ್ಧೋಪಕರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದಕ್ಕೂ ಮೊದಲು ಈ ತಿಂಗಳ ಆರಂಭದಲ್ಲಿ ಜಮ್ಮು–ಕಾಶ್ಮೀರದ ರಾಜೌರಿ ಜಿಲ್ಲೆಯ ಭಿಂಬರ್ ಗಲಿ ಪ್ರದೇಶದಲ್ಲಿ ನಿಯಂತ್ರಣ ರೇಖೆ (LoC) ಬಳಿ ಉಗ್ರರ ಸಂಶಯಾಸ್ಪದ ಚಲನವಲನ ಕಂಡುಬಂದಿತ್ತು. ವಿಚಾರ ತಿಳಿದು ಕಾರ್ಯಾಚರಣೆಗೆ ಇಳಿದಿದ್ದ ಭಾರತೀಯ ಸೇನೆ ಓರ್ವ ಉಗ್ರನನ್ನು ಹತ್ಯೆ ಮಾಡಿತ್ತು. ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ Post navigation ಭಾರತದಲ್ಲಿ 1 ಜಿಬಿ ಡೇಟಾ ಜಗತ್ತಿನಲ್ಲೇ ಅತ್ಯಂತ ಕಡಿಮೆ ಬೆಲೆ: ಅಶ್ವಿನಿ ವೈಷ್ಣವ್ ‘ಶ್ರೀ ರಾಮಾಯಣ ಯಾತ್ರೆ’: ದಿನಾಂಕ, ಯಾವ್ಯಾವ ಸ್ಥಳಗಳು, ಎಷ್ಟು ವೆಚ್ಚ? ಇಲ್ಲಿದೆ ವಿವರ