Indian Railways Shri Ramayana Yatra: Dates, Route, Cost Know in kannadaಶ್ರೀ ರಾಮಾಯಣ ಯಾತ್ರೆ

ನವದೆಹಲಿ, ಮಾರ್ಚ್‌ 18: ಭಾರತದಲ್ಲಿ ಆಧ್ಯಾತ್ಮಿಕ ಪ್ರವಾಸೋದ್ಯಮ ವೇಗವಾಗಿ ಬೆಳೆಯುತ್ತಿರುವ ಕ್ಷೇತ್ರವಾಗಿದ್ದು, ದೇಶದಾದ್ಯಂತ ಇರುವ ಸಾವಿರಾರು ಪವಿತ್ರ ತಾಣಗಳು ಇದಕ್ಕೆ ಬಲ ತುಂಬಿವೆ. ತೀರ್ಥಯಾತ್ರೆ ಮತ್ತು ಯೋಗ, ಆಧ್ಯಾತ್ಮಿಕ ಸಾಧನೆಗಾಗಿ ಪ್ರತಿ ವರ್ಷ ಲಕ್ಷಾಂತರ ಮಂದಿ ಭಾರತಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ, ಪ್ರವಾಸೋದ್ಯಮವನ್ನು ಇನ್ನಷ್ಟು ಉತ್ತೇಜಿಸಲು ಭಾರತೀಯ ರೈಲ್ವೆಯು ವಿಶೇಷ ‘ಶ್ರೀ ರಾಮಾಯಣ ಯಾತ್ರೆ’ (Shri Ramayana Yatra) ಪ್ರವಾಸವನ್ನು ಘೋಷಿಸಿದೆ.

ಈ ನಿಟ್ಟಿನಲ್ಲಿ ಭಾರತ ಮತ್ತು ನೇಪಾಳದಲ್ಲಿನ ಪ್ರಮುಖ ರಾಮಾಯಣಕ್ಕೆ ಸಂಬಂಧಿತ ತಾಣಗಳನ್ನು ಒಳಗೊಂಡ 17 ದಿನಗಳ ‘ಶ್ರೀ ರಾಮಾಯಣ ಯಾತ್ರೆ’ ರೈಲು ಪ್ರವಾಸವನ್ನು ಆರಂಭಿಸಲಾಗಿದೆ. ಮಾರ್ಚ್ 30ರಂದು ಈ ಆಧ್ಯಾತ್ಮಿಕ ಪ್ರವಾಸ ಆರಂಭವಾಗಲಿದೆ.

ಈ ಪ್ರವಾಸ ‘ಭಾರತ್ ಗೌರವ್ ಡಿಲಕ್ಸ್ ಎಸಿ ಟೂರಿಸ್ಟ್’ ರೈಲಿನ ಮೂಲಕ ನಡೆಯಲಿದ್ದು, ಪ್ರಯಾಣಿಕರಿಗೆ ಐಷಾರಾಮಿ ಮತ್ತು ಆರಾಮದಾಯಕ ಅನುಭವ ಒದಗಿಸುವಂತೆ ವಿನ್ಯಾಸಗೊಳಿಸಲಾಗಿದೆ.

ರೈಲಿನಲ್ಲಿ 1AC, 2AC ಮತ್ತು 3AC ಬೋಗಿಗಳಿದ್ದು, ಆಧುನಿಕ ಅಡುಗೆಮನೆ, ರೆಸ್ಟೋರೆಂಟ್‌ಗಳು, ಸೆನ್ಸಾರ್ ಆಧಾರಿತ ಶೌಚಾಲಯಗಳು, ಸ್ನಾನದ ಕೋಣೆಗಳು ಹಾಗೂ ಫುಟ್ ಮಸಾಜರ್‌ಗಳಂತಹ ಸೌಲಭ್ಯಗಳಿವೆ. ಸುರಕ್ಷತೆಗೆ ಸಿಸಿಟಿವಿ ಕ್ಯಾಮೆರಾಗಳು ಮತ್ತು ಭದ್ರತಾ ಸಿಬ್ಬಂದಿ ನಿಯೋಜಿಸಲಾಗಿದೆ.

ಪ್ರವಾಸದ ವಿವರ:

ಈ ಯಾತ್ರೆ 16 ರಾತ್ರಿ ಮತ್ತು 17 ದಿನಗಳದ್ದಾಗಿದ್ದು, ದೆಹಲಿಯ ಸಫ್ದರ್‌ಜಂಗ್ ರೈಲು ನಿಲ್ದಾಣದಿಂದ ಆರಂಭವಾಗುತ್ತದೆ. ಒಟ್ಟು 7,560 ಕಿಲೋಮೀಟರ್ ದೂರವನ್ನು ಕ್ರಮಿಸಲಾಗುತ್ತದೆ.

ಪ್ರಮುಖ ತಾಣಗಳು:

ಅಯೋಧ್ಯೆ – ರಾಮ ಜನ್ಮಭೂಮಿ, ಹನುಮಾನ್ ಗರ್ಹಿ

ನಂದಿಗ್ರಾಮ – ಭರತ-ಹನುಮಾನ್ ದೇವಾಲಯ

ಸೀತಾಮಢಿ ಮೂಲಕ ನೇಪಾಳದ ಜನಕಪುರ – ಜಾನಕಿ ದೇವಾಲಯ

ಬಕ್ಸರ್ – ರಾಮ್ ರೇಖಾ ಘಾಟ್

ವಾರಾಣಸಿ – ಕಾಶಿ ವಿಶ್ವನಾಥ ದೇವಾಲಯ, ಗಂಗಾ ಆರತಿ

ಪ್ರಯಾಗ್‌ರಾಜ್ – ತ್ರಿವೇಣಿ ಸಂಗಮ

ಚಿತ್ರಕೂಟ – ಗುಪ್ತ ಗೋದಾವರಿ

ನಾಸಿಕ್ – ತ್ರಯಂಬಕೇಶ್ವರ, ಪಂಚವಟಿ

ಹಂಪಿ – ಅಂಜನಾದ್ರಿ ಬೆಟ್ಟ

ರಾಮೇಶ್ವರಂ – ಪ್ರಮುಖ ಧಾರ್ಮಿಕ ತಾಣಗಳು. ಈ ಎಲ್ಲ ತಾಣಗಳ ದರ್ಶನದ ನಂತರ 17ನೇ ದಿನ ರೈಲು ಮರಳಿ ದೆಹಲಿಗೆ ತಲುಪುತ್ತದೆ.

ಟಿಕೆಟ್ ದರ ಮತ್ತು ಸೌಲಭ್ಯಗಳು:

ಈ ಯಾತ್ರೆಯಲ್ಲಿ ಒಟ್ಟು 150 ಪ್ರಯಾಣಿಕರಿಗೆ ಮಾತ್ರ ಅವಕಾಶವಿದ್ದು, ದರಗಳು ಬೋಗಿ ಪ್ರಕಾರ ನಿಗದಿಪಡಿಸಲಾಗಿದೆ.

3AC: 1,14,100 ರೂ.

2AC: 1,51,225 ರೂ.

1AC: 1,64,940 ರೂ.

ಟ್ರಿಪಲ್ ಆಕ್ಯುಪೆನ್ಸಿ: 1,11,630 ರೂ. (ಕನಿಷ್ಠ)

ಪ್ಯಾಕೇಜ್‌ನಲ್ಲಿ ರೈಲು ಪ್ರಯಾಣ, ತ್ರೀ-ಸ್ಟಾರ್ ಹೋಟೆಲ್ ವಾಸ್ತವ್ಯ, ಸಂಪೂರ್ಣ ಸಸ್ಯಾಹಾರಿ ಊಟ, ಎಸಿ ಬಸ್‌ಗಳಲ್ಲಿ ಸ್ಥಳೀಯ ವೀಕ್ಷಣೆ, ಪ್ರಯಾಣ ವಿಮೆ ಹಾಗೂ ಐಆರ್‌ಸಿಟಿಸಿ ಟೂರ್ ಮ್ಯಾನೇಜರ್ ಮಾರ್ಗದರ್ಶನ ಒಳಗೊಂಡಿದೆ.

ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *